Vaastu Tips: ಲಕ್ಷ್ಮಿಯ ಕೃಪ ಕಟಾಕ್ಷ ಬೇಕೆಂದರೆ ಮಲಗೋ ಮುನ್ನ ಹೀಗ್ ಮಾಡಿ

By Suvarna News  |  First Published Jan 21, 2022, 6:55 PM IST

ತಾಯಿ ಲಕ್ಷ್ಮಿ ಒಲಿಸಿಕೊಳ್ಳಲು ಭಕ್ತರು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ಲಕ್ಷ್ಮಿ ಎಲ್ಲರ ಮನೆಯಲ್ಲಿ ನೆಲೆಸುವವಳಲ್ಲ. ಸದಾ ಅವಳು ನಮ್ಮ ಮನೆಯಲ್ಲಿರಬೇಕೆಂದ್ರೆ, ಸಂತೋಷ, ಆರೋಗ್ಯ, ಐಶ್ವರ್ಯ ಪ್ರಾಪ್ತಿಯಾಗಬೇಕೆಂದ್ರೆ ಗೃಹಿಣಿಯಾದವಳು ರಾತ್ರಿ ಮಲಗುವ ಮೊದಲು ಕೆಲ ವಿಷ್ಯವನ್ನು ಗಮನಿಸಬೇಕು.
 


ಪ್ರತಿಯೊಬ್ಬರೂ ತಮ್ಮ ಜೀವನ (Life)ದಲ್ಲಿ ಸಂತೋಷ (Happy), ಶಾಂತಿ (Peace) ಮತ್ತು ಸಮೃದ್ಧಿಯನ್ನು ಬಯಸ್ತಾರೆ. ಆದರೆ ಬಯಸಿದ್ದೆಲ್ಲ ಸಿಗುವುದಿಲ್ಲ. ಕೆಲವೊಮ್ಮೆ ಜೀವನದಲ್ಲಿ ಅನೇಕ ಸಮಸ್ಯೆ(Problem)ಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಯಶಸ್ಸು (Success) ಸುಲಭವಾಗಿ ಲಭಿಸುವುದಿಲ್ಲ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಶುರುವಾಗುತ್ತವೆ. ಅನಾರೋಗ್ಯ (Illness )ಕಾಡುತ್ತದೆ. ಕೌಟುಂಬಿಕ ಜಗಳ,ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಜ್ಯೋತಿಷ್ಯ (Astrology )ಶಾಸ್ತ್ರದಲ್ಲಿ ಪ್ರತಿಯೊಂದಕ್ಕೂ ಪರಿಹಾರ ಹೇಳಲಾಗಿದೆ. ಶಾಸ್ತ್ರ,ಪದ್ಧತಿಯಂತೆ ನಡೆದುಕೊಂಡರೆ ನಮ್ಮ ಬಾಳಿನಲ್ಲಿ ಕಹಿ ಮಾಯವಾಗಿ ಸಿಹಿ ಕಾಣಬಹುದು. ದುಃಖ ದೂರವಾಗಿ ಯಶಸ್ಸು ಲಭಿಸಬಹುದು. ಮನೆಯ ಗೃಹಿಣಿ,ಮನೆಯ ದೇವತೆ ಎಂದು ನಂಬಲಾಗಿದೆ. ಮನೆ (Home)ಯಲ್ಲಿ ಕಾಣುವ ಸುಖ,ಸಂತೋಷಕ್ಕೆ ಆಕೆ ಮಾಡುವ ಕೆಲವು ಕೆಲಸಗಳು ಕಾರಣವಾಗುತ್ತವೆ. ಮನೆಯ ಅಭಿವೃದ್ಧಿ ಗೃಹಿಣಿ (housewife) ಮೇಲಿದೆ ಎಂದು ನಂಬಲಾಗಿದೆ. ವಾಸ್ತು ಪ್ರಕಾರ, ಮನೆಯ ಗೃಹಿಣಿ, ಮಹಾಲಕ್ಷ್ಮಿ (Mahalaxmi)ಯನ್ನು ಮೆಚ್ಚಿಸಲು ಮಲಗುವ ಮುನ್ನ ಕೆಲವು ಉಪಾಯಗಳನ್ನು ಮಾಡಬೇಕು. ಇದ್ರಿಂದ ಜೀವನದಲ್ಲಿ ದೊಡ್ಡ ಬದಲಾವಣೆ ನೋಡಬಹುದು. ಸಣ್ಣ ಕೆಲಸದಿಂದ ದೊಡ್ಡ ಪ್ರಯೋಜನ ಸಿಗಲಿದೆ. ಇಂದು ಮಹಿಳೆಯಾದವಳು ರಾತ್ರಿ ಮಲಗುವ ಮುನ್ನ ಏನು ಮಾಡ್ಬೇಕೆಂದು ನಾವು ಹೇಳ್ತೆವೆ.

ಮಲಗುವ ಮೊದಲು ಗೃಹಿಣಿ ಮಾಡಬೇಕಾದ ಕೆಲಸ : 
ಕರ್ಪೂರ ಬೆಳಗಿಸಿ : ಕರ್ಪೂರಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ದೇವರ ಪೂಜೆಗೆ ಇದನ್ನು ಬಳಸಲಾಗುತ್ತದೆ. ಜೊತೆಗೆ ವಾಸ್ತುಶಾಸ್ತ್ರದಲ್ಲೂ ಇದರ ಬಳಕೆ ಮಾಡಲಾಗುತ್ತದೆ. ಕರ್ಪೂರದ ಹೊಗೆಯಲ್ಲಿ ಬಲವಾದ ಶಕ್ತಿಯಿದೆ ಎಂದು ನಂಬಲಾಗಿದೆ. ಮನೆಯ ಗೃಹಿಣಿ ಮಲಗುವ ಮುನ್ನ ಕರ್ಪೂರವನ್ನು ಬೆಳಗಿಸಬೇಕು. ಅದನ್ನು ಮಲಗುವ ಕೋಣೆಯಲ್ಲಿ ಹಚ್ಚಬೇಕು.  ಕರ್ಪೂರದ ಹೊಗೆ ಮನೆಯ ಮೂಲೆ ಮೂಲೆ ತಲುಪುವಂತೆ ನೋಡಿಕೊಳ್ಳಬೇಕು. ವಾಸ್ತು ಪ್ರಕಾರ, ಇದು ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ಧನಾತ್ಮಕವಾಗಿ ಪರಿವರ್ತಿಸುತ್ತದೆ. ಪತಿ-ಪತ್ನಿಯರ ನಡುವೆ ಇದ್ದ ಜಗಳ ದೂರವಾಗಿ ಸಂಬಂಧದಲ್ಲಿ ಮಧುರತೆ ಮೂಡುತ್ತದೆ.

Tap to resize

Latest Videos

undefined

ದಕ್ಷಿಣ ಮತ್ತು ಪಶ್ಚಿಮ ಮೂಲೆಯಲ್ಲಿ ದೀಪವನ್ನು ಬೆಳಗಿಸಿ : 
ಮಹಿಳೆಯರು ಮಲಗುವ ಮುನ್ನ ಮನೆಯ ಪಶ್ಚಿಮ ಮತ್ತು ದಕ್ಷಿಣ ಮೂಲೆಗಳಲ್ಲಿ ದೀಪವನ್ನು ಹಚ್ಚಬೇಕು. ವಾಸ್ತು ಪ್ರಕಾರ, ಈ ದಿಕ್ಕುಗಳಲ್ಲಿ ದೀಪ ಬೆಳಗಿಸುವುದರಿಂದ, ಪೂರ್ವಜರ ಆಶೀರ್ವಾದವು ಕುಟುಂಬದ ಮೇಲೆ ಸದಾ ಇರುತ್ತದೆ. ಇದರ ಜೊತೆ ಬೆಳಕಿರುವ ದೀಪವನ್ನು ನೋಡಿ ತಾಯಿ ಲಕ್ಷ್ಮಿ ಆ ಮನೆಯ ಕಡೆಗೆ ಬರುತ್ತಾಳೆ. ತಾಯಿ ಲಕ್ಷ್ಮಿ ನೆಲೆಸಿರುವ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಸದಾ ನೆಲೆಸಿರುತ್ತದೆ. 

Vastu Tips : ನಿಮಗೆ ಯಾವ ಬಣ್ಣದ ಚಪ್ಪಲಿ ಆಗಿ ಬರೋಲ್ಲ ತಿಳಿಯಿರಿ..

ಪೂಜಾ ಕೋಣೆಯಲ್ಲಿ ದೀಪವನ್ನು ಬೆಳಗಿಸಿ : 
ಸಂಜೆ ಮಹಿಳೆಯಾದವಳು ದೇವರ ಮನೆಯಲ್ಲಿ ದೀಪವನ್ನು ಬೆಳಗಿಸಬೇಕು. ದೇವರ ಮನೆಯಲ್ಲಿ ಹಾಗೂ ಮುಖ್ಯ ದ್ವಾರದಲ್ಲಿ ದೀಪ ಬೆಳಗುತ್ತಿದ್ದರೆ ಮಹಾಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆ ಇದೆ. ಇದ್ರಿಂದ ಮನೆಯಲ್ಲಿ ಆರ್ಥಿಕ ವೃದ್ಧಿಯಾಗುತ್ತದೆ. ಆರೋಗ್ಯ,ಸುಖ ಮನೆ,ಮನ ತುಂಬಿರುತ್ತದೆ.  

ಹಿರಿಯರಿಗೆ ಸೇವೆ : ಹಿರಿಯರು ದೇವರಿಗೆ ಸಮವೆಂದು ನಂಬಲಾಗಿದೆ. ಮನೆಯ ಹಿರಿಯರ ಮುಂದೆ ತಗ್ಗಿಬಗ್ಗಿ ನಡೆಯಬೇಕೆಂದು ಹೇಳಲಾಗುತ್ತದೆ. ಮನೆಯ ಗೃಹಿಣಿಯಾದವಳು ಹಿರಿಯರ ಸೇವೆ ಮಾಡಬೇಕು. ಮನೆಯ ಹಿರಿಯರ ಸೇವೆ ಮಾಡುವುದೇ ದೊಡ್ಡ ಧರ್ಮ. ಇದ್ರಿಂದ ಮಹಾಲಕ್ಷ್ಮಿಯ ವಿಶೇಷ ಅನುಗ್ರಹಕ್ಕೆ ಪಾತ್ರರಾಗಬಹುದು. ಮಲಗುವ ಮುನ್ನ ತಂದೆ-ತಾಯಿ, ಹಿರಿಯರ ಸೇವೆ ಮಾಡುವ ಗೃಹಿಣಿಯರ ಮನೆಯಲ್ಲಿ ಮತ್ತು ಜೀವನದಲ್ಲಿ ಸದಾ ಸುಖ, ಸೌಭಾಗ್ಯವಿರುತ್ತದೆ.

Vastu Tips: ಉಪ್ಪುನೀರಿನಿಂದ ಮನೆ ಒರೆಸಿದ್ರೆ ಋಣಾತ್ಮಕ ಶಕ್ತಿಗಳೆಲ್ಲ ಗಾಯಬ್!

]ಆರ್ಥಿಕ ಸಮಸ್ಯೆಯಿಂದ ಮುಕ್ತಿ : ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಮೇಲಿನ ಕೆಲಸಗಳನ್ನು ಮಾಡುವ ಮನೆಯಲ್ಲಿ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತದೆ. ತಾಯಿ ಲಕ್ಷ್ಮಿ ಕೃಪೆ ಮನೆಯವರ ಮೇಲೆ ಇರುತ್ತದೆ. 

click me!