ವ್ಯಾಪಾರ ಮತ್ತು ಉದ್ಯೋಗದಲ್ಲಿ ಲಾಭ ಪಡೆಯಲು ಹೀಗಿರಲಿ ವಾಸ್ತು!

By Suvarna News  |  First Published Mar 1, 2021, 10:30 AM IST

ವ್ಯಾಪಾರದಲ್ಲಿ ಯಶಸ್ಸು ಗಳಿಸುವುದು ಎಲ್ಲರ ಗುರಿಯಾಗಿರುತ್ತದೆ. ಹಾಗೆಯೇ ಉದ್ಯೋಗದಲ್ಲಿ ಉನ್ನತ ಹುದ್ದೆಯನ್ನು ಪಡೆಯುವುದು ಸಹ ಕನಸಾಗಿರುತ್ತದೆ. ಇವೆಲ್ಲದಕ್ಕೆ ಪರಿಶ್ರಮದ ಜೊತೆಗೆ ವಾಸ್ತು ನಿಯಮಗಳನ್ನು ಅನುಸರಿಸುವುದು ಸಹ ಅಗತ್ಯವಾಗಿರುತ್ತವೆ. ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಕೆಲವು ಸರಳ ಉಪಾಯಗಳನ್ನು ಕಾರ್ಯಸ್ಥಳದಲ್ಲಿ ಅಳವಡಿಸಿಕೊಂಡರೆ  ಉತ್ತಮ ಅಭಿವೃದ್ಧಿಯನ್ನು ಕಾಣಬಹುದಾಗಿದೆ. ಹಾಗಾದರೆ ಉದ್ಯೋಗ ಮತ್ತು ವ್ಯಾಪಾರದಲ್ಲಿ ಯಶಸ್ಸನ್ನು ಪಡೆಯಲು ವಾಸ್ತುಶಾಸ್ತ್ರದಲ್ಲಿ  ತಿಳಿಸಿರುವ ಕೆಲ ನಿಯಮಗಳ ಬಗ್ಗೆ ಅರಿಯೋಣ...


ವ್ಯಾಪಾರದಲ್ಲಿ ಲಾಭವನ್ನು ಮತ್ತು ಉದ್ಯೋಗದಲ್ಲಿ ಯಶಸ್ಸನ್ನು ಗಳಿಸಲು ಎಲ್ಲರೂ ಇಚ್ಛಿಸುತ್ತಾರೆ. ಆದಾಯದ ಮೂಲವಾದ ಕೆಲಸವು ಉತ್ತಮ ರೀತಿಯಲ್ಲಿ ಆಗಬೇಕೆಂದರೆ ಅದಕ್ಕೆ ಪರಿಶ್ರಮದ ಜತೆ ವಾಸ್ತು ನಿಯಮಗಳ ಅನುಸರಣೆಯೂ ಅಗತ್ಯವಾಗಿರುತ್ತದೆ.

ಹಲವು ಬಾರಿ ಎಷ್ಟೇ ಪರಿಶ್ರಮದಿಂದ ಕೆಲಸ ಮಾಡಿದರು ಯಶಸ್ಸನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಕೆಲಸ ಮಾಡುವ ಸ್ಥಳವು ಸರಿಯಾದ ದಿಕ್ಕಿನಲ್ಲಿ ಇದ್ದರೆ ಲಾಭ ಪಡೆಯಲು ಸಾಧ್ಯ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಕೆಲಸ ಮಾಡುವ ಸ್ಥಳದಲ್ಲಿ ವಾಸ್ತು ದೋಷವಿದ್ದರೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಕೆಲಸದಲ್ಲಿ ಯಶಸ್ಸು ಸಾಧಿಸುವುದು ಅಸಾಧ್ಯವಾಗುತ್ತದೆ. ಹಾಗಾಗಿ ವಾಸ್ತು ಪ್ರಕಾರ ಕೆಲಸದ ಸ್ಥಳದಲ್ಲಿ ಕೆಲವು ವಾಸ್ತು ನಿಯಮಗಳನ್ನು ಅಳವಡಿಸಿಕೊಂಡಲ್ಲಿ  ಯಶಸ್ಸು ನಿಶ್ಚಿತ. ಅಂತಹ ಕೆಲವು ನಿಯಮಗಳ ಬಗ್ಗೆ ತಿಳಿಯೋಣ...

ಇದನ್ನು ಓದಿ: ವಾಸ್ತು ಪ್ರಕಾರ ಮನೆಗೆ ಅಡಿಪಾಯ ಹಾಕಿ, ಇಲ್ಲದಿದ್ರೆ ಕೇಡಾಗಬಹುದು..!

ಕೆಲಸ ಮಾಡುವ ಸ್ಥಳದ ಕೋಣೆಯ ಆಕಾರ ಹೀಗಿರಬೇಕು:
ವಾಸ್ತುಪ್ರಕಾರ ವ್ಯಾಪಾರದಲ್ಲಿ ಅಥವಾ ಉದ್ಯೋಗದಲ್ಲಿ ಯಶಸ್ಸು ಸಿಗಬೇಕೆಂದರೆ  ಕೆಲಸ ಮಾಡುವ ಸ್ಥಳದ ಆಕಾರವು ಮುಖ್ಯವಾಗುತ್ತದೆ. ಕೆಲಸ ಮಾಡುವ ಕೋಣೆಯು ಚೌಕ ಅಥವಾ ಆಯತಾಕಾರದಲ್ಲಿ ಇರಬೇಕು. ಇಲ್ಲವೇ ಕೆಲಸ ಮಾಡುವ  ಸ್ಥಳದಲ್ಲಿ ಕೂರುವ ಮೇಜು ಚೌಕಾಕಾರದಲ್ಲಿ ಇರಬೇಕು. ಅದೂ ಸಾಧ್ಯವಾಗದಿದ್ದಲ್ಲಿ ಚೌಕ ಆಕಾರದಲ್ಲಿರುವ ಮ್ಯಾಟನ್ನು ಕೆಲಸ ಮಾಡಲು ಕೂರುವ ಸ್ಥಳದಲ್ಲಿ ಹಾಕಿಕೊಳ್ಳಬೇಕು. 

Tap to resize

Latest Videos



ಕಾರ್ಯಸ್ಥಳದಲ್ಲಿ ಮೇಜ್ ಇಡುವ ಮತ್ತು ಕುಳಿತುಕೊಳ್ಳುವ ಸ್ಥಳ:
ವಾಸ್ತು ಶಾಸ್ತ್ರದ ಪ್ರಕಾರ ಕಾರ್ಯಸ್ಥಳದಲ್ಲಿ ಕುಳಿತುಕೊಳ್ಳುವ ಸ್ಥಳವು ಮುಖ್ಯವಾಗುತ್ತದೆ. ಕೆಲಸ ಮಾಡುವ ಸ್ಥಳದಲ್ಲಿ ಸರಿಯಾದ ದಿಕ್ಕಿನಲ್ಲಿ ಕುಳಿತು ಕೊಳ್ಳುವುದು ಮತ್ತು ಮೇಜನ್ನು ಸರಿಯಾದ ದಿಕ್ಕಿಗೆ ಮುಖ ಮಾಡಿ ಇಟ್ಟಿದ್ದೇವೆಂಬುದು ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ ಅನುಸಾರ ಕಾರ್ಯ ಸ್ಥಳದಲ್ಲಿ ನೈರುತ್ಯ ದಿಕ್ಕಿನ ಕಡೆ ಕುಳಿತುಕೊಳ್ಳುವುದು ಉತ್ತಮ. ಅಷ್ಟೆ ಅಲ್ಲದೆ ಕುಳಿತುಕೊಳ್ಳುವಾಗ ವ್ಯಕ್ತಿಯು ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖಮಾಡಿರಬೇಕು.

ಇದನ್ನು ಓದಿ: ಕುಂಭ ರಾಶಿ ಪ್ರವೇಶಿಸಲಿರುವ ಶುಕ್ರ ಗ್ರಹ; ಈ ರಾಶಿಯವರಿಗೆ ಧನಲಾಭ

ಈ ವಸ್ತುಗಳನ್ನು ಇಡುವುದರಿಂದ ಸಿಗುತ್ತದೆ ಯಶಸ್ಸು:
ಕೆಲಸ ಮಾಡಲು ಕುಳಿತುಕೊಳ್ಳುವ ಜಾಗದಲ್ಲಿ ಗ್ಲೋಬ್ ಅನ್ನು ಇಟ್ಟುಕೊಳ್ಳಬೇಕು. ಇದರಿಂದ ಕೆಲಸಕ್ಕೆ ಎದುರಾಗುತ್ತಿರುವ  ಅಡೆತಡೆಗಳು ದೂರವಾಗುತ್ತವೆ. ಅಷ್ಟೇ ಅಲ್ಲದೆ ಕಾರ್ಯಸ್ಥಳದಲ್ಲಿ ಉತ್ತರ ದಿಕ್ಕಿಗೆ ಕುಬೇರ ದೇವರ ಪ್ರತಿಮೆಯನ್ನು ಇಟ್ಟುಕೊಳ್ಳುವುದು ಉತ್ತಮ. ಇದರಿಂದ ಆರ್ಥಿಕ ಸಮಸ್ಯೆಗಳೇನಾದರು ಇದ್ದಲ್ಲಿ ನಿವಾರಣೆಯಾಗುತ್ತವೆ. 

ಈ ಭಾವಚಿತ್ರ ಹಾಕುವುದರಿಂದ ವ್ಯಾಪಾರದಲ್ಲಿ ಯಶಸ್ಸು:
ಎಷ್ಟೇ ಶ್ರಮಪಟ್ಟರೂ ವ್ಯಾಪಾರದಲ್ಲಿ ಯಶಸ್ಸು ಸಿಗುತ್ತಿಲ್ಲವೆಂದಾದರೆ, ಕಾರ್ಯ ಸ್ಥಳದಲ್ಲಿ ಓಡುತ್ತಿರುವ ಕುದುರೆಗಳ ಭಾವಚಿತ್ರವನ್ನು ಹಾಕಿಕೊಳ್ಳುವುದು ಉತ್ತಮ. ಇದರಿಂದ ಕೆಲಸ ಮಾಡುವ ವ್ಯಕ್ತಿಗೆ ಸಕಾರಾತ್ಮಕ ಶಕ್ತಿ ಲಭಿಸುತ್ತದೆ. ಭಾವಚಿತ್ರದಲ್ಲಿ ಕುದುರೆಗಳು ಒಳಮುಖವಾಗಿ ಓಡುತ್ತಿರುವ ಚಿತ್ರವನ್ನು ಬಳಸಬೇಕು. ಇದರಿಂದ ಕೆಲಸವು ಶೀಘ್ರದಲ್ಲಿ ಪೂರ್ಣಗೊಳ್ಳುತ್ತದೆ.

- ಕೆಲಸ ಮಾಡುವ ಸ್ಥಳದಲ್ಲಿ ಕಂಪ್ಯೂಟರ್ ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಆಗ್ನೇಯ ದಿಕ್ಕಿಗೆ ಮುಖ ಮಾಡಿ ಇಟ್ಟುಕೊಳ್ಳುವುದು ಉತ್ತಮ.
- ದಾಖಲೆಗಳನ್ನು ಇಡುವ ಕಪಾಟು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿಗೆ ಇಡುವುದು ಉತ್ತಮ .
- ಕೆಲಸ ಮಾಡುವ ಸ್ಥಳದ ಗೋಡೆಗೆ  ತಿಳಿಯಾದ ಬಣ್ಣ ಬಳಿಯುವುದು ಉತ್ತಮ.  
- ಉನ್ನತ ಅಧಿಕಾರಿಗಳ ಕ್ಯಾಬಿನ್ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿಗೆ ಇದ್ದರೆ ಉತ್ತಮ.

ಇದನ್ನು ಓದಿ: ಕುಂಭ ರಾಶಿ ಪ್ರವೇಶಿಸುತ್ತಿರುವ ಸೂರ್ಯ- ಈ ರಾಶಿಗೆ ಸಿಗುತ್ತೆ ಸರ್ಕಾರಿ ಉದ್ಯೋಗ

ಕಾರ್ಯ ಸ್ಥಳದ ವಾಸ್ತು ಸರಿಪಡಿಸಿಕೊಳ್ಳುವುದು ಹೇಗೆ?
- ಕಚೇರಿಯ ಮುಖ್ಯ ದ್ವಾರದ ಬಳಿ ತಾಮ್ರದ ಸ್ವಸ್ತಿಕ್ ಅನ್ನು ಇಡುವುದು ಒಳ್ಳೆಯದು.
- ಕಚೇರಿಯ ರಿಸೆಪ್ಶನ್ ಬಳಿ ಬ್ಯಾಂಬೂ ಪ್ಲಾಂಟ್ ಇಟ್ಟರೆ ಸಕಾರಾತ್ಮಕ ಶಕ್ತಿ ಹೆಚ್ಚು ಪ್ರವಹಿಸುತ್ತದೆ.
- ರಿಸೆಪ್ಷನ್ ಟೇಬಲ್ ಕೆಳಗೆ ಹಸಿರು ಬಣ್ಣವನ್ನು ಬಳಿಯುವುದು ಉತ್ತಮ.  

click me!