ಹೊಸ ಮನೆಗೆ ಹೋಗ್ತಿದ್ದಂತೆ ಸಮಸ್ಯೆ ಬೆನ್ನುಹತ್ತಿದ್ಯಾ? ಭೂ ದೋಷಕ್ಕೆ ಇಲ್ಲಿದೆ ಪರಿಹಾರ

By Roopa Hegde  |  First Published Nov 26, 2024, 2:25 PM IST

ಮನೆ, ಜಮೀನು ಖರೀದಿ ಸುಲಭವಲ್ಲ. ಕಷ್ಟಪಟ್ಟು ದುಡಿದ ಹಣವನ್ನೆಲ್ಲ ಅದಕ್ಕೆ ಹಾಕಿರ್ತೇವೆ. ಆದ್ರೆ ಎಲ್ಲ ಆದ್ಮೇಲೂ ನಿಮಗೆ ಸಮಸ್ಯೆ ತಪ್ಪಿಲ್ಲ ಅಂದ್ರೆ ಅದಕ್ಕೆ ಭೂಮಿ ದೋಷ ಕಾರಣವಾಗಿರಬಹುದು. ಒಮ್ಮೆ ಪರೀಕ್ಷಿಸಿ, ಪರಿಹಾರ ಕಂಡುಕೊಳ್ಳಿ.
 


ಹೊಸ ಮನೆ (New home) ಪ್ರವೇಶ ಮಾಡ್ತಿದ್ದಂತೆ ಕೆಲ ಸಮಸ್ಯೆ ಶುರುವಾಗುತ್ತದೆ. ಭೂಮಿ (land) ಯಲ್ಲಿ ಬೆಳೆದ ಬೆಳೆ ಮೇಲೆ ಬರೋದೇ ಇಲ್ಲ. ಯಾಕೆ ಹೀಗಾಗ್ತಿದೆ ಎಂಬ ಚಿಂತೆ ಎಲ್ಲರನ್ನೂ ಕಾಡೋದಿದೆ. ಇದಕ್ಕೆಲ್ಲ ಭೂಮಿ ದೋಷ (land defect) ಕಾರಣ. ಆದ್ರೆ ಅನೇಕರಿಗೆ ನಮಗೆ ಕಾಡ್ತಿರುವ ಈ ಎಲ್ಲ ಸಮಸ್ಯೆಗೆ  ಮನೆ ಇರುವ ಜಾಗ ಎಂಬುದು ಅರಿವಿಗೆ ಬರೋದಿಲ್ಲ. ನಾವಿಂದು ಈ ಭೂಮಿ ದೋಷವಿದ್ರೆ ಏನೆಲ್ಲ ಸಮಸ್ಯೆ ನಿಮ್ಮನ್ನು ಕಾಡುತ್ತೆ ಹಾಗೆ ಅದಕ್ಕೆ ಪರಿಹಾರ ಏನು ಎಂಬುದನ್ನು ಹೇಳ್ತೇವೆ.

ಭೂಮಿಯನ್ನು ಮೂರು ರೀತಿ ವಿಂಗಡನೆ ಮಾಡಲಾಗುತ್ತದೆ. ಒಂದು ಜಾಗೃತ ಸ್ಥಿತಿ ಇನ್ನೊಂದು ಸುಪ್ತ ಸ್ಥಿತಿ ಹಾಗೂ ಕೊನೆಯದು ಮೃತ ಸ್ಥಿತಿ. ಭೂಮಿಯ ಸ್ಥಿತಿಯನ್ನು ನಿಮ್ಮ ಜನ್ಮ ಜಾತಕದ ಆಧಾರದ ಮೇಲೆ ಪತ್ತೆ ಹಚ್ಚಲಾಗುತ್ತದೆ. ಮೃತ ಸ್ಥಿತಿಯಲ್ಲಿರುವ ಕೆಲ ಭೂಮಿಗಳು ನಂತರ ಸುಪ್ತವಾಗಿ ಆಮೇಲೆ ಎಚ್ಚರಗೊಳ್ಳುತ್ತವೆ. ಭೂಮಿಯ ಈ ಪರಿಸ್ಥಿತಿಗಳನ್ನು ಶನಿ ಮತ್ತು ಗುರುವಿನ ಸ್ಥಾನದಿಂದ ಪತ್ತೆ ಹಚ್ಚಲಾಗುತ್ತದೆ. 

Tap to resize

Latest Videos

undefined

ಗುಲಾಬಿ ಅಥವಾ ಪಿಂಕ್ ಕಲರ್ ಪ್ರೀತಿಯ ಸಂಕೇತ ಅಲ್ವಂತೆ, ಯಾಕೆ ಗೊತ್ತಾ?

ಭೂಮಿ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳೋದು ಹೇಗೆ? : ನಿಮ್ಮ ಭೂಮಿ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ನೀವು ಕೆಲ ಸೂಚನೆಗಳಿಂದ ಅರ್ಥ ಮಾಡಿಕೊಳ್ಳಬಹುದು. ಮೊದಲು ಖಾಲಿ ಜಾಗದಲ್ಲಿ ಯಾವ ಗಿಡ ಬೆಳೆದಿದೆ ಎಂಬುದನ್ನು ನೋಡಿ. ಮುಳ್ಳಿನ ಮರಗಳು ಬೆಳೆದಿದ್ದರೆ ಆ ಜಾಗ ಜಾಗೃತಾವಸ್ಥೆಯಲ್ಲಿ ಇಲ್ಲ ಎಂಬುದನ್ನು ನೀವು ತಿಳಿಯಬೇಕು. ಕೆಲ ಭೂಮಿಯಲ್ಲಿ ತಾನಾಗಿಯೇ ಉತ್ತಮ ಗಿಡಗಳು ಬೆಳೆದಿರುತ್ತವೆ. ಹೂ ಬಿಡುವ ಅಥವಾ ಹಣ್ಣಿನ ಮರ – ಗಿಡಗಳನ್ನು ನೀವು ನೋಡಬಹುದು. ಅಂಥ ಭೂಮಿಯನ್ನು ಅತ್ಯುತ್ತಮ, ಸರ್ವಶ್ರೇಷ್ಠ ಭೂಮಿ ಎಂದು ಪರಿಗಣಿಸಲಾಗುತ್ತದೆ. ಅಲ್ಲಿ ನೀವು ಬೆಳೆ ಬೆಳೆಯಬೇಕಾಗಿಲ್ಲ. ತಾನಾಗಿಯೇ ಉತ್ತಮ ಗಿಡಗಳು ಬೆಳೆದಿರುತ್ತವೆ. 

ಭಾವನೆಗಳ ಜೊತೆ ಭೂಮಿಯ ಸಂಬಂಧ : ಎಲ್ಲ ಕಡೆ ನಿಮಗೆ ಒಂದೇ ಭಾವನೆ ಸಿಗಲು ಸಾಧ್ಯವಿಲ್ಲ. ದೇವಸ್ಥಾನವಿರುವ ಭೂಮಿ, ಸಕಾರಾತ್ಮಕ ಭಾವನೆಯನ್ನು ನಿಮಗೆ ಮೂಡಿಸುತ್ತದೆ. ಅಲ್ಲಿ ಭಕ್ತಿ ಜಾಗೃತವಾಗುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ. ಮತ್ತೆ ಕೆಲ ಪ್ರದೇಶಕ್ಕೆ ಹೋಗ್ತಿದ್ದಂತೆ ನೀವು ಖುಷಿಯಾಗ್ತೀರಿ. ಇನ್ನು ಕೆಲವು ಕಡೆ ನಕಾರಾತ್ಮಕ ಭಾವನೆ ಕಾಡಿದ್ರೆ, ಮತ್ತೆ ಕೆಲವು ಕಡೆ ನಿಮ್ಮ ಧೈರ್ಯ ಹೆಚ್ಚಾಗುತ್ತದೆ. 

ಯಶಸ್ಸಿಗೆ ಏಕಾಂಗಿಯಾಗಿ ಮಾಡಬೇಕಾದ 4 ಕೆಲಸಗಳು

ಭೂಮಿ ದೋಷವನ್ನು ಹೀಗೆ ಪತ್ತೆ ಮಾಡಿ : ನೀವು ಮನೆ ನಿರ್ಮಾಣ ಮಾಡಿರುವ ಭೂಮಿ ದೋಷದಿಂದ ಕೂಡಿದೆ ಎಂಬುದನ್ನು ನೀವು ಪತ್ತೆ ಮಾಡಬಹುದು. ನಿಮ್ಮ ಮನೆಗೆ ತಂದ ಹಸು, ನಾಯಿ, ಬೆಕ್ಕು ಸೇರಿದಂತೆ ಯಾವುದೇ ಪ್ರಾಣಿ ಹೆಚ್ಚು ದಿನ ಬದುಕುತ್ತಿಲ್ಲ ಎಂದಾದ್ರೆ ಭೂಮಿ ದೋಷವಿದೆ ಎಂದರ್ಥ. ಅದೇ ರೀತಿ, ಕುಟುಂಬದ ಸದಸ್ಯರು ಆಗಾಗ ಅಪಾಯಕ್ಕೆ ಒಳಗಾಗ್ತಿದ್ದರೆ, ರಸ್ತೆ ಅಪಘಾತ, ಕಾಲು ಜಾರಿ ಕೆಳಗೆ ಬೀಳುವುದು ಇವೆಲ್ಲ ದೋಷದ ಸೂಚನೆಯಾಗಿದೆ. ರಾತ್ರಿ ಸಮಯದಲ್ಲಿ ವಿಚಿತ್ರ ಆಕಾರ ಅಥವಾ ವಿಚಿತ್ರ ಶಬ್ಧ ಕೇಳಿದ್ರೂ ಅದನ್ನು ಭೂಮಿ ದೋಷ ಎಂದೇ ನಂಬಲಾಗುತ್ತದೆ.

ಭೂಮಿ ದೋಷ ಪರಿಹಾರ ಹೇಗೆ? : ನಿಮ್ಮ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿಲ್ಲ ಎಂದಾದ್ರೆ ಭೂಮಿಯ ಒಂದರಿಂದ ಎರಡು ಅಡಿ ಮಣ್ಣನ್ನು ತೆಗೆದುಹಾಕಿ. ಮನೆ ನಿರ್ಮಾಣವಾಗಿದ್ದರೆ ನೀವು ವಿಶ್ವಕರ್ಮ ಪೂಜೆ (Vishwakarma Puja), ವಾಸ್ತು ಶಾಂತಿ (Vastu Shanti) ಪೂಜೆಯನ್ನು ವರ್ಷಕ್ಕೊಮ್ಮೆ ಮಾಡಬೇಕು. ಇದು ಭೂಮಿ ದೋಷವನ್ನು ಕಡಿಮೆ ಮಾಡುತ್ತದೆ.  

click me!