ವಂದೇ ಮಾತರಂ ಹಾಡಿದ ಲಕ್ಷ್ಮಿನಿವಾಸ ಟೀಮ್. ಆದ್ರೆ ವೀಕ್ಷಕರಿಸಿ ಸಿಸಿಟಿವಿ ಫಿಕ್ಸ್ ಮಾಡ್ತಿರೋ ಜಯಂತ್ದೇ ಚಿಂತೆ! ಏನಿದು?
ಇಂದು ಎಲ್ಲೆಡೆ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ವಿವಿಧ ಕ್ಷೇತ್ರಗಳ ಗಣ್ಯರು ಶುಭಾಶಯ ಕೋರುತ್ತಿದ್ದಾರೆ. ಸೀರಿಯಲ್ ತಾರೆಯರೂ ಜನರಿಗೆ ಸ್ವಾತಂತ್ರ್ಯದ ಶುಭಾಶಯ ಕೋರುತ್ತಿದ್ದಾರೆ. ಅದರಂತೆಯೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಲಕ್ಷ್ಮಿ ನಿವಾಸ ಟೀಮ್ನ ತಾರೆಯರು ಕೂಡ ವಂದೇ ಮಾತರಂ ಹಾಡುವ ಮೂಲಕ ಶುಭಾಶಯ ಕೋರಿದ್ದಾರೆ. ಲಕ್ಷ್ಮಿ ನಿವಾಸ ಸೀರಿಯಲ್ನಲ್ಲಿ ಇರುವ ಬಹುತೇಕ ಎಲ್ಲಾ ನಟರು ಇದರಲ್ಲಿ ಕಾಣಿಸಿಕೊಂಡರೂ ನಾಯಕ, ಎಲ್ಲರ ಗಮನ ಸೆಳೆಯುತ್ತಿರೋ ಸೈಕೋಪಾತ್ ಜಯಂತ್ ಮಾತ್ರ ಕಾಣೆಯಾಗಿದ್ದಾರೆ. ಇದರ ಬಗ್ಗೆಯೇ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಜಯಂತ್ ಎಲ್ಲಿ ಎಂದು ಕೇಳುತ್ತಿದ್ದಾರೆ.
ಅಷ್ಟಕ್ಕೂ ಸಿಸಿಟಿವಿ ಹಾಕ್ತಿರೋ ಜಯಂತ್ ಹೋಗಿದ್ದೆಲ್ಲಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಈ ಸೀರಿಯಲ್ ನಾಯಕ ಜಯಂತ್ ಸೈಕೋಪಾತ್ ಎನ್ನುವುದು ಈ ಸೀರಿಯಲ್ ವೀಕ್ಷಕರಿಗೆ ಗೊತ್ತು. ಈತನಿಗೆ ಪತ್ನಿಯ ಮೇಲೆ ಅದೆಷ್ಟು ಪ್ರೀತಿ ಎಂದರೆ ಅದೇ ಮುಳ್ಳಾಗುತ್ತಿದೆ. ಏಕೆಂದರೆ, ಈತನಿಗೆ ಪತ್ನಿಯ ಮೇಲೆ ಇರುವುದು ಕೇವಲ ಪ್ರೀತಿ ಅಲ್ಲ, ಇದು Obsessive Love Disorder. ಇದೇ ಕಾರಣಕ್ಕೆ ಪ್ರತಿ ಕ್ಷಣವೂ ಆತನಿಗೆ ಪತ್ನಿಯ ಮೇಲೆ ಸಂಶಯ. ಹಾಗೆಂದು ಸಂಶಯದ ಪಿಶಾಚಿ ಎಂದಲ್ಲ. ಕೆಲವು ಗಂಡಸರಿಗೆ ಮತ್ತು ಹೆಂಗಸರಿಗೆ ಕೂಡ ಸಂಶಯ ಎನ್ನುವುದು ಇರುತ್ತದೆ. ಪತಿ-ಪತ್ನಿ ಯಾರ ಜೊತೆಯಾದ್ರೂ ನಗುತ್ತಾ ಮಾಡಿದರೆ ಅದನ್ನು ಸಹಿಸುವುದಿಲ್ಲ. ಆದರೆ ಇಲ್ಲಿ ಜಯಂತ್ ಕ್ಯಾರೆಕ್ಟರ್ ಹಾಗಲ್ಲ. ಈತನಿಗೆ ಇರುವುದು ಪ್ರೇಮದ ಗೀಳು. ಪತ್ನಿಗೆ ಏನು ಬೇಕೋ ಎಲ್ಲವನ್ನೂ ಮಾಡುತ್ತಾನೆ. ಆದರೆ ಆಕೆ ಮಾತ್ರ ತನ್ನವಳಾಗಿಯೇ ಇರಬೇಕು ಎನ್ನುವ ಸ್ಥಿತಿ.
ಸಾಕ್ಷಾತ್ ಲಕ್ಷ್ಮಿ ಲುಕ್ನಲ್ಲಿ ಹಳೆಯ ಶಾರ್ವರಿ: ಯಾಕ್ ಮೇಡಂ ಮೋಸ ಮಾಡಿದ್ರಿ ಕೇಳ್ತಿದ್ದಾರೆ ಫ್ಯಾನ್ಸ್
ಇದೀಗ ಈ ಸ್ಥಿತಿ ಎಲ್ಲಿಯವರೆಗೆ ಬಂದಿದೆ ಎಂದರೆ ಮನೆಯ ಒಳಕ್ಕೆ ಸಿಸಿಟಿವಿ ಹಾಕಿಸಿದ್ದಾನೆ. ಮನೆಯ ಹೊರಗೆ ಈಗ ಸಿಸಿಟಿವಿ ಅಳವಡಿಸಿದ್ದಾರೆ. ಹಾಗಂತ ಪತ್ನಿ ಬೇರೊಬ್ಬರ ಪುರುಷನ ಜೊತೆ ಅಂತಲ್ಲ, ಮಹಿಳೆಯರ ಜೊತೆನೂ ಮಾತನಾಡಬಾರದು. ಏನಿದ್ದರೂ ಆಕೆ ನನಗೊಬ್ಬಳಿಗೇ ಸೀಮಿತ ಎನ್ನುವುದು ಆತನ ಮನಸ್ಥಿತಿ. ತನ್ನ ಗಂಡ ಹುಚ್ಚನಂತೆ ಪ್ರೀತಿಸಬೇಕು ಅಂತ ಬಯಸ್ತಾರಲ್ಲ ಹೆಣ್ಣುಮಕ್ಕಳು, ಅಂಥವರಿಗೆ ಪ್ರತೀಕದಂತೆ ಇದ್ದಾನೆ ಈ ಜಯಂತ್. ಜಾಹ್ನವಿ ಮೇಲಿನ ಪತಿ ಜಯಂತನ ಅತಿಯಾದ ಪ್ರೀತಿ, ಕಾಳಜಿ ವೀಕ್ಷಕರಿಗೆ ಅಸಹನೀಯ ಎನಿಸುತ್ತಿದೆ.
ಅದ್ಯಾವ ಮಟ್ಟಿಗೆ ಎಂದರೆ, ಈ ಮಟ್ಟಿಗಿನ ಪ್ರೀತಿ ಉರುಳಾಗುವ ಸಂಭವವೇ ಹೆಚ್ಚು ಎನ್ನುತ್ತಿದ್ದಾರೆ. ಈ ನಡುವೆ ಜಾಹ್ನವಿ ಮಾತ್ರ ಪತಿ ಜಯಂತನ ಪ್ರೀತಿಗೆ ಕರಗಿದ್ದಾಳೆ ನಿಜ. ಆದರೆ, ಅವನ ಈ ಸ್ವಭಾವಕ್ಕೆ ಚಿಂತಿಸುತ್ತಿದ್ದಾಳೆ. ಇದನ್ನೇ ವೀಕ್ಷಕರು ಪ್ರಶ್ನಿಸುತ್ತಿದ್ದಾರೆ. ಅತ್ತ ಸೀರಿಯಲ್ನಲ್ಲಿ ಜಯಂತ್ ಸಿಸಿಟಿವಿ ಹಾಕುವಲ್ಲಿ ಬಿಜಿಯಾಗಿದ್ರೆ, ಇತ್ತ ಸ್ವಾತಂತ್ರ ದಿನದ ಶುಭಾಶಯ ಕೋರುವಲ್ಲಿಯೂ ಆತ ಮಿಸ್ ಆಗಿದ್ದಾನೆ. ಅದಕ್ಕಾಗಿಯೇ ಆತ ಎಲ್ಲಿ, ಸಿಸಿಟಿವಿ ಹಾಕ್ತನೇ ಮಿಸ್ ಆಗಿಬಿಟ್ನಾ ಎಂದು ಕಾಲೆಳೆಯುತ್ತಿದ್ದಾರೆ.
'ಗೌರಿ' ನೋಡಲು ಬಂದ ನಿವೇದಿತಾ: ಅಂಗಡಿ ಮುಚ್ಕೊಳಮ್ಮಾ ಅಂತೆಲ್ಲಾ ಹೇಳೋದಾ ನೆಟ್ಟಿಗರು?