Asianet Suvarna News Asianet Suvarna News

ಜೇಬಿಂದ ಗಣೇಶ ಬೀಡಿ ಹೊರಬಂದು... ಕಾಫಿ ಜೊತೆ ಒಲೆಮುಂದೆ... ಆಹಾ ಚಳಿಗಾಲವೆಂಬ ಸ್ವರ್ಗವೇ...

ಚಳಿ ಕಾಲಿಟ್ಟಿದೆ. ಅಡುಗೆ ಮನೆಯ ಒಲೆಯ ಮುಂದೆ ಕುಳಿತು ಬೆಚ್ಚಗಿನ ಅನುಭವ ಪಡೆದ ಅದೃಷ್ಟವಂತರ ಪೈಕಿ ಜನ ಜಗ್ಗೇಶ್​ ಕೂಡ ಒಬ್ಬರು. ಅವರು ಈ ಸುಂದರ ಅನುಭವವನ್ನು ಹೇಗೆ ಬಣ್ಣಿಸಿದ್ದಾರೆ ನೋಡಿ...
 

Actor Navarasa Nayaka Jaggesh recalls his childhood days in winter like this suc
Author
First Published Jan 9, 2024, 11:39 AM IST

ಈಗ ಎಲ್ಲೆಲ್ಲೂ ಚಳಿ... ಚಳಿ...  ಸದ್ಯ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೇ ಚಳಿ ಓಡಿಸಲು ರೂಂ ಹೀಟರ್​ ಬಳಸುವವರ ಸಂಖ್ಯೆ ಬಹುತೇಕ ಪಟ್ಟಣಗಳಲ್ಲಿಯೂ ಹೆಚ್ಚುತ್ತಿದೆ. ಅದೇ ಗ್ರಾಮೀಣ ಪ್ರದೇಶಗಳಲ್ಲಿ ಕಸ-ಕಡ್ಡಿ ಹಾಕಿ ಬೆಂಕಿ ಮಾಡಿ ಚಳಿ ಕಾಯಿಸಿಕೊಳ್ಳುವ ದೃಶ್ಯಗಳೂ ಕಾಣಸಿಗುವುದಿದೆ. ಆದರೆ ಹಳ್ಳಿ, ಪಟ್ಟಣಗಳಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಚಳಿಗಾಲ ಎಂದರೆ ಅದೇನೋ ಮುದ. ಒಲೆಯ ಮುಂದೆ ಬೆಚ್ಚಗೆ ಕುಳಿತುಕೊಳ್ಳುವ ಮಜವೇ ಬೇರೆ. ಅದರ ಸವಿ ಅರಿತವರಿಗೆ ಮಾತ್ರ ಗೊತ್ತು. ಇಂದು ಕೆಲವೇ ಕೆಲವು ಅದೃಷ್ಟವಂತ ಮಕ್ಕಳಿಗೆ ಈ ಸುಖ ಸಿಗುವುದು ಉಂಟು. ಆದರೆ ಕೆಲ ದಶಕಗಳ ಹಿಂದೆ ಹುಟ್ಟಿದ ಬಹುತೇಕ ಮಕ್ಕಳು ಈ ಬೆಚ್ಚಗಿನ ಅನುಭವ ಪಡೆದದ್ದುಂಟು. ಅಂಥದ್ದೇ ಒಂದು ಅನುಭವವನ್ನು ನಟ ಜಗ್ಗೇಶ್ ಅವರು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ​

ಚಳಿಗಾಲದ ನೆನಪನ್ನು ಅವರು ಹೇಗೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ಅವರ ಮಾತಲ್ಲೇ ಕೇಳಿ... 
ಜಾಲತಾಣದಲ್ಲಿ ಈ ಪೋಸ್ಟ್ ನೋಡಿ ಭಾವುಕನಾಗಿ ನನ್ನ ಬಾಲ್ಯ ನೆನಪಾಯಿತು..!! ಹೌದು. ನನ್ನ ಬಾಲ್ಯದ ಬಹುತೇಕ ಕಳೆದ ಜಾಗ ಈ ಅಡುಗೆ ಮನೆ ಕಾರಣ ಕರುವಿಗೆ ಶ್ರೇಷ್ಠಜಾಗ ಹಸುವಿನ ಮಡಿಲು.. ಮಕ್ಕಳಿಗೆ ಶ್ರೇಷ್ಠ ಅಮ್ಮನ ಸಾಂಗತ್ಯ ಅವಳು ಇರುತ್ತಿದ್ದದ್ದು ಬಹುತೇಕ ಸಮಯ ಅಡುಗೆಮನೆ ಹಾಗಾಗಿ ನಾವು ಅಲ್ಲೆ...

ಅಮ್ಮನಿಗೆ ಬೇಕಾದ ತರಕಾರಿ ಹೆಚ್ಚಿ ಕೈಯಲ್ಲೆ ರುಬ್ಬಿ ಅಥವಾ ಅರೆದು ಸಹಾಯ ಮಾಡೋದು... ವಿಶೇಷವಾಗಿ ಚಳಿಗಾಲದಲ್ಲಿ ರಾತ್ರಿಯ ಹೊತ್ತು ಅಡುಗೆಮನೆ ಉರಿವ ಒಲೆ ಪ್ರಯುಕ್ತ ಬೆಚ್ಚನೆಯ ಹೊದಿಕೆ ಮತ್ತೆ ಬೆಳಗಾದರೆ ನೀರು ಒಲೆ ಹುರಿಹಾಕೋ ಕಾಯಕ ಅಲ್ಲೂ ಬೆಚ್ಚಗೆ ಚೊತೆಗೆ ಅಲ್ಲಿಗೆ ಅಮ್ಮ ಕಾಫಿ ಕೊಡುತ್ತಿದ್ದಳು. 10 ಜನಕ್ಕೆ ಬಿಸಿನೀರು ಬೇಕು. ಹಾಗಾಗಿ ಹಂಡೆ ಮುಂದೆ ಅರ್ಧ ಗಂಟೆ ಕಾಯಂ... ಅಪ್ಪ ದೂರ ಇರುವ ಪ್ರಯುಕ್ತ ಜೇಬಿಂದ ಗಣೇಶ ಬೀಡಿ ಹೊರಬಂದು ಕಾಫಿ ಜೊತೆ ಒಲೆಮುಂದೆ ಸ್ವರ್ಗಕ್ಕೆ ಸಮವಾಗಿ ಚಳಿಗಾಲ ಓಡಿಹೋಗುತ್ತಿತ್ತು.

ಲಕ್ಷದ್ವೀಪದಲ್ಲಿ ಮೋದಿ: ಉಡುಪಿ ಬೀಚ್​ಗೂ ಬಂತು ಶುಕ್ರದೆಸೆ- ಅಮಿತಾಭ್, ಸೆಹ್ವಾಗ್​​ ಹೇಳಿದ್ದೇನು?

ಹೇಳಿ ಇಂದಿನ ಮಕ್ಕಳಿಗೆ ಈ ಸೌಭಾಗ್ಯ ಇದೆಯ? No chance... ಒಲೆ ಅಡುಗೆಮನೆಗೆ ಕೆಲಸ ಇಲ್ಲಾ! ನೆಂಟರು ಬಂದಾಗ ಮಾತ್ರ ನೋಡಿ ಇದು ಅಡುಗೆಮನೆ imported chimni toilet complete foreignದು ಎಂಬ ಬಿಂಕಮಾತ್ರ ಊಟ ಬರೋದು online ಅದು ಚಿಕ್ಕ ಮಕ್ಕಳೆ mobile ಹಿಡಿದು ಅಮ್ಮನಿಗೆ ಅಪ್ಪನಿಗೆ ಲೇ ನಿನಗೇನೋ ಲೇ ನಿನಗೇನೆ matter finish!!!! ಈ ದಿನಗಳ ನೋಡಿ ವಿಧಿಯಿಲ್ಲದೆ ಒಪ್ಪಿ ಬದುಕಬೇಕು..ಹಿಂದಿನ ಜೀವನ ಅದರ ಕಥೆ. ಇಂದಿನವರಿಗೆ what a funk ಎಂದು ಆಶ್ಚರ್ಯಪಟ್ಟು ಬಾಯಿ ಮೇಲೆ ಬೆರಳಿಟ್ಟು ಕಣ್ಣು ಅರಳಿಸಿ ನೋಡುತ್ತಾರೆ. Yes friends ನಾನು ಹೀಗೆ ಬೆಳೆದದ್ದು. ಅದು ಇದೆ. ಅಡುಗೆಮನೆಯಲ್ಲಿ ಅಮ್ಮನ ಕೈತುತ್ತು ತಿಂದು ಈಶ್ವರಗೌಡ ನಿಮ್ಮ ನವರಸನಾಯಕ ಆಗಿದ್ದು... ಏನೆ ಹೇಳಿ ಇಂಥ ಪರಿಸರದಲ್ಲಿ ಬೆಳೆದ ನಮಗೆ ನಮ್ಮತಂದೆ ತಾಯಿ ಅಜ್ಜ ಅಜ್ಜಿ ಬಂಧು ಬಳಗ ಉಂಡ ತಣಿಗೆ (ತಟ್ಟೆ) bloody old ಅಂತ ಗುಜರಿಗೆ ಹೋಯ್ತು ಬಂಧುಗಳು ಮಸಣದ ಮಣ್ಣಲ್ಲಿ ಕುರುಹು ಸಿಗದಂತೆ ಕರಗಿಹೋದರು...

ಚಳಿಗಾಲದ ಚಿತ್ರ ಬದುಕು ಜಗತ್ತು ಸತ್ಯ ಮಿತ್ಯ ಎಂದು ಅರಿವಾಗಲು 60ಕ್ಕೆ ಬಂದು ನಿಂತ ಅಂದಿನ ಅಡುಗೆ ಮನೆಯಲ್ಲಿ ಅಮ್ಮನ ಜೊತೆ ಆಡಿಬೆಳದ ಮಗ..don't worry ನೀವು ಅಲ್ಲಿಗೆ ಮುಂದೆ ಬರುತ್ತೀರಿ ಪ್ರೀತಿಸಿ ಪ್ರೀತಿಗಾಗಿ ಬಾಳಿ ಅದೆ ಉಳಿಯೋದು ನೆನಪಿಗೆ ಮಿಕ್ಕದ್ದು ದುಡಿದಿದ್ದೇಲ್ಲಾ ಕಂಡವರ ಪಾಲು!! ಇಂಥ ಕಥೆ ಹೇಳಲು ಕೆಲವರ್ಷಕ್ಕೆ ಯಾರು ಸಿಗರು. ಒಬಂಟಿ ಅಲೆದಾಟ all self service ಮುಂದಿನ ಪೀಳಿಗೆಯ ಬದುಕು....ಶುಭಂ

Follow Us:
Download App:
  • android
  • ios