ವ್ಯಾಪಾರ, ವಿವಾಹ, ದೃಷ್ಟಿ ದೋಷ ನಿವಾಳಿಸಲು ಸರಳ Vastu Tips..

By Suvarna News  |  First Published Jan 15, 2022, 1:10 PM IST

ದೈನಂದಿನ ಜೀವನದಲ್ಲಿ ಎದುರಿಸುವ ಹಲವಾರು ಸಮಸ್ಯೆಗಳಿಗೆ ವಾಸ್ತುವಿನ ಈ ಪರಿಹಾರಗಳು ಅತ್ಯಂತ ಪರಿಣಾಮಕಾರಿಯಗಿ ಕೆಲಸ ಮಾಡುವುದರಲ್ಲಿ ಅನುಮಾನವಿಲ್ಲ.


ಅಂದುಕೊಂಡ ಯಾವ ಕೆಲಸಗಳೂ ಸಕಾಲದಲ್ಲಿ ಆಗದಿರುವುದು, ಪ್ರಯತ್ನದ ಹೊರತಾಗಿಯೂ ಆರ್ಥಿಕವಾಗಿ ಹಿಂದುಳಿಯುವುದು, ಮಕ್ಕಳ ವಿದ್ಯಾಭ್ಯಾಸದಲ್ಲಿ (Education) ಏರುಪೇರು ಉಂಟಾಗುವುದು, ಮನೆಯಲ್ಲಿ ಶುಭ ಕಾರ್ಯಗಳು ನಡೆಯಲು ವಿಘ್ನಗಳು ಎದುರಾಗುವುದು- ಹೀಗೆ ಹಲವಾರು ಸಾಮಾನ್ಯ ತೊಂದರೆಗಳು ಬಹಳಷ್ಟು ಜನರನ್ನು ಕಾಡುತ್ತಿರುತ್ತವೆ. ಇದಕ್ಕೆ ವಾಸ್ತು ದೋಷವೇ ಕಾರಣ ಇರಬಹುದು ಎಂದು ಎಂದಾದರೂ ಯೋಚಿಸಿದ್ದೀರಾ?

ಇಂತಹ ಸಮಸ್ಯೆಗಳಿಗೆ ಹೋಮ-ಹವನಗಳನ್ನು ಮಾಡಿಸುವುದು ಹಾಗೂ ಇನ್ನಿತರ ಪೂಜೆಗಳನ್ನು ಮಾಡಿಸುವುದರ ಮೂಲಕ ಪರಿಹಾರವನ್ನು ಸ್ವಲ್ಪ ಮಟ್ಟಿಗೆ ಕಂಡುಕೊಳ್ಳಬಹುದು. ಆದರೆ ಸಂಪೂರ್ಣ ಪರಿಹಾರನ್ನು ನೀವು ಬಯಸುವುದಾದರೆ ಅದಕ್ಕೆ ವಾಸ್ತುಶಾಸ್ತ್ರದಲ್ಲಿ ಬೇರೆಯೇ ವಿಧಾನಗಳಿವೆ. ಇದು ಇಂದು ನೆನ್ನೆಯದಲ್ಲ ಪುರಾತನ ಕಾಲದಲ್ಲಿಯೂ ಈ ರೀತಿಯ ಅಭ್ಯಾಸಗಳನ್ನು ಬೆಳೆಸಿಕೊಂಡಿಂದ್ದರು.  ಇವುಗಳನ್ನು ನಿಮ್ಮ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.

Tap to resize

Latest Videos

undefined

ನಿಮ್ಮ ರಾಶಿಯ Power Color ಯಾವುದು ತಿಳಿಯಿರಿ

ಶನಿ ದೃಷ್ಟಿಗೆ ಪರಿಹಾರ

  •  ಶನಿಯ ದೃಷ್ಟಿಯು ಯಾವುದೇ ವ್ಯಕ್ತಿಯ ಮೇಲೆ ಬಿದ್ದರೆ ಅವರು ಮಾಡಲು ಹೋಗುವ ಯಾವುದೇ ಕೆಲಸಕಾರ್ಯಗಳು ಸುಗಮವಾಗಿ ಆಗುವುದಿಲ್ಲ. ಇದಕ್ಕಾಗಿ ಕಬ್ಬಿಣದ (Iron) ಪಾತ್ರೆಯಲ್ಲಿ ನೀರು ಹಾಕಿ ಅದನ್ನು ಮಲಗುವ ಮಂಚದ (Bed) ಕೆಳಗೆ ಇಡುವುದರಿಂದ ಶನಿದೋಷ ನಿವಾರಣೆ ಆಗುತ್ತದೆ. ಜೊತೆಗೆ ಈ ಸ್ಥಳದಲ್ಲಿ ನೀಲಿ ಕಲ್ಲುಗಳನ್ನು ಇಡುವುದು ಕೂಡ ವಾಸ್ತು ದೋಷದ ಪರಿಹಾರಕ್ಕೆ ಒಳ್ಳೆಯದು.
  • ಬೆಳಗ್ಗೆ ಎದ್ದ ತಕ್ಷಣ ತಾಮ್ರದ ಪಾತ್ರೆಯಲ್ಲಿ ಅಥವಾ ತಾಮ್ರದ ತಂಬಿಗೆಯಲ್ಲಿ ನೀರು ಕುಡಿಯುವುದರಿಂದ ದೇಹಕ್ಕೆ ಒಳ್ಳೆಯದು ಅದಷ್ಟೇ ಅಲ್ಲದೆ ತಾಮ್ರದ ತಂಬಿಗೆಯಲ್ಲಿ ನೀರು ತುಂಬಿಸಿ ಅದನ್ನು ಮಲಗುವ ಮಂಚದ ಕೆಳಗೆ ಇಡಬೇಕು. ಇದರಿಂದಾಗಿ ಸೂರ್ಯದೇವನ ಸಂಪೂರ್ಣ ಅನುಗ್ರಹವು ನಿಮಗೆ ಸಿಗುತ್ತದೆ.  ಈ ಕಾರಣದಿಂದಾಗಿ ಕೆಟ್ಟ ಶಕ್ತಿಗಳ ಪ್ರಭಾವವು ತೊಲಗಿ ಹೋಗುವುದರಲ್ಲಿ ಅನುಮಾನವಿಲ್ಲ.  

ವ್ಯಾಪಾರದಲ್ಲಿ (Business) ಏಳಿಗೆ ಕಾಣಲು ಹೀಗೆ ಮಾಡಿ

  • ವ್ಯಾಪಾರಸ್ಥರಿಗೆ ಸಂಬಂಧಪಟ್ಟ ಹಾಗೆ ವ್ಯಾಪಾರ ಚೆನ್ನಾಗಿ ನಡೆಯಬೇಕು. ಒಳ್ಳೆಯ ಲಾಭ ಪಡೆಯಬೇಕು ಎಂಬುದು ವ್ಯಾಪಾರಸ್ಥರ ಅಭಿಲಾಷೆಯಾಗಿರುತ್ತದೆ. ಇದಕ್ಕಾಗಿ ನೀವು ಹೀಗೆ ಮಾಡಬೇಕು, ಗಾಜಿನ ಲೋಟದಲ್ಲಿ ನೀರು ತುಂಬಿಸಿ ಅದಕ್ಕೆ ನಿಂಬೆಹಣ್ಣನ್ನು ಹಾಕಿ ಮಲಗುವ (Sleeping) ಮಂಚದ ಕೆಳಗೆ ಇಡುವುದರಿಂದ ಶುಭ ಲಾಭವನ್ನು ಪಡೆಯಬಹುದು.
  •  ಅಶ್ವತ್ಥ ಎಲೆಗಳನ್ನು ವ್ಯಾಪಾರಸ್ಥರು ಬಳಸುವ ಗಲ್ಲಾಪೆಟ್ಟಿಗೆ ಅಥವಾ ಹಣ ಹಾಕಿರುವ ಪೆಟ್ಟಿಗೆಯಲ್ಲಿ ಇಡುವುದರಿಂದ ಲಾಭವನ್ನು ಪಡೆಯಬಹುದು. 

ಕೆಟ್ಟ ದೃಷ್ಟಿ ಪರಿಹಾರ ಹಾಗೂ ಮಾನಸಿಕ ನೆಮ್ಮದಿಗೆ ಹೀಗೆ ಮಾಡಿ

  • ಅರಿಶಿಣ (Turmeric) ಎಂದರೆ ಶುಭದ ಸಂಕೇತ. ಅರಿಶಿನವು ಆರೋಗ್ಯದ ದೃಷ್ಟಿಯಲ್ಲಿ ಬಹಳ ಉಪಯೋಗಕಾರಿ ಹಾಗೂ ಚರ್ಮಕ್ಕೆ ಸಂಬಂಧಪಟ್ಟ ಹಾಗೆ ಅರಿಶಿಣದ ಪಾತ್ರ ಮಹತ್ವವಾದುದು. ಅಷ್ಟೇ ಅಲ್ಲದೆ, ಇದು ವಾಸ್ತುವಿನಲ್ಲಿಯೂ ಒಂದು ಸ್ಥಾನವನ್ನು ಪಡೆದುಕೊಂಡಿದೆ. ಒಂದು ಬಟ್ಟೆಯಲ್ಲಿ ಅರಿಶಿನವನ್ನು ಕಟ್ಟಿ ನೀವು ಮಲಗುವ ಹಾಸಿಗೆಯಲ್ಲಿ ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಕೆಟ್ಟದೃಷ್ಟಿ ಹೋಗಿ ಮಾನಸಿಕ ನೆಮ್ಮದಿ ದೊರೆಯುತ್ತದೆ ಹಾಗೂ ಶುಭ ಸುದ್ಧಿಗಳನ್ನು ಹೆಚ್ಚು ಕೇಳುತ್ತೀರಿ.

    Daily Horoscope: ವೃಶ್ಚಿಕಕ್ಕೆ ತೆಗೆದುಕೊಂಡ ನಿರ್ಧಾರವೇ ಬದಲಾಗುವ ಸಂದರ್ಭ!
     
  • ಮನೆಯಲ್ಲಿ ಮದುವೆಯಂತಹ (Marriage) ಕಾರ್ಯಗಳು ಅಥವಾ ಯಾವುದೇ ಶುಭ ಕಾರ್ಯಗಳು ಸರಿಯಾದ ಸಮಯದಲ್ಲಿ ನಡೆಯುತ್ತಿಲ್ಲ ಎಂದಾದರೆ ಅಂಥವರು ಮಲಗುವ ಮಂಚದ ಕೆಳಗೆ ಆದಷ್ಟು ಕಬ್ಬಿಣ ಇಲ್ಲದೆ ಇರುವ ಹಾಗೆ ನೋಡಿಕೊಳ್ಳುವುದು ಅವಶ್ಯಕ.

     ಹೀಗೆ ವಾಸ್ತುಶಾಸ್ತ್ರದ ಕೆಲವು ಉಪಾಯಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಮನೆಯನ್ನು ಸ್ವಚ್ಛ (Clean)ಮತ್ತು ಶುದ್ಧವಾಗಿ ಇಟ್ಟುಕೊಳ್ಳುವುದರಿಂದ ಹಲವಾರು ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು.
click me!