ಪಾಸಿಟಿವ್ ಎನರ್ಜಿಗೆ ಮನೆ ಮುಂದಿರಲಿ ಈ ವಸ್ತು!

Published : Mar 01, 2019, 04:04 PM IST
ಪಾಸಿಟಿವ್ ಎನರ್ಜಿಗೆ ಮನೆ ಮುಂದಿರಲಿ ಈ ವಸ್ತು!

ಸಾರಾಂಶ

ಮನುಷ್ಯ ಎಂದ ಮೇಲೆ ಸಣ್ಣ ಪುಟ್ಟ ಸಮಸ್ಯೆಗಳನ್ನು ಫೇಸ್ ಮಾಡುವುದು ಅನಿವಾರ್ಯ. ಆದರೆ, ಪದೇ ಪದೇ ರಿಪೀಟ್ ಆಗೋ ಸಮಸ್ಯೆಗಳಿಗೆ ಕೆಲವೊಮ್ಮೆ ವಾಸ್ತು ದೋಷವೂ ಕಾರಣವಾಗಿರಬಲ್ಲದು. ಅದನ್ನು ಹೋಗಿಸಲು ಇಲ್ಲಿವೆ ಸಿಂಪಲ್ ಟಿಪ್ಸ್....

ವಾಸ್ತುವಿನಲ್ಲಿ ನಕಾರಾತ್ಮಕತೆ ಕಡಿಮೆಯಾಗಲು ಕೆಲವು ವಿಧಾನಗಳನ್ನು ಅಳವಡಿಸಲಾಗುತ್ತದೆ. ಮನೆಯಲ್ಲಿ ವಾಸ್ತುವಿನ ಬಗ್ಗೆ ಗಮನ ಹರಿಸಿದರೆ ಹಲವಾರು ಸಮಸ್ಯೆಗಳನ್ನು ದೂರ ಮಾಡಬಹುದು. ಮನೆಯಲ್ಲಿ ವಾಸ್ತು ದೋಷ ಕಂಡು ಬಂದರೆ ಮನೆಯ ಮುಂಬಾಗಿಲಿನಲ್ಲಿ ಈ ವಸ್ತುಗಳನ್ನಿಡಿ ಅಥವಾ ಇದ್ದರೆ ತೆಗೆದಿಡಿ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಆವರಿಸುತ್ತದೆ. 

  • ಮನೆ ಮುಖ್ಯ ದ್ವಾರದಲ್ಲಿ ಡಸ್ಟ್ ಬಿನ್ ಇಡಬೇಡಿ. ಮನೆಯ ಮುಂಭಾಗ ಸದಾ ಸುಂದರವಾಗಿರುವಂತೆ ನೋಡಿಕೊಳ್ಳಿ. ಇಲ್ಲವಾದರೆ ಮನೆಯಲ್ಲಿ ನಕಾರಾತ್ಮಕ ಅಂಶ ಹೆಚ್ಚುತ್ತದೆ. 
  • ಸಕಾರಾತ್ಮಕತೆ ಹೆಚ್ಚಿಸಲು ಮನೆಯ ಬಾಗಿಲಿನಲ್ಲಿ ಸ್ವಸ್ತಿಕ್, ಓಂ, ಶ್ರೀಗಣೇಶ್ ಮೊದಲಾದ ಶುಭ ಚಿಹ್ನೆ ಇರಲಿ. ಈ ಚಿಹ್ನೆ ಪ್ರಭಾವದಿಂದ ಮನೆಯ ವಾತಾವರಣ ಪವಿತ್ರವಾಗಿರುತ್ತದೆ. 
  • ಮನೆಯ ಮುಖ್ಯ ದ್ವಾರದಲ್ಲಿ ಗಾಳಿ ಗಂಟೆ ಇರಲಿ. ಇದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ. 
  • ಮುಖ್ಯದ್ವಾರದ ಅಕ್ಕ ಪಕ್ಕ ತುಳಸಿ ಗಿಡಗಳನ್ನು ನೆಡುವುದು ಶುಭ. ಇದರಿಂದ ಮನೆಗೆ ಪ್ರವೇಶಿಸುವ ನೆಗೆಟಿವ್ ಎನರ್ಜಿ ಪಾಸಿಟಿವ್ ಆಗಿ ಪರಿವರ್ತನೆಯಾಗುತ್ತದೆ. 
  • ಮನೆ ಎದುರು ಅಶೋಕ ಎಲೆ ಇಟ್ಟರೆ ಅಥವಾ ಗಿಡವನ್ನೇ ಬೆಳೆಸಿದರೆ ಒಳಿತು. ಇದರಿಂದ ಮನೆಯ ಒಳಗೆ ನೆಗೆಟಿವ್ ಎನೆರ್ಜಿ ಬರೋದಿಲ್ಲ. 
  • ಮನೆ ಮುಖ್ಯದ್ವಾರದ ಬಳಿ ಕೆಂಪು ದಾರದಿಂದ ಕಟ್ಟಿದ ಪವಿತ್ರ ಕಾಯಿನ್ ಇಟ್ಟರೂ ಶುಭ. 

ಸುಖ ಶಾಂತಿಗೆ ಮನಿಪ್ಲ್ಯಾಂಟ್‌ ಹೇಗೆ ನೆಡಬೇಕು?

PREV
click me!

Recommended Stories

Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..
ಡೋರ್ ಮ್ಯಾಟ್ ಮೇಲಿರೋ Welcome ಬದಲಿಸ್ಬಹುದು ನಿಮ್ಮ ಭವಿಷ್ಯ