ಸುಖ ಪ್ರಸವ ಹಾಗೂ ಆರೋಗ್ಯವಂತ ಮಗುವಿಗಾಗಿ ಗರ್ಭಿಣಿ ಮಹಿಳೆಗೆ ವಾಸ್ತು ಕೆಲವು ಸಲಹೆಗಳನ್ನು ನೀಡುತ್ತದೆ.
ಸೃಷ್ಟಿಯಲ್ಲಿ ಎಲ್ಲವೂ ಸಮಯಕ್ಕೆ ಸರಿಯಾಗಿ ಉತ್ಪತ್ತಿಯಾಗುತ್ತವೆ. ಸೃಷ್ಟಿಯ ಹೊಟ್ಟೆ ಕೂಡಾ ತಾಯಿಯ ಹೊಟ್ಟೆಯಂತೆ ಸೃಷ್ಟಿಸುತ್ತದೆ, ರಕ್ಷಿಸುತ್ತದೆ, ಬೆಳೆಸುತ್ತದೆ. ಗರ್ಭಾವಸ್ಥೆ(pregnancy) ಕೂಡಾ ಹಾಗೆಯೇ. ಅಲ್ಲಿ ಜೀವದ ಸೃಷ್ಟಿಯಾಗುತ್ತದೆ, ರಕ್ಷಣೆಯಾಗುತ್ತದೆ, ಸಮಯ ಬಂದಾಗ ಹೊರಗೆ ಬರುತ್ತದೆ. ಜಗತ್ತಿನ ನಿರಂತರತೆಗೆ ಈ ಗರ್ಭಾವಸ್ಥೆ ಹಾಗೂ ಪುನರುತ್ಪತ್ತಿ ಅತ್ಯಗತ್ಯವಾಗಿದೆ.
ತಾಯಿಯ ಸೃಷ್ಟಿಯೇ ವಿಸ್ಮಯವಾಗಿದೆ. ಗರ್ಭಿಣಿಯೊಳಗೆ ಎರಡೆರಡು ಹೃದಯ, ಜೀವದೊಳಗೆ ಜೀವ, ಜೀವಮಾನದುದ್ದದ ಸಂಬಂಧದ ಮೊಳೆತ.. ಇವೆಲ್ಲ ಎಂಥ ವಿಶೇಷವಲ್ಲವೇ?
ವಾಸ್ತುವು ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ. ಅದು ಭೂಮಿ, ಆಕಾಶ, ನೀರು, ಬೆಂಕಿ ಹಾಗೂ ಗಾಳಿಯನ್ನು ಅಧ್ಯಯನ ಮಾಡಿ ವಿವರಿಸುತ್ತದೆ. ದಶದಿಕ್ಕುಗಳನ್ನೂ ಒಳಗೊಂಡಿದೆ. ಈ ಎಲ್ಲ ಸಂಗತಿಗಳು ನಮ್ಮ ಜೀವನದ ಮೇಲೆ ಬೀರುವ ಪರಿಣಾಮದ ಬಗ್ಗೆ ವಾಸ್ತು ಹೇಳುತ್ತದೆ. ಈ ಪಂಚಭೂತಗಳು ನಮ್ಮ ಕೆಲಸ, ಅದೃಷ್ಟ, ವರ್ತನೆ ಎಲ್ಲದರ ಮೇಲೂ ಪರಿಣಾಮ ಬೀರುತ್ತವೆ. ಹಾಗಾಗಿ, ಎಲ್ಲ ಸಂದರ್ಭಗಳಲ್ಲಿ ಪಾಸಿಟಿವ್ ಎನರ್ಜಿ ಹೊಂದಿ ಉತ್ತಮ ಫಲಿತಾಂಶ ಪಡೆಯುವುದು ಹೇಗೆ ಎಂದು ವಾಸ್ತು ಹೇಳುತ್ತದೆ. ಪ್ರಗ್ನೆನ್ಸಿ ವಿಷಯಕ್ಕೂ ಅದು ಹೊರತಲ್ಲ. ಈ ಸಂದರ್ಭದಲ್ಲಿ ಧನಾತ್ಮಕ ಶಕ್ತಿಯು ಆರೋಗ್ಯವಂತ ಮಗು ಹಾಗೂ ಸುಖ ಪ್ರಸವಕ್ಕೆ ಕಾರಣವಾಗುತ್ತದೆ.