ಉಡುಪಿ: ಅಪರೇಷನ್ ಪರಾಕ್ರಮ್‌ ಯೋಧನಿಗೆ ವಿನಾಯಿತಿ ಇದ್ದರೂ ಟೋಲ್ ಕಟ್ಟುವಂತೆ ಕಾಟ

Published : Jan 26, 2026, 11:35 AM IST
operation parakram war casualty soldier Shyamraj insulted by sastana toll plaza

ಸಾರಾಂಶ

ದೇಶ ಸೇವೆ ವೇಳೆ ಅಂಗವೈಖಲ್ಯಕ್ಕೆ  ಒಳಗಾದ ಯೋಧ ಶ್ಯಾಮರಾಜ್ ಅವರಿಗೆ ಉಡುಪಿಯ ಸಾಸ್ತಾನ ಟೋಲ್‌ನಲ್ಲಿ ವಿನಾಯಿತಿ ಇದ್ದರೂ ಶುಲ್ಕಕ್ಕಾಗಿ ಪೀಡಿಸಿ ಅವಮಾನಿಸಲಾಗಿದೆ. ಈ ಘಟನೆಯ ಕುರಿತು ಯೋಧರು ಹಂಚಿಕೊಂಡ ನೋವಿನ ವೀಡಿಯೋ ವೈರಲ್ ಆಗಿದ್ದು, ಟೋಲ್ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ದೇಶ ಸೇವೆಗಾಗಿಯೇ ತಮ್ಮನ್ನು ತಾವು ಅರ್ಪಿಸಿಕೊಂಡು ಶಾಶ್ವತವಾಗಿ ಅಂಗವೈಖಲ್ಯಕ್ಕೆ ಒಳಗಾದ ಯೋಧರೊಬ್ಬರಿಗೆ ಉಡುಪಿಯ ಸಾಸ್ತಾನದ ಟೋಲ್ ಪ್ಲಾಜಾದಲ್ಲಿ ಟೋಲ್ ಸಿಬ್ಬಂದಿ ಅವಮಾನಿಸಿದ್ದಾರೆ. ಆ ಯೋಧರಿಗೆ ಟೋಲ್‌ನಿಂದ ವಿನಾಯಿತಿ ಇದ್ದರೂ ಕೂಡ ಟೋಲ್ ಪಾವತಿ ಮಾಡುವಂತೆ ಪೀಡಿಸಿ ಅವರನ್ನು ಹೋಗಲು ಬಿಡದೇ ಉಡುಪಿಯ ಸಾಸ್ತಾನದ ಟೋಲ್ ಸಿಬ್ಬಂದಿ ಕಾಯಿಸಿ ಅವಮಾನಿಸಿದ್ದಾರೆ. ಇದರಿಂದ ನೊಂದ ಆ ಯೋಧರು ವೀಡಿಯೋ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದ್ದು, ಟೋಲ್ ಸಿಬ್ಬಂದಿಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

21 ಪ್ಯಾರಾ ಮಿಲಿಟರಿಯಲ್ಲಿ ಆರ್ಮಿ ಕಮಾಂಡೋ ಆಗಿ ಕೆಲಸ ಮಾಡಿದ್ದ ಶ್ಯಾಮರಾಜ್ ಎಂಬುವವರಿಗೆ ಸಾಸ್ತಾನದ ಟೋಲ್‌ನಲ್ಲಿ ಅವರಿಗೆ ಟೋಲ್‌ನಿಂದ ವಿನಾಯಿತಿ ಇದ್ದರೂ ಅಲ್ಲಿನ ಸಿಬ್ಬಂದಿ ಟೋಲ್ ಕಟ್ಟುವಂತೆ ಕೇಳಿ ಕಿರಿಕಿರಿ ಮಾಡಿ ಅವಮಾನಿಸಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಆ ಯೋಧರು ತಮ್ಮ ಕಾರಿನಿಂದ ಇಳಿದು ಟೋಲ್‌ನಲ್ಲಿ ತಮ್ಮ ವ್ಹೀಲ್‌ಚೇರ್‌ನಲ್ಲಿ ಕುಳಿತಿದ್ದು, ಅವರ ಕಾರನ್ನು ಪಕ್ಕಕ್ಕೆ ಇರಿಸಲಾಗಿದೆ. ಈ ಬಗ್ಗೆ ನೋವಿನಿಂದ ಮಾತನಾಡಿದ ಯೋಧ ಶ್ಯಾಮರಾಜ್ ಅವರು ಅಲ್ಲಿ ಏನು ನಡೆಯಿತು ಎಂಬುದನ್ನು ಹೇಳಿಕೊಂಡಿದ್ದಾರೆ.

ಹಿಂದಿಯಲ್ಲಿ ಮಾತನಾಡಿದ ಅವರು ನಾನು ಆರ್ಮಿ ಕಮಾಂಡೋ ಶ್ಯಾಮರಾಜ್, 21 ಪ್ಯಾರಾದಲ್ಲಿ ಕೆಲಸ ಮಾಡಿದ್ದೇನೆ. ಇಂದು ಕರ್ನಾಟಕದ ಉಡುಪಿಯ ಬಳಿ ಇರುವ ಸಸ್ತಾನದ ಟೋಲ್‌ನಲ್ಲಿ ನನಗೆ ಟೋಲ್ ಹಣ ಪಾವತಿಸುವಂತೆ ಪೀಡಿಸುತ್ತಿದ್ದಾರೆ. ಟೋಲ್ ವಿನಾಯಿತಿಗೆ ಸಂಬಂಧಿಸಿದಂತೆ ನನ್ನ ಬಳಿ ಎಲ್ಲಾ ದಾಖಲೆಗಳಿವೆ. 'ನಾನು ಅಪರೇಷನ್ ಪರಾಕ್ರಮ್‌' ಯುದ್ಧ ಸಂತ್ರಸ್ತನಾಗಿದ್ದೇನೆ(war casualty).ನನ್ನ ಪತ್ನಿಗೆ ಆರ್‌ಎಂಎ ಪ್ರಕಾರ ಪೋಸ್ಟಿಂಗ್ ಆಗಿದ್ದು, ಗಾಡಿಯೊಂದಿಗೆ ಹೋಗುತ್ತಿದ್ದೇನೆ. ಪ್ರತಿ ಟೋಲ್‌ನಲ್ಲಿ ನಾನು ಯಾವುದೇ ಶುಲ್ಕ ಪಾವತಿ ಮಾಡದೇ ಪಾಸಾಗಿ ಬಂದಿದ್ದೇನೆ. ಆದರೆ ಉಡುಪಿಯ ಸಾಸ್ತಾನದ ಟೋಲ್‌ನಲ್ಲಿ ಮಾತ್ರ ಅವರು ಹಣ ಕೊಡದ ವಿನಹಃ ಗಾಡಿಯನ್ನ ಮುಂದೆ ಹೋಗುವುದಕ್ಕೆ ಬಿಡುವುದಿಲ್ಲ ಎಂದು ಇಲ್ಲಿ ಟೋಲ್ ಸಿಬ್ಬಂದಿಯಾದ ಶಿವರಾಮ್ ಹಾಗೂ ಸುರೇಶ್ ಎಂಬುವವರು ಹೇಳುತ್ತಿದ್ದಾರೆ.

ಇಂದು ಜನವರಿ 25, ನಾಳೆ ಗಣರಾಜ್ಯೋತ್ಸವ(ಇಂದು ಗಣರಾಜ್ಯೋತ್ಸ ಇದು ನಿನ್ನೆ ನಡೆದ ಘಟನೆ) ಹಾಗಿದ್ದರೆ ನಾನು ಈ ವ್ಹೀಲ್‌ಚೇರ್‌ನಲ್ಲಿ ಏಕೆ ಕುಳಿತಿದ್ದೇನೆ ಎಂದು ನೀವೇ ಹೇಳಿ. ನಾನು ವ್ಹೀಲ್‌ಚೇರ್‌ನಲ್ಲಿ ಕುಳಿತಿರುವುದಕ್ಕೆ ಏನಾದರು ಅರ್ಥ ಇದೆಯೇ? ಒಬ್ಬರು ಯುದ್ಧ ಸಂತ್ರಸ್ತರನ್ನು ಆರ್ಮಿ ಕಾಯ್ದೆಯ ನಿಯಮಗಳಡಿ ಟ್ಯಾಕ್ಸ್ ಫ್ರೀ ಇದ್ದರೂ ಕೂಡ ಇಲ್ಲಿ ಟೋಲ್ ಕೇಳಲಾಗುತ್ತಿದೆ. ನಿತಿನ್ ಗಡ್ಕರಿಯವರೇ (ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವರಾಗಿರುವ ನಿತಿನ್ ಗಡ್ಕರಿ) ನೀವೇ ಹೇಳಿ ಎಂದು ಆ ಯೋಧ ಕೇಳಿದ್ದಾರೆ.

ಇದನ್ನೂ ಓದಿ: ನಾನೇನು ಕಳ್ಳನಾ ಅಣ್ಣ : ಭದ್ರತೆಯಲ್ಲಿ ಕರೆದೊಯ್ದ ಖಾಕಿ ಜೊತೆಗೂ ಗಿಲ್ಲಿ ನಟನ ಹಾಸ್ಯ : ನಕ್ಕು ಸುಸ್ತಾದ ಪೊಲೀಸರು

ಇದಕ್ಕೆ ಪ್ರತಿಕ್ರಿಯಿಸಿದ ಟೋಲ್ ಸಿಬ್ಬಂದಿ ನಮಗೆ ಗೊತ್ತಿರಲಿಲ್ಲ, ನಾವು ಮೇಲಿನವರ ಆದೇಶದ ಪ್ರಕಾರ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ನಿಮ್ಮ ಮನೆಯಲ್ಲಿ ಯಾರಾದರೂ ಯೋಧರಿದ್ದರೆ ನಮ್ಮ ನೋವು ಏನು ಎಂದು ನಿಮಗೆ ಗೊತ್ತಾಗುತ್ತದೆ. ನಾವು ವ್ಹೀಲ್‌ಚೇರ್‌ನಲ್ಲಿ ಸುಮ್ಮನೇ ಕುಳಿತಿದ್ದು ಅಲ್ಲ ಅಣ್ಣ ಎಂದು ಆ ಯೋಧ ಶ್ಯಾಮರಾಜ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಟೋಲ್ ಸಿಬ್ಬಂದಿ ಕ್ಷಮಿಸಿ ಬಿಡಿ ಎಂದು ಹೇಳಿದ್ದಾರೆ. ಈ ವೀಡಿಯೋ ಈಗ ಭಾರಿ ವೈರಲ್ ಆಗುತ್ತಿದ್ದು, ಟೋಲ್ ಸಿಬ್ಬಂದಿ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶಕ್ಕೆ ಮೋಸಮಾಡುವ ಉಪಯೋಗವಿಲ್ಲದ ರಾಜಕಾರಣಿಗಳಿಗೆ ಟೋಲ್ ಫ್ರೀ, ದೇಶಕ್ಕಾಗಿ ಹೋರಾಡಿ ಅಂಗವೈಕಲ್ಯರಾದ ಸೈನಿಕರು ಹಣ ನೀಡಬೇಕು

ಪ್ರಧಾನಮಂತ್ರಿಯವರನ್ನು ತಲುಪುವ ತನಕ ಈ ಸಂದೇಶ ಸಾಗಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮೊದಲಿಗೆ ನಮ್ ದೇಶ ನಮ್ ರಸ್ತೆ ರೋಡ್ ಟ್ಯಾಕ್ಸ್ ಕಟ್ಟುತ್ತಿವಿ ಆದ್ರೂ ಯಾಕೆ ಟೋಲ್ ಕಟ್ಟಬೇಕು ಅದರಲ್ಲೂ ನಮ್ಮ ದೇಶ ಕಾಯೋ ಯೋಧ ಅವರು. ಅವರಿಗೆ ಅವಮಾನ ಆದ್ರೆ ಇಡೀ ದೇಶಕ್ಕೆ ಅವಮಾನ ಅದಂಗೆ. ಮೊದಲು ಟೋಲ್ ಬ್ಯಾನ್ ಆಗಬೇಕು. ಒಳ್ಳೆಯ ರಸ್ತೆ ಕೊಡೋದು ಸರ್ಕಾರದ ಕೆಲಸ ನಾವು ಯಾಕೆ ಟೋಲ್ ಕಟ್ಟಬೇಕು. ಸರ್ಕಾರ ಇಂತ ಕಚಡಾಗಳಿಗೆ ಟೆಂಡರ್ ಕೊಟ್ಟು ನಮ್ಮ ದೇಶನೇ ಹಾಳು ಮಾಡಿಬಿಟ್ರು ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗರ್ಭಪಾತದಿಂದ ಕೊನೆಯಾದ ಜೀವದ ಆತ್ಮಕ್ಕೂ ಮೋಕ್ಷಕ್ರಿಯೆ ಮಾಡ್ಬೇಕಾ?

ನಮಗೆ ನಮ್ಮ ಹಳೆ ರಸ್ತೆಗಳನ್ನ ಬಿಟ್ಟು ಬಿಡಲಿ ಇವರು ಹೊಸ ರಸ್ತೆಗಳಿಗಾಗಿ ಜಾಗಗಳನ್ನು ಖರೀದಿ ಮಾಡಿ ಅಲ್ಲಿ ಇವರು ಟೋಲ್ ಗಳನ್ನ ತಗೊಳ್ಳಿ ನಮ್ಮ ಹಳೆಯ ರಸ್ತೆಗಳಲ್ಲಿ ಇವರು ರಸ್ತೆ ರಿಪೇರಿ ಮಾಡಿ ಟೋಲ್ ತೆಗೆದುಕೊಳ್ಳುವುದು ಸರಿ ಅಲ್ಲ. ನಾವು ಗಾಡಿಗಳನ್ನು ಹೊಸದಾಗಿ ತೆಗೆದುಕೊಳ್ಳುವಾಗಲೂ ಟ್ಯಾಕ್ಸ್ ಕಟ್ಟಿರ್ತೀವಿ ನಾವು ರಸ್ತೆಯ ಮೇಲೆ ಓಡಾಡುವಾಗಲೂ ಟೋಲ್ ಕಟ್ಟಬೇಕು ಅಂದ್ರೆ ಇದು ಯಾವ ನ್ಯಾಯ ಶ್ರೀ ಸಾಮಾನ್ಯರನ್ನು ಹಿಂಡಿಹಿಪ್ಪೆ ಮಾಡುತ್ತಿದ್ದಾರೆ ಎಂದು ಒಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

 

PREV
Read more Articles on
click me!

Recommended Stories

ಉಡುಪಿ ಪರ್ಯಾಯ ವೇಳೆ ಕೇಸರಿ ಧ್ವಜ ಹಿಡಿದ ಜಿಲ್ಲಾಧಿಕಾರಿ ಸ್ವರೂಪಾ ವಿರುದ್ಧ ಕಾಂಗ್ರೆಸ್ ದೂರು
ಏನಿದು, ಯಾಕಿದು ವಾರಾಹಿ ನದಿಯ ಸಿದ್ಧಾಪುರ ಏತ ನೀರಾವರಿ ವಿವಾದ? ಅಡ್ಡಗಾಲು ಹಾಕಿದ್ಯಾರು?