
ತಮಿಳು ಕಿರುತೆರೆಯ ಜನಪ್ರಿಯ ನಟ ಇಂದಿರಾ ಕುಮಾರ್ ಫೆ.17ರಂದು ನಿಗೂಢವಾಗಿ ಕೊನೆ ಉಸಿರೆಳೆದಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಶೀಘ್ರವೇ ವಿಚಾರಣೆ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡರೂ ಸ್ಥಳೀಯರು ಇದು ಕೊಲೆ ಎನ್ನುತ್ತಿದ್ದಾರೆ.
ಕೋಡಿದೊಡ್ಡಿ ಆತ್ಮಹತ್ಯೆ; ರಾಮಕೃಷ್ಣನ ಅಭಿಮಾನಕ್ಕೆ ಹೆಮ್ಮೆ ಪಡಲು ಸಾಧ್ಯವಿಲ್ಲವೆಂದ ಯಶ್!
ನಡೆದದ್ದೇನು?
ಇಂದಿರಾ ಕುಮಾರ್‌ಗೆ ಸಿನಿಮಾ ಅಂದ್ರೆ ಪಂಚ ಪ್ರಾಣ. ಬಿಡುವಿದ್ಗಾಗಲೆಲ್ಲಾ ಸಿನಿಮಾ ನೋಡುತ್ತಾರೆ. ಅದರಂತೆ ಫೆ.17ರಂದು ಸಿನಿಮಾ ವೀಕ್ಷಿಸಿ ಸ್ನೇಹಿತನ ಮನೆಗೆ ತೆರಳಿದ್ದಾರೆ. ವಿಶ್ರಾಂತಿಸುವುದಾಗಿ ಸ್ನೇಹಿತರಿಗೂ ತಿಳಿಸಿದ್ದರು. ಎಷ್ಟು ಹೊತ್ತಾದರೂ ಬಾಗಿಲು ತೆರೆಯದ ಕಾರಣ ಸ್ನೇಹಿತರು ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಇಂದಿರಾ ನೇಣು ಬಿಗಿದ ಸ್ಥಿತಿಯನ್ನು ಕಂಡ ಸ್ನೇಹಿತರು ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ನಟಿ ಚಿತ್ರಾ ಮೊದಲ ಸಿನಿಮಾ ಬಿಡುಗಡೆ
ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕೊಠಡಿ ಪರಿಶೀಲನೆ ಮಾಡಲಾಗಿದ್ದು, ಡೆತ್ ನೋಟ್ ಆಗಲಿ ಯಾವುದೆ ಸಣ್ಣ ಸುಳಿವು ಸದ್ಯಕ್ಕೆ ಲಭ್ಯವಾಗಿಲ್ಲ.
ಇಂದಿರಾ ಕುಮಾರ್ ಮೂಲತಃ ಶ್ರೀಲಂಕಾದವರು. ಆ್ಯಕ್ಟಿಂಗ್ ಕ್ರೇಜಿದ್ದ ಕಾರಣ ಅವಕಾಶಗಳಿಗೆ ಹುಡುಕುತ್ತಿದ್ದರೆ. ಲಾಕ್‌ಡೌನ್‌ನಿಂದ ಇದ್ದ ಅವಕಾಶವನ್ನೂ ಕಳೆದುಕೊಂಡ ಕಾರಣ ಬೇಸರಗೊಂಡಿದ್ದು, ಆತ್ಮಹತ್ಯೆ ಮಾಡಿಕೊಂಡಿರ ಬೇಕು ಎಂಬುದಾಗಿ ಮೇಲ್ನೋಟಕ್ಕೆ ಮಾತನಾಡಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.