ಬೇರೆ ಧಾರಾವಾಹಿಗಳನ್ನು ನೋಡುತ್ತಾ ಎಂಜಾಯ್‌ ಮಾಡುತ್ತಿರುವ 'ಕಮಲಿ'!

By Kannadaprabha News  |  First Published Apr 20, 2020, 4:12 PM IST

ಕಮಲಿ ಧಾರಾವಾಹಿಯ ನಾಯಕಿಯ ಹೆಸರು ಅಮೂಲ್ಯ ಗೌಡ. ಈ ಧಾರಾವಾಹಿ ಮೂಲಕ ಸ್ಟಾರ್ ನಟಿ ಆಗುವ ಮುನ್ನ ದಿನೇಶ್ ಬಾಬು ಅವರ ಸ್ವಾತಿಮುತ್ತು ಧಾರಾವಾಹಿಯಲ್ಲಿ ನಟಿಸಿದವರು. ಅರಮನೆ, ಪುನರ್ ವಿವಾಹ ಧಾರಾವಾಹಿಗಳಲ್ಲೂ ಪಾತ್ರ ಮಾಡಿದ್ದಾರೆ. ಈಗ ಕಮಲಿ ಮೂಲಕ ಮನೆ ಮನೆಗೂ ಫೇಮಸ್ ಆಗಿರುವ ಅಮೂಲ್ಯ, ತಮ್ಮ ಲಾಕ್‌ಡೌನ್ ದಿನಚರಿ ಹೇಳಿಕೊಂಡಿದ್ದಾರೆ.


ಆರ್ ಕೇಶವಮೂರ್ತಿ

ಶೂಟಿಂಗ್ ಮಿಸ್ಸಿಂಗ್

Tap to resize

Latest Videos

ಪ್ರತಿ ದಿನ ಶೂಟಿಂಗ್ ಅಂತಲೇ ಮನೆಗಿಂತ ಹೆಚ್ಚಾಗಿ ಧಾರಾವಾಹಿ ಸೆಟ್‌ನಲ್ಲಿ ಜೀವನ ಕಳೆಯುತ್ತಿದ್ದೆ. ನಾನು ಮಾತ್ರವಲ್ಲ, ಬಹುತೇಕ ನಟ- ನಟಿಯರು, ತಂತ್ರಜ್ಞರು ಹೀಗೆ ಮನೆ ಜೀವನಕ್ಕಿಂತ ಸಿನಿಮಾ ಸೆಟ್ಟಿನ ಜೀವನವೇ ಪ್ರಧಾನವಾಗಿಸಿಕೊಂಡಿರುತ್ತಾರೆ. ಹೀಗೆ ನಟನೆ, ಶೂಟಿಂಗ್ ಅಂತ ಓಡುತ್ತಿದ್ದ ನಾವು ಈಗ ಒಂದು ಕಡೆ ನಿಂತಿದ್ದೇವೆ. ವಾರಕ್ಕೆ ಅಥವಾ ತಿಂಗಳಿಗೆ ಒಂದೆರಡು ದಿನ ಸಿಗುತ್ತಿದ್ದ ಬಿಡುವು ಈಗ ಒಂದು ತಿಂಗಳು ಮೇಲಾಗಿದೆ ಮನೆಯಲ್ಲಿ ಕೂರುವಂತೆ ಆಗಿದೆ. ಹೀಗೆ ಮನೆಯಲ್ಲಿರುವುದು ಅನಿವಾರ್ಯ ಮತ್ತು ಅಗತ್ಯ ಕೂಡ. ಕೊರೋನಾ ಭೀತಿ ಹಾಗೂ ಲಾಕ್‌ಡೌನ್ ಸಂಕಷ್ಟ ನಮ್ಮ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಹೀಗಾಗಿ ಈ ಸಂದರ್ಭದಲ್ಲಿ ನಾನು ಹೆಚ್ಚು ಮಿಸ್ ಮಾಡಿಕೊಳ್ಳುತ್ತಿರುವುದು ಶೂಟಿಂಗ್ ಸಂಭ್ರಮ. ಅಲ್ಲಿ ಸಿಗುತ್ತಿದ್ದ ಕೆಲಸದ ಖುಷಿ.

ಈಜು ಕೊಳದಲ್ಲಿ ಮಿಂದೆದ್ದು ಬಿಸಿ ಹೆಚ್ಚಿಸಿದ ಕನ್ನಡದ ನಂಬರ್ 1 ಸೀರಿಯಲ್ ನಾಯಕಿ!

ತಿದ್ದಿಕೊಳ್ಳುವ ಸಮಯ

ನಾನು ಮೂಲತಃ ಮೈಸೂರು. ಆದರೆ, ಇರೋದು ಬೆಂಗಳೂರಿನಲ್ಲಿ. ಮನೆಯವರ ಜತೆಗೆ ಹೆಚ್ಚು ಕಾಲ ಕಳೆಯುತ್ತಿದ್ದೇನೆ. ಹಾಗಂತ ಸುಮ್ಮನೆ ಕಾಲ ಕಳೆಯುತ್ತಿಲ್ಲ. ಮೊನ್ನೆಯವರೆಗೂ ಕಮಲಿ ಧಾರಾವಾಹಿಯ ಹೊಸ ಎಪಿಸೋಡ್‌ಗಳು ಪ್ರಸಾರ ಆದವು. ಈಗ ಮತ್ತೆ ಮರು ಪ್ರಸಾರ ಮಾಡುತ್ತಿದ್ದಾರೆ. ಹಳೆಯ ಎಪಿಸೋಡ್‌ಗಳನ್ನು ನೋಡುತ್ತಿದ್ದಾಗ, ನಮ್ಮ ಮಿಸ್ಟೇಕ್‌ಗಳು ನೇರವಾಗಿ ಕಾಣುತ್ತಿವೆ. ಜತೆಗೆ ಹಂತ ಹಂತವಾಗಿ ಆ ಪಾತ್ರವೇ ನಾವಾಗಿ ಹೇಗೆ ನಿಭಾಯಿಸಿದ್ದೇವೆ ಎನ್ನುವುದು ಅರಿವಾಗುತ್ತಿದೆ. ಶೂಟಿಂಗ್ ನಡುವೆ ನಮ್ಮ ಧಾರಾವಾಹಿಗಳನ್ನು ನಾವೇ ನೋಡಲಿಕ್ಕೆ ಆಗದವರು, ಈಗ ನೋಡುತ್ತಿದ್ದಾಗ ಇದು ನಮ್ಮನ್ನು ನಾವೇ ಕರೆಕ್ಟ್ ಮಾಡಿಕೊಳ್ಳುವ ಸಮಯ ಅನಿಸಿದೆ. ಲಾಕ್‌ಡೌನ್ ಅಂಥದ್ದೊಂದು ಸಮಯ ಕೊಟ್ಟಿದೆ ಎಂದುಕೊಂಡರೆ, ಮನೆಯಲ್ಲಿರುವುದು ಒತ್ತಡ ಅನಿಸಲ್ಲ.

ಬೇರೆ ಧಾರಾವಾಹಿಗಳು ಈಗ ನನ್ನ ಗುರುಗಳು

ಪ್ರತಿ ದಿನ ನಮ್ಮ ಮನೆ ಕೆಲಸಗಳನ್ನು ನಾವೇ ಮಾಡಿಕೊಳ್ಳುವ ಜತೆಗೆ ನನ್ನ ಧಾರಾವಾಹಿ ಸೇರಿದಂತೆ ಬೇರೆ ಬೇರೆಯವರ ಧಾರಾವಾಹಿಗಳನ್ನು ನೋಡುತ್ತಿದ್ದೇನೆ. ಬೇರೆಯವರ ಧಾರಾವಾಹಿಗಳು ನೋಡಿದಾಗ ಅಲ್ಲಿನ ಪಾತ್ರ ಮತ್ತು ಆ ರೀತಿಯ ಕತೆಗಳು ನನಗೆ ಸಿಕ್ಕರೆ ನಾನು ಹೇಗೆ ಮಾಡಬಹುದು ಎನ್ನುವ ಯೋಚನೆಗಳ ಹುಟ್ಟಿಗೆ ಕಾರಣವಾಗುತ್ತದೆ. ಇದೊಂದು ರೀತಿಯಲ್ಲಿ ಕಲಿಕೆಯ ಮತ್ತೊಂದು ವಿಧಾನ ಎನ್ನಬಹುದು. ಅಂದರೆ ನಮ್ಮನ್ನು ನಾವೇ ನೋಡಿ ಕಲಿಯುವುದು. ಪ್ರತಿ ದಿನ ಹೀಗೆ ಬೇರೆ ಬೇರೆ ಧಾರಾವಾಹಿಗಳ ಐದಾರು ಎಪಿಸೋಡ್‌ಗಳನ್ನು ನೋಡುತ್ತೇನೆ.

click me!