ಭಾಗ್ಯಲಕ್ಷ್ಮಿ ಸೀರಿಯಲ್ ಕುತೂಹಲ ಘಟ್ಟಕ್ಕೆ ತಲುಪಿದೆ. ಒಂದೆಡೆ ತಾಂಡವ್ ಮದುವೆಗೆ ರೆಡಿಯಾಗಿದ್ದರೆ, ಇತ್ತ ಮಗಳು ತಾನ್ವಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ. ಮುಂದೆ?
ಭಾಗ್ಯಲಕ್ಷ್ಮಿಯ ಗಂಡ ತಾಂಡವ್ ಮತ್ತು ಪ್ರೇಯಸಿ ಶ್ರೇಷ್ಠಾ ಮದುವೆಗೆ ಸನ್ನದ್ಧರಾಗಿದ್ದಾರೆ. ಮದುವೆಗೂ ಮುನ್ನ ಇರುವ ಹೂ ಮುಡಿಸುವ ಶಾಸ್ತ್ರಕ್ಕೆ ಶ್ರೇಷ್ಠಾ ರೆಡಿಯಾಗ್ತಿದ್ದಾಳೆ. ಪತಿ ಮತ್ತು ಪತ್ನಿಯನ್ನು ಬೇರೆ ಮಾಡಿ ವಿವಾಹಿತನನ್ನು ಮತ್ತೊಮ್ಮೆ ಮದ್ವೆಯಾಗುವಲ್ಲಿ ಶ್ರೇಷ್ಠಾ ಯಶಸ್ವಿಯಾಗುತ್ತಿದ್ದಾಳೆ. ಮಗನ ಈ ಸ್ವಭಾವದಿಂದ ಮಗನಿಗೇ ಚಾಲೆಂಜ್ ಮಾಡಿ ಅಮ್ಮಾ ಕುಸುಮಾ ತಾನೇ ಸಂಸಾರದ ಜವಾಬ್ದಾರಿ ಹೊತ್ತಿದ್ದಾಳೆ. ಎಲ್ಲರನ್ನೂ ನೋಡಿಕೊಳ್ಳುವ ತಾಕತ್ತು ತನಗಿದೆ ಎಂದಿದ್ದಾಳೆ. ಎಲ್ಲವೂ ಹಾಗೂ ಹೀಗೂ ನಡೆದುಕೊಂಡು ಹೋಗುವಷ್ಟರಲ್ಲಿಯೇ ಬಿರುಗಾಳಿ ಬೀಸಿದೆ. ಭಾಗ್ಯ-ತಾಂಡವ್ ಮಗಳು ತನ್ವಿಗೆ ಅಪಘಾತವಾಗಿದ್ದು ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ.
ತನ್ವಿ ಆಸ್ಪತ್ರೆ ಸೇರಿದ್ದಾಳೆ. ಅವಳಿಗೆ ತುರ್ತಾಗಿ ರಕ್ತ ಬೇಕಿದೆ. ಅಪರೂಪದ ರಕ್ತದ ಗುಂಪಾಗಿರುವ ಕಾರಣ, ಎಲ್ಲಿಯೂ ಅದು ಸಿಗುತ್ತಿಲ್ಲ. ಅಪ್ಪ ಮತ್ತು ಮಗಳ ರಕ್ತದ ಗುಂಪು ಒಂದೇ ಆಗಿರುವ ಕಾರಣ, ಮಗಳನ್ನು ಉಳಿಸಿಕೊಳ್ಳಲು ಭಾಗ್ಯ ಗಂಡ ತಾಂಡವ್ಗೆ ಕಾಲ್ ಮಾಡಿದರೆ ಆತ ಕರೆಗೆ ಸಿಗುತ್ತಿಲ್ಲ. ಇತ್ತ ಹೂ ಮುಡಿಸುವ ಶಾಸ್ತ್ರಕ್ಕೆ ಅಣಿಯಾಗಿರೋ ಶ್ರೇಷ್ಠಳಿಗೆ ಭಾಗ್ಯ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಆಕೆಯ ಪತಿಯನ್ನೇ ಕಸಿದುಕೊಂಡಿರೋ ಶ್ರೇಷ್ಠಾ ಮದುವೆಗೆ ರೆಡಿಯಾಗಿರುವಾಗ ಈ ವಿಷಯವನ್ನು ತಾಂಡವ್ ಹೇಳಲು ಹೇಗೆ ಸಾಧ್ಯ? ತಾನು ಮದುವೆಗೋಸ್ಕರ ಊರಿಗೆ ಬಂದಿರುವುದಾಗಿ ಶ್ರೇಷ್ಠಾ ಹೇಳಿದ್ದಾಳೆ. ಆದರೆ ಮದುವೆ ಯಾರ ಜೊತೆ ಎಂದು ಮಾತ್ರ ಹೇಳಲಿಲ್ಲ. ತನ್ನ ಗಂಡ ತಾಂಡವ್ ಎಲ್ಲಿದ್ದಾನೆ ಎಂದು ಭಾಗ್ಯ ಕೇಳಿದಾಗ, ಅದಕ್ಕೆ ಕಾರಣವೇನು ಎಂದು ಶ್ರೇಷ್ಠಾ ಕೇಳಿದ್ದಾಳೆ.
ಜೇಬಿಂದ ಗಣೇಶ ಬೀಡಿ ಹೊರಬಂದು... ಕಾಫಿ ಜೊತೆ ಒಲೆಮುಂದೆ... ಆಹಾ ಚಳಿಗಾಲವೆಂಬ ಸ್ವರ್ಗವೇ...
ಮಗಳು ತನ್ವಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದು, ತಾಂಡವ್ನಿಂದ ಮಾತ್ರ ಆಕೆಯನ್ನು ಬದುಕಿಸಲು ಸಾಧ್ಯ ಎಂದು ಭಾಗ್ಯಲಕ್ಷ್ಮಿ ಹೇಳಿದ್ದಾಳೆ. ಒಂದು ವೇಳೆ ಈ ವಿಷಯವೇನಾದರೂ ತಾಂಡವ್ಗೆ ತಿಳಿದರೆ ಮದುವೆ ಕ್ಯಾನ್ಸಲ್ ಮಾಡಿ ಮಗಳನ್ನು ಬದುಕಿಸಲು ಹೋಗುತ್ತಾನೆ ಎಂದು ಅರಿತ ಶ್ರೇಷ್ಠಾ ಸಿಗ್ನಲ್ ಸಿಗದೇ ಭಾಗ್ಯಳ ಮಾತು ಕೇಳಿದವರ ಹಾಗೆ ಆ್ಯಕ್ಟಿಂಗ್ ಮಾಡಿದ್ದು, ಕರೆ ಕಟ್ ಮಾಡಿದ್ದಾಳೆ. ಇತ್ತ ರಕ್ತ ಸಿಗದೇ ಹೋದರೆ ತನ್ವಿಯ ಜೀವಕ್ಕೆ ಅಪಾಯ ಅಂದಿದ್ದಾರೆ ಡಾಕ್ಟರ್... ಮುಂದೇನಾಗುತ್ತೆ ಎನ್ನುವುದು ಈಗಿರುವ ಕುತೂಹಲ.
ಭಾಗ್ಯ,ಕುಸುಮ ಮತ್ತು ಕುಟುಂಬದವರ ಅಳಲನ್ನು ಅಭಿಮಾನಿಗಳಿಗೆ ನೋಡಲು ಆಗುತ್ತಿದೆ. ಇದೊಂದು ಸೀರಿಯಲ್ ಕಥೆ ಎನ್ನುವುದನ್ನೂ ಮರೆತು ಭಾಗ್ಯಳಿಗೆ ಧೈರ್ಯ ತುಂಬುತ್ತಿದ್ದಾರೆ. ತನ್ವಿಗೆ ಏನೂ ಆಗುವುದಿಲ್ಲ. ತಾಂಡವ್ಗೆ ಶ್ರೇಷ್ಠಾ ವಿಷಯ ತಿಳಿಸುವುದಿಲ್ಲ. ಹಾಗೆಂದು ಮಗಳಿಗೆ ಏನೂ ಆಗುವುದಿಲ್ಲ. ಧೈರ್ಯವಾಗಿರು, ದೇವರು ಇದ್ದಾನೆ ಎಂದೆಲ್ಲಾ ಸಂತೈಸುತ್ತಿದ್ದಾರೆ. ಇದೇ ವೇಳೆ ಶ್ರೇಷ್ಠಾ ಒಬ್ಬ ವಿಷಕನ್ಯೆ ಎಂದೆಲ್ಲಾ ಆಕೆಯನ್ನು ಜರಿಯುತ್ತಿದ್ದಾರೆ. ಹೆಣ್ಣನ್ನು ಗಟ್ಟಿಗಿತ್ತಿ ಎಂದು ತೋರಿಸುವ ನಿರ್ದೇಶಕರು ಹೀಗೆ ಹೆಣ್ಣುಮಕ್ಕಳನ್ನು ಅಸಹಾಯಕರನ್ನಾಗಿ ಮಾಡಬೇಡಿ ಪ್ಲೀಸ್, ಭಾಗ್ಯ-ಕುಸುಮ ಎಲ್ಲ ಹೆಣ್ಣುಮಕ್ಕಳಿಗೂ ಮಾದರಿ. ಅವರನ್ನು ಕಂಗೆಡುವಂತೆ ಮಾಡಬೇಡಿ ಎಂದು ನಿರ್ದೇಶಕರಿಗೂ ಕೆಲವು ಅಭಿಮಾನಿಗಳು ಪಾಠ ಮಾಡುತ್ತಿದ್ದಾರೆ.
ವೇದಾಂತ್ಗೆ ಹುಟ್ಟುಹಬ್ಬದ ಡಬಲ್ ಧಮಾಕಾ: 'ಬರ್ಮ' ಪೋಸ್ಟರ್ ರಿಲೀಸ್ ಜೊತೆ ವಿಶೇಷ ವಿಡಿಯೋ ರಿಲೀಸ್