ಕೋಮಾದಲ್ಲಿದ್ದ ಸೀತಾ ಎದ್ದು ಕುಣಿಯೋದಾ? ಸಿಹಿ ಸತ್ತೋಗಿದ್ರೆ ಇಲ್ಲಿ ಈ ಪರಿ ಡಾನ್ಸ್‌ ಮಾಡೋದಾ?

Published : Dec 06, 2024, 05:06 PM ISTUpdated : Dec 07, 2024, 09:06 AM IST
ಕೋಮಾದಲ್ಲಿದ್ದ ಸೀತಾ ಎದ್ದು ಕುಣಿಯೋದಾ? ಸಿಹಿ ಸತ್ತೋಗಿದ್ರೆ ಇಲ್ಲಿ ಈ ಪರಿ ಡಾನ್ಸ್‌ ಮಾಡೋದಾ?

ಸಾರಾಂಶ

ಸೀತಾರಾಮ ಸೀರಿಯಲ್‌ ಸೀತಾ ಮತ್ತು ರಾಮ್‌ ಪಾತ್ರಧಾರಿಗಳು ಭರ್ಜರಿ ರೀಲ್ಸ್‌ ಮಾಡಿದ್ದು, ನೆಟ್ಟಿಗರು ಏನು ಹೇಳುತ್ತಿದ್ದಾರೆ ನೋಡಿ...  

ಸೀತಾರಾಮದಲ್ಲಿ ಸಿಹಿಯ ಅಂತ್ಯ ಮಾಡಲಾಗಿದೆ. ಸಿಹಿ ಏನಿದ್ರೂ ಇನ್ನು ಆತ್ಮ ಮಾತ್ರ. ಅವಳ ಅವಳಿ ಸಹೋದರಿ ಸುಬ್ಬಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಸೀತಾ ಕೋಮಾಕ್ಕೆ ಹೋಗಿದ್ದಾಳೆ. ಅವಳ ಕಂಡೀಷನ್‌ ತುಂಬಾ ಸೀರಿಯಸ್‌ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಸಿಹಿಯ ಆತ್ಮ ಆಸ್ಪತ್ರೆಗೆ ಬಂದು ಸೀತಾಳನ್ನು ಎಬ್ಬಿಸುತ್ತಿದೆ. ಮಗಳ ದನಿ ಕೇಳಿ ಸೀತಾಳಿಗೆ ಎಚ್ಚರ ಆಗುತ್ತಿದೆ. ಅದೇ ಇನ್ನೊಂದೆಡೆ, ಇದಾಗಲೇ ಪ್ರೊಮೋದಲ್ಲಿ ತೋರಿಸಿರುವಂತೆ ಸಿಹಿಯ ಆತ್ಮ ಸುಬ್ಬಿಗೆ ಮಾತ್ರ ಕಾಣಿಸುತ್ತದೆ. ಬೇರೆ ಯಾರಿಗೂ ಕಾಣಿಸುವುದಿಲ್ಲ. ಮಗಳ ಸಾವಿನ ನೋವಿನಿಂದ ಹೊರಕ್ಕೆ ಬರಲಾಗದ ಸ್ಥಿತಿಯಲ್ಲಿದ್ದಾನೆ ರಾಮ.  ಇದು  ಸೀತಾರಾಮ ಸೀರಿಯಲ್‌ ಕಥೆ. ಆದರೆ ಇತ್ತ ಸೀತಾ ಮತ್ತು ರಾಮ ನೋಡಿದ್ರೆ ಸಕತ್‌ ಎಂಜಾಯ್‌ ಮಾಡುತ್ತಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನಟರ ಕಾಲೆಳೆಯುತ್ತಿದ್ದಾರೆ. ಅತ್ತ ಮಗಳು ಸತ್ತೋಗಿದ್ರೆ ಇತ್ತ ನೀವು ಹೀಗಿಲ್ಲಾ ಡಾನ್ಸ್‌ ಮಾಡೋದಾ ಕೇಳುತ್ತಿದ್ದಾರೆ.

ಅಷ್ಟಕ್ಕೂ, ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು, ಸೋಷಿಯಲ್‌ ಮೀಡಿಯಾದಲ್ಲಿಯೂ ಸಕತ್‌ ಆಕ್ಟೀವ್‌ ಆಗಿದ್ದಾರೆ. ಅವರ ಆಗಾಗ್ಗೆ ವಿಡಿಯೋ, ರೀಲ್ಸ್‌ಗಳನ್ನು ಶೇರ್‍‌ ಮಾಡುತ್ತಲೇ ಇರುತ್ತಾರೆ. ಜೊತೆಗೆ ರಾಮ್‌ ಪಾತ್ರಧಾರಿ ಗಗನ್‌ ಚಿನ್ನಪ್ಪ ಅವರ ಜೊತೆಗೂ ರೀಲ್ಸ್‌ ಮಾಡುತ್ತಿರುತ್ತಾರೆ. ಇದೀಗ ಈ ಜೋಡಿ ಇನ್ನೊಂದು ಡಾನ್ಸ್‌ಗೆ ಸ್ಟೆಪ್‌ ಹಾಕಿದ್ದು, ನೆಟ್ಟಿಗರು ಇಬ್ಬರ ಕಾಲೆಳೆಯುತ್ತಿದ್ದಾರೆ. ಇನ್ನು ಸೀತಾ ಪಾತ್ರಧಾರಿ ವೈಷ್ಣವಿ ಅವರ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ.  ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ,  ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಅಷ್ಟಕ್ಕೂ ಇವರು ನಟನಾ ಲೋಕಕ್ಕೆ ಕಾಲಿಟ್ಟಿದ್ದೂ ಕುತೂಹಲ ವಿಷಯವಾಗಿದೆ. ಒಮ್ಮೆ ಇವರು  ತಾಯಿಯ ಜೊತೆ ದೇವಸ್ಥಾನಕ್ಕೆ  ಹೋದಾಗ ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್‌ನಲ್ಲಿ ನಟಿಸಲು ಆಫರ್ ನೀಡಿದ್ದರಂತೆ.  

ಕೊನೆಗೂ ಭಾವಿ ಪತಿಯ ಪರಿಚಯಿಸಿದ ಸೀತಾರಾಮ ಪ್ರಿಯಾ: ವಿಶೇಷ ವಿಡಿಯೋ ಶೇರ್ ಮಾಡಿದ ನಟಿ

ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ.  ಇವರ ಕಾಲೇಜು ಶಿಕ್ಷಣದ ಕುರಿತು ಹೇಳುವುದಾದರೆ, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿದ್ದಾರೆ.  ಪದವಿ ಅರ್ಧಕ್ಕೆ ಬಿಟ್ಟು, ಬಳಿಕ  ಬೆಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಮೂಲಕ ಪದವಿ ಪಡೆದಿದ್ದಾರೆ.  ಭರತನಾಟ್ಯ, ಕುಚಿಪುಡಿ ಮತ್ತು ಬೆಲ್ಲಿ ಡ್ಯಾನ್ಸಿಂಗ್‌ನಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ.  `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ.  `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ   ನಿರೂಪಣೆ ಕೂಡ ಮಾಡಿದ್ದಾರೆ.  `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.

ಇನ್ನು ರಾಮ್​ ಪಾತ್ರಧಾರಿ ಗಗನ್​ ಚಿನ್ನಪ್ಪ ಕುರಿತು ಹೇಳುವುದಾದರೆ, ಕೊಡಗು ಮೂಲದ ಗಗನ್​,  ಬಣ್ಣ ಲೋಕಕ್ಕೆ ಎಂಟ್ರಿ ಕೊಡುವ ಮೊದಲದು  ಎರಡು ವರ್ಷ ಓಮನ್‌ ದೇಶದಲ್ಲಿ ಅದಾದ ಬಳಿಕ  ಒಂದು ವರ್ಷ ಅಬುದಾಬಿಯಲ್ಲಿ ಕೆಲಸ ಮಾಡಿದ್ದರು. ಶಿಕ್ಷಣ ಮುಗಿಸಿದ ಬಳಿಕ ಕೆಲಸಕ್ಕೆ ಸೇರಿದ್ದವರು. ವಿದೇಶಗಳಲ್ಲಿ ಕೆಲಸ ಮಾಡಿದ ಸಂದರ್ಭದಲ್ಲಿ ಅವರ ಒಂದು ಫೋಟೋಶೂಟ್​ ಅವರನ್ನು ಬಣ್ಣದ ಲೋಕಕ್ಕೆ ಬರುವಂತೆ ಮಾಡಿತು.  2014 ರಲ್ಲಿ ಫೋಟೋಶೂಟ್​ ಮಾಡಿಸಿ ಸೋಷಿಯಲ್​ ಮೀಡಿಯಾದಲ್ಲಿ ಹಾಕಿದ್ದರು. ಆಗ ಅವರಿಗೆ ಚಿತ್ರವೊಂದಕ್ಕೆ ಆಫರ್​ ಬಂದಿತ್ತು. ಬಣ್ಣದ ಲೋಕದ ಸೆಳೆತದಿಂದ ಅಬುದಾಬಿ ಬಿಟ್ಟು ಬೆಂಗಳೂರಿಗೆ ಬಂದರು. 

ಚಿತ್ರದಲ್ಲಿ ನಟಿಸಿದರೂ ಅದು ರಿಲೀಸ್​ ಆಗಲೇ ಇಲ್ಲ. ಸೀರಿಯಲ್​ಗಳಲ್ಲಿ ಆಡಿಷನ್​ ಕೊಟ್ಟರೂ ಭಾಷೆ ಸರಿಯಿಲ್ಲವೆಂದು ರಿಜೆಸ್ಟ್​ ಆಗುತ್ತಿದ್ದಂತೆ. ನಂತರ ಬಣ್ಣದ ಲೋಕ ಬೇಡ ಎಂದು  ಮಾರ್ಕೆಟಿಂಗ್‌ ಮ್ಯಾನೇಜರ್‌ ಆಗಿ ಕೆಲಸ ಶುರು ಮಾಡಿದರು. ಆದರೆ ಬಣ್ಣದ ಲೋಕದ ಸೆಳೆತ ಇದ್ದೇ ಇದ್ದು.  ಮಂಗಳಗೌರಿ ಮದುವೆ ಸೀರಿಯಲ್‌ನಲ್ಲಿ ಅವಕಾಶ ಸಿಕ್ಕಿತು.  ಈ ಧಾರಾವಾಹಿಯಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಿನಿ ಬಿಗ್ ಬಾಸ್​ಗೂ ಎಂಟ್ರಿ ಕೊಟ್ಟು ಈಗ  ಸೀತಾರಾಮ ಸೀರಿಯಲ್​ ಮೂಲಕ ಕನ್ನಡ ಧಾರಾವಾಹಿ ಲೋಕದಲ್ಲಿ ಪೂರ್ಣಪ್ರಮಾಣದ ನಾಯಕರಾಗಿ ಮಿಂಚುತ್ತಿದ್ದಾರೆ.  ತೆಲುಗು ಕಿರುತೆರೆಗೂ ಕಾಲಿಟ್ಟಿರೋ ಗಗನ್​ ಅವರು,  ‘ಕೃಷ್ಣ ಮುಕುಂದ ಮುರಾರಿ’ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವವರು  ಮುರಾರಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಪ್ರೇರಣಾ ಕಂಬಮ್, ಯಶ್ಮಿ ಗೌಡ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಸಾವೇ ಅಂತಿಮ ಆಯ್ಕೆಯಾಗಿತ್ತು, ಕುಡಿತ ಕಲಿತೆ... ಉಮಾಶ್ರಿ ಜೀವನದ ಮುಳ್ಳಿನ ಹಾದಿ ಅವರ ಮಾತಲ್ಲೇ ಕೇಳಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!