ಮನೆಯ ಎಲ್ಲಾ ದಿಕ್ಕುಗಳ ಮಹತ್ವವನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದರೊಂದಿಗೆ ಯಾವ ದಿಕ್ಕಿನಲ್ಲಿ ಏನನ್ನು ಇಡಬೇಕು ಎಂಬುದನ್ನೂ ತಿಳಿಸಲಾಗಿದೆ.
ನಾವು ಇಷ್ಟಪಡುವ ಕೆಲಸಗಳಲ್ಲಿ ನಮ್ಮ ಗರಿಷ್ಠ ಸಮಯವನ್ನು ಕಳೆಯಲು ನಾವು ಆದ್ಯತೆ ನೀಡುವ ಸ್ಥಳ ನಮ್ಮ ಮನೆಯಾಗಿದೆ. ನಮ್ಮ ಮನೆಯಲ್ಲಿ ಸಕಾರಾತ್ಮಕತೆಯ ಜೊತೆಗೆ ಶಾಂತಿ ಮತ್ತು ಸಮೃದ್ಧಿ ಇರಲೆಂದು ನಾವು ಆಶಿಸುತ್ತೇವೆ. ಇದಕ್ಕಾಗಿ ಮನೆಗೆ ವಾಸ್ತು ನಿರ್ದೇಶನಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದು ಒಟ್ಟಾರೆ ಧನಾತ್ಮಕ ಕಂಪನಗಳನ್ನು ಮನೆಯೊಳಗೆ ಸೇರಿಸಲು ಸಹಾಯ ಮಾಡುತ್ತದೆ. ಮನೆಗಾಗಿ ವಾಸ್ತು ಯಾವಾಗಲೂ ಮನೆಗೆ ಉತ್ತಮ ಶಕ್ತಿಯನ್ನು ತರುವತ್ತ ಗಮನ ಹರಿಸುತ್ತದೆ.ಯಾವ ದಿಕ್ಕಿನಲ್ಲಿ ಏನಿಡಬೇಕು, ಮನೆಯ ಯಾವ ದಿಕ್ಕು ಖಾಲಿ ಇದ್ದರೆ ಒಳ್ಳೆಯದು, ಯಾವ ದಿಕ್ಕಿನಲ್ಲಿ ಭಾರದ ವಸ್ತುಗಳನ್ನಿರಿಸಬೇಕು ಎಂಬುದನ್ನು ತಿಳಿಸುತ್ತೇವೆ.
ಮನೆಯ ಪೂರ್ವ ದಿಕ್ಕು ಇರಲಿ ಖಾಲಿ..
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪೂರ್ವ ದಿಕ್ಕು ಯಾವಾಗಲೂ ಖಾಲಿಯಾಗಿರಬೇಕು. ಈ ದಿಕ್ಕಿನಲ್ಲಿ ದೀಪವನ್ನು ಹಚ್ಚುವುದು ಶುಭ. ಪೂರ್ವ ದಿಕ್ಕನ್ನು ಗ್ರಹಗಳ ರಾಜ, ಸೂರ್ಯ ದೇವ(Sun God) ಮತ್ತು ಇಂದ್ರ ದೇವ ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಅದೇ ಸಮಯದಲ್ಲಿ, ಈ ದಿಕ್ಕಿನಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಗಣಪತಿ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುವುದು ಆರ್ಥಿಕ ಲಾಭವನ್ನು ನೀಡುತ್ತದೆ.
undefined
Samudrik Shastra: ಮಹಿಳೆಯ ಎಡಗಣ್ಣು ಅದುರಿದ್ರೆ ದುಡ್ಡು ಬರೋ ಮುನ್ಸೂಚನೆ!
ಮನೆಯ ದಕ್ಷಿಣ ದಿಕ್ಕಿನಲ್ಲಿ ಭಾರವಾದ ವಸ್ತುಗಳಿರಲಿ
ಭಾರವಾದ ವಸ್ತುಗಳನ್ನು ಯಾವಾಗಲೂ ಮನೆಯ ದಕ್ಷಿಣ ದಿಕ್ಕಿನಲ್ಲಿ ಇಡಬೇಕು. ವಾಸ್ತು ಶಾಸ್ತ್ರದ ಪ್ರಕಾರ ಈ ದಿಕ್ಕು ಮಂಗಳ ಮತ್ತು ಯಮನ ದಿಕ್ಕು. ಅದೇ ಸಮಯದಲ್ಲಿ, ಸ್ನಾನಗೃಹವನ್ನು ಈ ದಿಕ್ಕಿನಲ್ಲಿ ನಿರ್ಮಿಸಬಾರದು. ಹಾಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ.
ಪಶ್ಚಿಮದಲ್ಲಿ ಅಡುಗೆ ಮನೆ ಇರುವುದು ಶುಭ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪಶ್ಚಿಮ ದಿಕ್ಕಿನಲ್ಲಿ ಅಡುಗೆ ಮನೆಯನ್ನು ನಿರ್ಮಿಸುವುದು ಅಥವಾ ಹೊಂದುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ವರುಣ ದೇವರು ಈ ದಿಕ್ಕಿನಲ್ಲಿ ನೆಲೆಸಿದ್ದಾನೆ ಎಂದು ನಂಬಲಾಗಿದೆ. ಈ ದಿಕ್ಕಿನಲ್ಲಿ ಅಡುಗೆ ಮನೆ ಇರುವುದರಿಂದ ಮನೆಯಲ್ಲಿ ಹಣದ ಕೊರತೆಯಿರುವುದಿಲ್ಲ ಮತ್ತು ಮನೆಯ ವಾತಾವರಣವು ಆಹ್ಲಾದಕರವಾಗಿರುತ್ತದೆ ಎಂದು ನಂಬಲಾಗಿದೆ.
ಮನೆಯ ಈ ದಿಕ್ಕಿನಲ್ಲಿ ಗಿಡಗಳನ್ನು ನೆಡಿ
ಮನೆಯಲ್ಲಿ ಗಿಡಗಳನ್ನು ಯಾವ ದಿಕ್ಕಿನಲ್ಲಿ ನೆಡಬೇಕು ಎಂಬುದನ್ನು ವಾಸ್ತು ಶಾಸ್ತ್ರದಲ್ಲಿಯೂ ಹೇಳಲಾಗಿದೆ. ಮನೆಯ ಪೂರ್ವ ಮತ್ತು ಈಶಾನ್ಯ ದಿಕ್ಕುಗಳನ್ನು ಯಾವಾಗಲೂ ಮರಗಳನ್ನು ನೆಡಲು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಗಿಡಗಳನ್ನು ನೆಡುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಮತ್ತು ಮನೆಗೆ ಧನಾತ್ಮಕ ಶಕ್ತಿ(positive energy) ಬರುತ್ತದೆ ಎಂದು ನಂಬಲಾಗಿದೆ.
Wednesday Remedies: ಬುಧದೋಷವಿದ್ದರೆ, ಸಮಸ್ಯೆಗಳು ಹೆಚ್ಚಿದ್ದರೆ ಬುಧವಾರ ಮಾಡಿ ಈ ಕೆಲಸ
ಪೀಠೋಪಕರಣಗಳನ್ನು ಇಲ್ಲಿಡಿ
ಪೀಠೋಪಕರಣಗಳನ್ನು ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಡಬೇಕು. ಶೋಕೇಸ್ ಅಥವಾ ಭಾರವಾದ ವಸ್ತುಗಳು ಇತ್ಯಾದಿ ಪೀಠೋಪಕರಣಗಳು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿರಬೇಕು. ಇದು ಆಯತಾಕಾರದ ಅಥವಾ ಚೌಕಾಕಾರವಾಗಿರಬೇಕು, ಅಂಡಾಕಾರದ, ವೃತ್ತಾಕಾರದ ಅಥವಾ ಬೆಸ ಆಕಾರದಲ್ಲಿ ಇರಬಾರದು.
ಊಟದ ಕೋಣೆಯ ದಿಕ್ಕು
ಊಟದ ಕೋಣೆ ಪಶ್ಚಿಮ ದಿಕ್ಕಿನಲ್ಲಿರಬೇಕು, ಆದರೆ ಅಡುಗೆಮನೆಯು ಆಗ್ನೇಯ ದಿಕ್ಕಿನಲ್ಲಿರಬೇಕು. ಊಟದ ಕೋಣೆ ದಕ್ಷಿಣ ಭಾಗದಲ್ಲಿ ಯಾವುದೇ ಕಾರಣಕ್ಕೂ ರಬಾರದು. ನೀರಿನ ವ್ಯವಸ್ಥೆಯು ಮನೆಯ ಈಶಾನ್ಯ ದಿಕ್ಕಿನಲ್ಲಿರಬೇಕು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.