Vastu Tips: ಜೇಬಲ್ಲಿ ಸದಾ ದುಡ್ಡಿರಬೇಕೆಂದರೆ ಈ ವಸ್ತು ಮನೆಯಲ್ಲಿರಲಿ

Published : Jun 15, 2022, 05:41 PM IST
Vastu Tips: ಜೇಬಲ್ಲಿ ಸದಾ ದುಡ್ಡಿರಬೇಕೆಂದರೆ ಈ ವಸ್ತು ಮನೆಯಲ್ಲಿರಲಿ

ಸಾರಾಂಶ

ಶ್ರೀಮಂತಿಕೆಯನ್ನು ಎಲ್ಲರೂ ಬಯಸ್ತಾರೆ. ಆದ್ರೆ ಎಲ್ಲರಿಗೂ ಇದು ಒಲಿಯುವುದಿಲ್ಲ. ಅನೇಕ ಬಾರಿ ವಾಸ್ತು ದೋಷದಿಂದಾಗಿ ಹಣ ಕೈನಲ್ಲಿ ನಿಲ್ಲುವುದಿಲ್ಲ. ಕೆಲ ಸುಲಭ ವಿಧಾನಗಳಿಂದ ಆರ್ಥಿಕ ವೃದ್ಧಿಯನ್ನು ನಾವು ಕಾಣ್ಬಹುದು.   

ಮನೆ (Home) ಯ ಧನಾತ್ಮಕ (Positive) ಮತ್ತು ನಕಾರಾತ್ಮಕ (Negative) ಶಕ್ತಿಗಾಗಿ ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಹಾಗೆಯೇ ತಾಯಿ ಲಕ್ಷ್ಮಿ (Laxmi) ಯನ್ನು ಮೆಚ್ಚಿಸಲು ವಾಸ್ತು ಶಾಸ್ತ್ರದಲ್ಲಿ ಅನೇಕ ವಿಧಾನಗಳನ್ನು ಹೇಳಲಾಗಿದೆ. ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಿದ್ದರೆ ಅಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಮನೆಯಲ್ಲಿರುವ ಸಕಾರಾತ್ಮಕ ಶಕ್ತಿ ಬರೀ ಆರ್ಥಿಕ ವೃದ್ಧಿಗೆ ಮಾತ್ರವಲ್ಲ ಮನೆಯವರ ಆರೋಗ್ಯ, ಸಂತೋಷ (Happiness) , ಸುಖದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿಯೇ ಮನೆಯಲ್ಲಿ ವಾಸ್ತು ಸರಿಯಾಗಿರುವುದು ಬಹಳ ಮುಖ್ಯ. ಹಾಗಿದ್ರೆ ಬಡತನ ಓಡಿಸಿ, ಮನೆಯಲ್ಲಿ ಸದಾ ಸಂಪತ್ತು (Wealth), ನೆಮ್ಮದಿ ಇರ್ಬೇಕೆಂದ್ರೆ ಕೆಲ ನಿಯಮಗಳನ್ನು ಪಾಲನೆ ಮಾಡ್ಬೇಕು. ಅದಕ್ಕೆ ನೀವು ಮನೆಯ ಗೋಡೆ ಒಡೆಯಬೇಕಾಗಿಲ್ಲ. ಮನೆ ಬದಲಿಸಬೇಕಾಗಿಲ್ಲ. ಮನೆಗೆ ಕೆಲ ವಸ್ತು (Material) ಗಳನ್ನು ತಂದಿಟ್ಟರೆ ಸಾಕು.

ಮನೆಯಲ್ಲಿರಲಿ ಈ ವಸ್ತು : 
ನವಿಲು ಗರಿ (Peacock Feather) :
ನವಿಲು ಗರಿ ನೋಡಲು ಸುಂದರವಾಗಿರುತ್ತದೆ. ಮನೆಯಲ್ಲಿ ನವಿಲು ಗರಿಗಳನ್ನು ಇಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ ನವಿಲು ಗರಿಯನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ನೀವು ನವಿಲು ಗರಿಯನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಅಥವಾ ಸುರಕ್ಷಿತ ಸ್ಥಳದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಯಾವತ್ತೂ ಹಣದ ಕೊರತೆ ಉಂಟಾಗುವುದಿಲ್ಲ ಮತ್ತು ವಾಸ್ತು ದೋಷಗಳು ದೂರವಾಗುತ್ತದೆ. ಮನೆಯಿಂದ ಹಣವನ್ನು ತೆಗೆದುಹಾಕಲು  ಸಂಪತ್ತಿನ ಸ್ಥಳದಲ್ಲಿ ಮೂರು ನವಿಲು ಗರಿಗಳನ್ನು ಇಡಬೇಕು.

ಆಮೆ (Turtle ) ಯನ್ನು ಮನೆಗೆ ತನ್ನಿ : ಲೋಹ (Metal) ದಿಂದ ಮಾಡಿದ ಆಮೆ  ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿ ಇಡುವುದರಿಂದ ಎಲ್ಲಾ ರೀತಿಯ ತೊಂದರೆಗಳು ಮತ್ತು ಸಮಸ್ಯೆಗಳು ದೂರವಾಗುತ್ತವೆ. ಆಮೆ ಇಡುವುದರಿಂದ ಮನೆಯ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಮನೆಯಲ್ಲಿ ಆಮೆಯಿಡುವುದ್ರಿಂದ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಕಾಣಬಹುದು. ಆಮೆಯನ್ನು ಮನೆಯಲ್ಲಿ ಅವಶ್ಯಕವಾಗಿ ಇಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿತ್ತದೆ. 

ತಾಯಿ ಲಕ್ಷ್ಮಿ ಚಿತ್ರ : ವಾಸ್ತು ಪ್ರಕಾರ, ತಾಯಿ ಲಕ್ಷ್ಮಿ ಕಮಲ (Lotus) ದ ಮೇಲೆ ಕುಳಿತಿರುವ ಮತ್ತು ಕೈನಿಂದ ಚಿನ್ನ (Gold) ದ ನಾಣ್ಯ (Coin) ಬರ್ತಿರುವ ಚಿತ್ರವನ್ನು ಮನೆಯಲ್ಲಿ ಹಾಕ್ಬೇಕು. ಇದ್ರಿಂದ ನಿಮ್ಮ ಮನೆಯಲ್ಲಿ ಹಣದ ಕೊರತೆ ಎಂದಿಗೂ ಕಾಡುವುದಿಲ್ಲ. ಲಕ್ಷ್ಮಿಯ ಈ ಚಿತ್ರ ಅಥವಾ ವಿಗ್ರಹವನ್ನು ನೀವು ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಇದ್ರಿಂದ ಸಿಗುವ ಫಲ ಹೆಚ್ಚು. 

ಕನಸಲ್ಲಿ ಪೂರ್ವಜರು ಕಂಡರೆ ಅದಕ್ಕೇನು ಅರ್ಥ ಗೊತ್ತಾ..?

ಆನೆ ಮೂರ್ತಿಯನ್ನು ಮನೆಗೆ ತನ್ನಿ : ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯಲ್ಲಿ ಲೋಹದ ಆನೆಯ ಪ್ರತಿಮೆಯನ್ನು ಇರಿಸುವುದು ಮಂಗಳಕರ. ಇದಲ್ಲದೇ ಮನೆಯಲ್ಲಿ ಆನೆಯ ಚಿತ್ರವನ್ನು ಹಾಕುವುದರಿಂದ ಧನಾತ್ಮಕ ಶಕ್ತಿ ಇನ್ನಷ್ಟು ಹೆಚ್ಚುತ್ತದೆ ಮತ್ತು ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ. ನೀವು ವಾಸಿಸುವ ಪ್ರದೇಶದಲ್ಲಿ ಆನೆಯ ಚಿತ್ರ ಅಥವಾ ವಿಗ್ರಹವನ್ನು ಹಾಕಬಹುದು. ಆನೆಯ ಸೊಂಡಿಲು ಕೆಳಕ್ಕೆ ಬಾಗುವಂತೆ ವಿಶೇಷ ಕಾಳಜಿ ವಹಿಸಬೇಕು.  

UDUPI: ಕೊಡೆ ಸೇವೆಗೆ ಮೆಚ್ಚಿದಳಾ ಮಹಿಷಮರ್ದಿನಿ? ನಡೆದದ್ದು ಪವಾಡವೆಂದ ಭಕ್ತರು!

ಶಂಖವನ್ನು ಇಂದೇ ಮನೆಗೆ ತನ್ನಿ : ಹಿಂದೂ ಧರ್ಮದಲ್ಲಿ ಶಂಖಕ್ಕೆ ಹೆಚ್ಚಿನ ಮಹತ್ವವಿದೆ ಎಂದು ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನಿತ್ಯ ಶಂಖವನ್ನು ಊದಿದರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹರಡುತ್ತದೆ. ಭಗವಾನ್ ನಾರಾಯಣನು ಕೈಯಲ್ಲಿ ಶಂಖವನ್ನು ಹಿಡಿದಿದ್ದನು. ತಾಯಿ ಲಕ್ಷ್ಮಿಗೂ ಶಂಖ ತುಂಬಾ ಪ್ರಿಯ. ಇದಲ್ಲದೇ ಮನೆಯಲ್ಲಿ ಶಂಖ ಇಡುವುದರಿಂದ ಯಾವತ್ತೂ ಹಣದ ಕೊರತೆಯಾಗುವುದಿಲ್ಲ. ಸುಖ-ಸಮೃದ್ಧಿ ಸದಾ ಮನೆಯಲ್ಲಿ ನೆಲೆಸುತ್ತದೆ. 
 

PREV
Read more Articles on
click me!

Recommended Stories

Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸದಾ ತಿಜೋರಿ ತುಂಬಿರುತ್ತೆ
Vastu Tips: ಇವನ್ನೆಲ್ಲಾ ಫ್ರಿಡ್ಜ್ ಮೇಲಿಟ್ಟರೆ ನಿಮ್ಮ ಪರ್ಸ್ ಖಾಲಿಯಾಗೋದು ಗ್ಯಾರಂಟಿ, ಹುಷಾರು