ಅಂಧ ಗಾಯಕಿಯರ ನೋವಿಗೆ ಸ್ಪಂದಿಸಿದ ನವರಸ ನಾಯಕ/ ತುಮಕೂರಿನ ಗಾಯಕಿಯರಿಗೆ ಮನೆ ಕಟ್ಟಿಕೊಡಲು ಮುಂದಾದ ಜಗ್ಗೇಶ್/ ಸರಿಗಮಪ ವೇದಿಕೆಯಲ್ಲಿ ಸಹೋದರಿಯರ ಅದ್ಭುತ ಗಾಯನ/ ಹಸಿವಿನಿಂದ ಇರಲು ಬಿಡಲ್ಲ ಎಂದ ಅರ್ಜುನ್ ಜನ್ಯ
ನಮ್ಮ ನಾಯಕ ನಟರು ಮತ್ತು ಕಲಾವಿದರು ಆಗಾಗ ಮಾಡುವ ಇಂಥ ಮಾದರಿ ಕೆಲಸಗಳನ್ನು ನೆನೆಯಲೇ ಬೇಕು. ನವರಸ ನಾಯಕ ಜಗ್ಗೇಶ್ ಮಾಡಿರುವ ಒಂದೊಳ್ಳೆ ಕೆಲಸದ ಸುದ್ದಿ ಹೇಳುತ್ತೇವೆ ಕೇಳಿ
ತುಮಕೂರಿನಿಂದ ಆಗಮಿಸಿದ್ದ ರತ್ನಮ್ಮ ಮತ್ತು ಮಂಜಮ್ಮ ಜೋಡಿ ಗಾಯಕಿಯರ ನೋವಿಗೆ ನವರಸ ನಾಯಕ ಮಿಡಿದಿದ್ದಾರೆ. ಸೋದರಿಯರ ನೆರವಿಗೆ ಧಾವಿಸಿರುವ ಕಾಮಿಡಿ ಕಿಂಗ್ ಅವರಿಗೆ ಮನೆ ಕಟ್ಟಿಕೊಡಲು ಮುಂದಾಗಿದ್ದಾರೆ.
ಸರಿಗಮಪದಿಂದ ಹೊಸ ಸಾಹಸ, ಏನು? ನೀವೆ ನೋಡಿ?
ಅಂಧ ಸೋದರಿಯರಿಗೆ ತಕ್ಷಣವೇ ಸೂರು ಕಲ್ಪಿಸಿಕೊಡಲು ಕೊರಟಗೆರೆ ಜಗ್ಗೇಶ್ ಅಭಿಮಾನಿಗಳ ಸಂಘದ ಫ್ರೆಂಡ್ಸ್ ಗ್ರೂಪ್ ಗೆ ಜವಾಬ್ದಾರಿ ವಹಿಸಿದ್ದೇನೆ ಎಂದು ಜಗ್ಗೇಶ್ ತಿಳಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ನಟನ ಔದಾರ್ಯವನ್ನು ಪ್ರಶಂಸಿಸಿದ್ದಾರೆ.
ಊಟ ಕೊಟ್ಟ ಅರ್ಜುನ್ ಜನ್ಯ: ಮ್ಯಾಜಿಕಲ್ ಕಂಪೋಸರ್ ಎಂದೇ ಹೆಸರು ಮಾಡಿರುವ, ಸರಿಗಮಪ ವೇದಿಕೆಯ ತೀರ್ಪುಗಾರರಲ್ಲಿ ಒಬ್ಬರಾದ ಅರ್ಜುನ್ ಜನ್ಯ ಸಹ ಅಂಧ ಗಾಯಕಿಯರ ನೋವಿಗೆ ಮಿಡಿದಿದ್ದಾರೆ. ಇನ್ನು ಮುಂದೆ ನೀವು ಹಸಿವಿನಿಂದ ಇರಬೇಕಾಗಿಲ್ಲ. ಪ್ರತಿ ತಿಂಗಳು ನಿಮ್ಮ ಮನೆಯ ರೇಶನ್ ಜವಾಬ್ದಾರಿ ನನ್ನದು ಎಂದು ಅರ್ಜುನ್ ಅಭಯ ನೀಡಿದ್ದಾರೆ.