ವಾಸ್ತು ಶಾಸ್ತ್ರದಲ್ಲಿ ಧನಹಾನಿ ತಪ್ಪಿಸಲು ಹಲವು ಮಾರ್ಗಗಳನ್ನು ಹೇಳಲಾಗಿದೆ. ಇವುಗಳನ್ನು ಮಾಡುವುದರಿಂದ ಆರ್ಥಿಕ ಬಿಕ್ಕಟ್ಟು ಕೊನೆಗೊಳ್ಳುತ್ತದೆ. ಅವುಗಳಲ್ಲೊಂದು ಲವಂಗದ ಈ ಪರಿಹಾರ ಮಾರ್ಗ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯನ್ನು ನಿರ್ಮಿಸದಿದ್ದರೆ ಆ ಮನೆಯು ಎಂದಿಗೂ ಶುಭವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಇದರೊಂದಿಗೆ ಮನೆಯ ಸುಖ-ಶಾಂತಿಯೂ ಭಗ್ನಗೊಂಡು ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ವಾಸ್ತು ದೋಷಗಳನ್ನು ತೊಡೆದುಹಾಕಲು ಸಹ ವಾಸ್ತು ಶಾಸ್ತ್ರದಲ್ಲಿ ಹಲವಾರು ಮಾರ್ಗಗಳನ್ನು ಸಹ ಹೇಳಲಾಗಿದೆ. ಈ ಕ್ರಮಗಳನ್ನು ಮಾಡುವುದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ ಮತ್ತು ವಾಸ್ತುದೋಷ(vastudosh)ದಿಂದ ಉಂಟಾಗುವ ತೊಂದರೆಗಳಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ಅಂತೆಯೇ ವಾಸ್ತು ದೋಷ ನಿವಾರಿಸಿ ಹಣದ ಹರಿವನ್ನು ಸರಿಯಾಗಿಡುವಲ್ಲಿ ಲವಂಗ- ಕರ್ಪೂರದ ಈ ಪರಿಹಾರಗಳು(Clove- Camphor remedies) ಪರಿಣಾಮಕಾರಿಯಾಗಿವೆ.
ಹೌದು, ಈ ಕ್ರಮಗಳನ್ನು ಮಾಡುವುದರಿಂದ ಹಣದ ನಷ್ಟವಾಗುವುದಿಲ್ಲ ಎಂದು ನಂಬಲಾಗುತ್ತದೆ. ಇದರೊಂದಿಗೆ ಆರ್ಥಿಕ ಸಮೃದ್ಧಿಯೂ ಉಳಿಯುತ್ತದೆ. ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಲವಂಗ-ಕರ್ಪೂರ ಪರಿಹಾರದ ಪ್ರಯೋಜನಗಳೇನು? ಇದನ್ನು ಬಳಸುವುದು ಹೇಗೆ ಎಂಬುದನ್ನು ಇಂದು ತಿಳಿಸಿಕೊಡುತ್ತೇವೆ.
undefined
ಆರ್ಥಿಕ ಸಮಸ್ಯೆಗಳನ್ನು ತೊಡೆದುಹಾಕಲು ಮಾರ್ಗಗಳು
ವಾಸ್ತು ಶಾಸ್ತ್ರ ಮತ್ತು ನಂಬಿಕೆಯ ಪ್ರಕಾರ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇಲ್ಲದಿದ್ದರೆ ಮತ್ತು ಆರ್ಥಿಕ ಬಿಕ್ಕಟ್ಟು ಇದ್ದರೆ ಕರ್ಪೂರ ಮತ್ತು ಕೆಲವು ಲವಂಗದ ತುಂಡುಗಳನ್ನು ಮನೆಯ ಅಡುಗೆ ಮನೆಯಲ್ಲಿ ಒಂದು ಬಟ್ಟಲಿನಲ್ಲಿ ಹಾಕಿ ಬೆಳಿಗ್ಗೆ ಮತ್ತು ಸಂಜೆ ಸುಡಬೇಕು. ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆ(Money problems) ದೂರವಾಗುತ್ತದೆ.
Vastu Tips: ಸಮೃದ್ಧಿಗಾಗಿ ಮನೆಯ ಈ ದಿಕ್ಕನ್ನು ಸದಾ ಖಾಲಿಯಿಡಿ
ಸಿಕ್ಕಿಬಿದ್ದ ಹಣವೂ ಬರಲು ಹೀಗೆ ಮಾಡಿ
ವ್ಯಕ್ತಿಯ ಹಣ ಬಹಳ ದಿನಗಳಿಂದ ಸಿಕ್ಕಿ ಹಾಕಿಕೊಂಡಿದ್ದು ಸಿಗದೇ ಇದ್ದಲ್ಲಿ ಅದಕ್ಕೆ ಕ್ರಮಗಳನ್ನೂ ನೀಡಲಾಗಿದೆ. ಕೆಂಪು ಗುಲಾಬಿಯಲ್ಲಿ ಕೆಲವು ಕರ್ಪೂರದ ತುಂಡುಗಳು ಮತ್ತು ಕೆಲವು ಲವಂಗಗಳನ್ನು ಹಾಕಿ ದುರ್ಗೆಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಸಿಕ್ಕಿಬಿದ್ದ ಹಣ ವಾಪಸ್ ಬರುತ್ತದೆ ಎಂಬ ನಂಬಿಕೆ ಇದೆ.
ಕರ್ಪೂರದಿಂದ ಲಕ್ಷ್ಮಿ ದೇವಿಯ ಆರತಿಯನ್ನು ಮಾಡಿ
ನಂಬಿಕೆಯ ಪ್ರಕಾರ, ಮಾ ಲಕ್ಷ್ಮಿಯ(Goddess Lakshmi) ಆರತಿಯನ್ನು ನಿಯಮಿತವಾಗಿ ಸಂಜೆ ಕರ್ಪೂರದೊಂದಿಗೆ ಮಾಡಬೇಕು. ಹೀಗೆ ಮಾಡುವುದರಿಂದ ಮನೆಯ ವಾಸ್ತು ದೋಷ ನಿವಾರಣೆಯಾಗುತ್ತದೆ. ಇದರೊಂದಿಗೆ ಲಕ್ಷ್ಮಿ ದೇವಿಯ ಆಶೀರ್ವಾದವೂ ದೊರೆಯುತ್ತದೆ.
ಅದೇ ಸಮಯದಲ್ಲಿ, ಒಂದು ಬಟ್ಟಲಿನಲ್ಲಿ 5 ಲವಂಗ, ಕೆಲವು ಕರ್ಪೂರ ಮತ್ತು ಏಲಕ್ಕಿಯನ್ನು ಸುಟ್ಟುಹಾಕಿ. ಅದರ ನಂತರ ಅದರ ಹೊಗೆಯನ್ನು ಮನೆಯ ಎಲ್ಲಾ ಕೋಣೆಗಳಿಗೆ ಮತ್ತು ಪೂಜಾ ಸ್ಥಳಕ್ಕೆ ಕೊಂಡೊಯ್ಯಿರಿ. ಇದರಿಂದ ಹೊರಬರುವ ಹೊಗೆಯು ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ ಮತ್ತು ಧನಾತ್ಮಕ ಶಕ್ತಿ(Positive energy)ಯನ್ನು ತರುತ್ತದೆ. ಇದು ನಮ್ಮ ಜೀವನದ ಮೇಲೆ ಅನುಕೂಲಕರ ಪರಿಣಾಮ ಬೀರುತ್ತದೆ.
Astro Tips: ಈ 5 ವಸ್ತು ಹಂಚಿಕೊಂಡ್ರೆ ಲಾಭದ ಬದಲು ನಷ್ಟವೇ ಹೆಚ್ಚು!
ಸಂತೋಷಕ್ಕಾಗಿ
ರಾತ್ರಿ ಮಲಗುವ ಮುನ್ನ, ಹಸುವಿನ ತುಪ್ಪ(Ghee)ದಲ್ಲಿ ಕರ್ಪೂರವನ್ನು ಮುಳುಗಿಸಿ ಹಿತ್ತಾಳೆಯ ಪಾತ್ರೆಯಲ್ಲಿ ಸುಟ್ಟರೆ, ಅದು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡುತ್ತದೆ.
ಶತ್ರುಗಳಿಂದ ಪಾರಾಗಲು
ನಿಮಗೆ ಶತ್ರುಗಳಿಂದ ತೊಂದರೆಯಾಗಿದ್ದರೆ, ಏಳು ಬಾರಿ ಭಜರಂಗಬಾಣ ಪಠಿಸಿ ಹನುಮಂತನಿಗೆ ಲಡ್ಡುಗಳನ್ನು ಅರ್ಪಿಸಿ. ನಂತರ ಕರ್ಪೂರವನ್ನು ಐದು ಲವಂಗಗಳೊಂದಿಗೆ ಸುಟ್ಟು ಹಾಕಿ. ಇದರ ಭಸ್ಮದ ತಿಲಕವನ್ನು ಹಚ್ಚಿದ ನಂತರವೇ ಮನೆಯಿಂದ ಹೊರಡಬೇಕು. ಹೀಗೆ ಮಾಡುವುದರಿಂದ ಶತ್ರುಗಳನ್ನು ಸೋಲಿಸಬಹುದು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.