
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಮಲಿ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅಂಕಿತಾ ಬಹುದಿನದ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪಿಂಕ್ ಮತ್ತು ಪರ್ಪಲ್ ಥೀಮ್‌ನಲ್ಲಿ ಇಬ್ಬರು ಕಂಗೊಳ್ಳಿಸುತ್ತಿದ್ದಾರೆ.
'ನನ್ನ 28ನೇ ಹುಟ್ಟುಹಬ್ಬ ಸೂಪರ್ ಸ್ಪೆಷಲ್ ಆಗಿದ್ದು ಹೀಗೆ. ಅಮೂಲ್ಯವಾದ ಉಡುಗೊರೆಯನ್ನು ಜೀವನದಲ್ಲಿ ಪಡೆದಿರುವೆ. ನನ್ನ ಬೆಸ್ಟ್ ಫ್ರೆಂಡ್ ಸುಹಾಸ್ ಈಗ ನನ್ನ ಬೆಸ್ಟ್ ಪಾರ್ಟ್‌ನರ್. 8 ವರ್ಷಗಳ ಹಿಂದೆ ಸುಹಾಸ್ ನನಗೆ ಪ್ರಪೋಸ್ ಮಾಡಿದಾಗಲೇ ನಾನು ಅವರನ್ನು ಸಂಪೂರ್ಣವಾಗಿ ಒಪ್ಪಿಕೊಂಡೆ. ಇದೀಗ ನಾವಿಬ್ಬರು ಒಬ್ಬರನ್ನೊಬ್ಬರ ಕೈ ಹಿಡಿದುಕೊಂಡು ನಾವು ಕಲ್ಪಿಸಿಕೊಂಡಂತೆ ಜೀವನ ನಡೆಸಲು ಮುಂದಾಗಿದ್ದೀವಿ. ನಮ್ಮ ಪ್ರೀತಿಯನ್ನು ಒಪ್ಪಿಕೊಂಡು ನಮಗಿಂತ ಹೆಚ್ಚು ಎಕ್ಸೈಟ್ ಆಗಿರುವ ಪೋಷಕರಿಗೆ ಧನ್ಯವಾದಗಳು. ಎಲ್ಲರಿಗೂ ಕಷ್ಟವಾಗುವುದು ಒಪ್ಪಿಸುವುದಕ್ಕೆ. ನಮಗೆ ಅದು ತುಂಬಾನೇ ಸುಲಭವಾಗಿತ್ತು. ಸ್ಟೋರಿ ಮುಂದುವರೆಯುತ್ತದೆ,' ಎಂದು ಅಂಕಿತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಲಂಗ ದಾವಣೆಯಲ್ಲಿ ಮಿಂಚುವ ‘ಕಮಲಿ’ ನಿಂಗಿಯ ಡಿಫರೆಂಟ್ ಲುಕ್!
ಬಾಲ್ಯದಿಂದಲೂ ಅಭಿನಯದಲ್ಲಿ ಅಸಕ್ತಿ ಹೊಂದಿದ್ದ ಅಂಕಿತಾ ಓದಿದ್ದು ಇಂಜಿನಿಯರಿಂಗ್. ಎರಡು ವರ್ಷಗಳ ಕಾಲ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ನಿರ್ವಹಿಸಿದ್ದರು. ಐಟಿ ಜೀವನ ಸಾಕಪ್ಪ ಎಂದು ತಮ್ಮ ಆಸಕ್ತಿಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು. ಅಂಕಿತಾ ಮೂಲತಃ ತಮಿಳುನಾಡಿನ ಅಯ್ಯರ್ ಕುಟುಂಬದ ಹುಡುಗಿ. ಆದರೆ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ತಮಿಳಿನಿಂದ ಆಫರ್‌ಗಳು ಬಂದರೂ ಕನ್ನಡದಲ್ಲೇ ನೆಲೆ ಕಾಣಬೇಕೆಂದು ದೃಢ ಸಂಕಲ್ಪ ಮಾಡಿಕೊಂಡ್ಡರು. ಜೀ ಕನ್ನಡ ವಾಹಿನಿಯ 'ಕಮಿಲಿ' ಧಾರಾವಾಹಿಯಲ್ಲಿ 'ನಿಂಗಿ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ಉದಯ ವಾಹಿನಿಯ 'ಶ್ರೀ ಕ್ಷೇತ್ರ' ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.