ಶೂಟಿಂಗ್ ಸೆಟ್‌ಲ್ಲಿ ಹಲ್ಲೆ ಪ್ರಕರಣ; ತೆಲುಗು ಧಾರಾವಾಹಿಯಿಂದ ಚಂದನ್ ಬ್ಯಾನ್?

Published : Aug 02, 2022, 01:32 PM IST
ಶೂಟಿಂಗ್ ಸೆಟ್‌ಲ್ಲಿ ಹಲ್ಲೆ ಪ್ರಕರಣ; ತೆಲುಗು ಧಾರಾವಾಹಿಯಿಂದ ಚಂದನ್ ಬ್ಯಾನ್?

ಸಾರಾಂಶ

ತೆಲುಗು ಧಾರಾವಾಹಿ ಶೂಟಿಂಗ್ ಸೆಟ್ ನಲ್ಲಿ ನಡೆದ ಹಲ್ಲೆ ಪ್ರಕರಣ  ಬೆನ್ನಲ್ಲೇ  ಕನ್ನಡದ ನಟ ಚಂದನ್ ಅವರನ್ನು ತೆಲುಗು ಧಾರಾವಾಹಿಯಿಂದ  ಬ್ಯಾನ್ ಮಾಡುವಂತೆ ಒತ್ತಾಯ ಕೇಳಿಬಂದಿದೆ. ತೆಲುಗು ಟಿಲಿವಿಶನ್ ಟೆಕ್ನೀಶಿಯನ್ಸ್ ಹಾಗು ವರ್ಕರ್ಸ್ ಫೆಡರೇಶನ್ ನಿಂದ ಚಂದನ್ ಕುಮಾರ್ ಬ್ಯಾನ್ ಮಾಡುವಂತೆ ಪತ್ರ ಬರೆದಿದ್ದಾರೆ. 

ತೆಲುಗು ಧಾರಾವಾಹಿ ಶೂಟಿಂಗ್ ಸೆಟ್ ನಲ್ಲಿ ನಡೆದ ಹಲ್ಲೆ ಪ್ರಕರಣ  ಬೆನ್ನಲ್ಲೇ  ಕನ್ನಡದ ನಟ ಚಂದನ್ ಅವರನ್ನು ತೆಲುಗು ಧಾರಾವಾಹಿಯಿಂದ  ಬ್ಯಾನ್ ಮಾಡುವಂತೆ ಒತ್ತಾಯ ಕೇಳಿಬಂದಿದೆ. ತೆಲುಗು ಟಿಲಿವಿಶನ್ ಟೆಕ್ನೀಶಿಯನ್ಸ್ ಹಾಗು ವರ್ಕರ್ಸ್ ಫೆಡರೇಶನ್ ನಿಂದ ಚಂದನ್ ಕುಮಾರ್ ಬ್ಯಾನ್ ಮಾಡುವಂತೆ ಪತ್ರ ಬರೆದಿದ್ದಾರೆ. ಅಂದಹಾಗೆ ಈ ಹಲ್ಲೆ ಪ್ರಕರಣ ಬಳಿಕ ಚಂದನ್ ಕುಮಾರ್ ಮತ್ತೆ ತೆಲುಗು ಧಾರಾವಾಹಿ ಮಾಡಲ್ಲ ಎಂದು ಹೇಳಿದ್ದರು. ಆದರೆ ಚಂದನ್ ತೆಲುಗು ಕಡೆ ಮುಖ ಮಾಡಲ್ಲ ಎಂದು ಹೇಳುವ ಮೊದಲೇ ತೆಲುಗಿನಲ್ಲಿ ಚಂದನ್ ಅವರನ್ನು ಬ್ಯಾನ್ ಮಾಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಚಂದನ್ ಬ್ಯಾನ್ ಮಾಡುವಂತೆ ಒತ್ತಾಯಿಸಿ ತೆಲುಗು ಟೆಲಿವಿಶನ್ ಟೆಕ್ನಿಶಿಯನ್ ಬರೆದಿರುವ ಪತ್ರ ವೈರಲ್ ಆಗಿದೆ. 

ತೆಲುಗು‌ ಟೆಲಿವಿಶನ್ ನಿರ್ಮಾಪಕರ ಮಂಡಳಿಗೆ, ತೆಲುಗು ಟಿಲಿವಿಶನ್ ಟೆಕ್ನೀಶಿಯನ್ಸ್ ಹಾಗು ವರ್ಕರ್ಸ್ ಫೆಡರೇಶನ್ ನಿಂದ ಪತ್ರಬರೆದಿದ್ದಾರೆ. ಪತ್ರದಲ್ಲಿ ಚಂದನ್ ಅವರನ್ನು ತೆಲುಗು ಸೀರಿಯಲ್ ಹಾಗು ಒಟಿಟಿಗಳಿಂದ ಬ್ಯಾನ್ ಮಾಡುವಂತೆ ಒತ್ತಾಯ ಮಾಡಲಾಗಿದೆ.ತೆಲುಗು‌ ಟೆಲಿವಿಶನ್ ನಿರ್ಮಾಪಕರ ಮಂಡಳಿ ಚಂದನ್ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ಕಾದುನೋಡಬೇಕು.

ಅವಮಾನ ಮಾಡುವ ಏಕೈಕ ಉದ್ದೇಶ ಅವರದಾಗಿತ್ತು: ಚಂದನ್‌ ಕುಮಾರ್‌

ಧಾರಾವಾಹಿ ಚಿತ್ರೀಕರಣ ಸೆಟ್ ನಲ್ಲಿ ಚಂದನ್ ಕುಮಾರ್ ಮೇಲೆ ನಡೆದ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬಳಿಕ ಚಂದನ್ ಕುಮಾರ್ ಪ್ರತ್ರಿಕಾಗೋಷ್ಠಿ ನಡೆಸಿ ನಡೆದ ಘಟನೆಯನ್ನು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಚಂದನ್, ಅವಮಾನ ಮಾಡುವ ಏಕೈಕ ಉದ್ದೇಶ ಅವರಲ್ಲಿತ್ತು ಎಂದು ಹೇಳಿದರು. ಅಸಿಸ್ಟಂಟ್ ಡೈರೆಕ್ಟರ್ ನನ್ನನ್ನು ಏಕವಚನದಲ್ಲಿ ಮಾತನಾಡಿಸಿ ನಿಂದಿಸಿದರು. ಏಕವಚನದಲ್ಲಿ ಯಾಕೆ ಮಾತನಾಡುತ್ತೀಯ ಎಂದು ನಾನು ಕೇಳಿ ಆತನನ್ನು ಆ ಕಡೆ ಹೋಗು ಎಂದು ತಳ್ಳಿ ರೂಮ್ ಬಾಗಿಲು ಹಾಕಿದೆ. ಇದು ತುಂಬಾ ಚಿಕ್ಕ ವಿಚಾರ. ಆದರೆ ಆತ ಅಲ್ಲಿ ಹೋಗಿ ಹೊಡೆದ ಅಂತ ಸುಳ್ಳು ಹೇಳಿದ. ಶೂಟಿಂಗ್ ನಡೆಯಲ್ಲ ಅಂತ ಹೇಳಿದರು. ಚಿತ್ರೀಕರಣ ಇಲ್ಲ ಎಂದರೆ ನಾನು ಹೊರಡುತ್ತೇನೆ ಅಂತ ಹೊರಟೆ. ಆದರೆ ಅಲ್ಲಿಂದ ನನ್ನನ್ನು ಹೋಗಲಿಕ್ಕೆ ಬಿಟ್ಟಿಲ್ಲ, ಎಲ್ಲರೂ ಅಡ್ಡ ಗಟ್ಟಿದರು. ತುಂಬಾ ಹೊತ್ತು ಅಲ್ಲೆ ಇದ್ದೆ. ಬಳಿಕ ಗ್ಯಾಂಗ್ ಕಟ್ಟಿಕೊಂಡು ಬಂದು ನನ್ನ ಮೇಲೆ ಹಲ್ಲೆ ಮಾಡಿದರು. ಆಗ ನಾನು ಅಲ್ಲಿ ಒಬ್ಬನೆ ಇದ್ದೆ. ನನ್ನ ಪರ ಯಾರು ಬಂದಿಲ್ಲ ಎಂದು ಚಂದನ್ ಹೇಳಿದರು. 

ತೆಲುಗು ಧಾರಾವಾಹಿ ಸೆಟ್‌ಲ್ಲಿ ಕನ್ನಡದ ನಟ ಚಂದನ್ ಮೇಲೆ ಹಲ್ಲೆ; ವಿಡಿಯೋ ವೈರಲ್

ಅವರು ಆರೋಪಿಸಿರುವ ಹಾಗೆ ನಾನು ಅಮ್ಮ ಎನ್ನುವ ಪದವನ್ನೆಲ್ಲಾ ಬಳಸಿ ಬೈದಿಲ್ಲ.ನನ್ನ ತಾಯಿಗೆ ಆದ ಪರಿಸ್ಥಿತಿ ನಿನ್ನ ತಾಯಿಗೂ ಆದರೇ ಸುಮ್ಮನಿರ್ತಿದ್ಯಾ ಎಂದು ತೆಲುಗಿನಲ್ಲಿಯೇ ಕೇಳಿದ್ದೆ. ಆದರೆ ಈ ವಿಡಿಯೋದಲ್ಲಿ ಅವರಿಗೆ ಬೇಕಾದ ಅಂಶವನ್ನು ಮಾತ್ರ ಕಟ್‌ ಮಾಡಿ ಆರೋಪ ಮಾಡಿದ್ದಾರೆ. ಒಟ್ಟಾರೆ ಇಡೀ ಚಿತ್ರೀಕರಣದ ವೇಳೆ ಸಾಕಷ್ಟು ಇಂಥ ಘಟನೆಗಳು ನಡೆದಿದ್ದವು ಎನ್ನುವುದನ್ನು ಚಂದನ್‌ ಕುಮಾರ್‌ ಹೇಳಿದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?