
ಕನ್ನಡಿಗರಿಗೆ ಮನೋರಂಜನೆ ನೀಡುವ ಉದ್ದೇಶದಿಂದ ಸಿರಿಕನ್ನಡ ವಾಹಿನಿ ಇಂದಿನಿಂದ (ಜ 5)ರಿಂದ ಹೊಸ ಆಯಾಮದಲ್ಲಿ ಮೂಡಿಬರಲಿದೆ. ಈ ಪ್ರಯುಕ್ತ ನಿರೂಪಕ ಮುರುಳಿ ಮತ್ತು ಹುಚ್ಚ ವೆಂಕಟ್ ಸಾರಥ್ಯದಲ್ಲಿ ‘ಲೈಫ್ ಓಕೆ’ ಕಾರ್ಯಕ್ರಮ ಸಾಮಾಜಿಕ ಕಳಕಳಿಯೊಂದಿಗೆ ಸೋಮವಾರದಿಂದ ಶುಕ್ರವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಈಗಾಗಲೇ 65 ಸಂಚಿಕೆಗಳಲ್ಲಿ ಪ್ರಸಾರವಾದ ಪ್ರೇಮ ಕಥೆ ‘ಧಾರವಾಡದಾಗೊಂದ್ ಲವ್ ಸ್ಟೋರಿ’ ಮತ್ತಷ್ಟು ಮುದ ನೀಡಲಿದೆ.
'ಪರಪಂಚ' ಚಿತ್ರದ ಹುಟ್ಟಿದ ಊರನ್ನು ಮತ್ತೆ ಮತ್ತೆ ಕೇಳ್ತಿದ್ದಾರೆ ಮಂದಿ.
ನಿರೂಪಕಿ ಅಪರ್ಣಾ ನಡೆಸಿಕೊಡುವ ‘ಸಿಂಪಲ್ಲಾಗೊಂದ್ ಸಿನಿಮಾ ಕಥೆ’ ಸೋಮವಾರದಿಂದ ಶುಕ್ರವಾರ ರಾತ್ರಿ 9 ಕ್ಕೆ ಮತ್ತಷ್ಟು ವಿಶೇಷವಾಗಿ ಮೂಡಿಬಂದರೆ, ನಿಗೂಢ ರಹಸ್ಯ ಕಾರ್ಯಕ್ರಮ ಇನ್ನಷ್ಟು ಕುತೂಹಲಕಾರಿಯಾಗಿ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ನಟಿ ರಜನಿ ನಡೆಸಿಕೊಡುವ ನಾರಿಗೊಂದು ಸೀರೆ ಕಾರ್ಯಕ್ರಮ ಬದಲಾದ ಸಮಯದಲ್ಲಿ ಮಧ್ಯಾಹ್ನ 1 ಗಂಟೆಗೆ ಮೂಡಿ ಬರಲಿದೆ.
ಈ ಮೂಲಕ ಹೊಸ ಆಯಾಮದಲ್ಲಿ ಹೊಸದಾಗಿ ವೀಕ್ಷಕರ ಗಮನ ಸೆಳೆಯಲಿದೆ ಸಿರಿಕನ್ನಡ ವಾಹಿನಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.