ಜೇಬಿಗೆ ಹೊರೆಯಾಗದಂತೆ ಮನೆ ಅಂದ ಹೆಚ್ಚಿಸುವುದು ಹೇಗೆ?

By Suvarna NewsFirst Published Feb 3, 2020, 6:10 PM IST
Highlights

ಮನೆ ಅಂದ ಹೆಚ್ಚಬೇಕೆಂದ್ರೆ ಒಳಾಂಗಣ ವಿನ್ಯಾಸಕ್ಕೆ ಹೊಸ ಲುಕ್ ನೀಡುವುದು ಅತ್ಯಗತ್ಯ.ಆದರೆ,ಇದಕ್ಕೆಲ್ಲ ಸಿಕ್ಕಾಪಟ್ಟೆ ಖರ್ಚಾಗುತ್ತದೆ ಎನ್ನುವುದೇನೋ ನಿಜ. ಆದರೆ, ಕಡಿಮೆ ವೆಚ್ಚದಲ್ಲಿ ಕೆಲವೊಂದು ಸರಳ ಬದಲಾವಣೆಗಳನ್ನು ಮಾಡುವ ಮೂಲಕ ಮನೆಯ ಲುಕ್ ಬದಲಾಯಿಸಲು ಸಾಧ್ಯವಿದೆ.

ಮನೆ ಅಂದವಾಗಿದ್ರೆ ಮನಸ್ಸಿಗೂ ಆಹ್ಲಾದ. ಮನೆ ಅಂದವಾಗಿ ಕಾಣಿಸಬೇಕೆಂದ್ರೆ ಕಾಲಕಾಲಕ್ಕೆ ಒಳಾಂಗಣ ವಿನ್ಯಾಸ ನವೀಕರಿಸುವುದು ಅಗತ್ಯ. ಆದರೆ,ಬಹುತೇಕರಿಗೆ ಒಳಾಂಗಣ ವಿನ್ಯಾಸದ ನವೀಕರಣಕ್ಕೆ ಅಥವಾ ಹಳೆಯ ವಸ್ತುಗಳನ್ನು ಬದಲಾಯಿಸಿ ಹೊಸ ವಿನ್ಯಾಸದ ಸಾಮಗ್ರಿಗಳನ್ನು ತರಲು ಬಜೆಟ್ ದೊಡ್ಡ ಪ್ರಾಬ್ಲಂ ಆಗಿರುತ್ತದೆ. ಇದೇ ಕಾರಣಕ್ಕೆ ಇಂಟೀರಿಯರ್‍ಗೆ ಹೊಸ ಲುಕ್ ನೀಡುವ ಕಾರ್ಯಕ್ಕೆ ಕೈ ಹಾಕಲು ಮಧ್ಯಮ ವರ್ಗದ ಜನರು ಹಿಂಜರಿಯುತ್ತಾರೆ. ಆದರೆ, ನಿಮ್ಗೆ ಗೊತ್ತಾ, ಕಡಿಮೆ ವೆಚ್ಚದಲ್ಲಿ ಕೂಡ ಮನೆಗೆ ಹೊಸ ಲುಕ್ ನೀಡಲು ಸಾಧ್ಯವಿದೆ. ನೀವು ವಿಭಿನ್ನವಾಗಿ ಯೋಚಿಸಬಲ್ಲಿರಾದ್ರೆ ಕಡಿಮೆ ವೆಚ್ಚದಲ್ಲಿ ಮನೆಯ ಅಂದ ಹೆಚ್ಚಿಸಲು ಸಾಧ್ಯವಿದೆ.

ಸೋಫಾದ ಕುಶನ್ ಬದಲಾಯಿಸಿ: ಮನೆಯಲ್ಲಿರುವ ಸೋಫಾ ಹಳೆಯದಾಗಿರಬಹುದು. ಈಗಿನ ಸ್ಥಿತಿಯಲ್ಲಿ ಹೊಸ ಸೋಫಾಕ್ಕೆ ಇನ್ವೆಸ್ಟ್ ಮಾಡುವ ಸ್ಥಿತಿಯಲ್ಲಿ ನೀವಿಲ್ಲ ಅಂತಾದ್ರೆ ಡೋಂಟ್ ವರಿ, ಸೋಫಾದ ಕುಶನ್‍ಗಳನ್ನು ಬದಲಾಯಿಸಿ. ಆಕರ್ಷಕವಾದ ಕುಶನ್ ಅಳವಡಿಸಿದರೆ ನಿಮ್ಮ ಸೋಫಾಕ್ಕೆ ಹೊಸ ಲುಕ್ ಸಿಗುವುದರಲ್ಲಿ ಅನುಮಾನವೇ ಇಲ್ಲ.ಅದೇ ರೀತಿ ಕುರ್ಚಿಗಳಿಗೆ ಕೂಡ ಹೊಸ ಕುಶನ್ ಅಳವಡಿಸಿ.ಈ ರೀತಿ ಮಾಡುವುದರಿಂದ ಕಡಿಮೆ ವೆಚ್ಚದಲ್ಲಿ ಹಾಲ್ ಅಂದವನ್ನು ಹೆಚ್ಚಿಸಬಹುದು.

ದಿಢೀರ್ ಅತಿಥಿ ಎಂಟ್ರಿಗೆ ಮನೆ ಸಜ್ಜುಗೊಳಿಸುವುದು ಹೇಗೆ ಗೊತ್ತಾ?

ಗ್ರೀನ್ ಟಚ್ ನೀಡಿ: ಹಸಿರು ಗಿಡಗಳ ಪಾಟ್‍ಗಳನ್ನು ಹಾಲ್, ರೂಮ್ ಹಾಗೂ ಬಾಲ್ಕನಿಗಳಲ್ಲಿಡುವ ಮೂಲಕ ನಿಮ್ಮ ಮನೆಯ ಒಳಾಂಗಣ ವಿನ್ಯಾಸಕ್ಕೆ ಗ್ರೀನ್ ಟಚ್ ನೀಡಬಹುದು. ಹಸಿರು ಕಣ್ಣಿಗೆ ತಂಪು ನೀಡುವ ಜೊತೆಗೆ ಮನಸ್ಸಿಗೆ ಶಾಂತಿ, ನೆಮ್ಮದಿಯ ಅನುಭೂತಿಯನ್ನು ನೀಡುತ್ತದೆ. ಆಕರ್ಷಕ ಪಾಟ್‍ಗಳಲ್ಲಿ ಹಸಿರು ಗಿಡಗಳನ್ನಿಡುವುದರಿಂದ ನೈಸರ್ಗಿಕವಾಗಿ ಮನೆಯ ಅಂದ ಹೆಚ್ಚುತ್ತದೆ.

ಸ್ಟೋರೇಜ್ ಬಾಕ್ಸ್ ಬಳಸಿ: ಮನೆಗಳಲ್ಲಿ ವಸ್ತುಗಳು ಹೆಚ್ಚಾದಂತೆ ಜಾಗ ಕಡಿಮೆಯಿರುವಂತೆ ಕಾಣಿಸುತ್ತದೆ.ಜೊತೆಗೆ ಹೆಚ್ಚೆಚ್ಚು ವಸ್ತುಗಳನ್ನು ಕಣ್ಣಿಗೆ ಕಾಣಿಸುವಂತೆ ಇಟ್ಟರೆ ಮನೆ ನೀಟಾಗಿಲ್ಲ ಎಂಬ ಭಾವನೆ ಮೂಡುತ್ತದೆ.ಎಲ್ಲ ಅಸ್ತವ್ಯಸ್ತವಾಗಿರುವಂತೆ ನೋಡುಗರಿಗೆ ಕಾಣಿಸಬಹುದು. ಆದಕಾರಣ ಅನಗತ್ಯ ವಸ್ತುಗಳನ್ನು ಕಣ್ಣಿಗೆ ಕಾಣಿಸದಂತೆ ಇಡಿ. ಕೆಲವೊಂದು ವಸ್ತುಗಳನ್ನು ಕಾಣಿಸದಂತೆ ಇಡಲು ವಾರ್ಡ್‍ರೋಪ್ ಅಥವಾ ಕಪಾಟುಗಳು ಇಲ್ಲದಿದ್ದರೆ ಇಂದು ಮಾರ್ಕೆಟ್‍ನಲ್ಲಿ ನಾನಾ ವಿನ್ಯಾಸದ ಆಕರ್ಷಕ ಸ್ಟೋರೇಜ್ ಬಾಕ್ಸ್ಗಳು ಸಿಗುತ್ತವೆ. 2-3 ಸಾವಿರ ರೂಪಾಯಿಗೆ ಈ ಬಾಕ್ಸ್ ಸಿಗುವ ಕಾರಣ ನಿಮ್ಮ ಜೇಬಿಗೆ ಹೆಚ್ಚಿನ ಹೊರೆಯೇನೂ ಬೀಳುವುದಿಲ್ಲ. ಮಕ್ಕಳ ಆಟಿಕೆಗಳು, ಬಟ್ಟೆಗಳು ಮುಂತಾದ ವಸ್ತುಗಳನ್ನು ಇಂಥ ಬಾಕ್ಸ್ಗಳಲ್ಲಿ ಹಾಕಿಡಬಹುದು.

ಲಿವಿಂಗ್ ರೂಮ್ ಗೋಡೆಯೂ ಮಾತಾಡಬಲ್ಲದು ಗೊತ್ತಾ?

ಆಕರ್ಷಕ ಲೈಟಿಂಗ್: ದೀಪ ಕತ್ತಲೆಯನ್ನು ಓಡಿಸುವುದು ಮಾತ್ರವಲ್ಲ, ಮನೆಯ ಅಂದಕ್ಕೆ ಮತ್ತಷ್ಟು ಮೆರುಗನ್ನು ನೀಡುತ್ತದೆ ಕೂಡ. ಇತ್ತೀಚಿನ ದಿನಗಳಲ್ಲಿ ಪಿಒಪಿ ಒಳಾಂಗಣ ವಿನ್ಯಾಸದಲ್ಲಿ ಭಾರಿ ಸದ್ದು ಮಾಡುತ್ತಿದೆ.ಮೇಲ್ಛಾವಣಿಗೆ ಅಳವಡಿಸುವ ಈ ಲೈಟ್‍ಗಳು ಮನೆಗೆ ರಿಚ್ ಲುಕ್ ನೀಡುತ್ತವೆ.10-15 ಸಾವಿರ ರೂ.ಗೆ ಪಿಒಪಿ ಮಾಡಲು ಸಾಧ್ಯವಿದೆ.ಇನ್ನೂ ಕಡಿಮೆ ವೆಚ್ಚದಲ್ಲಿ ಮನೆಯ ಅಂದಕ್ಕೆ ಇನ್ನಷ್ಟು ಮೆರುಗು ನೀಡಬೇಕೆಂದರೆ ನಾನಾ ವಿನ್ಯಾಸದ ಹ್ಯಾಂಗಿಂಗ್ ಲೈಟ್‍ಗಳನ್ನು ಬಳಸಬಹುದು.ಇಂದು ಮಾರುಕಟ್ಟೆಯಲ್ಲಿ ನಿಮ್ಮ ಅಭಿರುಚಿಗೆ ತಕ್ಕಂತೆ ನಾನಾ ವಿನ್ಯಾಸದ ಹ್ಯಾಂಗಿಂಗ್ ಲೈಟ್‍ಗಳು ಲಭ್ಯವಿವೆ.

ಕರ್ಟನ್ಸ್ ಬದಲಾಯಿಸಿ: ಮನೆಯ ಒಳಾಂಗಣ ವಿನ್ಯಾಸ ವಿಭಿನ್ನವಾಗಿ ಕಾಣಿಸುವಂತೆ ಮಾಡಲು ಹಳೆಯ ಕರ್ಟನ್ಸ್ ಬದಲಾಯಿಸುವ ಯೋಚನೆ ಮಾಡಬಹುದು. ಒಂದೇ ಬಣ್ಣದ ಕರ್ಟನ್ ಬಳಸುವ ಬದಲು ಎರಡು ಬಣ್ಣಗಳ ಕರ್ಟನ್‍ಗಳನ್ನು ಬಳಸುವ ಮೂಲಕ ವಿಂಡೋಗೆ ರಿಚ್ ಲುಕ್ ನೀಡಬಹುದು.

ಚಳಿಗಾಲದಲ್ಲಿ ಬೆಚ್ಚನೆಯ ಗೂಡು ನಿಮ್ಮದಾಗಬೇಕೆ?

ಕಾರ್ಪೆಟ್ ಬಳಸಿ: ನೀವು ಹಾಲ್‍ನಲ್ಲಿ ಕಾರ್ಪೆಟ್ ಬಳಸುತ್ತಿಲ್ಲ ಎಂದಾದರೆ ಒಳಾಂಗಣ ವಿನ್ಯಾಸಕ್ಕೆ ಹೊಸ ಲುಕ್ ನೀಡಬಯಸುವುದಾದರೆ ಯಾಕೆ ಕಾರ್ಪೆಟ್ ಬಳಸಬಾರದು? ನಿಮ್ಮ ಮನೆಯ ಗೋಡೆ ಹಾಗೂ ಫ್ಲೋರ್ ಬಣ್ಣಕ್ಕೆ ಹೊಂದಿಕೆಯಾಗುವ ಕಾರ್ಪೆಟ್ ಬಳಸಿ. ಕಾರ್ಪೆಟ್ ನಿಮ್ಮ ಲಿವಿಂಗ್ ಏರಿಯಾಕ್ಕೆ ಮೆರುಗು ನೀಡುವುದರಲ್ಲಿ ಅನುಮಾನವೇ ಇಲ್ಲ.

click me!