ವರ್ಷಾ ಕಾವೇರಿ ಪೋಸ್ಟ್‌ಗೆ ಉತ್ತರ ಕೊಟ್ಟ ವರುಣ್; ಗಂಡು ಜಾತಿಗೆ ಅವಮಾನ ಎಂದು ಕಾಲೆಳೆದ ನೆಟ್ಟಿಗರು!

Published : Sep 14, 2023, 02:17 PM IST
ವರ್ಷಾ ಕಾವೇರಿ ಪೋಸ್ಟ್‌ಗೆ ಉತ್ತರ ಕೊಟ್ಟ ವರುಣ್; ಗಂಡು ಜಾತಿಗೆ ಅವಮಾನ ಎಂದು ಕಾಲೆಳೆದ ನೆಟ್ಟಿಗರು!

ಸಾರಾಂಶ

ದಿನದಿಂದ ವೈರಲ್ ಆಗುತ್ತಿದೆ ವರ್ಷಾ-ವರುಣ್ ಬ್ರೇಕಪ್ ಸುದ್ದಿ. ಸಿನಿಮಾ ತಾರೆಯರಲ್ಲ ಯಾಕಿಷ್ಟು ಬಿಲ್ಡಪ್‌ ಅಂತಾರೆ......

ಟಿಕ್‌ಟಾಕ್ ಮೂಲಕ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದು ರೀಲ್ಸ್ ಮಾಡಲು ಆರಂಭಿಸಿದ ಜೋಡಿ ವರುಣ್ ಆರಾಧ್ಯ ಮತ್ತು ವರ್ಷಾ ಕಾವೇರಿ. ಕಳೆದ ಮೂರ್ನಾಲ್ಕು ವಾರಗಳಿಂದ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ ಹಾಗೂ ಪೋಸ್ಟ್‌ ಡಿಲೀಟ್ ಮಾಡಿದ್ದಾರೆ ಎಂದು ನೆಟ್ಟಿಗರು ಗಮನಿಸಿದ್ದಾರೆ. ಪದೇ ಪದೇ ಪ್ರಶ್ನೆ ಹೇಳುತ್ತಿದ್ದರು ಎನ್ನುವ ಕಾರಣ ವರ್ಷಾ ಕಾವೇರಿ ಬ್ರೇಕಪ್ ಬಗ್ಗೆ ಸ್ಪಷ್ಟನೆ ಕೊಟ್ಟರು. ಇದರ ಬಗ್ಗೆ ವರುಣ್ ಆರಾಧ್ಯ ಏನೂ ಹೇಳಿರಲಿಲ್ಲ. ಯಾವಾಗ ವರ್ಷಾ ಪರ ಸೋಷಿಯಲ್ ಮೀಡಿಯಾದಲ್ಲಿ ಜನರು ಧ್ವನಿ ಎತ್ತಲು ಶುರು ಮಾಡಿದರು ಆಗ ಪೋಸ್ಟ್ ಹಾಕಿದ್ದರು.

ವರುಣ್ ಆರಾಧ್ಯ ಪೋಸ್ಟ್‌:

'ಎಲ್ಲರಿಗೂ ನಮಸ್ಕಾರ ನೀವು ವರ್ಷಾ ಕಾವೇರಿ ಮತ್ತು ನನಗೆ ತೋರಿಸಿದ ಸಪೋರ್ಟ್‌ಗೆ ತುಂಬಾ  ವಂದನೆಗಳು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಲಹೆ ಮತ್ತು ದೃಷ್ಟಿಕೋನವಿದೆ, ಹೀಗಾಗಿ ನಮ್ಮ ನಿರ್ಧಾರವನ್ನು ನೀವು ಒಪ್ಪಿಕೊಂಡು ನಮಗೆ ಸಪೋರ್ಟ್ ಮಾಡಬೇಕು. ವರ್ಷಾ ಮತ್ತು ನಾನು ಪರಸ್ಪರ ತೀರ್ಮಾನ ಮಾಡಿಕೊಂಡು ದೂರ ಆಗಿರುವುದು ಇದಕ್ಕೆ ನಮ್ಮ ಸ್ನೇಹಿತರು ಅಥವಾ ನಮ್ಮ ಕುಟುಂಬದವರು ಕಾರಣವಲ್ಲ ಹಾಗೂ ಅವರನ್ನು ಈ ವಿಚಾರದಲ್ಲಿ ಎಳೆಯಬೇಡಿ. ಒಳ್ಳೆಯ ರೀತಿಯಲ್ಲಿ ಸಂಬಂಧ ಶುರು ಮಾಡಿ ಒಳ್ಳೆಯ ರೀತಿಯಲ್ಲಿ ಅಂತ್ಯವಾಡುತ್ತಿದ್ದೀವಿ. ವರ್ಷಾ ಕಾವೇರಿ ಮುಂದಿನ ಕೆಲಸಗಳಿಗೆ ಒಳ್ಳೆಯದಾಗಲಿ ಎಂದು ಹೇಳಲು ಇಷ್ಟ ಪಡುತ್ತೀನಿ. ಇಲ್ಲಿಯತನಕ ನೀವು ನೀಡಿದ ಪ್ರೋತ್ಸಾಹ ಮತ್ತು ಬೆಂಬಲ..ಇನ್ನುಮುಂದೆನೂ ಸದಾ ಇರಲಿ'  ಎಂದು ವರುಣ್ ಬರೆದುಕೊಂಡಿದ್ದಾರೆ.

ರೀಲ್ಸ್‌ನಿಂದ ಅರಳಿದ ಪ್ರೀತಿ; ಬೈಕ್ ಚಿನ್ನ ಪಡೆದು ವರುಣ್‌ - ವರ್ಷಾ ಬ್ರೇಕಪ್, ಪೋಸ್ಟ್ ವೈರಲ್!

ವರುಣ್ ಸಹೋದರಿ ಚೈತ್ರಾ ಆರಾಧ್ಯ ಕೂಡ ಈ ವರ್ಷಾ ಕಾವೇರಿ ಜೊತೆ ಆತ್ಮೀಯವಾಗಿದ್ದ ಕಾರಣ ಇನ್‌ಸ್ಟಾಗ್ರಾಂನಲ್ಲಿ ನೆಟ್ಟಿಗರು ಪ್ರಶ್ನೆ ಮಾಡಿ ಏನಾಯ್ತು ಇದಕ್ಕೆ ನೀವು ಸಪೋರ್ಟ್ ಮಾಡಬಾರದು ಎನ್ನುತ್ತಿದ್ದರು. ಹೀಗಾಗಿ ಚೈತ್ರಾ ಕೂಡ ಸ್ಪಷ್ಟನೆ ಕೊಟ್ಟಿದ್ದಾರೆ.

'ಇಲ್ಲಿ ಯಾರೂ ಯಾರಿಗೂ ಸಪೋರ್ಟ್ ಮಾಡುತ್ತಿಲ್ಲ ಅವರಾಗಿಯೇ ನಿರ್ಧಾರ ತೆಗೆದುಕೊಂಡಿರುವುದು. ಈ ವಿಚಾರದಲ್ಲಿ ನಮ್ಮನ್ನು ದೂರಬೇಡಿ. ನಮ್ಮನ್ನು ಕೇಳಿ ಹೇಳಿ ಅವರಿಬ್ಬರು ಸಂಬಂಧ ಶುರು ಮಾಡಿಲ್ಲ ಅವರಿಬ್ಬರೇ ಸೃಷ್ಟಿಸಿ ಕೊಂಡಿರುವ ಪ್ರಪಂಚ ಮಾಡಿಕೊಂಡಿರುವ ದಾರಿ. ಅವರಿಬ್ಬರೂ ದೂರಾಗುತ್ತಿರುವು ಸರಿಯಲ್ಲ ಅದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ ಆದರೆ ಭವಿಷ್ಯದಲ್ಲಿ ಅವರೇ ಒಟ್ಟಿಗಿದ್ದು ಪರಸ್ಪರ ಖುಷಿ ಮತ್ತು ನೋವು ಹಂಚಿಕೊಳ್ಳಬೇಕು. ಅವರಿಬ್ಬರ ಮೇಲೆ ಯಾರೂ ದ್ವೇಷ ಸಾಧಿಸಬೇಡಿ. ಪ್ರತಿಯೊಬ್ಬರಿಗೂ ಪರ್ಸನಲ್ ಸಮಸ್ಯೆ ಇರುತ್ತದೆ ಪರ್ಸನಲ್ ಜೀವನ ಇರುತ್ತದೆ. ನಮಗೂ ಜೀವನ ಇದೆ ಅದರ ಮೇಲೆ ಗಮನ ಕೊಟ್ಟು ಮುಂದೆ ಸಾಗೋಣ. ಈ ಸಮಯದಲ್ಲಿ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಿರುವ ಪ್ರತಿಯೊಬ್ಬರಿಗೂ ವಂದನೆಗಳು' ಎಂದು ಚೈತ್ರಾ ಬರೆದುಕೊಂಡಿದ್ದಾರೆ.

ಒಂದು ಹೆಣ್ಣಿಗೆ ಮೋಸ ಮಾಡಬಾರದು ಇದು ಗಂಡು ಜಾತಿಗೆ ಅವಮಾನ, ವರ್ಷಾ ಕಾವೇರಿ ನಿನಗೆ ಕೊಡಿಸಿರುವ ದುಬಾರಿ ಗಿಫ್ಟ್‌ಗಳನ್ನು ವಾಪಸ್ ಕೊಡಬೇಕು, ವರ್ಷಾ ಖರ್ಚು ಮಾಡಿರುವ ಹಣ ಕೊಡಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!