ವಾಸ್ತುಶಾಸ್ತ್ರದಲ್ಲಿ ಪೊರಕೆಗೂ ಮಹತ್ವವಿದೆ. ಮನೆಯಲ್ಲಿ ಪೊರಕೆಯನ್ನು ಎಲ್ಲೆಂದರಲ್ಲಿಟ್ಟರೆ ಕೆಡುಕಾಗುವ ಸಾಧ್ಯತೆಯಿದೆ. ಜೊತೆಗೆ ಪೊರಕೆಯನ್ನು ಹೇಗಿಡುತ್ತೇವೆ, ಯಾವಾಗ ಕೊಳ್ಳುತ್ತೇವೆ ಎನ್ನುವುದು ಕೂಡ ಮನೆಯ ಸಂಪತ್ತಿನ ಮೇಲೆ ಪ್ರಭಾವ ಬೀರುತ್ತದೆ.
ಪೊರಕೆ ಅಂದ್ರೆ ಕೆಲವರಿಗೆ ತಾತ್ಸರ. ಅದು ಕಸ ಗುಡಿಸುವ ವಸ್ತು ಎನ್ನುವುದೇ ಇದಕ್ಕೆ ಕಾರಣ.ಆದ್ರೆ ಪೊರಕೆಯಿಲ್ಲದ ಜಗತ್ತನ್ನು ಊಹಿಸಿಕೊಂಡ್ರೇನೆ ಭಯವಾಗುತ್ತೆ ಅಲ್ಲವಾ? ಮನೆ, ಬೀದಿ, ಹಳ್ಳಿ, ನಗರಗಳನ್ನು ಸ್ವಚ್ಛ ಮಾಡುವ ಪೊರಕೆಗೆ ವಾಸ್ತುಶಾಸ್ತ್ರದಲ್ಲೂ ಸ್ಥಾನಮಾನವಿದೆ. ಮನೆಯಲ್ಲಿ ಪೊರಕೆಯನ್ನು ಸರಿಯಾದ ದಿಕ್ಕಿನಲ್ಲಿಡುವ ಜೊತೆಗೆ ಸಮರ್ಪಕವಾಗಿ ಬಳಸಿದ್ರೆ ಅದರಿಂದ ಶುಭಫಲಗಳು ಸಿಗುತ್ತವೆ ಎಂಬ ನಂಬಿಕೆ ವಾಸ್ತುಶಾಸ್ತ್ರದಲ್ಲಿದೆ.
ಎಲ್ಲಿಡಬೇಕು, ಹೇಗಿಡಬೇಕು?
ಯಾರ ಕಣ್ಣಿಗೂ ಬೀಳದ ಜಾಗ
ವಾಸ್ತುಶಾಸ್ತ್ರದ ಪ್ರಕಾರ ಹಗಲು ಹೊತ್ತಿನಲ್ಲಿ ಪೊರಕೆಯನ್ನು ಮನೆಯಲ್ಲಿ ಯಾರ ಕಣ್ಣಿಗೂ ಬೀಳದ ಸ್ಥಳದಲ್ಲಿಡಬೇಕಂತೆ. ಅಂದರೆ ಯಾವುದಾದರೊಂದು ಮೂಲೆ ಅಥವಾ ಬಾಗಿಲಿನ ಸಂಧಿಯಂತಹ ಜಾಗ.ಇನ್ನು ಪೊರಕೆಯನ್ನು ಹೇಗೆಂದ್ರೆ ಹಾಗೇ ಇಡುವಂತಿಲ್ಲ. ಪೊರಕೆಯನ್ನು ತಲೆ ಕೆಳಗೆ ಮಾಡಿಟ್ಟರೆ ನಪುಂಸಕ ಎಂಬ ಸಂದೇಶ ರವಾನೆಯಾಗುತ್ತದೆ. ಆದಕಾರಣ ಪೊರಕೆಯಲ್ಲಿ ಗುಡಿಸುವ ಭಾಗ ಕೆಳಗೆ ಹಾಗೂ ಹಿಡಿ ಮೇಲಿರುವಂತೆ ಇಡುವುದು ಕ್ಷೇಮಾ.
undefined
ರಾತ್ರಿ ಮನೆ ಹೊರಗಿಡಿ
ರಾತ್ರಿ ವೇಳೆ ಪೊರಕೆಯನ್ನು ಮನೆಯ ಹೊರಗೆ ಅಥವಾ ಮುಖ್ಯದ್ವಾರದ ಬಳಿಯಿಡುವುದು ಶುಭಕಾರಕ ಎಂಬ ನಂಬಿಕೆಯಿದೆ. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವುದಿಲ್ಲವಂತೆ. ಹಾಗಂತ ಹಗಲಿನಲ್ಲಿ ಪೊರಕೆಯನ್ನು ಈ ಸ್ಥಳದಲ್ಲಿಟ್ಟಿರಿ ಜೋಕೆ.
ಲವ್ ಲೈಫ್ ಸುಂದರವಾಗಿ ಇಡುವ ಬೆಡ್‌ರೂಮ್‌ಗೊಂದಿಷ್ಟು ವಾಸ್ತು ಟಿಪ್ಸ್!
ಛಾವಣಿ ಮೇಲಿಟ್ಟರೆ ಕಳ್ಳತನ
ಪೊರಕೆಯನ್ನು ಮನೆಯ ನೈರುತ್ಯ ದಿಕ್ಕಿನಲ್ಲಿಡುವುದು ಸೂಕ್ತ. ಯಾವುದೇ ಕಾರಣಕ್ಕೂ ಪೊರಕೆಯನ್ನು ಮನೆಯ ಛಾವಣಿ ಮೇಲಿಡಬೇಡಿ. ಹೀಗೆ ಮಾಡುವುದರಿಂದ ಮನೆಯಲ್ಲಿನ ಸಂಪತ್ತು ಕರಗುತ್ತದೆ. ಮನೆಯಲ್ಲಿನ ವಸ್ತುಗಳು ಕಳ್ಳತನವಾಗುವ ಸಾಧ್ಯತೆಯೂ ಇದೆ.
ಅಡುಗೆಮನೆಯಲ್ಲಿಟ್ಟರೆ ಆಹಾರ ಧ್ಯಾನ ಕೊರತೆ
ಅಡುಗೆ ಸಿದ್ಧಪಡಿಸುವ ಹಾಗೂ ಸೇವಿಸುವ ಸ್ಥಳಗಳಲ್ಲಿ ಪೊರಕೆಯನ್ನಿಡಬಾರದು. ಅಡುಗೆಮನೆಯಲ್ಲಿ ಪೊರಕೆಯಿಡುವುದರಿಂದ ಆಹಾರಧ್ಯಾನಗಳ ಕೊರತೆ ಕಾಡುತ್ತದೆ ಎಂಬ ನಂಬಿಕೆಯಿದೆ. ಮನೆಯಲ್ಲಿ ಸಂಗ್ರಹಿಸಿಟ್ಟಿರುವ ಧಾನ್ಯಗಳು ಶೀಘ್ರದಲ್ಲಿ ಖಾಲಿಯಾಗುತ್ತವೆ ಎಂದೂ ಹೇಳಲಾಗುತ್ತದೆ. ಇನ್ನು ಊಟ ಮಾಡುವ ಸ್ಥಳದಲ್ಲಿಟ್ಟರೆ ಮನೆಯ ಸದಸ್ಯರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.
ಪೊರಕೆ ಕುರಿತು ಒಂದಿಷ್ಟು ಮಾತುಗಳು
ರಾತ್ರಿ ಗುಡಿಸಬಾರದು
ರಾತ್ರಿ ವೇಳೆ ಗುಡಿಸಬಾರದು ಎಂದು ಮನೆಯಲ್ಲಿ ಅಜ್ಜನೋ ಅಜ್ಜಿಯೋ ಹೇಳೋದನ್ನು ನೀವು ಕೇಳಿರಬಹುದು. ಸೂರ್ಯ ಮುಳುಗಿದ ಬಳಿಕ ಮನೆ ಗುಡಿಸಿದರೂ ಕಸವನ್ನು ಹೊರಗೆ ಎಸೆಯಬಾರದು ಎಂಬ ನಂಬಿಕೆಯನ್ನು ಇಂದಿಗೂ ಅನೇಕರು ಪಾಲಿಸುತ್ತಾರೆ. ಈ ಸಮಯದಲ್ಲಿ ಲಕ್ಷ್ಮಿ ಮನೆಯಲ್ಲಿ ನೆಲೆಸಿರುತ್ತಾಳಂತೆ. ಸಂಜೆ 5 ಗಂಟೆಯ ಬಳಿಕ ಪೊರಕೆ ಬಳಸುವುದು ಅಪಶಕುನ ಎಂಬ ನಂಬಿಕೆ ಕೆಲವು ಭಾಗಗಳಲ್ಲಿದೆ. ಇದಕ್ಕೆ ಕಾರಣ ಸಂಜೆ ಗೋಧೂಳಿ ಸಮಯದಲ್ಲಿ ಲಕ್ಷ್ಮೀ ಮನೆಯನ್ನು ಪ್ರವೇಶಿಸುತ್ತಾಳೆ ಎಂಬ ನಂಬಿಕೆ.
ಸುಖ, ಸಂಪತ್ತಿಗೆ ದಾರಿ ಮಾಡಿ ಕೊಡೋ ಹೆಬ್ಗಾಗಿಲ ವಾಸ್ತು ಟಿಪ್ಸ್
ಅತಿಥಿಗಳು ಹಿಂತಿರುಗಿದ ತಕ್ಷಣ ಗುಡಿಸಬಾರದು
ಮನೆಗೆ ಬಂದಿರುವ ಅತಿಥಿಗಳು ಹೊರಟ ತಕ್ಷಣ ಗುಡಿಸಬಾರದು. ಹೀಗೆ ಮಾಡುವುದರಿಂದ ಆ ವ್ಯಕ್ತಿಗೆ ಅಪಘಾತ ಅಥವಾ ಇನ್ಯಾವುದಾದರೂ ಅವಘಢ ಎದುರಾಗುತ್ತದೆ ಎಂಬ ನಂಬಿಕೆಯಿದೆ. ಅದೇರೀತಿ ಮನೆಯ ಯಾವುದೇ ಸದಸ್ಯ ಹೊರಹೋಗುವುದಕ್ಕಿಂತ ಕನಿಷ್ಠ ಒಂದು ಗಂಟೆ ಮುಂಚೆಯೇ ಗುಡಿಸಬೇಕು ಎಂಬ ನಂಬಿಕೆಯೂ ಕೆಲವರಲ್ಲಿದೆ.
ಹೊಸ ಮನೆಗೆ ಹಳೆಯ ಪೊರಕೆ ಬೇಡ
ಹೊಸ ಮನೆಗೆ ಶಿಫ್ಟ್ ಆಗುವಾಗ ಹಳೆಯ ಪೊರಕೆಯನ್ನು ಕೊಂಡೊಯ್ಯಬೇಡಿ. ಹೊಸ ಮನೆಗೆ ಪ್ರವೇಶಿಸುವಾಗ ಹೊಸ ಪೊರಕೆ ಕೊಂಡೊಯ್ಯುವುದು ಶುಭಸೂಚಕ ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಗೃಹಪ್ರವೇಶದ ಸಂದರ್ಭದಲ್ಲಿ ಹೊಸ ಪೊರಕೆಯನ್ನು ಮನೆಯೊಳಗೆ ಕೊಂಡೊಯ್ಯುವ ಸಂಪ್ರದಾಯ ಪಾಲಿಸಲಾಗುತ್ತದೆ.
ಪೊರಕೆ ತುಳಿದ್ರೆ ಲಕ್ಷ್ಮೀಗೆ ಮುನಿಸು
ಪೊರಕೆ ಮೇಲೆ ಕಾಲಿಡುವುದು ಅಥವಾ ಪೊರಕೆಯನ್ನು ಕಾಲಿನಿಂದ ತುಳಿಯುವುದು ಮಾಡಬಾರದು. ವಾಸ್ತುಶಾಸ್ತ್ರದ ಪ್ರಕಾರ ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಗೆ ಸಿಟ್ಟು ಬರುತ್ತದೆ. ಇದರಿಂದ ಮನೆಗೆ ಕೆಡುಕಾಗುವ ಸಾಧ್ಯತೆಯಿದೆ ಎಂಬ ನಂಬಿಕೆಯಿದೆ.
ಈ ಗಿಡ ಮನೆಯಲ್ಲಿದ್ರೆ ನೀವು ಕೋಟ್ಯಧೀಶರಾಗ್ತೀರಿ!
ಈ ದಿನಗಳಂದು ಪೊರಕೆ ಕೊಳ್ಳುವುದು ಶುಭದಾಯಕ
-ಕೃಷ್ಣಪಕ್ಷ ಪೊರಕೆ ಕೊಳ್ಳಲು ಅತ್ಯಂತ ಶುಭವಾದ ದಿನ. ಈ ದಿನ ಪೊರಕೆ ಕೊಳ್ಳುವುದರಿಂದ ಲಕ್ಷ್ಮೀ ದೇವತೆ ನಿಮ್ಮ ಮನೆಗೆ ಆಗಮಿಸುತ್ತಾಳಂತೆ. ಸಕಾರಾತ್ಮಕ ಶಕ್ತಿಗಳು ಮನೆಯನ್ನು ಬೆಳಗುತ್ತವಂತೆ.ಶುಕ್ಲಪಕ್ಷದಲ್ಲಿ ಪೊರಕೆ ಕೊಳ್ಳುವುದು ಶುಭಕಾರಕವಲ್ಲ. ಈ ಸಮಯದಲ್ಲಿ ಪೊರಕೆ ಕೊಳ್ಳುವುದರಿಂದ ನಕಾರಾತ್ಮಕ ಶಕ್ತಿಗಳು ಮನೆ ಪ್ರವೇಶಿಸುತ್ತವೆ.
-ದೀಪಾವಳಿ ಕೂಡ ಪೊರಕೆ ಕೊಳ್ಳಲು ಶುಭ ಸಮಯ.ಈ ಸಂದರ್ಭದಲ್ಲಿ ಪೊರಕೆ ಕೊಂಡರೆ ಲಕ್ಷ್ಮೀ ನಿಮ್ಮ ಮೇಲೆ ಕೃಪೆ ತೋರುವ ಜೊತೆಗೆ ಮನೆಯಲ್ಲಿ ಹಣಕ್ಕೆ ಎಂದೂ ಕೊರತೆಯಾಗುವುದಿಲ್ಲ.