ರಿಯಲ್ ಕಾಂತರಾಗೆ ಒಲಿದು ಬಂದ ರಾಜ್ಯೋತ್ಸವ ಪ್ರಶಸ್ತಿ; ದೈವನರ್ತಕ ಗುಡ್ಡಪಾಣಾರಗೆ ರಾಜ್ಯೋತ್ಸವದ ಗರಿ

By Vaishnavi Chandrashekar  |  First Published Oct 31, 2022, 4:01 PM IST

ಅಪರೂಪದ ದೈವ ನರ್ತಕ ಉಡುಪಿ ಜಿಲ್ಲೆಯ ಕಾಪುವಿನ ಗುಡ್ಡ ಪಾಣಾರ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮುಖ್ಯವಾಹಿನಿಯಲ್ಲಿ ಇರದ ಈ ಜನಪದ ಪ್ರತಿಭೆಗೆ ಸೂಕ್ತ ಮನ್ನಣೆ ದೊರೆತಂತಾಗಿದೆ.


ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಈ ಬಾರಿ ಅರ್ಹರನ್ನು ರಾಜ್ಯೋತ್ಸವ ಪ್ರಶಸ್ತಿ ಅರಸಿಕೊಂಡು ಬಂದಿದೆ ಎಂಬ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಡುವೆ ಉಡುಪಿ ಜಿಲ್ಲೆಯ ರಿಯಲ್ ಕಾಂತರಾ ಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ರಾಜ್ಯ ಸರಕಾರ ಗೌರವಿಸಿದೆ. 

Tap to resize

Latest Videos

undefined

ಅಪರೂಪದ ದೈವ ನರ್ತಕ ಉಡುಪಿ ಜಿಲ್ಲೆಯ ಕಾಪುವಿನ ಗುಡ್ಡ ಪಾಣಾರ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮುಖ್ಯವಾಹಿನಿಯಲ್ಲಿ ಇರದ ಈ ಜನಪದ ಪ್ರತಿಭೆಗೆ ಸೂಕ್ತ ಮನ್ನಣೆ ದೊರೆತಂತಾಗಿದೆ.

ಸದ್ಯ ದೇಶಾದ್ಯಂತ ಕಾಂತಾರ ಸಿನಿಮಾ ಸದ್ದು ಮಾಡುತ್ತಿದೆ. ಶತಮಾನಗಳಿಂದ ದೈವಗಳ ಸೇವೆ ಮಾಡುತ್ತಾ ಬಂದಿರುವ ಅತ್ಯಂತ ಹಿಂದುಳಿದ ದೈವ ನರ್ತಕರ ಜೀವನ ಹೊರ ಜಗತ್ತಿಗೆ ಬಹಿರಂಗವಾಗಿದೆ. ದೈವಗಳ ಆರಾಧನಾ ಸೇವೆಯನ್ನೇ ಬದುಕಾಗಿಸಿಕೊಂಡ ದೈವ ನರ್ತಕರು ಮುನ್ನೆಲೆಗೆ ಬರುವಂತಾಗಿದೆ. ಇದೀಗ ಅಪರೂಪದ ದೈವ ನರ್ತಕರಾದ ಗುಡ್ಡ ಪಾಣಾರ ಅವರ ಸೇವೆಯನ್ನು ರಾಜ್ಯ ಸರ್ಕಾರ ಗುರುತಿಸಿದೆ.

ಮೂರು ತಿಂಗ್ಳಿಂದ ಸಿಗ್ತಿಲ್ಲ ಸೀಮೆಎಣ್ಣೆ; ನಾಡ ದೋಣಿ ಮೀನುಗಾರರ ಸಂಕಷ್ಟ ಕೇಳೋರಿಲ್ಲ!

ಪಿಲಿಕೋಲದಲ್ಲಿ ದೈವ ನರ್ತಕ ರಾಗಿ ಸೇವೆ ಸಲ್ಲಿಸುತ್ತಿರುವ ಗುಡ್ಡ ಪಾಣರರಿಗೆ ಜಾನಪದ ವಿಭಾಗದಲ್ಲಿ ಈ ಮನ್ನಣೆ ದೊರಕಿದೆ. ಉಡುಪಿ ಜಿಲ್ಲೆಯ ಕಾಪು ಹಳೆ ಮಾರಿಗುಡಿ ಪರಿಸರದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಪಿಲಿಕೋಲ ತುಳುನಾಡಿನ ಭಕ್ತಿ, ಶೃದ್ದೆ, ನಂಬಿಕೆಗಳ ಆಗರವಾಗಿದೆ.

68 ವರ್ಷದ ಗುಡ್ಡ ಪಾಣಾರ ಉಡುಪಿ ಜಿಲ್ಲೆಯ ಕಾಪು ಸಮೀಪದ ಮೂಳೂರಿನವರು. ನಾಣು ಪಾಣಾರ ಮತ್ತು ರುಕ್ಕುಪಾಣಾರ್ತಿ ಎಂಬ ವರಪುತ್ರ. ತನ್ನ 25ನೇ ವಯಸ್ಸಿನಿಂದ ದೈವ ನರ್ತಕ ರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕಾಪುವಿನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ವಿಶಿಷ್ಟ ಪಿಲಿಕೋಲದಲ್ಲಿ ಪಿಲಿ ಪಾತ್ರಧಾರಿ ಆಗಿ ಜನರ ಗಮನ ಸೆಳೆದಿದ್ದಾರೆ. ಪಿಲಿಕೋಲವೆಂದರೆ ತುಳುನಾಡಿನ ಒಂದು ವಿಶಿಷ್ಟ ಆಚರಣೆ, ಮಾರಿಗುಡಿಯ ಆವರಣದಲ್ಲಿ ಸೇರಿರುವ ಜನರನ್ನು ಫಿಲಿ ಪಾತ್ರಧಾರಿಯಾಗಿ ಅಟ್ಟಾಡಿಸಿಕೊಂಡು ಹೋಗುತ್ತಾ ದೇವರ ಬಗೆಗಿನ ಶ್ರದ್ಧೆ ಹೆಚ್ಚಿಸುವ ರೀತಿಯಲ್ಲಿ , ಏಕಕಾಲದಲ್ಲಿ ಭಯ ಮತ್ತು ಭಕ್ತಿಯನ್ನು ಪ್ರೇರೇಪಿಸುವ ಆರಾಧನಾ ಪದ್ಧತಿಯಾಗಿದೆ. ಈ ಆಚರಣೆ ಅನೇಕ ಜನಪದ ನಂಬಿಕೆಗಳ ಆಗರವಾಗಿದೆ. ಗುಡ್ಡ ಪಾಣರ ಅವರಿಗೆ ಇಬ್ಬರು ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ. ಬಯಸದೆ ಅರಸಿಕೊಂಡು ಬಂದ ಪ್ರಶಸ್ತಿಯಿಂದ ಗುಡ್ಡಪಾಣರ ರೋಮಾಂಚನಗೊಂಡಿದ್ದಾರೆ.

Udupi; ಆಕಾಶದಲ್ಲಿ ಕಂಡ ಚಲಿಸುವ ಚುಕ್ಕಿಗಳು, ಏಲಿಯನ್ಸ್ ಎಂದು ಬೆಚ್ಚಿಬಿದ್ದ ಜನತೆ!

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ನಾನೊಬ್ಬ ಹಳ್ಳಿಯವ, ಬಡವ .ಆದರೆ ಈ ಬಾರಿ ರಾಜ್ಯ ಪ್ರಶಸ್ತಿ ನೀಡುತ್ತಿರುವುದು ಖುಷಿಯಾಗಿದೆ. ನಮ್ಮ ಗ್ರಾಮದವರೆಲ್ಲಾ ಸಹಕಾರ ನೀಡಿ ಈ ಪ್ರಶಸ್ತಿ ಬಂದಿದೆ. ಇದು ನನಗೆ ದೇವರು ಕೊಟ್ಟ ಪ್ರಶಸ್ತಿ. ಭಕ್ತರು ನನಗೆ ಈ ದಾರಿಯನ್ನು ತೋರಿಸಿದ್ದಾರೆ. ಈ ಆರಾಧನೆಯೇ ನನ್ನ ಧರ್ಮ. ನಾನು 38 ವರ್ಷಗಳಿಂದ ದೈವಾರಧಕನಾಗಿ ಸೇವೆ ಮಾಡುತ್ತಿದ್ದೇನೆ. ಬಹಳ ಭಕ್ತಿಯಿಂದ ನೇಮ ನಡೆಸಿಕೊಂಡು ಬಂದಿದ್ದೇನೆ. ಈ ಧರ್ಮ ಕಾರ್ಯವನ್ನು ಮಾಡುವ ಶಕ್ತಿಯನ್ನು ದೇವರು ನನಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಕಾಂತರಾ ಸಿನಿಮಾದಲ್ಲಿ ಅಭಿನಯಿಸಿದ್ದ ದೈವ ನರ್ತಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಕಾಂತರಾ ಸಿನಿಮಾದ ಒಂದು ಮನಮೋಹಕ ಸನ್ನಿವೇಶದಲ್ಲಿ ಕಾಣಿಸಿಕೊಂಡ ದೈವಾರಾಧಕ ನಾಗರಾಜ ಪಾಣ ಅವರನ್ನು ಉಡುಪಿ ಜಿಲ್ಲಾಡಳಿತ ಗುರುತಿಸಿದೆ. ಯಾವುದೇ ಅರ್ಜಿ ಹಾಕದೆ ನಾಗರಾಜ ಪಾಣ ಅವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿಯ ಗೌರವ ನೀಡಿದೆ. ನಾಗರಾಜ ಪಾಣ ಅವರ ಜನಪದ ಸೊಗಡಿನ ಅದ್ಭುತ ಧ್ವನಿಯನ್ನು ಕಾಂತಾರಾ ಚಿತ್ರದಲ್ಲಿ ಕೇಳಬಹುದು.

ದೈವ ನರ್ತಕರಿಗೆ ಮಾಸಾಸನ

ಕಾಂತರಾ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ದೈವ ನರ್ತಕರ ಜೀವನದ ಬಗ್ಗೆ ಮರುಗಿರುವ ರಾಜ್ಯ ಸರ್ಕಾರ, 58 ವರ್ಷ ಮೇಲ್ಪಟ್ಟ ದೈವ ನರ್ತಕ ರಿಗೆ ಇತ್ತೀಚಿಗಷ್ಟೇ ಮಸಾಶನ ಘೋಷಣೆ ಮಾಡಿತ್ತು. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ 3, ಮಾಡಿರುವ ವರದಿಗೆ ರಾಜ್ಯ ಸರ್ಕಾರ ಸ್ಪಂದಿಸಿತ್ತು. ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿ ದೈವ ನರ್ತಕ ರಿಗೆ ರಾಜ್ಯದ ಅತ್ಯುನ್ನತ ಪ್ರಶಸ್ತಿಯನ್ನು ನೀಡುವ ಮೂಲಕ ಹಿಂದುಳಿದ ಸಮುದಾಯದ ಗೌರವಕ್ಕೆ ಪಾತ್ರವಾಗಿದೆ.

click me!