
ಬೆಂಗಳೂರು(ಫೆ.15): ಬಿಗ್‌ಬಾಸ್ 8ನೇ ಆವೃತ್ತಿ ರಿಯಾಲಿಟಿ ಶೋ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಜ್ಯೋತಿಷಿ ಗೆಟಪ್‌ನಲ್ಲಿ ಕಾಣಿಸಿಕೊಂಡ ನಟ, ಬಿಗ್‌ಬಾಸ್ ನಿರೂಪಕ ಕಿಚ್ಚ ಸುದೀಪ್, ಶೋ ಆರಂಭದ ಶುಭ ಘಳಿಗೆಯನ್ನು ಹೇಳಿದ್ದಾರೆ. ಇದೇ ಫೆಬ್ರವರಿ 28ರಂದು ಸಂಜೆ 6 ಗಂಟೆಗೆ ಬಿಗ್‌ಬಾಸ್ ಸೀಸನ್ 8 ಆರಂಭಗೊಳ್ಳಲಿದೆ.
ಕಾಮಿಡಿ ಮಾಡೋರಿಗೂ ಬಿಗ್‌ಬಾಸ್ ಮನೆಯಲ್ಲಿದೆ ಜಾಗ; ನಯನಾ ಹೋಗೋದು ಗ್ಯಾರಂಟಿ?
ಭುದ, ಶುಕ್ರ, ಗುರು ಹಾಗೂ ಶನಿ ಒಂದೇ ಕೋಣೆಯಲ್ಲಿದೆ. ಉತ್ತಮ ಕಾಲ ಕೂಡಿಬಂದಿದ್ದು ಶುಭ ಮುಹೂರ್ತದಲ್ಲಿ ಬಿಗ್‌ಬಾಸ್ ಸೂಸೂತ್ರವಾಗಿ ಆರಂಭವಾಗಲಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಸುದೀಪ್ ಜ್ಯೋತಿಷಿ ಗೆಟಪ್‌ನಲ್ಲಿ ಕಾಣಿಸಿಕೊಂಡು ಬಿಗ್ ಬಾಸ್ ದಿನಾಂಕ ಘೋಷಿಸಿದ ಪ್ರೋಮೊವನ್ನು ಕಲರ್ಸ್ ಕನ್ನಡ ವಾಹಿನಿ ರಿಲೀಸ್ ಮಾಡಿದೆ.
ಬಿಗ್ ಬಾಸ್ ಮನೆಗೆ ಸನ್ನಿಧಿ; ಆಫರ್ ಬಂದ ವಿಚಾರ ಒಪ್ಪಿಕೊಂಡ ಅಗ್ನಿಸಾಕ್ಷಿ ನಟಿ!.
100 ದಿನಗಳ ಕಾಲ ನಡೆಯಲಿರುವ ಈ ಬಾರಿಯ ಬಿಗ್‌ಬಾಸ್ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಯಾರು, ಯಾರು ಫೈನಲ್ ಪ್ರವೇಶಿಸುತ್ತಾರೆ. ಕೊರೋನಾ ಬಳಿಕ ಆರಂಭವಾಗುತ್ತಿರುವ ಮೊದಲ ಬಿಗ್‌ಬಾಸ್ ಶೋ ಇದಾಗಿದ್ದು, ಸ್ಪರ್ಧೆಯ ಸ್ವರೂಪ ಹೇಗಿರಲಿದೆ ಅನ್ನೋ ಕುತೂಹಲ ಇದೀಗ ಇಮ್ಮಡಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.