ಜನಪ್ರಿಯತೆ ಬೇಕೇ? ಇಲ್ಲಿವೆ Vastu Remedies

By Suvarna NewsFirst Published Apr 17, 2022, 1:57 PM IST
Highlights

ಒಂದು ವಯಸ್ಸಿನ ಹಂತ ದಾಟಿದ ಮೇಲೆ ಸಮಾಜದಲ್ಲಿ ಹೆಸರು, ಗೌರವ ಪಡೆಯುವುದು ಎಲ್ಲರಿಗೂ ಮುಖ್ಯವೆನಿಸುತ್ತದೆ. ಹೀಗೆ ಹೆಸರು, ಗೌರವ ಗಳಿಸಲು ವಾಸ್ತುಶಾಸ್ತ್ರದಲ್ಲಿ ಕೆಲವು ಸಲಹೆಗಳಿವೆ. ನಿಮ್ಮ ಇತರೆ ಪ್ರಯತ್ನದ ಜೊತೆ ಖ್ಯಾತಿ ಪಡೆಯಲು ಈ ಸಲಹೆಗಳನ್ನೂ ಪರಿಗಣಿಸಿ. 

ಸಾಮಾನ್ಯವಾಗಿ ಯೌವನ ದಾಟುತ್ತಿದ್ದಂತೆಯೇ ಮನುಷ್ಯರಿಗೆ ಸಮಾಜದಲ್ಲಿ ಸ್ಥಾನಮಾನ, ಹೆಸರು, ಗೌರವ ಪಡೆಯುವುದು ಮುಖ್ಯವಾಗುತ್ತದೆ. ಇನ್ನೂ ಕೆಲವರಿಗೆ ಅವರ ವೃತ್ತಿಗೆ ಅನುಸಾರ ಸಣ್ಣ ವಯಸ್ಸಿನಲ್ಲಿಯೇ ಖ್ಯಾತಿಯ ಅಗತ್ಯವಿರುತ್ತದೆ. ಹಾಗಂಥ ಖ್ಯಾತಿ ಪಡೆಯುವುದು ಸುಲಭವೇನಲ್ಲ. ಅದು ಅದೃಷ್ಟ, ಪ್ರತಿಭೆ, ಗುಣವಿಲ್ಲದೆ ದಕ್ಕುವುದೂ ಇಲ್ಲ. 
 ನಮ್ಮೆಲ್ಲ ಕೆಲಸಗಳಲ್ಲಿ ಯಶಸ್ಸು ಪಡೆಯುವುದು, ಉತ್ತಮ ನಡೆನುಡಿ ಖ್ಯಾತಿ ತಂದು ಕೊಡುತ್ತದೆ. ಆದರೆ ಹಾಗೆ ಯಶಸ್ಸು ಪಡೆಯುವುದಕ್ಕೂ ಸಾಕಷ್ಟು ಕಷ್ಟ ಪಡಬೇಕು. ಜನಪ್ರಿಯತೆ ಗಳಿಸುವುದು ಅತಿ ದೊಡ್ಡ ಆಶೀರ್ವಾದಗಳಲ್ಲೊಂದಾಗಿದೆ. ಅದನ್ನು ಗಳಿಸಲು ಬಹಳ ವರ್ಷ ಮೊದಲಿಂದಲೇ ಸಾಕಷ್ಟು ಶಕ್ತಿ ವ್ಯಯಿಸಬೇಕು. ಪ್ರತಿಭೆ, ಕೌಶಲಗಳನ್ನು ಮೊನಚುಗೊಳಿಸಿಕೊಳ್ಳಬೇಕು. ಮಾಡುವ ಸಂಗ ಸರಿಯಾಗಿರಬೇಕು. ತೆಗೆದುಕೊಳ್ಳುವ ನಿರ್ಧಾರಗಳು ಸರಿ ಇರಬೇಕು. 

ಅವೆಲ್ಲದರ ಹೊರತಾಗಿಯೂ ಹೆಸರು, ಸ್ಥಾನಮಾನ ಸಿಗುತ್ತಿಲ್ಲವೆಂದರೆ ವಾಸ್ತುಶಾಸ್ತ್ರದಲ್ಲಿ ಇದಕ್ಕಾಗಿ ಕೆಲವು ಪರಿಹಾರ ಮಾರ್ಗಗಳಿವೆ. ಅವನ್ನು ಅಚ್ಚುಕಟ್ಟಾಗಿ ಅನುಸರಿಸುವುದರಿಂದ ಸುತ್ತಲೂ ಧನಾತ್ಮಕ ಶಕ್ತಿ ತುಂಬಿಕೊಳ್ಳುವುದಲ್ಲದೆ, ಇದು ಖ್ಯಾತಿಯನ್ನೂ ತಂದುಕೊಡುತ್ತದೆ. 

ಕಪ್ಪು ದಾರ ಕಾಲಿಗೆ ಕಟ್ಟೋದು ಒಳ್ಳೆಯದು, ಆದರೆ ಈ 2 ರಾಶಿಯವರು ಕಟ್ಟಕೂಡದು!

ಜನಪ್ರಿಯತೆಯನ್ನು ಗಳಿಸಲು ಅಪಾರವಾಗಿ ಸಹಾಯಕವಾಗುವ ವಾಸ್ತು ಸಲಹೆಗಳು ಇಲ್ಲಿವೆ. 

  • ಮನೆಯಲ್ಲಿ ಮತ್ತು ಸುತ್ತಮುತ್ತಲಿನ ಶಕ್ತಿಯಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುವುದು ಉನ್ನತ ಮಟ್ಟದ ಜೀವನಕ್ಕೆ ಕಾರಣವಾಗಬಹುದು. ಮನೆಯನ್ನು ಸ್ವಚ್ಚವಾಗಿಯೂ, ಸರಳವಾಗಿಯೂ ಇಟ್ಟುಕೊಳ್ಳಿ. ಪ್ರತಿದಿನ ದೇವರ ಪೂಜೆ ತಪ್ಪಿಸಬೇಡಿ. 
  • ಜನಪ್ರಿಯತೆ ಪಡೆಯಲು ದುರ್ಗಾ ದೇವಿಯನ್ನು ಆರಾಧಿಸಿ. ಲವಂಗ, ಬಳೆ, ಕರ್ಪೂರ, ದಾಸವಾಳದ ಹೂವುಗಳು, ಸಿಂಧೂರ ಮತ್ತು ಸುಗಂಧ ದ್ರವ್ಯಗಳನ್ನು ದುರ್ಗಾದೇವಿಯ ಪಾದದಲ್ಲಿ ಇಟ್ಟು ಧ್ಯಾನ ಮಾಡಿ. ಹಿರಿಯರನ್ನು ಗೌರವಿಸಿ.
  • ಸಾಮಾಜಿಕ ಖ್ಯಾತಿಯನ್ನು ಪಡೆಯಲು ಪ್ರತಿ ದಿನ  ಸೂರ್ಯ ದೇವರನ್ನು ಆರಾಧಿಸಿ. ಬೆಳಗ್ಗೆ ಪ್ರಾತಃಕಾಲದಲ್ಲಿ ಎದ್ದು ಸೂರ್ಯ ದೇವರಿಗೆ(Sun God) ನಮಸ್ಕರಿಸಿ ಮತ್ತು ಹಳದಿ ಬಟ್ಟೆ ಮತ್ತು ಕೆಂಪು ಚಂದನವನ್ನು ದಾನ ಮಾಡಿ.
  • ಸಕಾರಾತ್ಮಕ ಶಕ್ತಿ(Positive energy)ಯಿಂದ ತುಂಬಿರುವ ಜನರ ಸ್ನೇಹ ಮಾಡಿ. ಯಾವತ್ತೂ ಕೆಟ್ಟ ದಾರಿಗೆ ಎಳೆಯುವವರ ಸ್ನೇಹ ಬೇಡ. 
  • ಪುರುಷರಾದರೂ, ಮಹಿಳೆಯರಾದರೂ ಮನೆಯಿಂದ ಹೊರ ಬರುವ ಮೊದಲು ಕುಂಕುಮ ಧರಿಸಿ. ಮನೆ ದೇವರ ಸ್ಮರಣೆ ಮಾಡಿ.
  • ಶ್ರೀ ರಾಧಾ ಕೃಷ್ಣರ ಚಿತ್ರಗಳನ್ನು ಮನೆಯಲ್ಲಿ ಇಡುವುದರಿಂದ ಕೂಡಾ ಜನಪ್ರಿಯತೆ ಗಳಿಸಬಹುದಾಗಿದೆ. 

ಮೇಲೆ ತಿಳಿಸಿದ ಸಲಹೆಗಳನ್ನು ಅನುಸರಿಸುವುದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಇದು ಕುಟುಂಬದ ಎಲ್ಲ ಸದಸ್ಯರಿಗೂ ಅದೃಷ್ಟವನ್ನು ತರುತ್ತದೆ. 

ಈ ಮಂತ್ರ ಪಠಣ ಮನೆಗೂ, ಮನಸ್ಸಿಗೂ ತರುತ್ತೆ ಶಾಂತಿ!

  • ಇದಲ್ಲದೆ, ಸೋಮವಾರ(Monday), ಮನೆಯಿಂದ ಹೊರಡುವ ಮೊದಲು ಕನ್ನಡಿಯಲ್ಲಿ ನಿಮ್ಮನ್ನು ನೋಡಿಕೊಳ್ಳಿ. 
  • ಮಂಗಳವಾರ(Tuesday), ಮನೆಯಿಂದ ಹೊರಡುವ ಮೊದಲು ಕೆಲವು ಸಿಹಿ ತಿಂಡಿಗಳನ್ನು ತಿನ್ನಿರಿ. 
  • ಬುಧವಾರ(Wednesday)ದಂದು ಕೊತ್ತಂಬರಿ ಸೊಪ್ಪನ್ನು ತಿಂದ ನಂತರ ಹೊರಡಿ.|
  • ಗುರುವಾರ(Thursday)ದಂದು, ನೀವು ಕೆಲವು ವಿಶೇಷ ಕೆಲಸಗಳಿಗಾಗಿ ಹೊರಗೆ ಹೋಗುತ್ತಿದ್ದರೆ ನಿಮ್ಮ ಬಾಯಿಯಲ್ಲಿ ಸ್ವಲ್ಪ ಸಾಸಿವೆ ಹಾಕಿಕೊಳ್ಳಿ. 
  • ಶುಕ್ರವಾರ(Friday)ದಂದು, ಹಾಲಿನಿಂದ ಮಾಡಿದ ವಸ್ತುಗಳನ್ನು ಸೇವಿಸಿ. ಸಿಹಿ ತಿನಿಸುಗಳ ಹೊರತಾಗಿ, ಕೊಂಚ ಸಿಹಿಯಾದ ಹಾಲನ್ನು ಕುಡಿದರೂ ನಡೆಯುತ್ತದೆ.
  • ನೀವು ಶನಿವಾರ(Saturday) ಯಾವುದಾದರೂ ಕೆಲಸಕ್ಕೆ ಹೊರಡುತ್ತಿದ್ದರೆ, ಹೊರಡುವ ಮೊದಲು ಬೆಣ್ಣೆಯನ್ನು ಅಥವಾ ತುಪ್ಪವನ್ನು ಸೇವಿಸಿ. 
  • ಭಾನುವಾರ(Sunday)ದಂದು ಕೆಲವು ವಿಶೇಷ ಕೆಲಸಗಳಿಗಾಗಿ ಹೊರಗೆ ಹೋಗುತ್ತಿದ್ದರೆ ನಿಮ್ಮೊಂದಿಗೆ ವೀಳ್ಯದೆಲೆಯನ್ನು ಇಟ್ಟುಕೊಳ್ಳಿ.


  • ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
click me!