Karnataka Mutt Commission Row ದಿಂಗಾಲೇಶ್ವರ ವಿರುದ್ಧ ಕರಾವಳಿಯ ಮಠಾಧೀಶರುಗಳ ಕಿಡಿ

By Suvarna News  |  First Published Apr 19, 2022, 5:23 PM IST

ಮಠ ಗಳಿಂದಲೂ ಕಮಿಷನ್ ಪಡೆಯುವ ಆರೋಪ ಮಾಡಿರುವ ದಿಂಗಾಲೇಶ್ವರ ಶ್ರೀಗಳ ಹೇಳಿಕೆಗೆ ಕರಾವಳಿ ಭಾಗದ ಮಠಾಧೀಶರುಗಳು ವಿರೋಧ ವ್ಯಕ್ತಪಡಿಸಿದ್ದಾರೆ. ದಾಖಲೆಗಳಿಲ್ಲದೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.


ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್ 

ಉಡುಪಿ(ಏ.19): ಮಠ ಗಳಿಂದಲೂ ಕಮಿಷನ್ ಪಡೆಯುವ ಆರೋಪ ಮಾಡಿರುವ ದಿಂಗಾಲೇಶ್ವರ ಶ್ರೀಗಳ (Dingaleshwara Swamiji) ಹೇಳಿಕೆಗೆ ಕರಾವಳಿ ಭಾಗದ ಮಠಾಧೀಶರುಗಳು ವಿರೋಧ ವ್ಯಕ್ತಪಡಿಸಿದ್ದಾರೆ. ದಾಖಲೆಗಳಿಲ್ಲದೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. 

Tap to resize

Latest Videos

ಉಡುಪಿಯ (Udupi) ಅಷ್ಟ ಮಠಾಧೀಶರ ಪೈಕಿ‌ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ( Shri Vidyadheesha Teertha) ಈ ಕುರಿತು ಮಾತನಾಡಿದ್ದಾರೆ. ಪ್ರಾಮಾಣಿಕ ಸೇವೆಯಲ್ಲಿ ಹುಳಿ ಹಿಂಡುವ ಕೆಲಸ ಆಗಬಾರದು ಎಂದು ಕಾಳಜಿ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ದೇವಾಲಯಗಳ‌ ಸಂಖ್ಯೆ ಕಡಿಮೆಯೇನು ಇಲ್ಲ. ಈ ದೇವಾಲಯದ ಸಂಪಾದನೆಯೂ ಅಲ್ಪ ಅನ್ನೋ ಹಾಗಿಲ್ಲ. ಹಾಗಾಗಿ ಎ ಗ್ರೇಡ್ ದೇವಾಲಯಗಳಿಂದ ಬರುವ ಸಂಪತ್ತು ಸದ್ವಿನಿಯೋಗವಾಗಬೇಕು. ಹಿಂದಿನ ಸರ್ಕಾರದ ಕಾಲದಲ್ಲಿ ಆ ಸಂಪತ್ತು ಎಲ್ಲೆಲ್ಲೋ ಹೋಗುತ್ತಿತ್ತು. ಬಡ ದೇವಾಲಯ ಹಾಗೂ ಮಠಮಂದಿರಗಳಿಗೆ ಸಮಸ್ಯೆಯಾದಾಗ ಈ ದೇವಾಲಯಗಳ ಸಂಪತ್ತು ಮುಟ್ಟಿಸಬೇಕು ಎಂದು ಆಗ್ರಹಿಸಿದ್ದಾರೆ.

Chikkamagaluru ಸಿಎಂ ಆದ ಬಳಿಕ ಮೊದಲ ಬಾರಿ ಕಾಫಿನಾಡಿಗೆ ಬೊಮ್ಮಾಯಿ ಭೇಟಿ 

ಈಗಿನ ಬೊಮ್ಮಾಯಿ ಸರ್ಕಾರ ದೇವಾಲಯಗಳ ಸಂಪತ್ತು ಬಡ ದೇವಾಲಯ ಮಠ ಮಂದಿರಗಳಿಗೆ ತಲುಪಿಸುವ ಕಾಳಜಿ ಇಟ್ಟುಕೊಂಡಿದೆ. ಕಾಶಿಯಾತ್ರೆ ಮಾಡುವವರಿಗೂ ಧನಸಹಾಯ ನೀಡುತ್ತಿರುವುದು ನಿಜವಾಗಿ ಅಭಿನಂದನೀಯ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ‌ಪಲಿಮಾರು ಮಠಕ್ಕೂ ಧನಸಹಾಯ ಘೋಷಿಸಿದ್ರು. ಆ ಧನಸಹಾಯ ನೀಡುವ ವೇಳೆ ಯಾರೂ ಕೂಡ ಫಲಾಪೇಕ್ಷೆ ಪಡೆದಿಲ್ಲ. ಶಾಸಕರು, ಮಂತ್ರಿಗಳು ಹಾಗೂ ಮುಜರಾಯಿ ವ್ಯವಸ್ಥೆ ಯಾವುದರಲ್ಲೂ ಸ್ವಾರ್ಥ ಧೋರಣೆ ನನಗೆ ಕಂಡುಬಂದಿಲ್ಲ.

ಈ‌ ನಡುವೆ ಅಪಸ್ವರವೊಂದು ಕೇಳಿಬರುತ್ತಿದೆ. ಈ ಅಪಸ್ವರ ಸ್ವಂತ ಅಭಿಪ್ರಾಯ ಆಗಿರಲಿಕ್ಕಿಲ್ಲ ಏನು ಸಂಶಯ ವ್ಯಕ್ತಪಡಿಸಿದ್ದಾರೆ. ಇದರ ಹಿಂದೆ ಯಾವುದೋ‌ ಕಾರಣ ಇರಬಹುದು. ಈ ಸರ್ಕಾರಕ್ಕೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕು. ಎಲ್ಲರನ್ನೂ ಒಂದೇ ರೀತಿಯಲ್ಲಿ ತೆಗೆದುಕೊಂಡು ಹೋಗುವ ಕಾರ್ಯ ಕಷ್ಟದ್ದು. ಈ ಹಿಂದೆ ಇದ್ದ ಕಡಿಮೆ‌ ಜಾಸ್ತಿ ಹಾಗೂ ಓಲೈಕೆ ಕಾರ್ಯ ಈಗ ಇಲ್ಲ. ಈವರೆಗೆ ಸಿಗದ ಪರಿಹಾದ ಈಗ ಮಠಮಂದಿರಗಳಿಗೆ ಸಿಕ್ಕಿರುವುದು ಅಭಿನಂದನೀಯ. ಯಾವುದೋ ಹುಳಕು ಇಲ್ಲದೆ ತಪ್ಪು ಚಿಂತನೆ ಬಿಡಬೇಕು ಎಂದರು.

BJP Core Committee Meeting ಸಿದ್ಧರಾಮಯ್ಯ ವಿರುದ್ಧ BSY ಗುಡುಗು

ನಾನು ನಯಾಪೈಸೆ ಕಮಿಷನ್ ಕೊಟ್ಟಿಲ್ಲ: ವಜ್ರದೇಹಿ ಸ್ವಾಮೀಜಿ
ಮಠಮಾನ್ಯಗಳಿಂದಲೂ ಕಮಿಷನ್ ಎನ್ಬುವ ಮೂಲಕ ಅನಗತ್ಯ ಹತ್ತಿಸುವ ಆರೋಪ ಆಗುತ್ತಿದೆ. ದಿಂಗಾಲೇಶ್ವರ ಸ್ವಾಮೀಜಿಗಳ ಆರೋಪ‌ ಅಪ್ಪಟ ಸುಳ್ಳು ಎಂದು ಮಂಗಳೂರಿನ ಗುರುಪುರದ ವಜ್ರದೇಹಿ ಸ್ವಾಮೀಜಿ ಹೇಳಿದ್ದಾರೆ. ಈ ಬಗ್ಗೆ ನಾನು ಖಡಾಖಂಡಿತವಾಗಿ ಹೇಳುತ್ತೇನೆ. ನಮ್ಮ ಮಠಕ್ಕೂ 50 ಲಕ್ಷ ಬಂದಿದೆ. ನಾವ್ಯಾರು ಒಂದು ರೂಪಾಯಿ ನಯಾಪೈಸೆ ಕಮಿಷನ್ ನೀಡಿಲ್ಲ.

ಯಾವುದೇ ಹಂತದಲ್ಲಿ ಸರ್ಕಾರದ ಅಧಿಕಾರಿಗಳಿಗೆ ಕಮಿಷನ್ ಕೊಟ್ಟಿಲ್ಲ. ಇಂತಹ ಸುಳ್ಳು ಸಂದೇಶ ಹಬ್ಬಿಸಬಾರದು. ಎಲ್ಲೋ ಆದ ಘಟನೆ ನಮ್ಮಲ್ಲೂ ಆಗಿದೆ ಎನ್ನುವುದು ಸರಿಯಲ್ಲ. ನನಗೆ ಗೊತ್ತಿರುವ ಯಾವುದೇ ಶ್ರೀಗಳು ಒಂದು ನಯಾಪೈಸೆ‌ ಕಮಿಷನ್ ಕೊಟ್ಟಿಲ್ಲ. ಗಾಳಿಯಲ್ಲಿ ಗುಂಡು ಹಾರಿಸಿದರೆ ಸರಿಯಲ್ಲ‌ ದಾಖಲೆ ಕೊಡಿ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ (sri rajashekarananda swamiji) ಹೇಳಿಕೆ ನೀಡಿದ್ದಾರೆ.

 

click me!