
ನವದೆಹಲಿ(ಜು:26) ದಳಪತಿ ವಿಜಯ್ ಅಭಿನಯದ ಕಟ್ಟ ಕಡೆಯ ಸಿನಿಮಾ 'ಜನ ನಾಯಗನ್. ಉತ್ತಮವಾದ ಓಪನ್ನಿಂಗ್ ಪಡೆಕೊಂಡಿದೆ. ಆದರೆ ಹಳೆಯ ರೆಕಾರ್ಡ್‌ಗಳನ್ನ ಬ್ರೇಕ್ ಮಾಡುವಲ್ಲಿ ವಿಫಲವಾಗಿತ್ತು.ಆದರೆ ಮೂರನೇ ದಿನಕ್ಕೆ ಬಾಕ್ಸ್ ಆಫಿಸ್ ಕಲೆಕ್ಷನ್ ನೂರು ಕೊಟಿಯ ಕ್ಲಬ್‌ನತ್ತ ಸಾಗಿದೆ. ಹೌದು ಎರಡನೇ ದಿನದ ಗಳಿಕೆಯಲ್ಲಿ ಸ್ವಲ್ಪ ಕುಸಿತ ಕಂಡಿದ್ದ ಸಿನಿಮಾ, ಶನಿವಾರ ಮತ್ತೆ ಬದಲಾವಣೆ ಪಡೆದುಕೊಂಡಿದೆ. ಮೂರೇ ದಿನಗಳಲ್ಲಿ ವಿಶ್ವಾದ್ಯಂತ ₹171.84 ಕೋಟಿ ಕಲೆಕ್ಷನ್ ಮಾಡುವ ಮುಖೇನ ಫ್ಯಾನ್ಸ್ ನ ಕ್ರೇಜ್ ಹೆಚ್ಚಿಸಿದೆ.
ಇನ್ನೂ ಭಾರತದಲ್ಲಿ ಜನ ನಾಯಗನ್ 100 ಕೊಟಿಯತ್ತ ಸಾಗಿದೆ. ವಿದೇಶದಲ್ಲಿ 63.50 ಕೋಟಿ ಗಳಿಕೆಯಾಗಿರುವುದು ದಾಖಲಾಗಿದೆ.ಮೊದಲ ದಿನ: ಭಾರತದಲ್ಲ ಅಂದಾಜು ₹42.70 ಕೋಟಿ, ಎರಡನೇ ದಿನ ಸುಮಾರು ₹21.15 ಕೋಟಿ ಗಳಿಕೆ ದಾಖಲಿಸಿದೆ ಹಾಗು ಮೂರನೇ ದಿನ ವಾರಾಂತ್ಯದ ಹಿನ್ನೆಲೆಯಲ್ಲಿ ಚೇತರಿಕೆ ಕಂಡು ₹28.50 ಕೋಟಿಗೂ ಅಧಿಕ ಗಳಿಕೆ ಮಾಡಿದೆ.
ವಿಜಯ್ ಅವರ ಹಿಂದಿನ ಚಿತ್ರಗಳಾದಂತಹ 'ಲಿಯೋ' ,ರಜನಿಕಾಂತ್ ಅಭಿನಯದ 'ಜೈಲರ್' ಮತ್ತು 'GOAT', ಚಿತ್ರಗಳ ಮೊದಲ ದಿನದ ಗಲ್ಲಾ ಪೆಟ್ಟಿಗೆಯ ಕಲೆಕ್ಷನ್ ದಾಖಲೆಯನ್ನ ಬೀಟ್ ಮಾಡಲು ಸಾಧ್ಯವಾಗಿಲ್ಲ. ಇನ್ನೂ ಭಾರೀ ನಿರೀಕ್ಷೆ ಮೂಡಿಸಿದ್ದ ‘ಜನ ನಾಯಗನ್’ ಸಿನಿಮಾ ಮೊದಲ ದಿನವೇ 100 ಕೋಟಿ ರೂಪಾಯಿ ವರ್ಲ್ಡ್ ವೈಡ್ ಕಲೆಕ್ಷನ್ ಮಾಡುತ್ತದೆಂಬ ನಿರೀಕ್ಷೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. 'ಜನ ನಾಯಗನ್' ಸಿನಿಮಾ 78.27 ಕೋಟಿ ರೂಪಾಯಿಗೆ ಸೀಮಿತಗೊಂಡಿದ್ದು, ಮೊದಲ ದಿನವೇ 100 ಕೋಟಿ ಕ್ಲಬ್ ಸೇರುವಲ್ಲಿ ಹಿಂದೆ ಉಳಿದುಕೊಂಡಿತ್ತು.
ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿರುವ ಈ ಸಿನಿಮಾವನ್ನ, ಕೆವಿಎನ್ ಪ್ರೊಡಕ್ಷನ್ಸ್ ಬರೋಬ್ಬರಿ 500 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಿದೆ. 'ಜನ ನಾಯಗನ್' ಸಿನಿಮಾದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್ ಮತ್ತು ಮಮಿತಾ ಬೈಜು ಅವರಂತಹ ಪ್ರಮುಖ ತಾರೆಯರ ದಂಡೇ ಇದೆ. ಆದರೂ ಕೂಡ ಮೊದಲ ದಿನ ಗಲ್ಲ ಪೆಟ್ಟಿಗೆ ಅಂದುಕೊಂಡಷ್ಟು ಸದ್ದು ಮಾಡಿಲ್ಲ. ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಮೊದಲ ದಿನ ಭಾರತದಲ್ಲಿ 48.35 ಕೋಟಿ ನೆಟ್ ಕಲೆಕ್ಷನ್, 56.36 ಕೋಟಿ ಗ್ರಾಸ್ ಕಲೆಕ್ಷನ್ ಹಾಗೂ ವಿದೇಶದಲ್ಲಿ 40 ಕೋಟಿ ರೂಪಾಯಿ ಗಳಿಸಿ ಒಟ್ಟು 96.36 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ವರ್ಲ್ಡ್ ವೈಡ್ ಓಪನಿಂಗ್ ದಾಖಲಿಸಿತ್ತು. ಅದನ್ನ ಹಿಂದಿಕ್ಕುವಲ್ಲಿ ಜನ ನಾಯಗನ್ ವಿಫಲವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.