
ಕಿರುತೆರೆ ಪ್ರೇಕ್ಷಕರಿಗೆ ಸಾಕಷ್ಟುಮನರಂಜನೆ ನೀಡುತ್ತ ಹತ್ತಿರವಾಗುತ್ತಿರುವ ಈ ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 10.30ಕ್ಕೆ ಪ್ರಸಾರವಾಗುತ್ತಿದೆ. ಈಗ ಇದರ ವಿಶೇಷ ಸಂಚಿಕೆ ಪ್ರಸಾರವಾಗುತ್ತಿದೆ.
ರಾಘವೇಂದ್ರ ರಾಜ್‌ಕುಮಾರ್ ನಿರ್ಮಾಣದ 'ಜೀವ ಹೂವಾಗಿದೆ' ಇಂದಿನಿಂದ 9 ಗಂಟೆಗೆ ಪ್ರಸಾರ!
ಫೆ.14ರಂದು ಪ್ರೇಮಿಗಳ ದಿನಕ್ಕಾಗಿ ಈ ವಿಶೇಷ ಸಂಚಿಕೆಯನ್ನು ರೂಪಿಸಲಾಗಿದೆ. ಧಾರಾವಾಹಿ ನಾಯಕ ಶಂಕರ ತನ್ನ ಹೆಂಡತಿ ವಿಚಾರದಲ್ಲಿ ತಪ್ಪು ಮಾಡಿದ್ದೇನೆಂದು ಭಾವಿಸಿ ದರ್ಮಸ್ಥಳಕ್ಕೆ ಪಾದಯಾತ್ರೆ ಹೊರಡುತ್ತಾನೆ. ಪಾದಯಾತ್ರೆ ಸಂದರ್ಭದಲ್ಲಿ ಶಂಕರನ ಬದುಕು ಹಳ್ಳಿಯೊಂದರಲ್ಲಿ ನೆಲೆಗೊಂಡಾಗ ಅಲ್ಲಿನ ಕಾಳಿ ದರ್ಶನ ಆಗುತ್ತದೆ. ಭಕ್ತಿಯಿಂದ ಕೂಡಿದ ಈ ವಿಶೇಷ ಸಂಚಿಕೆ ಕೂಡ ಪ್ರಸಾರವಾಗುತ್ತಿದೆ.
ಏನಿದು ಅಚ್ಚರಿ! 'ಲಕ್ಷ್ಮೀ ಬಾರಮ್ಮ' ಚಂದನ್‌ಗೆ 'ಗೊಂಬೆ' ಜೊತೆ ಫಸ್ಟ್‌ನೈಟ್!
ಸಂಸ್ಕಾರ ಹಾಗೂ ಸಂಪ್ರದಾಯವನ್ನು ಉಸಿರಾಡುವ ನಾಯಕ ಶಂಕರ ಹಾಗೂ ಬದುಕಿನ ಪ್ರತಿಕ್ಷಣವನ್ನೂ ಖುಷಿಯಿಂದ ಕಳೆಯಬೇಕು, ನಮ್ಮ ಕಟ್ಟುಪಾಡುಗಳು ಜೀವವಿರೋಧಿಯಾಗಿರಬಾರದು ಎಂದು ಬಯಸುವ ನಾಯಕಿ ಪಾರು. ಹೀಗೆ ಎರಡು ವಿರುದ್ಧ ವ್ಯಕ್ತಿತ್ವಗಳು ಮದುವೆಯಾಗಿ ಸಂಸಾರ ಹೇಗೆಸಾಗುತ್ತಾರೆ ಎಂಬುದೇ ‘ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿಯ ಕಥಾಹಂದರ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.