ಮನೆಯಲ್ಲಿರುವ ವಾಸ್ತು ದೋಷವನ್ನು ಕಂಡು ಹಿಡಿಯೋದು ಹೇಗೆ? ಪರಿಹಾರಗಳೇನು?

By Mahmad Rafik  |  First Published Aug 3, 2024, 3:42 PM IST

ವಾಸ್ತುದೋಷದ ಪರಿಹಾರದಿಂದ ಆಹ್ಲಾದಕರ, ಸಮೃದ್ಧ ಮತ್ತು ಶಾಂತಿಯುತ ವಾತಾವರಣವನ್ನು ನಿರ್ಮಿಸಬಹುದು. ಹಾಗಾದ್ರೆ ಮನೆಯಲ್ಲಿನ ವಾಸ್ತುದೋಷ ಕಂಡು ಹಿಡಿಯೋದು ಹೇಗೆ ಅಂತ ನೋಡೋಣ ಬನ್ನಿ.


ನೆಯನ್ನು ನಿರ್ಮಿಸುವಾಗ ವಾಸ್ತು ಪ್ರಕಾರ ಕಟ್ಟಬೇಕು ಎಂದು ಹೇಳಲಾಗುತ್ತದೆ. ವಾಸ್ತು ಚೆನ್ನಾಗಿದ್ರೆ ಮನೆಯಲ್ಲಿ ಧನಾತ್ಮಕ ಶಕ್ತಿ ಇರುತ್ತದೆ. ಇದರಿಂದ ಮನೆಯಲ್ಲಿ ಸದಾ ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ. ಮನೆ ನಿರ್ಮಾಣ ವೇಳೆ ವಾಸ್ತು ನೋಡಿದ್ದರೂ, ನಂತರ ಪೀಠೋಪಕರಣ ಸೇರಿದಂತೆ ವಸ್ತುಗಳನ್ನು ಎಲ್ಲಿರಿಸಬೇಕು ಎಂದು ವಾಸ್ತು ಶಾಸ್ತ್ರ ವಿವರವಾಗಿ ಹೇಳುತ್ತದೆ. ಕೆಲವೊಮ್ಮೆ ಮನೆಯಲ್ಲಿ ವಾಸ್ತುದೋಷವಿದೆಯಾ ಎಂಬುವುದೇ ಅಲ್ಲಿರೋ ಜನರಿಗೆ ತಿಳಿದಿರಲ್ಲ. ವಾಸ್ತುದೋಷವಿದ್ರೆ ಕೆಲವೊಂದು ಘಟನೆಗಳು ಪದೇ ಪದೇ ಮರುಕಳಿಸುತ್ತಿರುತ್ತವೆ. ಈ ಮೂಲಕ ವಾಸ್ತುದೋಷದ ಬಗ್ಗೆ ತಿಳಿದುಕೊಳ್ಳಬೇಕು. ವಾಸ್ತುದೋಷದ ಪರಿಹಾರದಿಂದ ಆಹ್ಲಾದಕರ, ಸಮೃದ್ಧ ಮತ್ತು ಶಾಂತಿಯುತ ವಾತಾವರಣವನ್ನು ನಿರ್ಮಿಸಬಹುದು. ಹಾಗಾದ್ರೆ ಮನೆಯಲ್ಲಿನ ವಾಸ್ತುದೋಷ ಕಂಡು ಹಿಡಿಯೋದು ಹೇಗೆ ಅಂತ ನೋಡೋಣ ಬನ್ನಿ. 

ವಾಸ್ತುದೋಷದ ಲಕ್ಷಣಗಳು

Tap to resize

Latest Videos

undefined

1.ಕುಟುಂಬದ ಸದಸ್ಯರ ಆರೋಗ್ಯದಲ್ಲಿ ಪದೇ ಪದೇ ವ್ಯತ್ಯಾಸ ಉಂಟಾತಗುತ್ತಿರುತ್ತದೆ. ಮನೆಯ ಸದಸ್ಯರ ಜೀವನ ಒಂದು ರೀತಿ ಒತ್ತಡದಲ್ಲಿದ್ದಂತೆ ಭಾಸವಾಗಿರುತ್ತದೆ. ಇಷ್ಟು ಮಾತ್ರವಲ್ಲದೇ ಮಾನಸಿಕ ಖಿನ್ನತೆ ಉಂಟಾಗಿ ಮನೆಯಲ್ಲಿ ಸಮಯ ಕಳೆಯೋದು ಕಷ್ಟ ಎಂಬ ಭಾವನೆ ಬಂದಿರುತ್ತದೆ. ಇದು ವಾಸ್ತುದೋಷದ ಲಕ್ಷಣವಾಗಿರುತ್ತದೆ. 

2.ವಾಸ್ತುದೋಷದ ಮತ್ತೊಂದು ಲಕ್ಷಣವೆಂದ್ರೆ ಅದು ಹಣಕಾಸಿನ ಸಮಸ್ಯೆಯಾಗಿರುತ್ತದೆ. ಎಷ್ಟೇ ಸಂಬಳವಿದ್ದರೂ ಉಳಿತಾಯದ ಪ್ರಮಾಣ ತುಂಬಾ ಕ್ಷೀಣವಾಗಿರುತ್ತದೆ. ದೀರ್ಘ ಸಮಯದವರೆಗೆ ಆದಾಯಕ್ಕಿಂತ ಖರ್ಚು ಹೆಚ್ಚಾಗಿರುತ್ತದೆ. ಪದೇ ಪದೇ ಹಣದ ಕೊರತೆಯುಂಟಾಗಿ ಜೀವನದಲ್ಲಿ ಆರ್ಥಿಕ ಅಸಮತೋಲನ ಉಂಟಾಗುತ್ತದೆ. 

3.ಕುಟುಂಬ ಸದಸ್ಯರಲ್ಲಿ ಅನಾವಶ್ಯಕ ಜಗಳ, ಕಲಹ, ಅಶಾಂತಿ ಉಂಟಾಗುತ್ತಿದ್ದರೆ ಅದಕ್ಕೂ ಸಹ ವಾಸ್ತುದೋಷ ಕಾರಣವಾಗಿರುವ ಸಾಧ್ಯತೆಗಳಿರುತ್ತವೆ. ಮನೆಯ ಸದಸ್ಯರ ನಡುವೆ ಕಹಿ ಘಟನೆಗಳು ಸಂಭವಿಸುತ್ತಿದ್ದರೂ ಅದಕ್ಕೆ ಕಾರಣ ವಾಸ್ತುದೋಷ ಆಗಿರಬಹುದು. ಮನೆಯಲ್ಲಿ ಸದಾ ಗೊಂದಲದ ವಾತಾವರಣ ಸಹ ವಾಸ್ತುದೋಷದ ಲಕ್ಷಣವಾಗಿರುತ್ತದೆ. 

4.ಜೀವನದಲ್ಲಿ ಎಲ್ಲವೂ ಆಹ್ಲಾದಕರವಾಗಿದ್ದರೂ ನಿದ್ದೆಯ ಸಮಸ್ಯೆಗಳಿಂದ ಜನರು ಬಳಲುತ್ತಿರುತ್ತಾರೆ. ದುಃಸ್ವಪ್ನ, ನಿದ್ರಾಹೀನತೆ ಉಂಟಾಗುತ್ತಿದ್ದರೆ ಅದು ವಾಸ್ತುದೋಷದ ಲಕ್ಷಣ ಎಂದು ತಜ್ಞರು ಹೇಳುತ್ತಾರೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಕಾರಣದಿಂದ ಇಂತಹ ಸಮಸ್ಯೆಗಳು ಕಂಡು ಬರುತ್ತವೆ. ನಕಾರಾತ್ಮಕ ಶಕ್ತಿಯಿಂದಾಗಿ ನಿದ್ದೆಯ ಗುಣಮಟ್ಟ ಕಳಪೆಯಾಗಿರುತ್ತದೆ. 

ಮನೆಯಲ್ಲಿ ಸಾಕುಪ್ರಾಣಿಗಳನ್ನು ಇಟ್ಟುಕೊಳ್ಳಲೂ ವಾಸ್ತು ಇದೆ! ಕಪ್ಪು ನಾಯಿ ಸಾಕಿದರೆ ಶುಭವೋ, ಅಶುಭವೋ?

5.ಮನೆಯಲ್ಲಿ ಯಾವಾಗಾಲೂ ಅಹಿತಕರ ಘಟನೆಗಳು ಉಂಟಾಗುತ್ತಿದ್ದರೂ ಅದಕ್ಕೆ ವಾಸ್ತುದೋಷ ಕಾರಣವಾಗಿರಬಹುದು. ಮನೆಯ ವಾತಾವರಣ ಯಾವಾಗಲೂ ಅಸ್ತವ್ಯಸ್ತವಾಗಿರೋದು, ಕುಟುಂಬದ ಸದಸ್ಯರು ತೊಂದರೆಗೊಳಗಾಗಿರೋದು ವಾಸ್ತುದೋಷದ ಲಕ್ಷಣವಾಗಿದೆ.

ವಾಸ್ತು ದೋಷಗಳಿಗೆ ಪರಿಹಾರಗಳು

ಮನೆಯ ಮುಖ್ಯ  ದ್ವಾರ ಈಶಾನ್ಯ, ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು. ಅಡುಗೆ ಮನೆ ಆಗ್ನೇಯ ದಿಕ್ಕಿನಲ್ಲಿರಬೇಕು. ಮನೆಯ ಈಶಾನ್ಯದಲ್ಲಿ ನೀರಿನ ಪಾತ್ರೆಗಳನ್ನು ಇರಿಸೋದರಿಂದ ಧನಾತ್ಮಕ ಶಕ್ತಿಯ ಒಳಹರಿವು ಉಂಟಾಗುತ್ತದೆ. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಮನೆಯಲ್ಲಿ ಬೆಳಕು ಮತ್ತು ಶುದ್ಧಗಾಳಿ ಬರುವಂತೆ ನೋಡಿಕೊಳ್ಳಬೇಕು. ಮನೆಯ ಈಶಾನ್ಯದಲ್ಲಿಯೇ ದೇವರಕೋಣೆ ನಿರ್ಮಿಸಬೇಕು. ಹೀಗೆ ಪ್ರತಿಯೊಂದಕ್ಕೂ ವಾಸ್ತು ಪ್ರಕಾರ ಸ್ಥಳ ಮೀಸಲಿರಿಸುತ್ತದೆ.

ರಾತ್ರಿ ಮಲಗುವಾಗ ಕೋಣೆಯಲ್ಲಿ ಯಾರೋ ಇದ್ದಾರೆ ಅನ್ಸತ್ತಾ? ಹಾಗಿದ್ರೆ ಈ ಸುದ್ದಿ ನೀವು ಓದ್ಲೇಬೇಕು

Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥ, ನಂಬಿಕೆ ಹಾಗೂ ಅಂತರ್ಜಾಲದಲ್ಲಿ ಲಭ್ಯವಿರೋ ವಿಷಯವನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

click me!