
ಮನೆ ವಾಸ್ತು ಸರಿ ಇದ್ದರೆ ಅಲ್ಲಿ ನೆಮ್ಮದಿ, ಆರೋಗ್ಯ ಮತ್ತು ಆರ್ಥಿಕ ಲಾಭಗಳನ್ನು ಪಡೆಯಬಹುದು. ಅದೇ ಹಾಗಿಲ್ಲದಿದ್ದಲ್ಲಿ ಅನೇಕ ರೀತಿಯ ತೊಂದರೆಗಳನ್ನು ಸುಖಾ ಸುಮ್ನೆ ಎದುರಿಸಬೇಕಾಗುತ್ತದೆ. ಪೂರ್ವ, ಉತ್ತರ ಹಾಗೂ ಈಶಾನ್ಯ ದಿಕ್ಕಿನಲ್ಲಿ ಮನೆಯ ಮುಖ್ಯ ದ್ವಾರವಿದ್ದರೆ ಶುಭ. ಹಾಗೆಯೇ ದಕ್ಷಿಣದಲ್ಲಿದ್ದರೆ ಅದು ಅಶುಭ. ಆದರೆ ರಾಶಿಗೂ, ದಿಕ್ಕಿಗೂ ಸಂಬಂಧವಿರುವ ಕಾರಣ ರಾಶಿಯನುಸಾರ ಕೆಲವರಿಗೆ ಕೆಲವು ದಿಕ್ಕಿನ ಮನೆಗಳು ಲಕ್ ತರುವುದರಲ್ಲಿ ಅನುಮಾನವೇ ಇಲ್ಲ. ದಕ್ಷಿಣ ದಿಕ್ಕಿನಲ್ಲಿರುವ ಮನೆ ಯಾವ ರಾಶಿಯವರಿಗೆ ಶುಭ ತರುತ್ತದೆ?.
ಮೇಷ ರಾಶಿ
ಮಂಗಳ ಗ್ರಹ ಅಧಿಪತಿ ಆಗಿರುವ ಮೇಷ ರಾಶಿಯವರಿಗೆ ದಕ್ಷಿಣ ದಿಕ್ಕಿನಲ್ಲಿರುವ ಮನೆ ಶುಭವನ್ನುಂಟು ಮಾಡುತ್ತದೆ. ದಕ್ಷಿಣ ದಿಕ್ಕಿನಲ್ಲಿರುವ ಮನೆಯಲ್ಲಿರುವುದರಿಂದ ಈ ರಾಶಿಯವರ ಸಮಗ್ರ ವಿಕಾಸವಾಗುವುದಲ್ಲದೇ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಮನೆಯ ಮುಖ್ಯದ್ವಾರ ದಕ್ಷಿಣ ದಿಕ್ಕಿಗಿದ್ದರೆ ಅಶುಭ. ಹೀಗಿದ್ದಾಗ ಯಾವುದೇ ಕೆಲಸಗಳು ಸುಗಮವಾಗಿ ಪೂರ್ತಿಯಾಗುವುದಿಲ್ಲ, ಪ್ರತಿಯೊಂದಕ್ಕೂ ಸಂಕಷ್ಟ ಎದುರಿಸಬೇಕಾಗುತ್ತದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೂ ಸಹ ದಕ್ಷಿಣ ದಿಕ್ಕಿಗೆ ಮುಖ್ಯ ದ್ವಾರವಿರುವ ಮನೆ ಆಗುವುದೇ ಇಲ್ಲ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಮಿಥುನ ರಾಶಿಯವರು ದಕ್ಷಿಣ ದಿಕ್ಕಿಗಿರುವ ಮನೆಯಲ್ಲಿ ವಾಸಿಸಿದರೆ ಅವರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಾಗುತ್ತವೆ.
ಕರ್ಕಾಟಕ ರಾಶಿ
ವೈದಿಕ ಜ್ಯೋತಿಷ್ಯದ ಪ್ರಕಾರ ಕರ್ಕ ರಾಶಿಯವರಿಗೆ ದಕ್ಷಿಣ ದಿಕ್ಕಿಗೆ ಮುಖ್ಯ ದ್ವಾರವಿರುವ ಮನೆ ಶುಭವನ್ನುಂಟು ಮಾಡುತ್ತದೆ. ಅತ್ಯಂತ ಶುಭವನ್ನು ನೀಡುವ ದಕ್ಷಿಣ ಬಾಗಿಲ ಮನೆಯಲ್ಲಿ ಈ ರಾಶಿಯವರು ವಾಸ ಮಾಡುವುದರಿಂದ ಸಮಾಜದಲ್ಲಿ ಗೌರವವು ಹೆಚ್ಚುವುದಲ್ಲದೆ, ಸ್ವಾಸ್ಥ್ಯದಲ್ಲಿ ಲಾಭ, ಆರ್ಥಿಕ ಸಮೃದ್ಧಿ ಮತ್ತು ವೃತ್ತಿಯಲ್ಲಿ ಏಳಿಗೆಯನ್ನು ಕಾಣಬಹುದಾಗಿದೆ.
ಸಿಂಹ ರಾಶಿ
ಈ ರಾಶಿಯವರಿಗೆ ದಕ್ಷಿಣ ದಿಕ್ಕಿನಲ್ಲಿರುವ ಮನೆ ಹೆಚ್ಚು ಶುಭವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ಸಿಂಹ ರಾಶಿಯವರಿಗೆ ಇಂಥ ಮನೆ ಭಾಗ್ಯವನ್ನುಂಟು ಮಾಡುತ್ತದೆ ಎಂದು ಹೇಳಲಾಗಿದೆ. ಸುಖ-ಸಮೃದ್ಧಿ ಮತ್ತು ಸಾಮಾಜಿಕ ಘನತೆ ವೃದ್ಧಿಸುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ದಕ್ಷಿಣ ದಿಕ್ಕಿನಲ್ಲಿರುವ ಮನೆ ಸಮಸ್ಯೆಗಳ ಆಗರವಾಗುತ್ತದೆ. ಹಾಗಾಗಿ ಈ ರಾಶಿಯವರಿಗೆ ದಕ್ಷಿಣ ದಿಕ್ಕಿಗೆ ಮುಖ್ಯ ದ್ವಾರವಿರುವ ಮನೆಯು ವಾಸಕ್ಕೆ ಯೋಗ್ಯವಲ್ಲ. ಹಾಗೆ ವಾಸಿಸಿದಲ್ಲಿ ಸುಮ್ಮನೆ ಸಮಸ್ಯೆಗಳನ್ನು ಮೈ ಮೇಲೆ ಹಾಕಿಕೊಂಡತ್ತಾಗುತ್ತದೆ.
ತುಲಾ ರಾಶಿ
ಈ ರಾಶಿಯವರಿಗೆ ದಕ್ಷಿಣ ದ್ವಾರವಿರುವ ಮನೆ ಮಿಶ್ರ ಫಲ ನೀಡುತ್ತದೆ ಎಂದು ಹೇಳಬಹುದು. ದಕ್ಷಿಣಕ್ಕೆ ಬಾಗಿಲಿರುವ ಮನೆಯಲ್ಲಿ ಈ ರಾಶಿಯವರು ಸಾಧಾರಣ ಮಟ್ಟಿಗೆ ಅಭಿವೃದ್ಧಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ.
ವೃಶ್ಚಿಕ ರಾಶಿ
ದಕ್ಷಿಣ ದಿಕ್ಕಿನಲ್ಲಿರುವ ಮನೆ ವೃಶ್ಚಿಕ ರಾಶಿಯವರಿಗೆ ಶುಭ ತರುತ್ತದೆ. ದಕ್ಷಿಣ ದಿಕ್ಕಿನಲ್ಲಿ ಮನೆ ಬಾಗಿಲು ಇರುದರಿಂದ ಈ ರಾಶಿಯವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ವೃತ್ತಿಯಲ್ಲಿ ಏಳಿಗೆಯನ್ನು ಕಾಣಬಹುದಾಗಿದ್ದು, ಆತ್ಮಬಲ ಹೆಚ್ಚುತ್ತದೆ.
ಕುಂಭ ರಾಶಿ
ಈ ರಾಶಿಯವರಿಗೆ ದಕ್ಷಿಣಕ್ಕೆ ಮುಖ್ಯ ದ್ವಾರವಿರುವ ಮನೆಯು ಶುಭವಲ್ಲವೆಂದು ಹೇಳಲಾಗುತ್ತದೆ. ಕುಂಭ ರಾಶಿಯವರು ಇಂಥ ಮನೆಯಲ್ಲಿ ವಾಸ ಮಾಡಿದರೆ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಯೊಂದಕ್ಕೂ ಕಷ್ಟ ಪಡಬೇಕಾಗುತ್ತದೆ. ಎಷ್ಟೇ ಪರಿಶ್ರಮವನ್ನು ಹಾಕಿ ಕೆಲಸ ನಿರ್ವಹಿಸಿದರೂ ಸಹ ತಕ್ಕ ಫಲವನ್ನು ಪಡೆಯಲಾಗುವುದಿಲ್ಲ.
ಮೀನ ರಾಶಿ
ದಕ್ಷಿಣ ದಿಕ್ಕಿಗೆ ಬಾಗಿಲಿರುವ ಮನೆಯು ಮೀನ ರಾಶಿಯವರಿಗೆ ಶುಭವಾಗಿದೆ. ಇಂಥ ಮನೆಯಲ್ಲಿ ವಾಸಿಸಿದರೆ ಅದೃಷ್ಟ ಬರುತ್ತದೆ ಎಂದು ಹೇಳಲಾಗುತ್ತದೆ. ಅಂದುಕೊಂಡ ಕೆಲಸ ಕೈಗೂಡುವುದಲ್ಲದೇ, ಸಾಮಾಜಿಕ ಮತ್ತು ಆರ್ಥಿಕವಾಗಿಯೂ ಅತ್ಯುತ್ತಮ ಸ್ಥಿತಿಯಲ್ಲಿರುತ್ತಾರೆ.