ಲವರ್​ ಇದ್ರೆ ಹೇಳಿಬಿಡು, ಮದ್ವೆ ಮಾಡಿಸ್ತೇನೆ ಅಂದೆ ಡ್ರೋನ್​ಗೆ: ಪ್ರತಾಪನ ಹಾಡಿ ಹೊಗಳಿದ ಸ್ನೇಕ್​ ಶ್ಯಾಮ್​

By Suvarna News  |  First Published Oct 17, 2023, 4:05 PM IST

ಬಿಗ್​ಬಾಸ್​ ಸ್ಪರ್ಧಿ ಡ್ರೋನ್​ ಪ್ರತಾಪ್​  ಕುರಿತು ಸ್ಪರ್ಧೆಯಿಂದ ಹೊರಕ್ಕೆ ಬಂದಿರುವ ಸ್ನೇಕ್​ ಶ್ಯಾಮ್​ ಹಾಡಿ ಕೊಂಡಾಡಿದ್ದಾರೆ. ಅವರು ಹೇಳಿದ್ದೇನು? 
 


ಬಿಗ್ ಬಾಸ್ ಕನ್ನಡ ಸೀಸನ್‌ 10ರ ಮೊದಲನೇ ವಾರದ ಎಲಿಮಿನೇಷನ್​ ಕಳೆದ ಶನಿವಾರ ಮುಗಿದಿದೆ. ಸ್ನೇಕ್ ಶ್ಯಾಮ್ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.  ಬಿಗ್ ಬಾಸ್ ಮನೆಯಲ್ಲಿನ ತಮ್ಮ ಅನುಭವ ಹಾಗೂ ಸ್ಪರ್ಧಿಗಳ ಕುರಿತು ತಾವು ಕಂಡುಕೊಂಡ ವಿಷಯಗಳ ಬಗ್ಗೆ ಮಾತನಾಡಿದ್ದಾರೆ ಶ್ಯಾಮ್​.  ನಾವು ಈ ಭೂಮಿಗೆ ಬರುವಾಗ್ಲೇ ಟಿಕೆಟ್ ತಂದಿರ್ತೀವಿ, ತತ್ಕಾಲ್‌ನಲ್ಲಿ ಇರ್ತೀವಿ ಅಷ್ಟೇ. ಟಿಕೆಟ್ ಕನ್ಫರ್ಮ್ ಆದ ತಕ್ಷಣ ಹೊರಡ್ತೀವಿ ಎಂದು ತಾವು ಮನೆಯಿಂದ ಹೊರಬಂದಿದ್ದರ ಕುರಿತಾಗಿ ವಿವರಿಸಿದ್ದರು ಶ್ಯಾಮ್​. ಬೇರೆಯವರನ್ನು ನೋಯಿಸಬಾರದು ಎಂಬ ನನ್ನ ಒಳ್ಳೆಯತನವೇ ನನಗೆ ಮುಳುವಾಯಿತು ಎನಿಸಿದೆ. ಬೇರೆಯವರನ್ನು ನಾನು ನಾಮಿನೇಟ್ ಮಾಡಿದರೆ ಅವರ ಮನಸ್ಸಿಗೆ ನೋವಾಗುತ್ತದೆ. ಆ ಕಾರಣಕ್ಕೆ ನನ್ನನ್ನೇ ನಾನು ನಾಮಿನೇಟ್ ಮಾಡಿಕೊಂಡೆ. ಆದರೆ, ಬಿಗ್ ಬಾಸ್‌ ಮನೆಯಲ್ಲಿ ಒಂದು ವಿಷಯ ಅರಿತುಕೊಂಡೆ. ಕಾಂಪಿಟೀಶನ್ ಅಂತ ಬಂದಾಗ, ಸ್ವತಃ ಅಣ್ಣತಮ್ಮಂದಿರೇ ಆಗಿದ್ದರೂ ಕಾಂಪಿಟೇಶನ್ ಮಾಡ್ಲೇಬೇಕು ಎಂದೂ ಹೇಳಿದ್ದರು.

ಇದೀಗ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಸ್ನೇಕ್​ ಶ್ಯಾಮ್​ ಅವರು ಸ್ಪರ್ಧಾಳುಗಳಲ್ಲಿ ಬಹಳ ಕೀಟಲೆಗೆ ಒಳಗಾಗಿರುವ ಡ್ರೋನ್​ ಪ್ರತಾಪ್​ ಬಗ್ಗೆ ಮಾತನಾಡಿದ್ದಾರೆ. ಡ್ರೋನ್​ ಮಾಡುತ್ತಿರುವುದಾಗಿ ಹೇಳಿ ಹಲವು ವರ್ಷ ವೇದಿಕೆಯ ಮೇಲೆ ಗಣ್ಯಾತಿಗಣ್ಯರನ್ನು ನಂಬಿಸಿ ಲಕ್ಷಗಟ್ಟಲೆ ಹಣ ನೀಡುವಂತೆ ಮಾಡಿದ್ದ ಪ್ರತಾಪ್​ ಅವರ ಬಗ್ಗೆ ಇನ್ನಿಲ್ಲದಷ್ಟು ಟ್ರೋಲ್​ ಮಾಡಲಾಗುತ್ತಿದೆ ಬಿಗ್​ಬಾಸ್​ ಮನೆಯಲ್ಲಿ.  ಜನರಿಗೆ ನಾನು ಯಾರು ನನ್ನ ಜೀವನ ಹೇಗಿದೆ ನನ್ನ ವ್ಯಕ್ತಿತ್ವ ಏನು ಅನ್ನೋದನ್ನು ಅರ್ಥ ಮಾಡಿಸಲು ಬಿಗ್ ಬಾಸ್‌ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಪ್ರತಾಪ್​ ಹೇಳಿಕೊಂಡಿದ್ದರೂ ಟ್ರೋಲ್​ ಮಾತ್ರ ನಿಲ್ಲುತ್ತಲೇ ಇಲ್ಲ. ಅವರನ್ನು ತುಂಬಾ ಗೋಳು ಹೊಯ್ದುಕೊಳ್ಳಲಾಗುತ್ತಿದೆ. ಅದರ ಬಗ್ಗೆ ಬೇಸರದಿಂದ ಮಾತನಾಡಿದ್ದಾರೆ ಸ್ನೇಕ್​ ಶ್ಯಾಮ್​. 

Tap to resize

Latest Videos

ಬಿಗ್​ಬಾಸ್​ನಲ್ಲಿ ಸುಂದರಿಯರ ಜೊತೆ ಡ್ರೋನ್​ ಪ್ರತಾಪ್​ ಭರ್ಜರಿ ರ‍್ಯಾಂಪ್​ ವಾಕ್​: ವ್ಹಾರೆವ್ಹಾ ಅಂತಿದ್ದಾರೆ ಫ್ಯಾನ್ಸ್​!

ಡ್ರೋನ್​ ಪ್ರತಾಪ್​ನನ್ನು ನಾನು ಡ್ರೋನ್​ ಎಂದೇ ಕರೆಯುವುದು. ಆತ ನನ್ನನ್ನು ಅಪ್ಪಾಜಿ ಎಂದು ಕರೆಯುತ್ತಿದ್ದ. ತುಂಬಾ ಒಳ್ಳೆಯ ಹುಡುಗ. ಅಗಾಧ ಜ್ಞಾನ ಹೊಂದಿದ್ದಾನೆ. ಆದರೆ ಆತನನ್ನು ಬಿಗ್​ಬಾಸ್​ ಸ್ಪರ್ಧಿಗಳು ನಡೆಸಿಕೊಳ್ಳುವ ರೀತಿ ನೋಡಿದ್ರೆ ತುಂಬಾ ಬೇಜಾರಾಗುತ್ತದೆ. ಕಾಲೇಜಿಗೆ ಹೊಸದಾಗಿ ಸೇರುವ ಮಕ್ಕಳಿಗೆ ಹೇಗೆ ರ‍್ಯಾಗಿಂಗ್​ ಮಾಡಲಾಗುತ್ತದೆಯೋ ಆ ರೀತಿ ಅವನನ್ನು ನಡೆಸಿಕೊಳ್ಳಲಾಗುತ್ತಿದೆ. ಆತ ಹೊರಗಡೆ ಏನಾದರೂ ಮಾಡಿಕೊಳ್ಳಲಿ, ಆದರೆ ಆತನಿಗೆ ಇರುವಷ್ಟು ತಿಳಿವಳಿಕೆ ಇನ್ನಾರಿಗೂ ಇಲ್ಲ ಎಂದೇ ಹೇಳಬಹುದು ಎಂದಿದ್ದಾರೆ ಶ್ಯಾಮ್​. 

ಪ್ರತಾಪ್​ ಎಷ್ಟು ಬೇಕೋ ಅಷ್ಟು ಮಾತನಾಡುತ್ತಾನೆ. ಅವನ ಬಗ್ಗೆ ಕೇಳಿದೆ. ಅಪ್ಪ-ಅಮ್ಮನ ಬಗ್ಗೆ ಹೇಳಿದ. ತಂಗಿ ಈಗ ತಾನೇ ಕೆಲ್ಸಕ್ಕೆ ಸೇರಿಕೊಂಡಿದ್ದಾಳಂತೆ. ಅವನನ್ನು ನಡೆಸಿಕೊಳ್ಳುವ ರೀತಿ ನೋಡಿದ್ರೆ ನನಗೂ ಅಳು ಬರುತ್ತಿತ್ತು. ಆತ ಹೊರಗಡೆ ಏನಾದರೂ ಮಾಡಿಕೊಳ್ಳಲಿ.  ಬಿಗ್​ಬಾಸ್​ಗೆ ಆತ ಸೆಲೆಕ್ಟ್​ ಆಗಿದ್ದಾನೆ ಎಂದರೆ ಆತನ  ಇನ್ನೊಂದು ಪ್ರತಿಭೆ ತೋರಿಸಲು ಅವಕಾಶ ಇದೆ. ಆದರೆ ಅಲ್ಲಿ ಆತನನ್ನು ತುಂಬಾ ಕೆಟ್ಟದ್ದಾಗಿ ನಡೆಸಿಕೊಳ್ತಿದ್ದಾರೆ.  ಆತ ತುಂಬಾ  ಡೀಸೆಂಟ್​ ಹುಡುಗ. ಅದ್ಭುತ ಪ್ರತಿಭೆ ಇದೆ. ಡ್ಯಾನ್ಸ್​ ಸಕತ್​ ಮಾಡ್ತಾನೆ. ಹೃತಿಕ್​ ರೋಷನ್​ ಥರ ಮಾಡ್ತಾನೆ. ಹೆಣ್ಣುಮಕ್ಕಳ ಜೊತೆ ಸಕತ್​ ರ್ಯಾಂಪ್​ವಾಕ್​ ಮಾಡಿದ್ದ. ಟ್ಯಾಲೆಂಟ್​ ತುಂಬಾ ಇದೆ ಆತನಿಗೆ ಎಂದಿದ್ದಾರೆ ಸ್ನೇಕ್​ ಶ್ಯಾಮ್​.

ಮೈಸೂರಿನಲ್ಲಿಯೂ ಆತ ಒಮ್ಮೆ ಸಿಕ್ಕಿದ್ದ. ಅಲ್ಲಿ ಹೇಗೋ, ಇಲ್ಲಿಯೂ ಹಾಗೆ. ಒಟ್ಟಿನಲ್ಲಿ ಅವನು ಆರ್ಡಿನರಿ ಮ್ಯಾನ್​ ಅಲ್ಲ. ಆದ್ರೆ ಜೋಕ್​ ಮಾಡುವ ನೆಪದಲ್ಲಿ ಹರ್ಟ್​ ಮಾಡ್ತಿದ್ದಾರೆ. ಜೋಕ್​ ಎಂದರೆ ಹಾಸ್ಯ ಮಾಡಬೇಕು.  ಆದರೆ ನೋವು ಕೊಡುತ್ತಿದ್ದಾರೆ ಎಂದರು. ಏನೂ ಕೇಳಿದ್ರೂ ನೋ ಕಮೆಂಟ್​ ಅಂತಾನೆ, ಅಷ್ಟು ಡೀಸೆಂಟ್​ ಮನುಷ್ಯ ಎಂದರು. ಯಾರಾದರೂ ಹುಡುಗಿಯನ್ನು ಲವ್​ ಮಾಡ್ತಿದ್ಯಾ? ಲವರ್​ ಇದ್ರೆ ಹೇಳಿಬಿಡು. ನಿಮ್ಮ ಮನೆಯಲ್ಲಿ ಹೇಳಿ ಮದ್ವೆ ಮಾಡಿಸ್ತೇನೆ ಎಂದೆ. ನಾಚಿಕೊಳ್ತನೇ ಇದ್ದ. ಹಾಗೇನೂ ಇಲ್ಲ ಎಂದ. ಯಾವುದರಲ್ಲಿಯೂ ಸಿಕ್ಕಿಹಾಕಿಕೊಳ್ಳಲ್ಲ. ತುಂಬಾ ಜಾಣ ಎಂದು ಡ್ರೋನ್​ ಪ್ರತಾಪ್​ ಅವರನ್ನು ಸ್ನೇಕ್​ ಶ್ಯಾಮ್​ ಹೊಗಳಿದ್ದಾರೆ.

BBK10 ಸ್ಪರ್ಧಿ ಸ್ನೇಕ್ ಶ್ಯಾಮ್: ಭೂಮಿಗೆ ಬರುವಾಗ್ಲೇ ಟಿಕೆಟ್ ತಂದಿರ್ತೀವಿ, ತತ್ಕಾಲ್‌ನಲ್ಲಿ ಇರ್ತೀವಿ ಅಷ್ಟೇ..
 

click me!