ವಾಸ್ತು ಶಾಸ್ತ್ರದಲ್ಲಿ ಮನೆಯ ಒಳಾಂಗಣ ಮತ್ತು ಹೊರಾಂಗಣ ಹೇಗಿದ್ದರೆ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ ಎಂಬ ಬಗ್ಗೆ ಹೇಳಲಾಗಿದೆ. ಅಡುಗೆ ಮನೆ, ದೇವರ ಕೋಣೆ, ಮುಖ್ಯ ದ್ವಾರ ಹೀಗೆ ಪ್ರತಿಯೊಂದೂ ವಾಸ್ತು ಪ್ರಕಾರವಿದ್ದರೆ ಮನೆಯಲ್ಲಿ ಸಂಪತ್ತು-ಸಮೃದ್ಧಿ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ ಕೆಲವೊಂದು ಸಸ್ಯಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಅನೇಕ ಲಾಭಗಳಿವೆ ಎಂದು ಸಹ ಹೇಳಲಾಗುತ್ತದೆ. ಹಾಗಾಗಿ ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಗುಣಕಾರಿ ಅಂಶವನ್ನು ಹೊಂದಿರುವ ಸಸ್ಯಗಳ ಬಗ್ಗೆ ತಿಳಿಯೋಣ..
ಸನಾತನ ಸಂಸ್ಕೃತಿಯಲ್ಲಿ ಪ್ರಕೃತಿಯನ್ನು ದೇವರೆಂದು ಪೂಜಿಸುತ್ತೇವೆ. ಹಿಂದೂ ಧರ್ಮದಲ್ಲಿ ಸಸ್ಯಗಳನ್ನು ಅತ್ಯಂತ ಭಕ್ತಿಯಿಂದ ಆರಾಧಿಸುವ ಪರಂಪರೆ ನಡೆದು ಬಂದಿದೆ. ಪ್ರಕೃತಿಯಿಂದ ಮಾನವನಿಗೆ ಎಲ್ಲವೂ ಸಿಗುತ್ತದೆ. ಶುದ್ಧವಾದ ಗಾಳಿ, ನೆರಳು ಮತ್ತು ರೋಗಗಳಿಂದ ದೂರವಿಡುವಂಥ ಔಷಧೀಯ ಗುಣಗಳನ್ನು ಹೊಂದಿರುತ್ತವೆ.
ವಾಸ್ತು ಪ್ರಕಾರ ಮನೆಯ ದಿಕ್ಕು, ವಸ್ತುಗಳು ಸರಿಯಾದ ಜಾಗದಲ್ಲಿ ಇದ್ದಾಗ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ಅದರಂತೆಯೇ ಕೆಲವು ಸಸ್ಯಗಳನ್ನು ಮನೆಯಲ್ಲಿಟ್ಟುಕೊಂಡರೆ ವಾಸ್ತು ಪ್ರಕಾರ ಅನೇಕ ಲಾಭಗಳಿವೆ ಎಂಬುದನ್ನು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ಪತ್ನಿಗೆ ಈ ನಾಲ್ಕು ಗುಣಗಳಿವೆ ಎಂದರೆ ಪತಿ ಅದೃಷ್ಟವಂತನೆಂದೇ ಅರ್ಥ…!
ಈ ಕೆಲವು ಸಸ್ಯಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಸಾಲದಿಂದ ಮುಕ್ತಿ, ಸಂಕಷ್ಟ ನಿವಾರಣೆಯಾಗುವುದಲ್ಲದೇ, ರೋಗ ರುಜಿನಗಳ ಬಾಧೆಯಿಂದ ಪಾರಾಗಬಹುದೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ಸಸ್ಯಗಳಿಂದ ಮನೆಯಲ್ಲಿ ಸಕಾರಾತ್ಮಕ ಪ್ರಭಾವ ಹೆಚ್ಚುವುದಲ್ಲದೇ, ಮನೆಯ ಸದಸ್ಯರಿಗೂ ಅನೇಕ ಲಾಭಗಳಾಗುತ್ತವೆ. ಹಾಗಂತ ಎಲ್ಲ ರೀತಿಯ ಸಸ್ಯಗಳು ಮನೆಗೆ ಒಳಿತನ್ನು ನೀಡುವುದಿಲ್ಲ. ಹಾಗಾಗಿ ಯಾವ ರೀತಿಯ ಸಸ್ಯಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಒಳಿತಾಗುತ್ತದೆ? ಎಂಬುದನ್ನು ನೋಡೋಣ..
undefined
ತುಳಸಿ
ತುಳಸಿ ಅತ್ಯಂತ ಪವಿತ್ರವಾದ ಸಸ್ಯ. ವಿಷ್ಣುವಿಗೆ ಪ್ರಿಯವಾದ ತುಳಸಿಯಲ್ಲಿ ಅನೇಕ ಔಷಧೀಯ ಗುಣಗಳಿವೆ. ಸಾತ್ವಿಕ ಶಕ್ತಿಯನ್ನು ಹೊಂದಿರುವ ತುಳಸಿಯನ್ನು ಮನೆಯಲ್ಲಿ ಬೆಳೆಸಬೇಕು. ಇದರಿಂದ ನಕಾರಾತ್ಮರ ಶಕ್ತಿಯು ನಾಶಮಾಡುವ ಕ್ಷಮತೆ ತುಳಸಿ ಗಿಡದಲ್ಲಿದೆ. ಅಷ್ಟೇ ಅಲ್ಲದೇ ತುಳಸಿಯನ್ನು ಔಷಧಿಗಳ ರಾಣಿ ಎಂದು ಸಹ ಕರೆಯುತ್ತಾರೆ. ತುಳಸಿಯಲ್ಲಿ ಹೇರಳವಾದ ಔಷಧೀಯ ಗುಣವಿರುವುದಾಗಿ ಸಾಬೀತಾಗಿದ್ದಲ್ಲದೇ, ಇದರ ಎಲೆ ಮತ್ತು ಹೂವು ಅನೇಕ ರೋಗಗಳನ್ನು ಬೇರು ಸಹಿತ ನಾಶಮಾಡುವ ಶಕ್ತಿಯನ್ನು ಹೊಂದಿದೆ.
ದಿನ ಪೂರ್ತಿ ಆಮ್ಲಜನಕವನ್ನು ಪೂರೈಸುವ ಸಸ್ಯಗಳಲ್ಲೊಂದಾದ ತುಳಸಿಯು ಹೆಚ್ಚು ಸಕಾರಾತ್ಮಕ ಶಕ್ತಿಯನ್ನು ನೀಡುವ ಗಿಡವಾಗಿದೆ. ತುಳಸಿಯನ್ನು ಮನೆಯ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದೆಂದು ಹೇಳಲಾಗುತ್ತದೆ.
ಇದನ್ನು ಓದಿ: ಹೇಗಿರ್ತಾರೆ ನವೆಂಬರ್‌ನಲ್ಲಿ ಜನಿಸಿದವರು, ನೀವು - ನಿಮ್ಮವರಿದ್ದಾರಾ..?
ಮಲ್ಲಿಗೆ
ಮಲ್ಲಿಗೆ ಬಳ್ಳಿಯನ್ನು ಮನೆಯಲ್ಲಿ ಬೆಳೆಯುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಮಲ್ಲಿಗೆ ಹೂವಿನ ಸುಗಂಧ ಮನಸ್ಸಿಗೆ ಆನಂದವನ್ನು ನೀಡುವುದಲ್ಲದೆ, ದೇವರ ಪೂಜೆಗೆ ಬಳಕೆಯಾಗುತ್ತದೆ. ನೆರಳಿನ ಜೊತೆ ಜೊತೆಗೆ ಸೂರ್ಯನ ಬೆಳಕು ನೇರವಾಗಿ ಬೀಳುವಂಥ ಜಾಗದಲ್ಲಿ ಮಲ್ಲಿಗೆ ಗಿಡವನ್ನಿಟ್ಟರೆ ಉತ್ತಮ.
ಪೂರ್ವ ದಿಕ್ಕಿಗೆ ಇಡುವುದು ಉತ್ತಮವೆಂದು ಹೇಳಲಾಗುತ್ತದೆ. ಮಲ್ಲಿಗೆ ಬಳ್ಳಿಯಲ್ಲಿ ಸಹ ಅನೇಕ ಗುಣಕಾರಿ ಅಂಶಗಳಿದ್ದು, ಬೇರೆ ಬೇರೆ ರೋಗಕ್ಕೆ, ಚರ್ಮ ಸಂಬಂಧಿ ಖಾಯಿಲೆಗಳಿಗೆ ಇದರ ಬೇರು, ಎಲೆ ಮತ್ತು ಹೂವನ್ನು ಸಹ ಬಳಕೆ ಮಾಡುತ್ತಾರೆ.
ನೆಲ್ಲಿ
ನೆಲ್ಲಿಯಲ್ಲಿ ಅನೇಕ ವಿಧಗಳಿವೆ. ನೆಲನೆಲ್ಲಿ, ಬೆಟ್ಟದ ನೆಲ್ಲಿ, ರಾಜ್ ನೆಲ್ಲಿ ಹೀಗೆ ಇತ್ಯಾದಿ ವಿಧಗಳಿವೆ. ನೆಲ್ಲಿಯನ್ನು ಮನೆಯ ಸುತ್ತಮುತ್ತ ಜಾಗವಿದ್ದರೆ ನೆಲ್ಲಿಯನ್ನು ಬೆಳೆಸುವುದು ಉತ್ತಮ. ಇದರಲ್ಲಿ ಅನೇಕ ಔಷಧೀಯ ಗುಣವಿರುವುದಲ್ಲದೇ, ವಾಸ್ತು ಪ್ರಕಾರ ಮನೆಗೆ ಅತ್ಯಂತ ಲಾಭದಾಯಕ ಗಿಡ ಇದಾಗಿದೆ ಎಂದು ಹೇಳಲಾಗುತ್ತದೆ. ನೆಲ್ಲಿ ಗಿಡವನ್ನು ಮನೆಯ ಉತ್ತಮ ಅಥವಾ ಪೂರ್ವ ದಿಕ್ಕಿನಲ್ಲಿ ಇದನ್ನು ಬೆಳೆಸುವುದರಿಂದ ಅನೇಕ ಲಾಭಗಳಿವೆ. ನೆಲ್ಲಿ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಕಷ್ಟಗಳ ನಿವಾರಣೆಯಾಗುವುದಲ್ಲದೇ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಆವರಿಸುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಕಹಿಬೇವು ಮತ್ತು ನಿಂಬೆ ಗಿಡ ಸಹ ಮನೆಯಲ್ಲಿ ಬೆಳೆಸಬಹುದಾದ ಉತ್ತಮ ಗಿಡಗಳಾಗಿವೆ.
ಇದನ್ನು ಓದಿ: ಹಸ್ತಸಾಮುದ್ರಿಕಾ ಶಾಸ್ತ್ರ: ಹಸ್ತದಲ್ಲಿ ಹೀಗಿದ್ದರೆ ವ್ಯಾಪಾರದಲ್ಲಿ ಲಾಭ-ನಷ್ಟ..!
ಮನಿ ಪ್ಲಾಂಟ್
ಮನೆಯ ಒಳಗಡೆ ಸಹ ಇಡಬಹುದಾದ ಸಸ್ಯ ಮನಿಪ್ಲಾಂಟ್. ನೋಡಲು ಆಕರ್ಷಕವಾಗಿರುವ ಈ ಸಸ್ಯದಿಂದ ಅನೇಕ ಪ್ರಯೋಜನವಿದೆ. ಮನಿಪ್ಲಾಂಟ್ ವಾತಾವರಣವನ್ನು ಶುದ್ಧಗೊಳಿಸುವುದಲ್ಲದೇ, ಗಾಳಿಯನ್ನು ಶುದ್ಧಗೊಳಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮನಿಪ್ಲಾಂಟ್ ಬೆಳೆಸುವುದರಿಂದ ಆರ್ಥಿಕ ಸಂಕಷ್ಟ ನಿವಾರಣೆಯಾಗುತ್ತದೆ.
ಮನಿಪ್ಲಾಂಟ್ ಹಸಿರಾಗಿದ್ದಷ್ಟು ಮನೆಯಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ ಮತ್ತು ಇದನ್ನು ಲಕ್ಷ್ಮೀಯ ರೂಪವೆಂದು ಸಹ ಕರೆಯಲಾಗುತ್ತದೆ. ಮನಿಪ್ಲಾಂಟ್ ಅನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಇಡಬೇಕೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದರ ಜೊತೆಗೆ ಶಮೀ ವೃಕ್ಷ, ಅಲೋವೆರಾದಂತಹ ಸಸ್ಯಗಳು ಮನೆಗೆ ಉತ್ತಮವೆಂದು ಹೇಳಲಾಗಿದೆ.