ಬಾಲ್ಕನಿ ಚೆಂದವಿದ್ದರೆ ಮನೆಗೆ ವಿಶೇಷ ಲುಕ್, ಸ್ಪೆಷಲ್ ಚಟ್ ಕೊಡೋದು ಹೇಗೆ?

By Suvarna NewsFirst Published Feb 15, 2020, 12:40 PM IST
Highlights

ಬಾಲ್ಕನಿ ಮನೆಯ ಹೊರಗಿನ ಜಾಗ,ಅದಕ್ಯಾಕೆ ಸಿಂಗಾರ ಎಂದು ನಿರ್ಲಕ್ಷಿಸುವ ಜನರು ಅನೇಕರಿದ್ದಾರೆ. ಆದರೆ, ಚಿಕ್ಕದಾದ ಬಾಲ್ಕನಿಯನ್ನು ಚೊಕ್ಕದಾಗಿ ಸಿಂಗಾರಿಸಿದ್ರೆ ನೋಡುವ ಕಣ್ಣಿಗೂ, ಮನಸ್ಸಿಗೂ ಹಿತವಾದ ಅನುಭೂತಿ ಧಕ್ಕುತ್ತದೆ.

ಮನೆಯಲ್ಲಿ ಬೋರ್ ಅಂದೆನಿಸಿದಾಗ ಥಟ್ಟನೆ ನೆನಪಾಗುವ ಜಾಗ ಬಾಲ್ಕನಿ. ಹೌದು,ರೂಮ್‍ಗೆ ತಾಗಿರುವ ಬಾಲ್ಕನಿಯಲ್ಲೊಂದು ತೂಗು ಕುರ್ಚಿಯಿದ್ದರೆ,ಅದರಲ್ಲಿ ಕುಳಿತು ಕೈಯಲ್ಲೊಂದು ಮಗ್ ಹಿಡಿದು ಒಂದೊಂದೇ ಗುಟುಕು ಕಾಫಿಯನ್ನು ಗಂಟಲಿಗಿಳಿಸುತ್ತಿದ್ದರೆ ಮೈ-ಮನಕ್ಕೆಲ್ಲ ಹಿತ. ಬೇಸರ,ಕಾತರ ಎಲ್ಲವೂ ಮಂಗಮಾಯ. ಬಿಡುವಿನ ವೇಳೆಯಲ್ಲಿ ಇಷ್ಟದ ಪುಸ್ತಕ ಹಿಡಿದು ಓದುತ್ತ ಕೂರಲು ಕೂಡ ಇದು ಹೇಳಿ ಮಾಡಿಸಿದ ಜಾಗ. ಒಟ್ಟಾರೆ ಏಕಾಂತಕ್ಕೆ ಸಾಥ್ ಕೊಡುವ ತಾಣವೇ ಬಾಲ್ಕನಿ. ಇಂಥ ಸ್ಥಳವನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಏನ್ ಮಾಡ್ಬಹುದು? ಬಾಲ್ಕನಿ ಡೆಕೋರೇಷನ್‍ಗೆ ಇಲ್ಲೊಂದಿಷ್ಟು ಐಡಿಯಾಗಳಿವೆ.

ನಿಮ್ಮ ಸೆಕ್ಸ್ ಲೈಫ್ ವಿಜೃಂಭಿಸಲು ಬೆಡ್‌ರೂಂ ವಾಸ್ತು ಹೀಗಿರಲಿ!

-ಬಾಲ್ಕನಿ ಪುಟ್ಟದಾಗಿರುವ ಕಾರಣ ಆಕರ್ಷಕವಾಗಿ ಕಾಣುವಂತೆ ಮಾಡಲು ಸಮರ್ಪಕವಾದ ಸ್ಪೇಸ್ ಮ್ಯಾನೇಜ್ಮೆಂಟ್ ಮಾಡುವುದು ಅಗತ್ಯ.ಇಲ್ಲಿ ಕುರ್ಚಿ,ಟೇಬಲ್ ಇಡುವ ಪ್ಲ್ಯಾನ್ ನಿಮಗಿದ್ದರೆ,ದೊಡ್ಡದಾದ ಕುರ್ಚಿ ಅಥವಾ ಟೇಬಲ್ ಬದಲಿಗೆ ಪೋಲ್ಡ್ ಮಾಡಬಹುದಾದ ಟೇಬಲ್ ಹಾಗೂ ಕುರ್ಚಿಗಳನ್ನಿಡಿ.ಇದರಿಂದ ಇವುಗಳ ಅಗತ್ಯವಿಲ್ಲದಿರುವಾಗ ಪೋಲ್ಡ್ ಮಾಡಿ ಒಳಗಿಡಬಹುದು.ಇದರಿಂದ ಬಾಲ್ಕನಿಯಲ್ಲಿ ಜಾಗ ಉಳಿಯುವ ಜೊತೆಗೆ ಆ ಕಡೆ ಈ ಕಡೆ ತಿರುಗಾಡಲು ತೊಡಕಾಗುವುದಿಲ್ಲ.
-ಇನ್‍ಬಿಲ್ಟ್ ಫರ್ನಿಚರ್‍ಗಳನ್ನು ಕೂಡ ಬಳಸಬಹುದು. ಇದರಿಂದ ಗಾಳಿಗೆ ಫರ್ನಿಚರ್ ಬೀಳಬಹುದು,ಡ್ಯಾಮೇಜ್ ಆಗಬಹುದು ಎಂಬ ಭಯವಿಲ್ಲ. ಅಲ್ಲದೆ,ಪದೇಪದೆ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಮೂವ್ ಮಾಡುವ ತಲೆನೋವು ಕೂಡ ಇಲ್ಲ. ಮಕ್ಕಳಿರುವ ಮನೆಗೆ ಇದು ಹೇಳಿಮಾಡಿಸಿದ ಐಡಿಯಾ.
-ತೂಗು ಮಂಚ ಅಥವಾ ತೂಗು ಕುರ್ಚಿ ಬಾಲ್ಕನಿಯ ಅಂದ ಹೆಚ್ಚಿಸುತ್ತದೆ.ಬಾಲ್ಕನಿ ದೊಡ್ಡದಿದ್ರೆ ಪುಟ್ಟ ತೂಗುಮಂಚವನ್ನಿಡಬಹುದು.ಕಿರಿದಾಗಿದ್ದರೆ ತೂಗು ಕುರ್ಚಿಯನ್ನು ಬಳಸಬಹುದು.ಓದಲು, ಮ್ಯೂಸಿಕ್ ಕೇಳಲು ಅಥವಾ ಸುಮ್ಮನೆ ಗಾಳಿಗೆ ಮುಖವೊಡ್ಡಿ ಕಾಲಹರಣ ಮಾಡಲು ತೂಗು ಕುರ್ಚಿವೊಂದಿದ್ದರೆ ಚೆನ್ನಾಗಿರುತ್ತದೆ.

ಜೇಬಿಗೆ ಹೊರೆಯಾಗದಂತೆ ಮನೆ ಅಂದ ಹೆಚ್ಚಿಸುವುದು ಹೇಗೆ?

-ಸ್ಥಳಾವಕಾಶ ಹೆಚ್ಚಿರಲಿ, ಕಡಿಮೆಯಿರಲಿ ಹಸಿರು ಬಾಲ್ಕನಿ ಅಂದಕ್ಕೆ ಮೆರುಗು ನೀಡುತ್ತದೆ. ಅದೂ ನಗರ ಪ್ರದೇಶಗಳಲ್ಲಂತೂ ಎತ್ತ ಕಣ್ಣು ಹಾಯಿಸಿದರೂ ಬಾನೆತ್ತರದ ಕಟ್ಟಡಗಳೇ ಗೋಚರಿಸುತ್ತವೆ.ಹಸಿರಂತೂ ಕಣ್ಣಿಗೇ ಬಿಳೋದಿಲ್ಲ. ಹೀಗಿರುವಾಗ ಮನಸ್ಸಿಗೆ ಮುದ ನೀಡುವ ಗಿಡಗಳನ್ನು ಬಾಲ್ಕನಿಯಲ್ಲಿಡುವ ಮೂಲಕ ಗ್ರೀನ್ ಟಚ್ ನೀಡಬಹುದು.ಕುಂಡಗಳನ್ನಿಟ್ಟರೆ ಬಾಲ್ಕನಿಯಲ್ಲಿ ಫ್ರೀ ಸ್ಪೇಸ್ ಜಾಸ್ತಿ ಸಿಗಲ್ಲ ಅಂತೆನಿಸಿದರೆ ಪಾಟ್‍ಗಳನ್ನು ಹ್ಯಾಂಗ್ ಮಾಡಬಹುದು, ಇಲ್ಲವೆ ಪಾಟ್‍ಗಳನ್ನಿಡಲು ಸ್ಟ್ಯಾಂಡ್ ಬಳಸಬಹುದು.ಗೋಡೆಗಳಲ್ಲಿ ಕೂಡ ಕಂಪಾರ್ಟ್‍ಮೆಂಟ್‍ಗಳನ್ನು ಮಾಡಿಸಬಹುದು.ಅದರಲ್ಲಿ ಪಾಟ್‍ಗಳನ್ನು ನೀಟಾಗಿ ಜೋಡಿಸಿಟ್ಟರೆ ಬಾಲ್ಕನಿ ನಿಮ್ಮ ಕಣ್ಣು ಮತ್ತು ಮನಸ್ಸು ಎರಡಕ್ಕೂ ಮುದ ನೀಡುತ್ತದೆ.
-ಬಾಲ್ಕನಿ ಗೋಡೆಗಳನ್ನು ಬಳಸಿಕೊಂಡು ಕೂಡ ಈ ಜಾಗದ ಮೆರುಗು ಹೆಚ್ಚಿಸಬಹುದು.ಗೋಡೆಗಳಿಗೆ ಆರ್ಟ್ ವರ್ಕ್‍ಗಳು, ಕಲಾಕೃತಿಗಳನ್ನು ತೂಗು ಹಾಕಬಹುದು. 
-ಬಾಲ್ಕನಿ ಅಂದ ಹೆಚ್ಚಿಸುವಲ್ಲಿ ಲೈಟಿಂಗ್ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಈಗಂತೂ ಮಾರುಕಟ್ಟೆಯಲ್ಲಿ ನಾನಾ ವಿನ್ಯಾಸದ ಹ್ಯಾಂಗಿಂಗ್, ಸ್ಟ್ರಿಂಗ್ ಲೈಟ್‍ಗಳು ಲಭ್ಯವಿವೆ. ಇವು ಹೆಚ್ಚು ದುಬಾರಿಯೂ ಅಲ್ಲ,ಹೀಗಾಗಿ ಇಂಥ ಲೈಟಿಂಗ್‍ಗಳನ್ನು ಬಳಸುವ ಮೂಲಕ ಬಾಲ್ಕನಿ ಆಕರ್ಷಕವಾಗಿ ಕಾಣುವಂತೆ ಮಾಡಬಹುದು.

ದಿಢೀರ್ ಅತಿಥಿ ಎಂಟ್ರಿಗೆ ಮನೆ ಸಜ್ಜುಗೊಳಿಸುವುದು ಹೇಗೆ ಗೊತ್ತಾ?

-ಬಾಲ್ಕನಿ ಡೆಕೋರೇಷನ್‍ಗೆ ಜಾಸ್ತಿ ಹಣ ಖರ್ಚು ಮಾಡೋದು ವೇಸ್ಟ್ ಎಂಬ ಮನಸ್ಥಿತಿ ನಿಮ್ಮದಾಗಿದ್ರೆ ಫ್ಲೋರ್ ಪಿಲ್ಲೋಗಳನ್ನು ಬಳಸಬಹುದು. ನಾನಾ ವಿನ್ಯಾಸದ,ಬಣ್ಣಗಳ ಪಿಲ್ಲೋಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ.ಇವು ಕಡಿಮೆ ಖರ್ಚಿನಲ್ಲಿ ನಿಮ್ಮ ಬಾಲ್ಕನಿಗೆ ರಾಯಲ್ ಲುಕ್ ನೀಡುತ್ತವೆ.
-ಆರಾಮವಾಗಿ ಕುಳಿತು ಬಿಸಿಲಿಗೆ ಮೈಯೊಡ್ಡಲು ಅಥವಾ ಪುಸ್ತಕ ಓದಲು ಬಾಲ್ಕನಿ ಬೆಸ್ಟ್ ಪ್ಲೇಸ್. ಸೋ,ಲಾಂಜ್ ಚೇರ್‍ವೊಂದನ್ನು ಬಾಲ್ಕನಿಯಲ್ಲಿಡಬಹುದು.ಅದರ ಪಕ್ಕದಲ್ಲೇ ಒಂದು ಪುಟ್ಟ ಟೀ ಟೇಬಲ್ ಇಟ್ಟರೆ ಬಾಲ್ಕನಿ ಆಕರ್ಷಕವಾಗಿ ಕಾಣುತ್ತದೆ.

click me!