ಕುಮುಟಾದಲ್ಲಿ ನ.24ರಂದು ಕಾಂಗ್ರೆಸ್ ಸಮಾವೇಶ

Published : Nov 22, 2022, 08:50 PM IST
ಕುಮುಟಾದಲ್ಲಿ ನ.24ರಂದು ಕಾಂಗ್ರೆಸ್ ಸಮಾವೇಶ

ಸಾರಾಂಶ

ರಾಜ್ಯದಲ್ಲಿ 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣಾ ಅಖಾಡ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಯ ಚುನಾವಣ ಕಣ ರಂಗೇರಲು ಆರಂಭವಾಗಿದೆ. ನ. 24ರಂದು ಜಿಲ್ಲೆಯ ಕುಮುಟಾದ ಮಹಾತ್ಮ ಗಾಂಧಿ ಮೈದಾನದಲ್ಲಿ ಕಾಂಗ್ರೆಸ್ ಜನಜಾಗೃತಿ ಸಮಾವೇಶ ನಡೆಯಲಿದ್ದು, 'ಕೈ' ಪಕ್ಷದ ಘಟಾನುಘಟಿ ನಾಯಕರು ಭಾಗವಹಿಸಲಿದ್ದಾರೆ.

ಉತ್ತರ ಕನ್ನಡ (ನ.22) ರಾಜ್ಯದಲ್ಲಿ 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣಾ ಅಖಾಡ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಯ ಚುನಾವಣ ಕಣ ರಂಗೇರಲು ಆರಂಭವಾಗಿದೆ. ನ. 24ರಂದು ಜಿಲ್ಲೆಯ ಕುಮುಟಾದ ಮಹಾತ್ಮ ಗಾಂಧಿ ಮೈದಾನದಲ್ಲಿ ಕಾಂಗ್ರೆಸ್ ಜನಜಾಗೃತಿ ಸಮಾವೇಶ ನಡೆಯಲಿದ್ದು, 'ಕೈ' ಪಕ್ಷದ ಘಟಾನುಘಟಿ ನಾಯಕರು ಭಾಗವಹಿಸಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂಗಳಾದ ಸಿದ್ಧರಾಮಯ್ಯ, ವೀರಪ್ಪ ಮೊಯ್ಲಿ, ಮುಖಂಡರಾದ ಬಿ.ಕೆ.ಹರಿಪ್ರಸಾದ್, ಐವನ್ ಡಿಸೋಜಾ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಕಳೆದ ಚುನಾವಣೆಯಲ್ಲಿ ಪರೇಶ ಮೇಸ್ತಾ ಸಾವಿನ ಪ್ರಕರಣದಿಂದಾಗಿ ಕರಾವಳಿ ಕ್ಷೇತ್ರ ಕಳೆದುಕೊಂಡಿದ್ದ ಕಾಂಗ್ರೆಸ್, ಈ ಬಾರಿ ಕರಾವಳಿಯಲ್ಲಿ ಹಿಡಿತ ಸಾಧಿಸಲು ತಯಾರಿ ನಡೆಸಿದೆ. ಪರೇಶ್ ಮೇಸ್ತಾ ಪ್ರಕರಣ‌ ಸಂಬಂಧಿಸಿ ಸಿಬಿಐ ರಿಪೋರ್ಟ್, ಭ್ರಷ್ಟಾಚಾರ, ಶೇ.40 ಕಮಿಷನ್, ಅಭಿವೃದ್ಧಿ ಕೊರತೆ ಮುಂತಾದ ಹಲವು ವಿಚಾರಗಳನ್ನು ಎತ್ತಿ ಹಿಡಿಯುವ ಮೂಲಕ ಜಿಲ್ಲೆಯ ಕರಾವಳಿ ಭಾಗದಲ್ಲಿ ಮತ್ತೆ ತನ್ನ ಬಾವುಟ ಹಾರಿಸುವ ಎಲ್ಲಾ‌ ಸಿದ್ಧತೆಗಳನ್ನು ನಡೆಸುತ್ತಿರುವ ಕಾಂಗ್ರೆಸ್, ಕುಮುಟಾ ಕ್ಷೇತ್ರವನ್ನು ತನ್ನ‌ ಮೊದಲ ಟಾರ್ಗೆಟ್ ಮಾಡಿಕೊಂಡಿದೆ. 

ಸಮಾವೇಶಕ್ಕೆ ಅಗತ್ಯ ಸಿದ್ಧತೆ: ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಶತಪ್ರಯತ್ನ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಕಾಂಗ್ರೆಸ್‌ನಿಂದ ಸಮಾವೇಶ ಮಾಡಲಾಗುತ್ತಿದೆ. ಈಗ ಕುಮುಟಾ ಪಟ್ಟಣದಲ್ಲಿಯೂ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಲಕ್ಷ ಜನರು ಸೇರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ವೇದಿಕೆ ಮತ್ತು ಜನರು ಕುಳಿತುಕೊಳ್ಳಲು ಆಸನ, ಪೆಂಡಾಲ್‌ ಸೇರಿ ವಿವಿಧ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಕುಮುಟಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿ.ಎಲ್. ನಾಯಕ್‌ ಸೇರಿದಂತೆ ವಿವಿಧ ನಾಯಕರು ವೇದಿಕೆ ಸಜ್ಜುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
 

PREV
Read more Articles on
click me!

Recommended Stories

ಕಾರವಾರದಲ್ಲಿ ಭಾರತೀಯ ನೌಕಾ ದಿನಾಚರಣೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ!
Photos: ಗೋಕರ್ಣದ ಬೀಚ್‌ನಲ್ಲಿ ಹಿಂದೂ ಪದ್ಧತಿಯಂತೆ ವಿದೇಶಿ ಜೋಡಿಯ ವಿವಾಹ!