ಈ ಐದು ವಸ್ತುಗಳು ಮನೆಯಲ್ಲಿದ್ದರೆ ಅದೃಷ್ಟ ಖಚಿತ!

By Suvarna News  |  First Published Nov 5, 2020, 4:07 PM IST

ಕೆಲವು ವಸ್ತುಗಳು ನಮಗೆ ಅದೃಷ್ಟವನ್ನು ಒದ್ದು ಕೊಂಡು ತರುತ್ತವೆ. ಅಂಥವನ್ನು ಮನೆಯಲ್ಲಿ ಇಟ್ಟುಕೊಂಡರೆ ಸದಾ ಕ್ಷೇಮ ಹಾಗೂ ಲಾಭ. ಕಸಗಳನ್ನು ಹೊರಗೆಸೆಯಿರಿ, ಅದೃಷ್ಟದಾಯಕ ವಸ್ತುಗಳನ್ನು ಇಟ್ಟುಕೊಳ್ಳಿ.


ಬೆಳ್ಳಿಯ ಆಮೆ
ಅಮೆ ಕೂರ್ಮಾವತಾರ ಎನ್ನಲಾಗುತ್ತದೆ. ಒಮ್ಮೆ ದೇವತೆಗಳು ಸೊಕ್ಕಿದಾಗ, ದೂರ್ವಾಸ ಋಷಿಗಳ ಶಾಪದಿಂದ ಅವರ ಸಿರಿಯೆಲ್ಲ ಸಮುದ್ರದ ಪಾಲಾಯಿತು. ಅದನ್ನು ಮರಳಿ ಪಡೆಯಲು ಮಂದರ ಪರ್ವತವನ್ನೇ ಕಡೆಗೋಲನ್ನಾಗಿಸಿ, ವಾಸುಕಿಯನ್ನು ಹಗ್ಗವನ್ನಾಗಿಸಿ, ಮಹಾಸಮುದ್ರವನ್ನು ಕಡೆಯತೊಡಗಿದರು. ಮಂದರ ಪರ್ವತ ತನ್ನ ಭಾರಕ್ಕೆ ತಾನೇ ಕುಸಿಯತೊಡಗಿತು. ಆಗ ಮಹಾವಿಷ್ಣುವು ಕೂರ್ಮಾವತಾರ ತಾಳಿ ಮಂದರ ಪರ್ವತದ ತಳಭಾಗದಲ್ಲಿ ನಿಂತು ಪರ್ವತವನ್ನು ಎತ್ತಿ ಹಿಡಿದು ಕಡಲನ್ನು ಕಡೆಯಲು ನೆರವಾದ. ಹೀಗೆ ಮಹಾವಿಷ್ಣುವು ದೇವತೆಗಳಿಗೇ ತಮ್ಮ ಶ್ರೀಮಂತಿಕೆಯನ್ನು ಮರಳಿ ಪಡೆಯಲು ನೆರವಾದ. ಇನ್ನು ನಿಮಗೆ ನೆರವಾಗದೆ ಇರುತ್ತಾನೆಯೇ? ಮನೆಯಲ್ಲಿ ಬೆಳ್ಳಿ ಅಥವಾ ಕಂಚಿನ ಆಮೆಯನ್ನು ಇಟ್ಟುಕೊಂಡು ನಿತ್ಯ ಒಂದು ತುಳಸೀದಳವನ್ನು ಕೂರ್ಮನಿಗೆ ಅರ್ಪಿಸುವು ಮೂಲಕ ನಿಮ್ಮ ಅದೃಷ್ಟವನ್ನು ಹೆಚ್ಚಿಸಿಕೊಳ್ಳಿ.

ಹೇಗಿರ್ತಾರೆ ನವೆಂಬರ್‌ನಲ್ಲಿ ಜನಿಸಿದವರು, ನೀವು - ನಿಮ್ಮವರಿದ್ದಾರಾ..? ...

ಬಲಮುರಿ ಶಂಖ
ಬಲಮುರಿ ಶಂಖ ಅತ್ಯಪರೂಪವಾದುದು. ಇದನ್ನು ಮನೆಯಲ್ಲಿ ಇಟ್ಟುಕೊಂಡಿದ್ದರೆ, ನಿಮ್ಮ ದುರದೃಷ್ಟವನ್ನೆಲ್ಲ ಅದು ಸೆಳೆದುಕೊಳ್ಳುತ್ತದೆ ಮಾತ್ರವಲ್ಲ, ಮನೆಯಲ್ಲಿ ಧನಾತ್ಮಕ ವಾತಾವರಣವನ್ನೂ ಉಂಟುಮಾಡುತ್ತದೆ. ಬಲಮುರಿ ಶಂಖವನ್ನು ದಿನನಿತ್ಯ ಎರಡು ಬಾರಿ, ಮುಂಜಾನೆ ಒಮ್ಮೆ ಹಾಗೂ ಸಂಜೆ ಒಮ್ಮೆ ಊದುವುದರಿಂದ, ಮನೆಯಲ್ಲಿರುವ ಋಣಾತ್ಮಕ ಶಕ್ತಿಗಳೆಲ್ಲವೂ ಪಲಾಯನ ಮಾಡುತ್ತವೆ. ಓಂಕಾರದ ನಾದ ಪಸರಿಸುತ್ತದೆ. ಈ ಓಂಕಾರವು ಮನೆಯನ್ನು ಶುಭದಿಂದ ತುಂಬುತ್ತದೆ. ಶಂಖವೇ ಪವಿತ್ರ. ಎಡಮುರಿ ಶಂಖವಾದರೂ ಸರಿ. ಬಲಮುರಿ ಶಂಖವಾದರೆ ಇನ್ನೂ ಪವಿತ್ರ. ಮಾರುಕಟ್ಟೆಯಲ್ಲಿ ಪರೀಕ್ಷಿಸಿ ಕೊಂಡುಕೊಳ್ಳಿ.

Tap to resize

Latest Videos

undefined

.

ವಾಸ್ತು ಬಿದಿರು
ವಾಸ್ತು ಬಿದಿರನ್ನು ಹೊಂದಿರುವುದು ಒಳ್ಳೆಯದು. ಇದನ್ನು ಮನೆಯಲ್ಲಿ ಪೂರ್ವ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಡಬೇಕು. ಪೂರ್ವದಿಂದ ಬರುವ ಸೂರ್ಯನ ಬೆಳಕನ್ನು ಇದು ಚೆನ್ನಾಗಿ ಪಡೆದುಕೊಳ್ಳುತ್ತದೆ. ದಕ್ಷಿಣದಲ್ಲಿ ಇಟ್ಟರೆ, ಆ ದಿಕ್ಕಿನಿಂದ ಬರಬಹುದಾದ ಋಣಾತ್ಮಕ ಅಲೆಗಳನ್ನು ತಡೆಗಟ್ಟುತ್ತದೆ. ಬಿದಿರಿನ ನಾಲ್ಕು ಕುಂಡಗಳನ್ನು ಇಡಬಾರದು. ಒಂದು, ಎರಡು, ಮೂರು ಅಥವಾ ಐದು ಕುಂಡಗಳನ್ನು ಇಡಬಹುದು. ಇದಕ್ಕೆ ನಿತ್ಯ ನೀರು ಹಾಕುವಾಗ ನೀರು ನೆಲಕ್ಕೆ ಸೋರದಂತೆ ನೋಡಿಕೊಳ್ಳಬೇಕು. ಹೆಚ್ಚು ನೀರು ಹಾಕಬಾರದು. ಅತಿಯಾಗಿ ಬೆಳೆಯದಂತೆ ಆಗಾಗ ಟ್ರಿಮ್ ಮಾಡಿಕೊಳ್ಳಬೇಕು. ಮನೆಯೊಳಗಿಟ್ಟ ಬಿದಿರಿನ ತುದಿ ಮನೆಯ ಸೂರು ಅಥವ ಚಾವಣಿಯನ್ನು ಮುಟ್ಟುವಂತೆ ಇರಬಾರದು. 



ಆನೆ ಅಥವಾ ಹಂದಿಯ ಮೂರ್ತಿ
ಹಂದಿ ಕೊಳಕು ಅನ್ನುತ್ತೀರಿ. ಆದರೆ ಹಂದಿ ವರಾಹಾವತಾರದ ಪ್ರತೀಕ. ಹಿರಣ್ಯಾಕ್ಷನು ಭೂದೇವಿಯನ್ನು ಪೀಡಿಸುತ್ತಿರುವಾಗ, ಮಹಾವಿಷ್ಣುವ ವರಾಹಾವತಾರ ತಾಳಿ, ಹಿರಣ್ಯಾಕ್ಷನ ಕರುಳು ಬಗೆದು ಕೊಂದು ಹಾಕಿ ಭೂದೇವಿಯನ್ನು ರಕ್ಷಿಸಿದ. ಭೂಮಿಯನ್ನು ಅಗೆದು ತೆಗೆಯವ ಸಂಪತ್ಯಾವುದೂ ನಮ್ಮಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ ಎನ್ನುವುದನ್ನು ವರಾಹಾವತಾರ ತಿಳಿಸುತ್ತದೆ. ನೆಲದ ಮೇಲೆ ಬೆಳೆಯುವ ಸಿರಿಯೇ ನಮ್ಮದು. ಅದನ್ನು ಜತನದಿಂದ ಕಾಪಾಡಿಕೊಳ್ಳಬೇಕು. ಹಾಗೇ ಆನೆಯ ಮೂರ್ತಿಗಳೂ ಅದೃಷ್ಟಕಾರಿ. ಹಿಂದಿನ ಕಾಲದ ರಾಜ ಮಹಾರಾಜರೆಲ್ಲ ಆನೆಗಳನ್ನು ಸಾಕಿಕೊಳ್ಳುತ್ತಿದ್ದುದು ಸೇನೆಗಾಗಿ ಮಾತ್ರವಲ್ಲ, ಅದೃಷ್ಟಕ್ಕಾಗಿಯೂ ಕೂಡ. ನಮಗೆ ಆನೆಯನ್ನು ಸಾಕಲು ಸಾಧ್ಯವಿಲ್ಲ; ಕೊನೇಪಕ್ಷ ಅದರ ಮೂರ್ತಿ ಇಟ್ಟುಕೊಂಡು ಅದೃಷ್ಟವಾಲರಾಗೋಣ.

ಅಗರಬತ್ತಿ
ಆಶ್ಚರ್ಯವಾಗುತ್ತಿದೆ ಅಲ್ಲವೇ? ಹೌದು. ಮನೆಗೊಂದು ತುಳಸಿ ಗಿಡ ಅಥವಾ ಬೃಂದಾವನ ಇರುವಂತೆ, ಮನೆಯಲ್ಲಿ ಸದಾ ಅಗರಬತ್ತಿ ಇರಲೇಬೇಕು. ಹಿಂದಿನ ಕಾಲದಲ್ಲಿ ಮನೆಗಳಲ್ಲಿ, ಅರಮನೆಗಳಲ್ಲಿ ಧೂಪದ ಹೊಹೆ ಹಾಕುತ್ತಿದ್ದರು. ಇದು ಕ್ರಿಮಿಕೀಟಗಳನ್ನು ನಾಶ ಮಾಡುವುದಲ್ಲದೆ ಮನೆಯನ್ನು ಸುಗಂಧಮಯವಾಗಿ ಇಟ್ಟಿರುತ್ತಿತ್ತು. ಹಾಗೇ ಮನೆಯಲ್ಲಿ ಅದೃಷ್ಟದ ವಾತಾವರಣವನ್ನೂ ಸೃಷ್ಟಿಸುತ್ತಿತ್ತು. ಈಗ ಸರಿಯಾಗಿ ಕ್ರಮಬದ್ಧವಾಗಿ ತಯಾರಿಸಿದ ಅತ್ಯುತ್ತಮ ಪರಿಮಳದ ಅಗರಬತ್ತಿಯನ್ನು ಉರಿಸಿ ಇಡುವುದರಿಂದ ಮನೆಯೂ ಪವಿತ್ರವಾಗಿರುತ್ತದೆ, ಮನಸ್ಸೂ ಆ ಪರಿಮಳದಿಂಧ ಸದಾ ಆಹ್ಲಾದಮಯವಾಗಿ ಇರುತ್ತದೆ.  

click me!