
ಬಿಗ್ ಬಾಸ್ 20 (Bigg Boss Hindi 20) ರ ಇತ್ತೀಚಿನ ಸಂಚಿಕೆಯಲ್ಲಿ ನಿರೂಪಕ ಸಲ್ಮಾನ್ ಖಾನ್ ಸೆಟ್‌ನಲ್ಲಿ ಎದೆನೋವು ಇದೆ ಎಂದು ಹೇಳಿ ಎದೆಯನ್ನು ಹಿಡಿದುಕೊಂಡು ಬಿದ್ದು ಕೆಲ ಕಾಲ ಆತಂಕ ಸೃಷ್ಟಿಸಿದ್ದರು. ಈ ಸಂದರ್ಭದಲ್ಲಿ ವೈದ್ಯರನ್ನು ವೇದಿಕೆಗೆ ಕರೆಯಲಾಯಿತು, ಇದು ಕಾರ್ಯಕ್ರಮದ ಸ್ಪರ್ಧಿಗಳಿಗೆ ಮಾತ್ರವಲ್ಲದೆ ಅಭಿಮಾನಿಗಳಿಗೂ ಕಳವಳವನ್ನುಂಟುಮಾಡಿತು. ಇದರ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸಲ್ಮಾನ್ ಖಾನ್ ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ.
ಸಲ್ಮಾನ್ ಖಾನ್ಗೆ ಈಗ 62 ವರ್ಷವಯಸ್ಸು. ರೆಸ್ಟ್ ಇಲ್ಲದೇ ಒಂದರ ಹಿಂದೊಂದು ಶೂಟಿಂಗ್ನಲ್ಲಿ ಪಾಲ್ಗೊಂಡಿರುವ ಕಾರಣದಿಂದ ಹೀಗೆ ಆಗಿರಬಹುದು ಎಂದು ಹಲವರು ಊಹಿಸಿದರು. ಮತ್ತೆ ಕೆಲವರು, ಇವೆಲ್ಲಾ ಪ್ರಮೋಷನ್ ಸ್ಟಂಟ್ಗಳು. ಒಂದು ಷೋ ಅನ್ನು ಜನರು ನೋಡಲು ಕಡಿಮೆ ಮಾಡುತ್ತಿದ್ದಾರೆ ಎಂದು ಗೊತ್ತಾದ ತಕ್ಷಣ ಇಂಥ ಸ್ಟಂಟ್ಗಳೆಲ್ಲಾ ಮಾಮೂಲು. ಅದನ್ನು ವಾಹಿನಿ ಪ್ರಸಾರ ಮಾಡಿದೆ ಎಂದರೆ ಇದು ಖಂಡಿತವಾಗಿಯೂ ಸುಳ್ಳೇ ಎಂದರು. ಹೀಗೆ ಹೇಳಿದವರ ವಿರುದ್ಧ ಸಲ್ಮಾನ್ ಖಾನ್ ಅಭಿಮಾನಿಗಳು ತಿರುಗಿ ಬಿದ್ದು, ಬಾಯಿಗೆ ಬಂದಂತೆ ಉಗಿದರು.
ಆದರೆ, ಇದೀಗ ಖುದ್ದು ಸಲ್ಮಾನ್ ಖಾನ್ (Salman Khan) ಈ ಬಗ್ಗೆ ಸ್ಪಷ್ಟನೆ ಕೊಟ್ಟು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಶೇಷ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಜನರ ಕ್ಷಮೆ ಕೋರಿರುವ ಅವರು, ತಮಗೆ ಅವರ ಆರೋಗ್ಯದಲ್ಲಿ ಯಾವುದೇ ತೊಂದರೆಯಿಲ್ಲ ಮತ್ತು ಅವರು ಚೆನ್ನಾಗಿದ್ದಾರೆ ಎಂದು ಹೇಳಿದ್ದಾರೆ. "ದೇವರ ದಯೆಯಿಂದ, ನನ್ನ ಆರೋಗ್ಯದಲ್ಲಿ ಯಾವುದೇ ತೊಂದರೆಯಿಲ್ಲ. ಬಿಗ್ ಬಾಸ್ ಪ್ರೋಮೋದಲ್ಲಿ ಎಡಿಟ್ ಮಾಡಲಾಗಿದ್ದು, ಅದು ಆ ರೀತಿಯಾದಂತೆ ಕಾಣಿಸುತ್ತಿದೆ. ನನಗೆ ಏನೂ ಆಗಲಿಲ್ಲ. ಪ್ರೊಮೋ ಎಡಿಟ್ ಮಾಡಿದ್ದರ ಬಗ್ಗೆ ಜನರಲ್ಲಿ ಕ್ಷಮೆ ಕೋರುತ್ತೇನೆ ಎಂದಿರುವ ನಟ, ಇದನ್ನು ಕಾರ್ಯಕ್ರಮದ ಪ್ರಚಾರಕ್ಕಾಗಿ ಬಳಸಿದಂತೆ ಕಾಣಿಸುತ್ತಿದೆ. ಅವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
"ಬಿಗ್ ಬಾಸ್ ಇದೀಗ ಎಡಿಟ್ ಮಾಡಿರೋದನ್ನು ಸರಿಪಡಿಸಿದ್ದಾರೆ. ಧನ್ಯವಾದಗಳು, ಬಿಗ್ ಬಾಸ್ ಎಂದಿದ್ದಾರೆ. ಒಟ್ಟಿನಲ್ಲಿ ಇವೆಲ್ಲಾ ಪಬ್ಲಿಸಿಟಿ ಸ್ಟಂಟ್ ಎಂದವರ ಮಾತೇ ಸರಿಯಾಯ್ತು. ಅವರನ್ನು ಬೈದವರ ತೆಪ್ಪಗಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.