
ಬಿಗ್‌ಬಾಸ್ ಭಾಷೆ ಯಾವುದೇ ಇರಲಿ... ಅಲ್ಲಿ ನಡೆಯುವುದೆಲ್ಲವೂ ಹೈಡ್ರಾಮಾಗಳೇ ಎನ್ನುವುದು ಬಹುತೇಕರ ಅಭಿಪ್ರಾಯ. ಇಲ್ಲಿ ಏನೇ ನಡೆದರೂ, ಯಾವುದೇ ಕೃತ್ಯ ಜರುಗಿದರೂ ಅದು ಎಲ್ಲವೂ ಅಚಾನಕ್ ಆಗಿ ನಡೆಯುವಂಥದ್ದು ಎಂದು ಬಿಗ್‌ಬಾಸ್ ಪ್ರಿಯರೆಲ್ಲಾ ಕಣ್ಕಣ್ ಬಿಟ್ಟು ನೋಡುತ್ತಿದ್ದರೂ, ಅದರಲ್ಲಿ ನಡೆಯುವ ಘಟನೆಗಳೆಲ್ಲವೂ ಸ್ಕ್ರಿಪ್ಟೆಡ್ ಅಂದರೆ ಹೇಳಿ ಮಾಡಿಸಿರುವುದು ಎಂಬುದಾಗಿ ಬಿಗ್‌ಬಾಸ್ ಮನೆಯಿಂದ ಈ ಹಿಂದೆ ಹೊರಬಂದಿರುವ ಹಲವು ಸ್ಪರ್ಧಿಗಳು ಹೇಳಿದ್ದುಂಟು. ಅಳುವುದು, ಕಿರುಚಾಡುವುದು, ಹೊರಗಡೆ ಇದ್ದಾಗ ಕುಟುಂಬದವರ ಬಳಿ ಸುಳಿಯದೇ ಇದ್ದವರು ಬಿಗ್‌ಬಾಸ್ ಮನೆಯೊಳಕ್ಕೆ ಹೋಗುತ್ತಿದ್ದಂತೆಯೇ ಅವರು ನೆನಪಾಗುತ್ತಾರೆ, ಇವರು ನೆನಪಾಗುತ್ತಾರೆ ಎಂದು ತಾವೂ ಅಳುವುದು ಅಲ್ಲದೇ, ಪ್ರೇಕ್ಷಕರನ್ನೂ ಅಳಿಸುವುದು, ಅದಕ್ಕೆ ಬಿಗ್‌ಬಾಸ್ ನಡೆಸಿಕೊಡುವವರೂ ಸೇರಿದಂತೆ ಮತ್ತೊಂದಿಷ್ಟು ಮಂದಿ ಸಮಾಧಾನ ಮಾಡಿದಂತೆ ಮಾಡುವುದು... ಹೀಗೆ ಎಲ್ಲವೂ ಇಲ್ಲಿ ಮೊದಲೇ ನಿಗದಿಯಾಗಿರುತ್ತದೆ, ಮನೆಯೊಳಕ್ಕೆ ಇದ್ದವರು ಕೈಗೊಂಬೆಗಳಷ್ಟೇ ಎಂದು ಬೇರೆ ಬೇರೆ ಭಾಷೆಗಳ ಸ್ಪರ್ಧಿಗಳೂ ಹೇಳಿದ್ದಾರೆ.
ಅದೇನೇ ಇದ್ದರೂ ಬಿಗ್‌ಬಾಸ್ ನೋಡುವ ದೊಡ್ಡ ವರ್ಗವೇ ಇದೆ. ಅದೇ ಕಾರಣಕ್ಕೆ ಟಿಆರ್ಪಿಯಲ್ಲಿಯೂ ಈ ಷೋ ನಂಬರ್ 1 ಸ್ಥಾನ ಗಳಿಸುತ್ತದೆ. ಸೋಷಿಯಲ್ ಮೀಡಿಯಾಗಳಲ್ಲಿ ಬಿಗ್‌ಬಾಸ್ ಸ್ಪರ್ಧಿಗಳ ಬಗ್ಗೆ ಟೀಕೆ ಮಾಡುವವರು ಅದೆಷ್ಟೋ ಮಂದಿ, ಮೀಮ್ಸ್ಗಳಿಗಂತೂ ಕೊರತೆ ಇಲ್ಲ. ಹೀಗೆ ಶಪಿಸುತ್ತಲೇ, ಇದೊಂದು ಕೆಟ್ಟ ಆಟ, ಹುಚ್ಚರ ಸಂತೆ ಅಂತೆಲ್ಲಾ ಹೇಳುತ್ತಲೇ ದಿನವೂ ಮಿಸ್ ಮಾಡದೇ ನೋಡುವ ವರ್ಗವೂ ಬಹಳ ದೊಡ್ಡದೇ ಇದೆ. ಆದರೆ ಇದರಲ್ಲಿ ನಡೆಯುವುದೆಲ್ಲವೂ ಸ್ಕ್ರಿಪ್ಟೆಡ್ ಎನ್ನುವುದು ಮಾತ್ರ ಅರಿತವರು ಕೆಲವೇ ಮಂದಿ. ಇದರಲ್ಲಿ ನಡೆಯುವ ಕಾದಾಟ, ಹೊಡೆದಾಟ ನೋಡುವುದಕ್ಕಾಗಿಯೇ ಹಲವರು ಉತ್ಸುಕರಾಗುವುದು ಉಂಟು. ಇದೇ ಕಾರಣಕ್ಕೆ, ಇಲ್ಲಿ ಇದನ್ನು ಯಥೇಚ್ಛವಾಗಿ ತೋರಿಸಲಾಗುತ್ತದೆ.
ಬಿಗ್‌ಬಾಸ್ ಮಜಾ ಮಾಡ್ತಾವ್ರೆ ಬಾಸು.... 'ಸಮ್ಥಿಂಗ್ ಸ್ಪೆಷಲ್' ಎನ್ನುತ್ತಲೇ ಹೊಸ ಪ್ರೊಮೋ ಬಿಡುಗಡೆ!
ಈಗ ಎಲ್ಲಾ, ಹೊಡೆದಾಟ- ಬಡಿದಾಟಗಳು ಒಂದೇ ಕಡೆ ನೋಡುವ ಭಾಗ್ಯವನ್ನು ಬಿಗ್ಬಾಸ್ನ ಹೊಡೆದಾಟ ಪ್ರೇಮಿಗಳಿಗೆ ಕಲರ್ಸ್ ಕನ್ನಡ ವಾಹಿನಿ ನೀಡಿದೆ! ಹೌದು. ಇಲ್ಲಿಯವರೆಗೆ ನಡೆದಿರುವ ಬಿಗ್‌ಬಾಸ್ ಸ್ಪರ್ಧಿಗಳ ಕಾದಾಟದ ದೃಶ್ಯಗಳನ್ನು ಒಂದೇ ವಿಡಿಯೋದಲ್ಲಿ ತೋರಿಸಿ ಅದನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದೆ. ಇದನ್ನು ನೋಡಿದ ಬಿಗ್‌ಬಾಸ್ ಪ್ರೇಮಿಗಳು ಆಹಾ! ನೋಡಲು ಎರಡು ಕಣ್ಣು ಸಾಲ್ತಿಲ್ಲ ಎಂದಿದ್ದಾರೆ. ಇದರಲ್ಲಿ ಅಸಲಿಗೆ ಜಗಳ ನಡೆಯುತ್ತಿರುವ ಸಂದರ್ಭದಲ್ಲಿ ಅದನ್ನು ಬಿಡಿಸಲು ಹೋದವರ ಬಗ್ಗೆ ತೋರಿಸಲಾಗಿದೆ. ಇದೇ ಕಾರಣಕ್ಕೆ, ಇದಕ್ಕೆ ಜಗಳದ ಬೆಂಕಿಯನ್ನು ನಂದಿಸುವವರೇ ನಮ್ಮ ಹೀರೋಗಳು ಎಂದು ಶೀರ್ಷಿಕೆ ನೀಡಲಾಗಿದೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ. ಆದರೆ ಹಲವರು ಇಲ್ಲಿಯೂ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ. ಅವರನ್ನು ಉಳಿಸಿ, ಇವರನ್ನು ಉಳಿಸಿ ಎಂದು ಹೇಳುತ್ತಿದ್ದಾರೆ. ಓನ್ಲಿ ಪ್ರತಾಪ್, ಓನ್ಲಿ ಕಾರ್ತಿಕ್, ಓನ್ಲಿ ಸಂಗೀತಾ... ಹೀಗೆ ನಮ್ಮ ನೆಚ್ಚಿನ ಸ್ಪರ್ಧಿಗಳ ಪರವಾಗಿ ಬ್ಯಾಟಿಂಗ್ ಬೀಸುತ್ತಿದ್ದಾರೆ. ಕೊನೆಯಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಸದ್ಯ ಈಗಿರುವ ಕುತೂಹಲ. ಇದಾಗಲೇ ವೈಲ್ಡ್ ಕಾರ್ಡ್ ಎಂಟ್ರಿ ಕೂಡ ನಡೆದಿದ್ದು, ಬಿಗ್‌ಬಾಸ್ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.
ನಾಮಿನೇಟ್ ಆದವರ ಪೈಕಿ ಇಬ್ಬರನ್ನು ಸೇವ್ ಮಾಡಲಿದ್ದಾರೆ ವೈಲ್ಡ್ಕಾರ್ಡ್ ಸ್ಪರ್ಧಿ: ಬಚಾವಾಗುವವರು ಯಾರು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.