ಧಾರವಾಡದ ಚೆಲುವೆ ದೀಪಾ ಹೀರೆಮಠ 'ಕಾವ್ಯಾಂಜಲಿ' ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಕನ್ನಡ ಧಾರಾವಾಹಿಗಳಿಂದ ದೂರ ಉಳಿಯಲು ಕಾರಣವೇನು ಎಂದು ಬರೆದುಕೊಂಡಿದ್ದಾರೆ.
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕಾವ್ಯಾಂಜಲಿ ಧಾರಾವಾಹಿಯ ಪ್ರಮುಖ ಪಾತ್ರಧಾರಿಯಾಗಿ ಧಾರಾವಾಡದ ಚೆಲುವೆ ದೀಪಾ ಹೀರೇಮಠ ಅಭಿನಯಿಸುತ್ತಿದ್ದಾರೆ. ಕನ್ನಡ ಧಾರಾವಾಹಿಗೆ ಮತ್ತೆ ಕಮ್ ಬ್ಯಾಕ್ ಮಾಡಿರುವುದರ ಬಗ್ಗೆ ಮಾತನಾಡಿದ ದೀಪಾ ಲಾಕ್‌ಡೌನ್ ವೇಳೆ ಅನುಭವಿಸಿದ ಕಹಿ ಕ್ಷಣಗಳನ್ನೂ ಹಂಚಿಕೊಂಡಿದ್ದಾರೆ.
ದೀಪಾ ಪೋಸ್ಟ್:
'ಹಾಯ್ ಇನ್‌ಸ್ಟಾಗ್ರಾಂ ಫ್ಯಾಮಿಲಿ. ಎಲ್ಲರಿಗೂ ನಮಸ್ಕಾರ. ಕನ್ನಡ ಪ್ರಾಜೆಕ್ಟ್‌ಗಳನ್ನು ನಾನು ಯಾಕೆ ಆಯ್ಕೆ ಮಾಡಿಕೊಳ್ಳುತ್ತಿಲ್ಲ ಎಂದು ತುಂಬಾ ಜನರು ಮೆಸೇಜ್ ಮಾಡಿ ಕೇಳುತ್ತಿದ್ದರು. ನಾನು ಇಷ್ಟು ದಿನಗಳ ಕಾಲ ತೆಲುಗು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದೆ. ಇದೇ ಸಮಯದಲ್ಲಿ ಕೊರೋನಾ ಲಾಕ್‌ಡೌನ್ ಶುರುವಾಯ್ತು. ಏನೋ ಕೆಲಸವಿಲ್ಲದೇ ಹಾಗೆಯೇ ತಿಂಗಳು ಕಳೆದೆ. ಆ ಸಮಯದಲ್ಲಿ ಎದುರಿಸಿದ ತೊಂದರೆ ಒಂದೆರಡಲ್ಲ. ನನ್ನ ತಾಯಿಗೆ ಗಾಯವಾಗಿತ್ತು. ಇದರಿಂದ ಗಂಭೀರ ಆಪರೇಷನ್ ಮಾಡಿಸಲಾಗಿತ್ತು. ಆ ನಂತರ ನನ್ನ ತಂದೆಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂತು. ಒಂದಾದ ಮೇಲೊಂದು ಸಮಸ್ಯೆಗಳಿಂದ ಮನೆಯಲ್ಲಿಯೇ ಉಳಿಯಬೇಕಾಗಿತ್ತು. ಎಲ್ಲವೂ ಸುಧಾರಿಸಿಕೊಳ್ಳುತ್ತಿರುವ ಕಾರಣ ಮತ್ತೆ ಕಿರುತೆರೆಗೆ ಮರಳುತ್ತಿರುವೆ. ಇದು ನನ್ನ ಹೊಸ ಪ್ರಾಜೆಕ್ಟ್.ಸೋಮವಾರದಿಂದ ಶನಿವಾರದವರೆಗೆ ಪ್ರಸಾರವಾಗಲಿರುವ ಕಾವ್ಯಾಂಜಲಿ ಧಾರಾವಾಹಿಯಲ್ಲಿ ಅಂಜಲಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವೆ,' ಎಂದು ದೀಪಾ ಬರೆದುಕೊಂಡಿದ್ದಾರೆ.
'ಕ್ರಿಟಿಕಲ್ ಕೀರ್ತನೆಗಳು' ಚಿತ್ರದಲ್ಲಿ ಅಭಿನಯಿಸಿರುವ ದೀಪಾ 'ಬ್ರಹ್ಮಾಸ್ತ್ರ', 'ಮಹಾಸತಿ' ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ತೆಲುಗಿನ 'ಪ್ರೇಮ ಸಾಗರ' ತುಂಬಾನೇ ನೇಮ್ ಆ್ಯಂಡ್ ಫೇಮ್ ತಂದು ಕೊಟ್ಟಿದೆ. ಪರಭಾಷೆಯಲ್ಲಿ ಅವಕಾಶಗಳಿದ್ದರೂ, ಕನ್ನಡ ಧಾರಾವಾಹಿಯನ್ನೇ ಆಯ್ಕೆ ಮಾಡಿಕೊಂಡಿರುವುದಕ್ಕೆ ಕಾಮೆಂಟ್‌ನಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.