ಉಡುಪಿ(ಏ.19): ಮಠಮಂದಿರಗಳಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನ ಪಡೆಯುವುದಕ್ಕೂ ಕಮಿಷನ್ ಕೊಡಬೇಕು ಎನ್ನುವ ದಿಂಗಾಲೇಶ್ವರ ಸ್ವಾಮೀಜಿ ಅವರ ಮಾತಿಗೆ ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾದೀಶ ತೀರ್ಥ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಮ್ಮ ಮಠಕ್ಕೆ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಅನುದಾನ ಮಂಜೂರು ಮಾಡಿದ್ದರು, ಅದು ಬಿಡುಗಡೆಯಾಗುವಾಗ ವಿಳಂಬವಾಗಿತ್ತು. ಆಗ ಶಾಸಕರು ಪ್ರಯತ್ನ ಮಾಡಿ ಹಣ ಬಿಡುಗಡೆ ಮಾಡಿಸಿದ್ದರು. ಆದರೆ ಮಂತ್ರಿಗಳಾಗಲಿ, ಶಾಸಕರಾಗಲಿ ಯಾವುದೇ ಪ್ರತಿಫಲಾಪೇಕ್ಷೆ ಅಥವಾ ಲಂಚವನ್ನು ಕೇಳಿಲ್ಲ ಎಂದು ಶ್ರೀಗಳು ಹೇಳಿದ್ದಾರೆ. ಯಾರೋ ಅಪಸ್ವರ ಕೇಳುತ್ತಿದೆ. ಇದು ಅವರ ಸ್ವಂತದ ಮಾತಾಗಿರಲಿಕ್ಕಿಲ್ಲ, ಅವರು ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಮಾಡಬಾರದು. ಒಂದೇ ಗಾಳಿ, ಒಂದೇ ಬೆಳಕು ಎನ್ನುವ ಹಾಗೆ ಎಲ್ಲರನ್ನೂ ಸಮಾನವಾಗಿ ನಡೆಸಿಕೊಳ್ಳುತ್ತಿರುವ ಇಂತಹ ಸರ್ಕಾರವನ್ನು ಪ್ರೋತ್ಸಾಹಿಸಬೇಕು ಎಂದು ಪಲಿಮಾರು ಶ್ರೀಗಳು ಒತ್ತಿ ಹೇಳಿದ್ದಾರೆ.
undefined
ಯಾತ್ರಿ ನಿವಾಸಕ್ಕೆ ಕೊಟ್ಟ ಅನುದಾನ ಬಳಕೆ ಮಾಡೋಕೆ ಬಿಡ್ತಿಲ್ಲ Dingaleshwara Swamiji
ದಿಂಗಾಲೇಶ್ವರ ಶ್ರೀ ಊಸರವಳ್ಳಿಯಂತೆ: ಬಿಸಿಪಾ
ದಿಂಗಾಲೇಶ್ವರ ಸಾಮೀಜಿ ಊಸರವಳ್ಳಿ ಇದ್ದಂತೆ. ಆಗಾಗ್ಗೆ ಬಣ್ಣ ಬದಲಿಸುತ್ತಾ ಇರುತ್ತಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಕಮಿಷನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಲಂಚ ಕೊಡುವ ಮೊದಲೇ ಶ್ರೀಗಳು ಪ್ರತಿಭಟಿಸಬೇಕಿತ್ತು. ಇವರು ಕಾಂಗ್ರೆಸ್ ಸಭೆಗಳಿಗೆ ಹೋಗಿ ಆ ಪಕ್ಷದ ಪ್ರತಿನಿಧಿಗಳಂತೆ ಮಾತನಾಡುತ್ತಾರೆ ಎಂದರು. ಕಾಂಗ್ರೆಸ್ ಪಕ್ಷದ ಭಕ್ತರನ್ನು ಮೆಚ್ಚಿಸಲು ಸ್ವಾಮಿಗಳು ಹೀಗೆ ಮಾತನಾಡಿದ್ದಾರೆ. ಇವರು ಹಿಂದೆ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆಂಬಲಿಸಿಯೂ ಮಾತನಾಡಿದ್ದರು. ಆಗಾಗ್ಗೆ ಬಣ್ಣ ಬದಲಿಸುತ್ತಾರೆ. ಕಾಂಗ್ರೆಸ್ಸಿನವರಿಗೆ ಮಾಡಲು ಕೆಲಸ ಇಲ್ಲದಿರುವುದರಿಂದ ಬಿಜೆಪಿ ಮೇಲೆ ವಿನಾಕಾರಣ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ ಎಂದು ಹರಿಹಾಯ್ದರು.
ಮಠಗಳಿಗೆ ಅನುದಾನ ಬಿಡುಗಡೆಯಲ್ಲೂ ಪರ್ಸೆಂಟೇಜ… ತೆಗೆದುಕೊಳ್ಳುತ್ತಾರೆ ಎಂದು ಆರೋಪ ಮಾಡಿದ್ದ ಶಿರಹಟ್ಟಿಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ, ಪರ್ಸೆಂಟೇಜ್ ಕೇಳುವುದು ಈ ಸರ್ಕಾರ ಅಷ್ಟೇ ಅಲ್ಲ, ಹಿಂದಿನ ಸರ್ಕಾರಗಳಲ್ಲೂ ಇದೇ ಪದ್ಧತಿ ಇತ್ತು ಎಂದು ಹೇಳಿದ್ದಾರೆ.
ಉಳಿದವರಿಗೆಲ್ಲಾ 40% ಕಮಿಷನ್, ಕಾವಿಗಳಿಗೆ 30% ಕಮಿಷನ್, 10% ಡಿಸ್ಕೌಂಟ್'
ಜಿಲ್ಲೆಯ ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನಲ್ಲಿ ಪರ್ಸೆಂಟೇಜ್ ಕುರಿತು ಪ್ರತಿಕ್ರಿಯಿಸಿರುವ ಅವರು, ಪರ್ಸೆಂಟೇಜ್ ಕೇಳೋದು ಈ ಸರ್ಕಾರವಷ್ಟೇ ಅಲ್ಲ, ಹಿಂದಿನ ಸರ್ಕಾರಗಳಿಂದಲೂ ಇದೇ ಪದ್ಧತಿ ಇದೆ. ಇದನ್ನು ಈ ಸರ್ಕಾರ ಅಷ್ಟೆಮಾಡುತ್ತಿಲ್ಲ. ಆದರೆ, ಈ ಸರ್ಕಾರ ಇದನ್ನು ಸ್ವಲ್ಪ ಹೆಚ್ಚು ಮಾಡಿರಬಹುದು. ಇದು ನನ್ನೊಬ್ಬನ ಆರೋಪವಲ್ಲ, ಇಡೀ ರಾಜ್ಯದ ಜನರೇ ಬಲ್ಲರು ಎಂದರು.
ಯಾವುದೇ ಅನುದಾನ ಬಿಡುಗಡೆ ಮಾಡಿದರೆ ಎಂಪಿಗೆ ಕೊಡಬೇಕು, ಎಂಎಲ…ಎಗೆ ಕೊಡಬೇಕು, ಮಂತ್ರಿಗೆ ಕೊಡಬೇಕು, ಅಧಿಕಾರಿಗಳಿಗೆ ಕೊಡಬೇಕು ಅಂದರೆ ಕಾಮಗಾರಿ ಹೇಗೆ ಆಗುತ್ತವೆ? ಭ್ರಷ್ಟಾಚಾರ ಮಾಡಿ ಬಳಿಕ ಭ್ರಷ್ಟಾಚಾರದ ಬಗ್ಗೆ ಭಾಷಣ ಮಾಡೋದು ಸರಿಯಾದ ಕ್ರಮವಲ್ಲ ಎಂದು ಕಿಡಿ ಕಾರಿದರು.
ದಿಂಗಾಲೇಶ್ವರ ಮಠದ ಯಾತ್ರಿ ನಿವಾಸ ನಿರ್ಮಾಣದಲ್ಲಿ ಪರ್ಸೆಂಟೇಜ… ಕೇಳಿರುವುದು ಹೌದು. ಸರ್ಕಾರದ ಅನುದಾನದಲ್ಲಿ ಮಠದ ಯಾತ್ರಿ ನಿವಾಸ ನಿರ್ಮಾಣ, ಸಮುದಾಯ ಭವನ ಕಟ್ಟುವುದು ಸೇರಿದಂತೆ ಎಲ್ಲ ವಿಚಾರದಲ್ಲಿ ಕಮಿಷನ್ ಕೇಳುತ್ತಾರೆ. ಅಧಿಕಾರಿಗಳು ನಾಚಿಗೆಗೆಟ್ಟು ಮುಲಾಜಿಲ್ಲದೇ ಪರ್ಸೆಂಟೇಜ… ಕೊಡಲೇಬೇಕು ಅಂತ ಹೇಳೋದು ನೋಡಿದರೆ ರಾಜ್ಯದಲ್ಲಿ ಭ್ರಷ್ಟಾಚಾರ ಮೆರವಣಿಗೆಯಲ್ಲಿದೆ ಎಂದು ಹೇಳಲು ಇಚ್ಚಿಸುತ್ತೇನೆ. ಪಾಯಿಖಾನೆ ಬಿಲ್ ಕೊಡುವುದಕ್ಕೂ ಸಾವಿರ, ಎರಡು ಸಾವಿರ ರುಪಾಯಿ ಲಂಚ ಕೊಡಬೇಕು ಎಂದು ವಿಷಾಧಿಸಿದರು.