ಕಾರವಾರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಗ್ರೀನ್‌ ಸಿಗ್ನಲ್

By Sathish Kumar KH  |  First Published Nov 23, 2022, 10:29 PM IST

ಉತ್ತರಕನ್ನಡದಲ್ಲಿ ಕೈಗಾರಿಕೆಗಳಿಲ್ಲದ ಕಾರಣ ಉದ್ಯೋಗ ಸಿಗದೇ ಯುವಕರು ಕೆಲಸಕ್ಕಾಗಿ ಗೋವಾ ಹಾಗೂ ಬೆಂಗಳೂರಿನತ್ತ ಮುಖ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಸರ್ಕಾರ ಗಡಿ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಜ್ಜೆ ಇಟ್ಟಿದ್ದು, ಕೈಗಾರಿಕೆಗಳನ್ನು ಸ್ಥಾಪಿಸುವ ಪ್ರದೇಶಗಳಲ್ಲಿನ ರೈತರ ಜಮೀನುಗಳನ್ನು ಸ್ವಾಧೀನ ಮಾಡಿಕೊಂಡು ಸೂಕ್ತ ಪರಿಹಾರ ಕೊಡಲು ನಿರ್ಧರಿಸಲಾಗಿದೆ.


ವರದಿ- ಭರತ್‌ರಾಜ್ ಕಲ್ಲಡ್ಕ ಏಷ್ಯಾನೆಟ್‌ ಸುವರ್ಣ ನ್ಯೂಸ್

ಉತ್ತರ ಕನ್ನಡ (ನ.23) : ಗಡಿ ಜಿಲ್ಲೆ ಉತ್ತರಕನ್ನಡದಲ್ಲಿ ಕೈಗಾರಿಕೆಗಳಿಲ್ಲದ ಕಾರಣ ಉದ್ಯೋಗ ಸಿಗದೇ ಯುವಕರು ಕೆಲಸಕ್ಕಾಗಿ ಗೋವಾ ಹಾಗೂ ಬೆಂಗಳೂರಿನತ್ತ ಮುಖ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರವಾರದಲ್ಲಿ ಕೈಗಾರಿಕೆಗಳ ಸ್ಥಾಪನೆ ಮಾಡುವಂತೆ ಸರ್ಕಾರದ ಮೇಲೆ ಜನರು ಒತ್ತಡ ಹಾಕುತ್ತಾ ಬಂದಿದ್ದರು. ಇದೀಗ ಸರ್ಕಾರ ಗಡಿ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಜ್ಜೆ ಇಟ್ಟಿದ್ದು, ಕೈಗಾರಿಕೆಗಳನ್ನು ಸ್ಥಾಪಿಸುವ ಪ್ರದೇಶಗಳಲ್ಲಿನ ರೈತರ ಜಮೀನುಗಳನ್ನು ಸ್ವಾಧೀನ ಮಾಡಿಕೊಂಡು ಸೂಕ್ತ ಪರಿಹಾರ ಕೊಡಲು ನಿರ್ಧರಿಸಲಾಗಿದೆ.

Latest Videos

undefined

ರಾಜ್ಯದ ಗಡಿ ಜಿಲ್ಲೆಯಾದ ಉತ್ತರಕನ್ನಡದಲ್ಲಿ (Uttara Kannada) ಹೆಚ್ಚು ಕೈಗಾರಿಕೆಗಳೇ ಇಲ್ಲದ ಕಾರಣ ನಿರುದ್ಯೋಗ  (Unemployment) ಸಮಸ್ಯೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಯುವಕರಂತೂ ಕೆಲಸಕ್ಕಾಗಿ ಪ್ರತಿನಿತ್ಯ ಗೋವಾಕ್ಕೆ (Goa) ಪಯಣ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು (Industry) ಪ್ರಾರಂಭಿಸಿ ಅನ್ನೋ ಕೂಗು ಹಿಂದಿನಿಂದಲೂ ಕೇಳಿ ಬರುತ್ತಿತ್ತು. ಈ ಕಾರಣದಿಂದ ಕೈಗಾರಿಕೆ ಅಭಿವೃದ್ಧಿ ಮಂಡಳಿಯಂತೂ ಕಾರವಾರ (Karwar)ತಾಲೂಕಿನ ಮುಡಗೇರಿ ಗ್ರಾಮದಲ್ಲಿ (Mudigere village) ಕೈಗಾರಿಕೆಗಳನ್ನು ಸ್ಥಾಪಿಸಲು 1997ರಲ್ಲಿಯೇ ರೈತರ ಜಮೀನನ್ನು ವಶಕ್ಕೆ ಪಡೆದಿತ್ತು. ಆದರೆ, ಸೂಕ್ತ ಪರಿಹಾರ ಕೊಡದ ಕಾರಣ ಇನ್ನೂ ಕೈಗಾರಿಕೆಗಳನ್ನು ಪ್ರಾರಂಭ ಮಾಡಲು ಆಗಿರಲಿಲ್ಲ. 

ಸಂಪ್ರದಾಯ ಮೀರಿ ತಂದೆ ಅಂತ್ಯಕ್ರಿಯೆ ನೆರವೇರಿಸಿದ ಮಗಳು

50 ಲಕ್ಷ ರೂ. ಪರಿಹಾರ ಪ್ರಸ್ತಾವನೆ: ಇದೀಗ ಜಿಲ್ಲಾಡಳಿತದೊಂದಿಗೆ ಅಂತಿಮ ಹಂತದ ಮಾತುಕತೆಯನ್ನು ನಡೆಸಿದ ರೈತರಿಗೆ ಎಕರೆಗೆ 50 ಲಕ್ಷ ರೂ. ಪರಿಹಾರ (compensation) ಕೊಡಲು ಸಭೆಯಲ್ಲಿ ನಿರ್ಧರಿಸಿ ಸರ್ಕಾರಕ್ಕೆ ಪ್ರಸ್ತಾವನೆ (Proposal)ಯನ್ನು ಕಳುಹಿಸಲಾಗಿದೆ. ಒಂದೊಮ್ಮೆ ಸರ್ಕಾರ ಒಪ್ಪಿಗೆ (Government Approval) ಸೂಚಿಸಿದರೆ ಸುಮಾರು 73 ಎಕರೆ ಪ್ರದೇಶದಲ್ಲಿ ನೌಕಾನೆಲೆಗೆ (Naval base) ಸಂಬಂಧಿಸಿದ ಕೈಗಾರಿಕೆಗಳು ಕಾರವಾರದಲ್ಲಿ ಪ್ರಾರಂಭವಾಗಲಿದೆ. ಸದ್ಯ ಒಂದೆರಡು ತಿಂಗಳಿನಲ್ಲಿಯೇ ಪರಿಹಾರ ಹಣದ ಬಗ್ಗೆ ನಿರ್ಧಾರ ತೆಗೆದುಕೊಂಡು ಇಲಾಖೆಯ ಅಧಿಕಾರಿಗಳೂ ಸ್ಥಳಕ್ಕೆ ಬಂದು ವಶಪಡಿಸಿಕೊಂಡ ಭೂಮಿಗೆ ಪರಿಹಾರ ಕೊಡಲಿದ್ದಾರೆ ಎಂದು ಕೇಳಿಬಂದಿದೆ.

ಕುಮುಟಾದಲ್ಲಿ ನ.24ರಂದು ಕಾಂಗ್ರೆಸ್ ಸಮಾವೇಶ

20 ವರ್ಷದ ಸಮಸ್ಯೆಗೆ ಪರಿಹಾರ: ಕಳೆದ 20 ವರ್ಷಗಳ ಹಿಂದೆ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ (KIADB) ರೈತರಿಂದ ಜಮೀನು ಪಡೆಯುವಾಗ ಗುಂಟೆಗೆ 8,833 ರೂ. ಹಣ ಕೊಡುವುದಾಗಿ ಹೇಳಲಾಗಿತ್ತು. ಆದರೆ, ಇದಕ್ಕೆ ರೈತರು ಒಪ್ಪಿಗೆ ನೀಡಿರಲಿಲ್ಲ. ಆದರೂ, ಜಮೀನನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದು, ಪಹಣಿ ಪತ್ರದಲ್ಲೂ ಕೈಗಾರಿಕಾ ಅಭಿವೃದ್ದಿ ಮಂಡಳಿಯ ಹೆಸರಿಗೆ ಜಮೀನುಗಳು (Lands) ಮಾರ್ಪಟ್ಟಿತ್ತು. ಪರಿಹಾರದ ಹಣದ ಬಗ್ಗೆ ಗೊಂದಲವಾದ ಹಿನ್ನಲೆ ಈ ಹಿಂದೆ  ಎರಡು ಬಾರಿ ಜಿಲ್ಲಾಡಳಿತ ರೈತರೊಂದಿಗೆ ಸಭೆ ನಡೆಸಿದ್ದರೂ ಯಾವುದೇ ಹೊಂದಾಣಿಕೆಯಾಗಿಲ್ಲ. ಇದೀಗ ಜಿಲ್ಲಾಡಳಿತದೊಂದಿಗೆ ಅಂತಿಮ ಹಂತದ ಮಾತುಕತೆಯನ್ನು ನಡೆಸಿದ ರೈತರಿಗೆ ಎಕರೆಗೆ 50 ಲಕ್ಷ ರೂ. ಪರಿಹಾರ ಕೊಡಲು ಸಮ್ಮತಿ (consent) ನೀಡಿದ್ದು,‌ ಇದಕ್ಕೆ ಸ್ಥಳೀಯರು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕಾರವಾರದಲ್ಲಿ ಕೈಗಾರಿಕೆ ನಿರ್ಮಾಣವಾಗುವ ಮೂಲಕ ಯುವಕರಿಗೆ ಉದ್ಯೋಗ ದೊರಕುವುದಕ್ಕೆ ಶ್ಲಾಘಿಸಿದ್ದಾರೆ.

ಸ್ಥಳೀಯವಾಗಿಯೇ ಉದ್ಯೋಗ ಲಭ್ಯ: ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಜನರ ಬಹುವರ್ಷದ ಬೇಡಿಕೆಯಾಗಿದ್ದ ಕೈಗಾರಿಕೆಗಳು (Industries) ಶೀಘ್ರದಲ್ಲಿ ಗಡಿ ಭಾಗವಾದ ಕಾರವಾರದಲ್ಲಿ ಪ್ರಾರಂಭವಾಗಲಿದ್ದು, ಇದು ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗವಕಾಶ (Jobs) ಲಭ್ಯವಾಗಲಿ. ಈ ಮೂಲಕ ಉದ್ಯೋಗವನ್ನರಿಸಿ ಗೋವಾ, ಧಾರವಾಡ, ಬೆಂಗಳೂರು ಸೇರಿ ವಿವಿಧೆಡೆ ಯುವಜನತರ ಹೋಗುವುದು ತಪ್ಪಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. 

click me!