ಕಾವ್‌ ಕಾವ್ ಕರಿತೈತಿ ಗೋವಾ.., ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಮತ್ತೊಂದು ಹಾಡು!

By Sathish Kumar KH  |  First Published Dec 11, 2023, 7:34 PM IST

ಕನ್ನಡದ ಯೂಟ್ಯೂಬರ್ ವಿಜಯಪುರ ಹುಡುಗ ಪ್ರಕಾಶ್ ಆರ್.ಕೆ. ತಂಡದಿಂದ ರಚಿಸಲಾದ ಕಾವ್ ಕಾವ್ ಕರಿತೈತಿ ಗೋವಾ.. ಹಾಡು ವೈರಲ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. 
 


ಬೆಂಗಳೂರು (ಡಿ.11): ಸಾಮಾನ್ಯವಾಗಿ ನಮ್ಮ ರಾಜ್ಯದ ಬಹುತೇಕ ಯುವಕರಿಗೆ ಗೋವಾ ಟ್ರಿಪ್‌ ಹೋಗಬೇಕು ಎನ್ನುವುದು ಬಹುದೊಡ್ಡ ಆಸೆಗಳಲ್ಲಿ ಒಂದಾಗಿರುತ್ತದೆ. ಇದಕ್ಕೆ ಹಳ್ಳಿ ಹುಡುಗರ ಗುಂಪು, ಮಧ್ಯಮ ವರ್ಗದ ಕುಟುಂಬದವರ ಮಕ್ಕಳು ಪಡುವ ಪಾಡು ಅಸ್ಟಿಷ್ಟಲ್ಲ. ಆದ್ರೆ ಗೋವಾ ಟ್ರಿಪ್‌ ಪ್ಲ್ಯಾನ್‌ ಮಾಡಿದ ನಂತರವೂ ಕ್ಯಾನ್ಸಲ್ ಆಗಿಬಿಟ್ಟರೆ, ಆಗ ಆಗುವ ನೋವು ಹೇಗಿರುತ್ತದೆ ಎನ್ನುವ ಬಗ್ಗೆ ಹಾಡು ಈಗ ರಾಜ್ಯಾದ್ಯಂತ ಪಗ್ರಸಿದ್ಧಿಯಾಗಿದೆ. ನಾನು ನಂದಿನಿ ಬೆಂಗಳೂರಿಗೆ ಬಂದೀನಿ ಹಾಡು ವೈರಲ್ ಆದಂತೆ, ಕಾವ್‌ ಕಾವ್ ಕರಿತೈತಿ ಗೋವಾ ಎನ್ನುವ ಹಾಡು ಕೂಡ ವೈರಲ್ ಆಗುತ್ತಿದೆ.

ಕನ್ನಡದ ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಹಳ್ಳಿಮೇಸ್ಟ್ರು ಸಿನಿಮಾದ 'ಪ್ರೀತಿ ಮಾಡೋದ್ ತಪ್ಪೇನಿಲ್ಲಾ... ಅಂತ ಎಲ್ಲ ಹೇಲ್ತಾರಲ್ಲಾ..' ಹಾಡಿನ ಟ್ಯೂನ್‌ಗೆ ಗೋವಾ ಟ್ರಿಪ್‌ ಕ್ಯಾನ್ಸಲ್ ಆಗಿರುವ ಸಾಹಿತ್ಯವನ್ನು ಸೇರಿಸಿ ಹಾಡನ್ನು ಸಿದ್ಧಪಡಿಸಿದ್ದಾರೆ. ಹೀಗೆ, ಪ್ರಕಾಶ್ ಆರ್.ಕೆ. ಎನ್ನುವ ಯೂಟ್ಯೂಬರ್ ಗೋವಾ ಟ್ರಿಪ್‌ ಕ್ಯಾನ್ಸಲ್ ಎನ್ನುವ ಶ್ರದ್ಧಾಂಜಲಿ ಕಾರ್ಯಕ್ರಮದ ವೇದಿಕೆ ಸಿದ್ಧಪಡಿಸಿ ಉತ್ತರ ಕರ್ನಾಟಕ ಭಾಷೆಯ ಶೈಲಿಯಲ್ಲಿ ಈ ಸಾಹಿತ್ಯ ರಚಿಸಿ ಹಾಡನ್ನು ಹಾಡಿದ್ದಾರೆ. ಈ ಹಾಡಿನಲ್ಲಿ ಕ್ಯಾಸಿನೋ, ಪಬ್, ಮಸಾಜ್, ಮಜಾ ಮಾಡುವುದು ಸೇರಿ ಗೋವಾಕ್ಕೆ ಹೋಗುವ ಹುಡುಗರು ಇಟ್ಟುಕೊಳ್ಳುವ ಬಗ್ಗೆ ಹಾಡಿನಲ್ಲಿ ತೋರಿಸಿದ್ದಾರೆ.

Tap to resize

Latest Videos

ಕಾವ್‌ ಕಾವ್ ಕರಿತೈತಿ ಗೋವಾ.. ಕಾವ್‌ ಕಾವ್ ಕರಿತೈತಿ ಗೋವಾ..
ಗೋವಾಗೆ ಹೋಗೋದು ತಪ್ಪೇನಿಲ್ಲಾ.. ಅಂತಾ ಎಲ್ಲ ಹೇಳ್ತಾರಲ್ಲಾ..
ಕ್ಯಾಸಿನೋದೊಳಾಗ ಹೋಗಬೇಕಂತಾ, ಪಬ್ಬಿನೊಳಗಾ ನಾ ಕುಣಿಬೇಕಂತಾ..
ಮಸಾಜ್ ಮಾಡಿಸ್ಕೋಬೇಕು, ಮಜಾನು ತಗೋಬೇಕ್ ಆಸೇನು ಇಟ್ಟಿದ್ಯಾ..
ಆಸೆ ಏನೋ ನೀ ಚೊಲೋ ಮಾಡಿ, ರೊಕ್ಕ ಎಷ್ಟರ ನೀ ಗೋಳೆ ಮಾಡಿ.. 
ಕಾಜುನು ಕುಡಿಬೇಕ್, ಫುಲ್ ಪಾಯಿಂಟ್ ತರಬೇಕ್  ರೊಕ್ಕನೇ ಇಲ್ಲ ಸಿದ್ಯಾ....

ಸಾಲ ಸೋಲ ಮಾಡಿ ಗೋವಾಕ್ಕೆ ಹೋಗೋಣ.. ಮೋಜು ಮಸ್ತಿ ಮಾಡಿ ಹೊಳ್ಳಿ ಬರೋಣ..
ಸಾಲ ಮಾಡಿ ಹೋಗೋದು ಹರಕ್ಕತ್ತೇನಾ.. ಮೂರು ಇಟ್ಟು ಬಾರಿಸಕ್ಕತ್ತೀಯೇನಾ..
ಯಾರ ಮಾತ ಕೇಳಿ ನೀ ಪ್ಲ್ಯಾನ ಮಾಡಿದೆ? ನಿಮ್ಮ ಮಾತ ಕೇಳಿ ಪ್ಲ್ಯಾನ ಮಾಡಿದ್ಯಾ...
ಅಂದುಕೊಂಡಂಗೆ ಆಗೇ ಇಲ್ಲಾ, ನಿಮ್ಮಿಂದಾನೆ ಹಿಡಿದೈತೆ ಹಳ್ಳಾ...

ಈ ಹಾಡಿನ ಬಗ್ಗೆ ಬರೆದುಕೊಂಡಿರುವ ಯೂಟೂಬರ್ ಪ್ರಕಾಶ್ ಆರ್‌ಕೆ ಅವರು 'ಕಾವ ಕಾವ ಕರಿತೈತಿ ಗೋವಾ' ನಮ್ಮ ತಂಡದಿಂದ ಮತ್ತೊಂದು ವಿಶೇಷವಾದ ಹಾಡಿನೊಂದಿಗೆ ನಿಮ್ಮ ಮುಂದೆ ಬರಕತ್ತಿವಿ, ಇದೆ ಡಿಸೆಂಬರ್ 3ನೇ ತಾರೀಕು ರವಿವಾರ ಸಾಯಂಕಾಲ 6 ಗಂಟೆಗೆ ನನ್ನ Prakash RK YouTube Channel ಒಳಗ ಪೂರ್ತಿ ಹಾಡು ಬಿಡುಗಡೆ ಮಾಡಕ್ಕತ್ತೀವಿ,ಎಂದಿನಂತೆ ನಿಮ್ಮ ಆಶೀರ್ವಾದ ನಮ್ಮ ತಂಡದ ಮ್ಯಾಲ್ ಇರಲಿ. ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಇನ್ನು ಪ್ರಕಾಶ್ ಕಲಬುರ್ಗಿ ಅವರು ಮೂಲತಃ ವಿಜಯಪುರದವರಾಗಿದ್ದಾರೆ. ಹಾಡಿನ ಶೈಲಿಯಲ್ಲಿಯೂ ವಿಜಯಪುರದ ಸೊಗಡನ್ನು ಪ್ರದರ್ಶನ ಮಾಡಿದ್ದಾರೆ.

ಡ್ರಗ್ಸ್‌ ತೆಗೆದುಕೊಂಡಿಲ್ಲ, ಕರುಳು ತೆಗೆದು ಪಾತ್ರೆ ತರ ತೊಳೆಯುತ್ತಿದ್ದೆ: ಮಗ ರಾಕೇಶ್ ಸಾವಿನ ಬಗ್ಗೆ ಆಶಾ ಕಣ್ಣೀರು

ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೆಂಡ್ ಸೃಷ್ಟಿಸಿದ ಹಾಡು: ಪ್ರಕಾಶ್ ಆರ್‌.ಕೆ ಅವರು ಹಳ್ಳಿಮೇಸ್ಟ್ರು ಸಿನಿಮಾದ ಹಾಡಿನ ಟ್ಯೂನ್ ಬಳಸಿಕೊಂಡಿದ್ದರಿಂದ ಕಾಪಿರೈಟ್ಸ್ ಸಮಸ್ಯೆಯಿಂದ ಮೂಲ ಹಾಡನ್ನೇ ತಮ್ಮ ಯೂಟೂಬ್ ಪೇಜ್‌ನಿಂದ ಡಿಲೀಟ್ ಮಾಡಿದ್ದಾರೆ. ಆದರೆ, ಪ್ರಕಾಶ್ ಅವರ ಹಾಡನ್ನು ಡೌನ್ಲೋಡ್ ಮಾಡಿಕೊಂಡಿದ್ದ ಹಲವರು ಈ ಹಾಡನ್ನು ತಮ್ಮ ಹೆಸರಿನಿಂದ ಯೂಟೂಬ್‌ಗೆ ಅಪ್ಲೋಡ್ ಮಾಡಿಕೊಂಡಿದ್ದಾರೆ. ಒಂದೊಂದು ಹಾಡು ಕೂಡ ಲಕ್ಷಾಂತರ ವೀಕ್ಷಕರನ್ನು ಗಳಿಸಿದೆ. ಮತ್ತೊಂದೆಡೆ, ಇನ್‌ಸ್ಟಾಗ್ರಾಮ್‌ನಲ್ಲಿ ಕಾವ್ ಕಾವ್ ಕರಿತೈತಿ ಗೋವಾ ಹಾಡು ಮಾತ್ರ ಭರ್ಜರಿ ಟ್ರೆಂಡ್ ಸೃಷ್ಟಿಸಿದೆ.

 

click me!