ಧನಾತ್ಮಕ ಎನರ್ಜಿಗೆ ಮನೆ ತುಂಬಿರಲಿ ಗಾಳಿ, ಬೆಳಕು...

Published : Mar 03, 2019, 04:16 PM IST
ಧನಾತ್ಮಕ ಎನರ್ಜಿಗೆ ಮನೆ ತುಂಬಿರಲಿ ಗಾಳಿ, ಬೆಳಕು...

ಸಾರಾಂಶ

ವಾಸ್ತು ಶಾಸ್ತ್ರದಲ್ಲಿ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ಕೆಲವೊಂದು ವಿಷಯಗಳು ಮನೆಯ ಹಾಗೂ ಮನೆಯವರ ಪಾಸಿಟಿವ್ ಎನರ್ಜಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದೇ ಕಾರಣಕ್ಕೆ ಮನೆಗೆ ಗಾಳಿ, ಬೆಳಕು ಹೆಚ್ಚಿರುವಂತೆ ನೋಡಿಕೊಳ್ಳಬೇಕು.

ವಾಸ್ತು ಶಾಸ್ತ್ರದ ಅನುಸಾರ ಮನೆಯಲ್ಲಿ ಕಿಟಕಿಗಳು ಇರುವುದು ತುಂಬಾ ಮುಖ್ಯ. ಕಿಟಕಿಯಿಂದಲೇ ನೆಗೆಟಿವ್ ಎನರ್ಜಿ ಹೊರ ಬರುತ್ತದೆ. ಜೊತೆಗೆ ಪಾಸಿಟಿವ್ ಎನರ್ಜಿ ಮನೆಯೊಳಗೇ ಪ್ರವೇಶಿಸುವಂತೆ ಮಾಡುತ್ತದೆ. ಕಿಟಕಿಗಳು ಮನೆಯ ಅಂದವನ್ನು ಹೆಚ್ಚಿಸುವುದರೊಂದಿಗೆ ಗಾಳಿ ಮತ್ತು ಸೂರ್ಯನ ಬೆಳಕೂ ಕಿಟಕಿಯ ಮೂಲಕವೇ ಮನೆಯೊಳಗೇ ಪ್ರವೇಶಿಸುತ್ತವೆ. ಮನೆಯಲ್ಲಿ ಕಿಟಕಿಗಳನ್ನು ಜೋಡಿಸುವಾಗ ಕೆಲವು ವಾಸ್ತು ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. 

  • ಕಿಟಕಿಯನ್ನು ತೆರೆಯುವಾಗ ಮತ್ತು ಮುಚ್ಚುವಾಗ ಶಬ್ಧವಾಗಬಾರದು. ಇದು ಸುಖ ಶಾಂತಿಯನ್ನು ಹಾಳು ಮಾಡುತ್ತದೆ. 
  • ಮನೆಯಲ್ಲಿ ಕಿಟಕಿಗಳ ಸಂಖ್ಯೆ  ಸಮ ಸಂಖ್ಯೆಯಲ್ಲಿಇರಬೇಕು. ಅಂದರೆ 2, 4, 6...ಹೀಗಿರಬೇಕು. 
  • ಕಿಟಕಿ ಗಾತ್ರ ಬಾಗಿಲಿನ ಅನುಪಾತದಲ್ಲಿಯೇ ಇರಬೇಕು. ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಇರಬಾರದು. 
  • ಮನೆಯ ಒಂದು ಕೊನೆಯಲ್ಲಿ ಒಂದಕ್ಕಿಂತ ಹೆಚ್ಚು ಕಿಟಕಿ ಇಡಬಾರದು. 
  • ಸಾಧ್ಯವಾದರೆ ಮನೆಯ ಪೂರ್ವ ದಿಕ್ಕಿನಲ್ಲಿ ಕಿಟಕಿಯನ್ನಿಡಲು ಯತ್ನಿಸಿ. ಇದರಿಂದ ಸೂರ್ಯನ ಕಿರಣಗಳು ನೇರವಾಗಿ ಮನೆಯೊಳಗೆ ಬರಲು ಸಾಧ್ಯವಾಗುತ್ತದೆ. 
  • ಪೂರ್ವದಿಕ್ಕಿನಲ್ಲಿ ಕಿಟಕಿಯನ್ನು ನಿರ್ಮಿಸಲು ಸಾಧ್ಯವಾಗದಿದ್ದರೆ ಬೆಳಕು ಹರಿಯುವ ಕಿಂಡಿಗಳನ್ನು ನಿರ್ಮಿಸಬಹುದು. 
  • ಸಮಯಕ್ಕೆ ಸರಿಯಾಗಿ ಕಿಟಕಿ ರಿಪೇರಿ ಹಾಗೂ ಬಣ್ಣ ಬದಲಾಯಿಸುತ್ತಿರಬೇಕು. 

ಪಾಸಿಟಿವ್ ಎನರ್ಜಿಗೆ ಮನೆ ಮುಂದಿರಲಿ ಈ ವಸ್ತು!

PREV
click me!

Recommended Stories

Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..
ಡೋರ್ ಮ್ಯಾಟ್ ಮೇಲಿರೋ Welcome ಬದಲಿಸ್ಬಹುದು ನಿಮ್ಮ ಭವಿಷ್ಯ