ನಿಮ್ಮ ಕಾರಿನ ಮೇಲೆ ದೇವರ ಚಿತ್ರ ಅಥವಾ ಹೆಸರು ಬರೆದಿದೆಯಾ?, ಅದಕ್ಕೂ ಮೊದಲು ಈ ವಿಷ್ಯ ತಿಳ್ಕೊಳ್ಳಿ

Published : Jan 29, 2026, 11:59 AM IST
car

ಸಾರಾಂಶ

God image on car: ನಿಯಮಗಳನ್ನು ಪಾಲಿಸದೆ ಹಾಗೆ ಫೋಟೋ ಅಂಟಿಸುವುದು ಅಥವಾ ವಿಗ್ರಹವನ್ನಿಡುವುದು ಪ್ರಯೋಜನದ ಬದಲು ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ?. ಹೌದು. ಈ ಬಗ್ಗೆ ಜ್ಯೋತಿಷ್ಯ ಮತ್ತು ವಾಸ್ತು ಹೇಳುವುದೇನು? ಎಂದು ಇಲ್ಲಿ ನೋಡೋಣ ಬನ್ನಿ..

ಯಾರೇ ಆಗಲಿ ಹೊಸ ಕಾರು ಅಥವಾ ಬೈಕ್ ತೆಗೆದುಕೊಂಡಾಗ "ಜೈ ಶ್ರೀ ರಾಮ್" ಬರಹ ಅಥವಾ ದೇವರ ಸ್ಟಿಕ್ಕರ್ ಅಂಟಿಸುವುದು ಸಾಮಾನ್ಯ ಅಲ್ಲವೇ. ಹೀಗೆ ಮಾಡುವುದರಿಂದ ನಾವು ಸುರಕ್ಷಿತವಾಗಿರುತ್ತವೆ ಮತ್ತು ಪ್ರಯಾಣ ಸುಖವಾಗಿರುತ್ತದೆ ಎಂದು ಎಲ್ಲಾ ಜನರು ಭಾವಿಸುತ್ತಾರೆ. ಆದರೆ ನಿಯಮಗಳನ್ನು ಪಾಲಿಸದೆ ಹಾಗೆ ಫೋಟೋ ಅಂಟಿಸುವುದು ಅಥವಾ ವಿಗ್ರಹವನ್ನಿಡುವುದು ಪ್ರಯೋಜನದ ಬದಲು ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ?. ಹೌದು. ಈ ಬಗ್ಗೆ ಜ್ಯೋತಿಷ್ಯ ಮತ್ತು ವಾಸ್ತು ಹೇಳುವುದೇನು? ಎಂದು ಇಲ್ಲಿ ನೋಡೋಣ ಬನ್ನಿ..

ದೇವರ ಸ್ಮರಣೆಯಿಂದ ಕಡಿಮೆಯಾಗುವ ಅಶುಭ ಪರಿಣಾಮ
ಹೆಚ್ಚಿನ ಜನರು ಪ್ರಯಾಣದ ಸಮಯದಲ್ಲಿ ಅಪಘಾತಗಳನ್ನು ತಡೆಗಟ್ಟಲು ಮತ್ತು ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ತಮ್ಮ ವಾಹನಗಳ ಮೇಲೆ ದೇವರ ಚಿತ್ರಗಳನ್ನ ಅಂಟಿಸುತ್ತಾರೆ. ಧಾರ್ಮಿಕ ನಂಬಿಕೆಯ ಪ್ರಕಾರ ಹನುಮಾನ್, ಗಣೇಶ ಅಥವಾ ದುರ್ಗಾ ದೇವಿಯನ್ನು ಸ್ಮರಿಸುವುದರಿಂದ ಜರ್ನಿ ಟೈಮಲ್ಲಿ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಗ್ರಹಗಳ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ.

ಈ ವಿಷಯಗಳು ಗಮನದಲ್ಲಿರಲಿ ಅಂತಾರೆ ತಜ್ಞರು

ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ವಾಹನದ ಮೇಲೆ ಫೋಟೋ ಅಥವಾ ಹೆಸರು ಇದ್ದಾಗ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯ.
ಗಣೇಶ: ಗಣೇಶ ದೇವರ ವಿಗ್ರಹವನ್ನು ಡ್ಯಾಶ್‌ಬೋರ್ಡ್ ಮುಂದೆ ಇಡಬೇಕು.
ಹನುಮಾನ್ ಜೀ: ಚಾಲಕನ ಬಲಭಾಗದಲ್ಲಿ ಫೋಟೋ ಇಡುವುದು ಶುಭವೆಂದು ಪರಿಗಣಿಸಲಾಗಿದೆ.
ಸ್ವಚ್ಛತೆ: ಫೋಟೋಗಳು ಅಥವಾ ಸ್ಟಿಕ್ಕರ್‌ಗಳು ಯಾವಾಗಲೂ ಸ್ವಚ್ಛವಾಗಿರಬೇಕು. ಧೂಳಿನಿಂದ ಕೂಡಿದ ಅಥವಾ ಹರಿದ ಫೋಟೋಗಳು ನಕಾರಾತ್ಮಕತೆಯನ್ನು ತರಬಹುದು.

ಇಂತಹ ಸಮಯದಲ್ಲಿ ಹೀಗೆಲ್ಲಾ ಮಾಡಬಾರದು ಅಥವಾ ಇಡಬಾರದು
ಈ ಕೆಳಗಿನ ಸಂದರ್ಭಗಳಲ್ಲಿ ದೇವರ ಫೋಟೋ ಅಥವಾ ಹೆಸರು ವಾಹನದ ಮೇಲೆ ಇರಬಾರದು ಎಂದು ಜ್ಯೋತಿಷ್ಯ ತಜ್ಞರು ನಂಬುತ್ತಾರೆ.

ಮದ್ಯ ಮತ್ತು ಮಾಂಸ ಸೇವನೆ: ವಾಹನದಲ್ಲಿದ್ದಾಗ ಮದ್ಯ ಅಥವಾ ಮಾಂಸ ಸೇವನೆ ಮಾಡಿದರೆ, ದೇವರ ಫೋಟೋ ಇಡುವುದು ಅವರಿಗೆ ಮಾಡಿದ ಅವಮಾನ ಎಂದು ಪರಿಗಣಿಸಲಾಗುತ್ತದೆ. ಇದು ಶುಭ ಫಲಿತಾಂಶಗಳಿಗಿಂತ ಪಾಪಕ್ಕೆ ಕಾರಣವಾಗಬಹುದು.
ಪ್ರದರ್ಶನ: ಹೆಸರನ್ನು ತುಂಬಾ ದೊಡ್ಡ ಅಕ್ಷರಗಳಲ್ಲಿ ಬಳಸುವುದು ಅಥವಾ ಇಡೀ ವಾಹನ ಕವರ್ ಆಗುವಂತೆ ಮಾಡುವುದು ಸಹ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಹಳೆಯ ಫೋಟೋಗಳು: ಸೂರ್ಯನ ಬೆಳಕಿನಿಂದಾಗಿ ಮಸುಕಾದ ಅಥವಾ ಹರಿದ ಫೋಟೋಗಳಿದ್ದರೆ ತೆಗೆದಿಡಲು ತಜ್ಞರು ಶಿಫಾರಸು ಮಾಡುತ್ತಾರೆ.

ಹಾಗಾದರೆ ಸರಿಯಾದ ಮಾರ್ಗ ಯಾವುದು ಅಂತೀರಾ?

ವಾಹನದ ಮೇಲೆ ದೇವರ ಫೋಟೋ ಮತ್ತು ಹೆಸರನ್ನು ಹಾಕುವ ಸರಿಯಾದ ಮಾರ್ಗವೆಂದರೆ ಹೆಸರು ಅಥವಾ ಫೋಟೋದ ಗಾತ್ರವನ್ನು ಚಿಕ್ಕದಾಗಿ ಮತ್ತು ಸುಂದರವಾಗಿ ಬಳಸಬೇಕು.
ವಾಹನವನ್ನು ನಿಯಮಿತವಾಗಿ ಸ್ವಚ್ಛವಾಗಿಡಿ ಮತ್ತು ಕಾಲಕಾಲಕ್ಕೆ ಪೂಜೆ ಮಾಡಿ.
ವಾಹನದಲ್ಲಿ ಹನುಮಾನ್ ಚಾಲೀಸಾ ಅಥವಾ ಯಾವುದೇ ಸಣ್ಣ ಸ್ತೋತ್ರವನ್ನು ಇಟ್ಟುಕೊಳ್ಳುವುದು ಸಹ ಬಹಳ ಶುಭವೆಂದು ಪರಿಗಣಿಸಲಾಗಿದೆ.

ರಾಮಚರಿತಮಾನಸದ ಲಂಕಾಂಡದ ಪ್ರಸಿದ್ಧ ಶ್ಲೋಕ ಹೇಳಿದರೆ ಒಳಿತು
ಹಾಗೆಯೇ ರಾಮಭದ್ರಾಚಾರ್ಯರ ಪ್ರಕಾರ , ಯಾವುದೇ ವಾಹನವನ್ನು ಹತ್ತುವ ಮೊದಲು ರಾಮಚರಿತಮಾನಸದ ಲಂಕಾಂಡದ ಈ ಪ್ರಸಿದ್ಧ ಶ್ಲೋಕವನ್ನು ಪಠಿಸಬೇಕು . ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ವಾಹನವನ್ನು ಹತ್ತುವ ಮೊದಲು चलत बिमान कोलाहल होई। जय रघुबीर कहइ सबु कोई॥ सिंहासन अति उच्च मनोहर। श्री समेत प्रभु बैठे ता पर॥ ಈ ಸಾಲುಗಳನ್ನು ಪಠಿಸಲಾಗುತ್ತದೆ.

PREV
Read more Articles on
click me!

Recommended Stories

ಮನಿ ಪ್ಲಾಂಟ್ ರಾಕೆಟ್ ವೇಗದಲ್ಲಿ ಬೆಳೆಯಬೇಕೆ? ಈ 6 ಸುಲಭ ಟ್ರಿಕ್ಸ್ ಟ್ರೈ ಮಾಡಿ!
ಹೆಣ್ಮಕ್ಕಳು ಮನೆಯ ಮುಖ್ಯ ದ್ವಾರದ ಹೊಸ್ತಿಲಲ್ಲಿ ಕುಳಿತುಕೊಳ್ಳಬಾರದು ಅಂತ ಹೇಳೋದ್ಯಾಕೆ?