ಮನಸ್ಸಿನ ಏಕಾಗ್ರತೆ ಹೆಚ್ಚಲು ಓದುವ ಕೋಣೆಯ ವಾತಾವರಣವನ್ನು ಚೆನ್ನಾಗಿಟ್ಟುಕೊಳ್ಳಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ. ಓದುವ ಕೋಣೆಯ ಬಣ್ಣ, ಬೆಳಕು, ಪಂಚಭೂತಗಳ ಸಮನ್ವಯತೆ ಕೂಡ ಓದಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ವಿದ್ಯಾರ್ಥಿಗಳು ಅತ್ಯುತ್ತಮ ಓದಿಗೆ ಈ ವಾಸ್ತು ಟಿಪ್ಸ್ ಫಾಲೋ ಮಾಡಿ.
ಓದುವ ಸಮಯದಲ್ಲಿ ಮನಸ್ಸು ಅತ್ತಿತ್ತ ಹರಿಯುವುದು, ಏಕಾಗ್ರತೆ ಬಾರದಿರುವುದು, ಓದಿನ ವಿಷಯದ ಬಗ್ಗೆ ಗೊಂದಲ ಇತ್ಯಾದಿ ಸಮಸ್ಯೆಗಳು ವಿದ್ಯಾರ್ಥಿಗಳಲ್ಲಿ ಅತಿ ಸಾಮಾನ್ಯ. ಇಂದಿನ ಸೋಷಿಯಲ್ ಮೀಡಿಯಾ ಗಲಾಟೆಗಳು ಹಾಗೂ ನಿಜಕ್ಕೂ ಗದ್ದಲದ ವಾತಾವರಣದಲ್ಲಿ ಏಕಾಗ್ರವಾಗಿ ಓದುವುದು ಸವಾಲಿನ ಕೆಲಸವೇ ಸರಿ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ವಿದ್ಯಾರ್ಥಿಗಳು ಉಳಿದವರಿಗಿಂತ ಇನ್ನಷ್ಟು ಹೆಚ್ಚು ತೊಂದರೆ ಎದುರಿಸುತ್ತಾರೆ. ಅಲ್ಲಿ ನಡೆಯುವ ಹೋಲಿಕೆ, ಹುಡುಗಿಯರ ಎದುರು ಹೀರೋ ಪೋಸ್ ಕೊಡುವುದರಲ್ಲಿನ ಸ್ಪರ್ಧೆ, ಬ್ರಾಂಡೆಡ್ ವಸ್ತುಗಳ ಪ್ರದರ್ಶನ ಇತ್ಯಾದಿ ಚಟುವಟಿಕೆಗಳ ನಡುವೆ ಓದಿನ ಬಗ್ಗೆ ಆಸಕ್ತಿ ಹೊಂದುವುದು ಕಷ್ಟಕರ. ಜತೆಗೆ, ವಿದ್ಯಾರ್ಥಿಗಳು ಇರುವ ವಾತಾವರಣ, ಅವರ ಕೋಣೆ ಕೂಡ ಓದಿನ ಮೇಲೆ ಪ್ರಭಾವ ಬೀರುತ್ತದೆ ಎಂದರೆ ಅಚ್ಚರಿ ಬೇಡ. ನಿಜಕ್ಕೂ ಉತ್ತಮ ವಾತಾವರಣದಲ್ಲಿದ್ದುಕೊಂಡು ಓದಬೇಕು ಎನ್ನುವ ಭಾವನೆ ವಿದ್ಯಾರ್ಥಿಗಳಿಗೆ ಇದ್ದರೆ ಕೆಲವು ವಾಸ್ತು ಟಿಪ್ಸ್ ಅನುಸರಿಸುವುದು ಉತ್ತಮ. ಇವುಗಳನ್ನು ಫಾಲೋ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಶಿಸ್ತುಬದ್ಧವಾಗಿ ಓದಿನ ಕಡೆಗೆ ಆಸಕ್ತಿ ವಹಿಸಲು ಸಾಧ್ಯವಾಗುವುದರಲ್ಲಿ ಅನುಮಾನವಿಲ್ಲ. ಸರಳವಾದ ವಾಸ್ತು ಟಿಪ್ಸ್ ಅನುಸರಿಸುವುದರಿಂದ ವಿದ್ಯಾರ್ಥಿಗಳು ತಾವು ಇರುವ ವಾತಾವರಣದೊಂದಿಗೆ ಸಾಮರಸ್ಯ ಹೊಂದಲು ಹಾಗೂ ಉತ್ತೇಜನ ಪಡೆಯಲು ಸಾಧ್ಯವಾಗುತ್ತದೆ.
• ನಿಮ್ಮ ಕೋಣೆಯನ್ನು (Room) ಕಸಮುಕ್ತ (Declutter) ಮಾಡಿ
ಓದುವುದಕ್ಕೂ ಕಸಕ್ಕೂ ಏನು ಸಂಬಂಧ ಎನ್ನಿಸಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಕಸ ಹಾಗೂ ಅನಗತ್ಯ ವಸ್ತುಗಳಿಂದ ಕೂಡಿರುವ ಮನೆ ಅಥವಾ ಕೋಣೆಯಲ್ಲಿ ವಾತಾವರಣದ ಎನರ್ಜಿ (Energy) ಸರಿಯಾದ ಪ್ರಮಾಣದಲ್ಲಿ ಹರಿಯುವುದಿಲ್ಲ. ಅಡುಗೆ ಕೋಣೆ ಚೆಲ್ಲಾಪಿಲ್ಲಿಯಾಗಿದ್ದರೆ ಎಲ್ಲಿಂದ, ಹೇಗೆ ಕೆಲಸ ಶುರು ಮಾಡಬೇಕು ಎಂದು ಗೊತ್ತಾಗದೇ ಇರುವಂತೆ ಇಲ್ಲೂ ಹಾಗೆಯೇ ಆಗುತ್ತದೆ. ಡೆಸ್ಕ್ ಅನ್ನು ಸರಿಯಾಗಿ ಜೋಡಿಸಿಕೊಳ್ಳಿ. ಎಲ್ಲವನ್ನೂ ಒಂದೇ ಕಡೆ ಗುಡ್ಡೆ ಹಾಕಿಕೊಂಡಿರಬೇಡಿ. ಚೆಲ್ಲಾಪಿಲ್ಲಿಯಾಗಿರುವ ವಸ್ತುಗಳಿಂದ ಮನಸ್ಸಿನ ಕೇಂದ್ರೀಕರಿಸುವ ಶಕ್ತಿಯ ಮೇಲೆ ನಕಾರಾತ್ಮಕ (Negative) ಪ್ರಭಾವ (Effect) ಉಂಟಾಗುತ್ತದೆ.
undefined
• ಕುಳಿತುಕೊಳ್ಳುವ ದಿಕ್ಕು
ನಿಮ್ಮ ಡೆಸ್ಕ್ ಯಾವ ದಿಕ್ಕಿನಲ್ಲಿದೆ ಎಂದು ಗುರುತಿಸಿಕೊಳ್ಳುವುದು ಮುಖ್ಯ. ಇದು ಸಹ ಏಕಾಗ್ರತೆಯ ಮೇಲೆ ಬಲವಾದ ಪ್ರಭಾವ ಹೊಂದಿದೆ. ವಾಸ್ತು (Vaastu) ಪ್ರಕಾರ, ಪೂರ್ವ ಅಥವಾ ಈಶಾನ್ಯ ದಿಕ್ಕಿಗೆ ಮುಖ ಮಾಡಿ ಓದುವುದು ಉತ್ತಮ. ಫೋಕಸ್ (Focus) ಮಾಡಲು, ಮಾನಸಿಕ ಸ್ಪಷ್ಟತೆಗೆ ನೆರವಾಗುತ್ತದೆ. ಜತೆಗೆ, ಖಾಲಿ ಗೋಡೆಗೆ ಮುಖ ಮಾಡಿರುವಂತೆ ಡೆಸ್ಕ್ ಇಟ್ಟುಕೊಳ್ಳಬೇಡಿ. ಇದರಿಂದ ನಿಂತ ನೀರಿನ ಅನುಭವವಾಗುತ್ತದೆ. ಬದಲಿಗೆ, ಕಿಟಕಿ ಅಥವಾ ಬಾಗಿಲಿಗೆ ಮುಖವಾಗಿ ಕುಳಿತುಕೊಳ್ಳಿ.
• ಬಣ್ಣಗಳ (Color) ಪ್ರಭಾವ
ಬಣ್ಣಗಳು ನಮ್ಮ ಮೂಡ್ (Mood) ಮತ್ತು ಉತ್ಪಾದಕತೆಯ ಮೇಲೆ ಭಾರೀ ಪ್ರಭಾವ ಹೊಂದಿವೆ. ಕೆಲವು ಬಣ್ಣಗಳು ಮನಸ್ಸನ್ನು ಉತ್ತೇಜಿಸಿ, ಏಕಾಗ್ರತೆಯನ್ನು ಹೆಚ್ಚಿಸುತ್ತವೆ. ಜತೆಗೆ, ಮನಸ್ಸಿಗೆ ಶಾಂತಿ ನೀಡುತ್ತದೆ. ತಿಳಿ ನೀಲಿ, ತಿಳಿ ಹಸಿರು, ಬಿಳಿ ಇಂಥ ಬಣ್ಣಗಳು ಓದಿನ ಕೋಣೆಗೆ ಸೂಕ್ತ. ಇವು ಮನಸ್ಸಿನ ಶಾಂತಿಗೆ (Calmness) ಕಾರಣವಾಗಿ ಅನಗತ್ಯ ಉದ್ವೇಗವನ್ನು ನಿವಾರಿಸಬಲ್ಲವು. ದಟ್ಟ, ಗಾಢ ಬಣ್ಣಗಳು ಅಶಾಂತಿಯನ್ನು ಹೆಚ್ಚಿಸುತ್ತವೆ.
• ಬೆಳಕಿನ ಧನಾತ್ಮಕತೆ
ಓದುವ ಕೋಣೆಗೆ ಸೂಕ್ತ ಬೆಳಕು (Light) ಅತಿ ಮುಖ್ಯ. ಹಗಲಿನಲ್ಲಿ ನೈಸರ್ಗಿಕ ಬೆಳಕು ಲಭ್ಯವಾಗುವಂತ ಕೋಣೆ ಓದಲು ಉತ್ತಮ. ಹೀಗಾಗಿ, ಕಿಟಕಿ ಬಳಿ, ಸೂರ್ಯನ ಬೆಳಕು ಇರುವಲ್ಲಿ ಕುಳಿತುಕೊಳ್ಳಿ. ಸಂಜೆ ಮತ್ತು ರಾತ್ರಿ ಸಮಯದಲ್ಲಿ ಉತ್ತಮ ಬೆಳಕು ಇರುವಂತೆ ನೋಡಿಕೊಳ್ಳಿ. ಕಣ್ಣುಗಳಿಗೆ (Eye) ಹೆಚ್ಚಿನ ಆಯಾಸ ತಪ್ಪಿಸಲು ಅಡ್ಜಸ್ಟೇಬಲ್ ಬ್ರೈಟ್ ನೆಸ್ ಇರುವಂತಹ ಲ್ಯಾಂಪ್ ಬಳಸಿ. ಉತ್ತಮವಾದ ಬೆಳಕು ಮನಸ್ಸನ್ನು ಎಚ್ಚರಿಕೆಯ ಸ್ಥಿತಿಯಲ್ಲಿ ಇರಿಸುತ್ತದೆ.
ನವವಿವಾಹಿತೆಗೆ ಈ 5 ಉಡುಗೊರೆ ಕೊಡ್ಬೇಡಿ ಅನ್ನುತ್ತೆ ಜ್ಯೋತಿಷ್ಯ; ಯಾವುವು ಮತ್ತು ಯಾಕೆ?
• ಪಂಚಭೂತಗಳ ಸಮತೋಲನ (Balance)
ವಾಸ್ತುಶಾಸ್ತ್ರದ ಪ್ರಕಾರ, ಓದುವ ಸ್ಥಳದಲ್ಲಿ ಭೂ, ಜಲ, ಅಗ್ನಿ, ವಾಯು, ಬ್ರಹ್ಮಾಂಡಗಳ ಸಮತೋಲನ ಇರಿಸಿಕೊಳ್ಳುವುದು ಉತ್ತಮ. ಉದಾಹರಣೆಗೆ, ನಿಮ್ಮ ಡೆಸ್ಕ್ ಮೇಲೆ ಸಣ್ಣದೊಂದು ಒಳಾಂಗಣ ಸಸ್ಯ (ಭೂ), ಸಮೀಪದಲ್ಲಿ ನೀರಿನ ಬೌಲ್ (ಜಲ), ಪರಿಮಳಭರಿತ ಕ್ಯಾಂಡಲ್ (ಅಗ್ನಿ), ಫ್ಯಾನ್ ಅಥವಾ ಏರ್ ಪ್ಯೂರಿಫೈಯರ್ ಬಳಕೆ ಅಥವಾ ಕಿಟಕಿಯಿಂದ ಉತ್ತಮ ಗಾಳಿ (ವಾಯು), ಚಲಿಸಲು ಸಾಕಷ್ಟು ಸ್ಥಳಾವಕಾಶ (ಬ್ರಹ್ಮಾಂಡ) ಇರುವಂತೆ ನೋಡಿಕೊಳ್ಳಿ.