Udupi: ಕರಾವಳಿ ಜಿಲ್ಲೆಯಲ್ಲಿ ಮತ್ತೆ ಧರ್ಮದಂಗಲ್ ಆರಂಭ: ಜಾತ್ರೆಗಳಲ್ಲಿ ವ್ಯಾಪಾರ ಬಹಿಷ್ಕಾರ

By Sathish Kumar KH  |  First Published Dec 6, 2022, 1:50 PM IST

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಜಾತ್ರೆಗಳ ಸೀಸನ್ ಶುರುವಾಗಿದೆ. ಪ್ರತಿ ಗ್ರಾಮದಲ್ಲೂ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭವಾಗಿದೆ. ಕಳೆದ ಬಾರಿ ಜಾತ್ರೆಯ ವೇಳೆ ಆರಂಭವಾಗಿದ್ದ ಧರ್ಮದಂಗಲ್  ಈ ಬಾರಿಯೂ ಮುಂದುವರೆಯುವ ಲಕ್ಷಣಗಳು ಕಾಣುತ್ತಿವೆ. 


ಉಡುಪಿ (ಡಿ.6): ಕರಾವಳಿ ಜಿಲ್ಲೆ ಉಡುಪಿಯಲ್ಲಿ ಜಾತ್ರೆಗಳ ಸೀಸನ್ ಶುರುವಾಗಿದೆ. ಪ್ರತಿ ಗ್ರಾಮದಲ್ಲೂ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭವಾಗಿದೆ. ಕಳೆದ ಬಾರಿ ಜಾತ್ರೆಯ ವೇಳೆ ಆರಂಭವಾಗಿದ್ದ ಧರ್ಮದಂಗಲ್  ಈ ಬಾರಿಯೂ ಮುಂದುವರೆಯುವ ಲಕ್ಷಣಗಳು ಕಾಣುತ್ತಿವೆ. 

ಸದ್ಯವೇ ಉಡುಪಿ ಜಿಲ್ಲೆಯ ಅತಿ ದೊಡ್ಡ ಜಾತ್ರೆ ಎನಿಸಿರುವ ಕೊಡಿ ಹಬ್ಬ ನಡೆಯಲಿದ್ದು ಇಲ್ಲೂ ವ್ಯಾಪಾರ ಬಹಿಷ್ಕಾರದ ದಂಗಲ್ ಆರಂಭವಾಗಿದೆ. ಜೊತೆಗೆ ಉಪ್ಪುಂದ ಜಾತ್ರೆಯಲ್ಲೂ ಅನ್ಯ ಧರ್ಮೀಯರಿಗೆ ಅವಕಾಶವಿಲ್ಲ ಎಂದು ನಿರ್ಧಾರ ಕೈಗೊಳ್ಳಲಾಗಿದೆ.ದೇವಸ್ಥಾನದ ಆವರಣಗಳಲ್ಲಿ ಅನ್ಯ ಧರ್ಮೀಯ ವ್ಯಾಪಾರಿಗಳಿಗೆ ಅವಕಾಶ ಬೇಡವೆಂದು ಹಿಂದೂ ಸಂಘಟನೆಗಳ ಆಗ್ರಹಿಸುತ್ತಿವೆ. ಕುಂದಾಪುರ ತಾಲೂಕಿನಲ್ಲಿ ನಡೆಯಲಿರುವ ಎರಡು ಮಹತ್ವದ ಜಾತ್ರೆಗಳಲ್ಲಿ ಬಹಿಷ್ಕಾರದ ಬಿಸಿ ತಟ್ಟಿದೆ.ಕರಾವಳಿಯಲ್ಲಿ ಅತಿ ದೊಡ್ಡ ಹಬ್ಬ ಎನಿಸಿರುವ ಕೋಟೇಶ್ವರದ ಕೊಡಿ ಹಬ್ಬ ಡಿಸೆಂಬರ್ ತಿಂಗಳ 8 ರಂದು ನಡೆಯಲಿದೆ. ಡಿಸೆಂಬರ್ 9ರಂದು ನಡೆಯಲಿರುವ ಉಪ್ಪಂದ ಜಾತ್ರೆಗೂ ಬಹಿಷ್ಕಾರದ ಬಿಸಿ ತಟ್ಟಿದೆ.

Latest Videos

undefined

ಧರ್ಮ ದಂಗಲ್‌ ಮಧ್ಯೆ ಸುಬ್ರಮಣ್ಯ ಸ್ವಾಮಿ ರಥೋತ್ಸವಕ್ಕೆ ಕ್ಷಣಗಣನೆ: ಬಿಗಿ ಪೊಲೀಸ್‌ ಬಂದೋಬಸ್ತ್‌

ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿಯೂ ಧರ್ಮದಂಗಲ್: ಕೊಡಿ ಹಬ್ಬದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಿದಂತೆ ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ಭಜರಂಗದಳ ಸಹಿತ ಮನವಿ ಮಾಡಿರುವ ವಿಹಿಂಪ, ಭಯೋತ್ಪಾದನೆ, ಲವ್ ಜಿಹಾದ್ ನಂತಹ ಪ್ರಕರಣ ಹೆಚ್ಚಿರುವ ಕಾರಣಕ್ಕೆ ಹಿಂದೂ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿವೆ. ಹಿಂದೂ ಸಂಘಟನೆಗಳ ಬೇಡಿಕೆಗೆ ವ್ಯವಸ್ಥಾಪನಾ ಸಮಿತಿ ಸಮ್ಮತಿಸುವ ಸಾಧ್ಯತೆ ಇದೆ. ಇನ್ನೊಂದೆಡೆ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಧರ್ಮ ದಂಗಲ್  ಶುರುವಾಗಿದೆ. ಡಿ 9, 10, 11ರಂದು ಇಲ್ಲಿ ಜಾತ್ರೆ ನೆರವೇರಲಿದ್ದು, ದೇವಸ್ಥಾನದ ಆವರಣದಲ್ಲಿ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ತೀರ್ಮಾನಿಸಲಾಗಿದೆ.ಈ ಬಗ್ಗೆ ತೀರ್ಮಾನ ಕೈಗೊಂಡಿರುವ ದೇವಸ್ಥಾನದ ಆಡಳಿತ ಮಂಡಳಿಯು ಆಡಳಿತಾಧಿಕಾರಿಯ ಮೂಲಕ ಸಹಾಯಕ ಕಮಿಷನರ್ ಗೆ ನಿರ್ಣಯ ರವಾನಿಸಿದೆ.

ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ: ಬಜರಂಗದಳ, ವಿಶ್ಪವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಒತ್ತಾಯದ ಮೇರೆಗೆ ಈ ಕ್ರಮ ಕೈಗೊಂಡಿರುವುದಾಗಿ ಆಡಳಿತ ಮಂಡಳಿ ಹೇಳಿದೆ. ಹಿಂದು ವ್ಯಾಪಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಲು ತೀರ್ಮಾನ ಪ್ರಕಟಿಸಿದೆ. ದೇವಸ್ಥಾನಗಳ ಮೇಲೆ ಭಯೋತ್ಪಾದನೆಯ ಕರಿನೆರಳು ಬಿದ್ದಿದೆ, ಜನಜಾಗೃತಿ ಮೂಲಕ ಈ ಬಗ್ಗೆ ಮಾಹಿತಿ ನೀಡಲು ನಿರ್ಧಾರ ಎಂದು ಹಿಂದೂ‌ ಮುಖಂಡರು ಹೇಳಿದ್ದಾರೆ. ನಿಜಾಬ್ ವಿವಾದದೊಂದಿಗೆ ಆರಂಭವಾದ ಧರ್ಮ ಸಂಘರ್ಷ ಕಳೆದ ಒಂದು ವರ್ಷದಿಂದ ನಾನಾ ಆಯಾಮಗಳನ್ನು ಪಡೆದುಕೊಳ್ಳುತ್ತಿದ್ದು, ಮತ್ತೊಂದು ಸುತ್ತಿನ ಧರ್ಮ ದಂಗಲ್ ಗೆ ಚಾಲನೆ ದೊರೆತಿದೆ.

Boycott Muslim Traders: ರಾಜ್ಯದಲ್ಲಿ ಮತ್ತೆ ಶುರುವಾಯ್ತು ಧರ್ಮ ದಂಗಲ್. ಕುಕ್ಕೆಯಲ್ಲಿ ಅನ್ಯಧರ್ಮೀರಿಗೆ ವ್ಯಾಪಾರ ನಿಷೇಧ!

ಪೊಲೀಸ್‌ ಭದ್ರತೆಯಲ್ಲಿ ಜಾತ್ರೆ ಸಂಪನ್ನ: ಹಿಂದು ದೇಗುಲದ ಆವರಣದಲ್ಲಿ ಹಿಂದೂಯೇತರರ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂಬ ವಿವಾದದ ನಡುವೆಯೇ ವಿಶ್ವೇಶ್ವರಪುರದಲ್ಲಿರುವ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸಡಗರ ಸಂಭ್ರಮದಿಂದ ರಥೋತ್ಸವ ಯಶಸ್ವಿಯಾಗಿ ನೆರವೇರಿತು. ವಿವಿಪುರಂನ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆ ವೇಳೆಯಲ್ಲಿ ಹಿಂದೂಯೇತರರ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಬಜರಂಗದಳ ಆಗ್ರಹಿಸಿತ್ತು. ಈ ಬಗ್ಗೆ ಸ್ಥಳೀಯ ಶಾಸಕರು ಮತ್ತು ದೇವಸ್ಥಾನದ ಆಡಳಿತ ಮಂಡಳಿಗೂ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಇದಕ್ಕೆ ಶಾಸಕ ಉದಯ್‌ ಗರುಡಾಚಾರ್‌ ವಿರೋಧಿಸಿದ್ದರು. ಶಾಸಕರ ಧೋರಣೆಗೆ ಹಿಂದು ಸಂಘಟನೆ ಉಗ್ರವಾಗಿ ಪ್ರತಿಕ್ರಿಯಿಸಿದ್ದವು. ಈ ಹಿನ್ನೆಲೆಯಲ್ಲಿ ಜಾತ್ರೆಯ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ 600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ತನ್ಮೂಲಕ ಯಾವುದೇ ಅಹಿತಕರ ಘಟನೆ ನಡೆಯದೆ ಜಾತ್ರೆ ಯಶಸ್ವಿಯಾಗಿ ನಡೆಯಿತು.

click me!