ಗಂಡ-ಹೆಂಡ್ತಿ ಜಗಳ ಆಗ್ತಿದೆಯಾ? ಹಾಗಾದರೆ, ಬಾಗಿಲ ಹಿಂದೆ ಬಟ್ಟೆ ನೇತು ಹಾಕೋದನ್ನು ನಿಲ್ಲಿಸಿ

Published : Nov 22, 2026, 09:47 PM IST
hang clothes behind door

ಸಾರಾಂಶ

ಮನೆಯ ಬಾಗಿಲಿನ ಹಿಂದೆ ಬಟ್ಟೆಗಳನ್ನು ನೇತು ಹಾಕುವುದರಿಂದ ಆಗುವ ವಾಸ್ತು ದೋಷಗಳು ಮತ್ತು ಆರ್ಥಿಕ, ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬಹುತೇಕ ಎಲ್ಲರ ಮನೆಗಳಲ್ಲೂ ಕೋಣೆಯ ಅಥವಾ ಮುಖ್ಯ ಬಾಗಿಲಿನ ಹಿಂಭಾಗದಲ್ಲಿ ಹ್ಯಾಂಗರ್ ಹಾಗೂ ಮೊಳೆಗಳನ್ನು ಹಾಕಿ ಅಂಗಿ, ಪ್ಯಾಂಟ್, ಟವೆಲ್, ಜಾಕೆಟ್ ಮತ್ತು ಬ್ಯಾಗ್‌ಗಳನ್ನು ನೇತು ಹಾಕುವುದು ಸಾಮಾನ್ಯ ದೃಶ್ಯವಾಗಿದೆ. ಜಾಗದ ಅಭಾವದಿಂದಲೋ ಅಥವಾ ದಿನನಿತ್ಯದ ಅನುಕೂಲಕ್ಕಾಗಿಯೋ ಜನರು ಈ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ.

ಆದರೆ, ಅನೇಕ ಬಾರಿ ನಮ್ಮ ಈ ಸಣ್ಣ ಅಭ್ಯಾಸಗಳೇ ಮನೆಯ ಶಾಂತಿ ಮತ್ತು ಪ್ರಗತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಬಾಗಿಲಿನ ಹಿಂದೆ ಬಟ್ಟೆಗಳನ್ನು ನೇತು ಹಾಕುವುದು ಶುಭವಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಇದಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

1. ಧನಾತ್ಮಕ ಶಕ್ತಿಯ ಹರಿವಿಗೆ ಅಡ್ಡಿ, ಪರಸ್ಪರ ನಂಬಿಕೆ ಕೊರತೆ

ವಾಸ್ತು ಶಾಸ್ತ್ರದಲ್ಲಿ ಮನೆಯ ಬಾಗಿಲುಗಳನ್ನು ಕೇವಲ ಒಳಗೆ ಮತ್ತು ಹೊರಗೆ ಓಡಾಡುವ ಮಾರ್ಗವಾಗಿ ನೋಡಲಾಗುವುದಿಲ್ಲ. ಬದಲಾಗಿ, ಅವು ಮನೆಯೊಳಗೆ ಧನಾತ್ಮಕ ಶಕ್ತಿ ಪ್ರವೇಶಿಸುವ ಹಾಗೂ ನಕಾರಾತ್ಮಕ ಶಕ್ತಿ ಹೊರಹೋಗುವ ಪ್ರಮುಖ ದ್ವಾರಗಳಾಗಿವೆ. ಗಂಡ-ಹೆಂಡತಿ ನಡುವೆ ಜಗಳವೂ ಅಥವಾ ಮನೆಯಲ್ಲಿರುವವರ ನಡುವೆ ಪರಸ್ಪರ ನಂಬಿಕೆಯೂ ಇಲ್ಲದಂತಾಗುತ್ತದೆ. ವಾಸ್ತು ಶಾಸ್ತ್ರದಂತೆಯೇ ಫೆಂಗ್ ಶೂಯಿ ಪದ್ಧತಿಯಲ್ಲೂ ಬಾಗಿಲಿನ ಮಹತ್ವವನ್ನು ಒತ್ತಿ ಹೇಳಲಾಗಿದೆ. ಬಾಗಿಲು ಸರಾಗವಾಗಿ ಮತ್ತು ಸಂಪೂರ್ಣವಾಗಿ ತೆರೆದುಕೊಂಡಾಗ ಮಾತ್ರ ಮನೆಯೊಳಗೆ ಅದೃಷ್ಟ ಹಾಗೂ ಹೊಸ ಅವಕಾಶಗಳು ಪ್ರವೇಶಿಸುತ್ತವೆ.

ಬಾಗಿಲಿನ ಹಿಂದೆ ಬಟ್ಟೆಗಳ ರಾಶಿಯನ್ನು ತೂಗುಹಾಕುವುದರಿಂದ ಅದರ ಮುಕ್ತ ಚಲನೆಗೆ ಅಡ್ಡಿಯಾಗಿ ಶಕ್ತಿಯ ಹರಿವಿಗೆ ತಡೆಯುಂಟಾಗುತ್ತದೆ ಹಾಗೂ ವಾಸ್ತು ದೋಷಕ್ಕೆ ಕಾರಣವಾಗುತ್ತದೆ ಎನ್ನಲಾಗುತ್ತದೆ.

2. ಆರ್ಥಿಕ ಪ್ರಗತಿ ಮತ್ತು ಜೀವನದ ಹೊರೆ

ನಂಬಿಕೆಗಳ ಪ್ರಕಾರ, ಮನೆಯ ದ್ವಾರದ ಮೇಲ್ಭಾಗದಲ್ಲಿ ಲಕ್ಷ್ಮಿ ದೇವಿಯ ವಾಸವಿರುತ್ತದೆ. ಬಾಗಿಲಿನ ಹಿಂದೆ ಬಳಸಿದ, ಕೊಳೆಯಾದ ಅಥವಾ ಹರಿದ ಬಟ್ಟೆಗಳನ್ನು ನೇತು ಹಾಕುವುದರಿಂದ ಮನೆಯಲ್ಲಿ ನಕಾರಾತ್ಮಕ ವಾತಾವರಣ ನಿರ್ಮಾಣವಾಗಿ ಆರ್ಥಿಕ ಸಂಕಷ್ಟಗಳು ಹಾಗೂ ಸಾಲದ ಬಾಧೆ ಎದುರಾಗಬಹುದು. ಅಲ್ಲದೆ, ಚಲಿಸುವ ಸ್ವಭಾವದ ಬಾಗಿಲಿನ ಮೇಲೆ ಭಾರ ಹಾಕುವುದು ಜೀವನದ ಹೊರೆ ಹೆಚ್ಚಿಸಿದಂತೆ ಎಂದು ಹೇಳಲಾಗುತ್ತದೆ. ಇದು ಕುಟುಂಬ ಸದಸ್ಯರ ಸಂಬಂಧಗಳು, ಕೆಲಸದ ದಕ್ಷತೆ ಹಾಗೂ ಸಮೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಮಾನಸಿಕ ಒತ್ತಡ ಮತ್ತು ಭಿನ್ನಾಭಿಪ್ರಾಯಗಳಿಗೆ ದಾರಿ ಮಾಡಿಕೊಡುತ್ತದೆ.

3. ಆರೋಗ್ಯ ಮತ್ತು ವೈಜ್ಞಾನಿಕ ಕಾರಣಗಳು

ಕೇವಲ ವಾಸ್ತು ಮಾತ್ರವಲ್ಲದೆ, ಪ್ರಾಯೋಗಿಕವಾಗಿಯೂ ಬಾಗಿಲಿನ ಹಿಂದೆ ಬಟ್ಟೆ ಹಾಕುವುದು ಸೂಕ್ತವಲ್ಲ. ಒದ್ದೆಯಾದ ಅಥವಾ ಬೆವರಿನಿಂದ ಕೂಡಿದ ಬಟ್ಟೆಗಳನ್ನು ಬಾಗಿಲಿನ ಮರೆಯಲ್ಲಿ ನೇತುಹಾಕುವುದರಿಂದ ಸರಿಯಾಗಿ ಗಾಳಿಯಾಡದೆ ದುರ್ವಾಸನೆ ಮತ್ತು ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಇದು ಕುಟುಂಬ ಸದಸ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಭಾರವಾದ ಬಟ್ಟೆಗಳಿಂದಾಗಿ ಬಾಗಿಲಿನ ಕೀಲುಗಳು (Hinges) ಭಾರ ತಾಳಲಾರದೆ ಬೇಗನೆ ಹಾಳಾಗುವ ಸಾಧ್ಯತೆಯೂ ಇರುತ್ತದೆ. ಅಷ್ಟೇ ಅಲ್ಲದೆ, ಮನೆಯ ಅಂದವೂ ಹಾಳಾಗುತ್ತದೆ.

ಇದಕ್ಕೆ ಸುಲಭ ಪರಿಹಾರವೇನು?

ಮನೆಯ ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ವಾಸ್ತು ತಜ್ಞರು ನೀಡುವ ಪ್ರಮುಖ ಸಲಹೆಗಳು ಇಲ್ಲಿವೆ:

  • ಬಾಗಿಲಿನ ಹಿಂದಿನ ಜಾಗವನ್ನು ಸದಾ ಸ್ವಚ್ಛವಾಗಿ ಹಾಗೂ ಖಾಲಿಯಾಗಿ ಇಡುವುದು ಉತ್ತಮ.
  • ಬಟ್ಟೆಗಳನ್ನು ಇಡಲು ಪ್ರತ್ಯೇಕ ಕಪಾಟು ಅಥವಾ ವಾರ್ಡ್‌ರೋಬ್ ಬಳಸಿ.
  • ಒಂದು ವೇಳೆ ಜಾಗದ ಕೊರತೆ ಇದ್ದರೆ, ಬಾಗಿಲಿನ ಬದಲು ಕೋಣೆಯ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನ ಗೋಡೆಗೆ ಹ್ಯಾಂಗರ್‌ಗಳನ್ನು ಅಳವಡಿಸಬಹುದು.
  • ತೊಳೆಯಲು ಇರುವ ಕೊಳೆ ಬಟ್ಟೆಗಳನ್ನು ಮುಚ್ಚಳವಿರುವ ಲಾಂಡ್ರಿ ಬುಟ್ಟಿಗಳಲ್ಲಿ ಇಡುವುದು ವಾಸ್ತು ಮತ್ತು ಆರೋಗ್ಯದ ದೃಷ್ಟಿಯಿಂದಲೂ ಅತ್ಯಂತ ಸೂಕ್ತ.

(ಸೂಚನೆ: ಈ ಲೇಖನವು ವಾಸ್ತು ಶಾಸ್ತ್ರದ ಸಾಮಾನ್ಯ ನಂಬಿಕೆಗಳು ಹಾಗೂ ಪ್ರಚಲಿತ ಮಾಹಿತಿಯನ್ನು ಆಧರಿಸಿದೆ.)

PREV
Read more Articles on
click me!

Recommended Stories

ವಾಸ್ತು ಪ್ರಕಾರ ಈ 6 ವಸ್ತುಗಳನ್ನು ಅಪ್ಪಿತಪ್ಪಿಯೂ ದಾಟಬೇಡಿ, ತಪ್ಪಿ ದಾಟಿದ್ರೋ ತಕ್ಷಣ ಹೀಗೆ ಮಾಡಿ
ಬಿರಿಯಾನಿ ಎಲೆ ಮೇಲೆ ಈ ನಂಬರ್ ಬರೆದರೆ ಅದೃಷ್ಟ ಖುಲಾಯಿಸುತ್ತಾ? ಜ್ಯೋತಿಷಿ ಹೇಳಿದ ಉಪಾಯ ಏನು?