ಸೀತಾರಾಮ ಧಾರಾವಾಹಿ ಕುತೂಹಲದ ಹಂತ ತಲುಪಿದೆ. ಮನೆ ಬಾಡಿಗೆ ವಿಷಯದಲ್ಲಿ ಸೀತಾಳ ಮಾತಿಗೆ ರಾಮ್ ಕನ್ಫ್ಯೂಸ್ ಆಗಿ ಕಕ್ಕಾಬಿಕ್ಕಿಯಾಗುತ್ತಾನೆ.
ಮಿಡ್ಲ್ಕ್ಲಾಸ್ ಕುಟುಂಬ (Middleclass family) ಹಾಗೂ ಶ್ರೀಮಂತ ಕುಟುಂಬಗಳ ಯೋಚನೆಗಳು ಎಷ್ಟರ ಮಟ್ಟಿಗೆ ವೈರುಧ್ಯದಿಂದ ಕೂಡಿರುತ್ತದೆ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಆದರೆ ಅದನ್ನೇ ಈಗ ಬಹಳ ಸೊಗಸಾಗಿ ಝೀ ಟಿವಿಯಲ್ಲಿ ಪ್ರಸಾರ ಆಗ್ತೀರೋ ಸೀತಾರಾಮ ಧಾರಾವಾಹಿಯಲ್ಲಿ ವಿವರಿಸಲಾಗಿದೆ. ಬಿಲಿಯನೇರ್ ರಾಮ ಹಾಗೂ ಮಧ್ಯಮ ಕುಟುಂಬದ ಸೀತಾರ ನಡುವಿನ ನವಿರಾದ ಕಥಾಹಂದರವುಳ್ಳಿ ಈ ಧಾರಾವಾಹಿ ದಿನದಿಂದ ದಿನಕ್ಕೆ ಕುತೂಹಲದ ತಿರುವು ಪಡೆಯುತ್ತಲೇ ಸಾಗಿದೆ. ಟಿಆರ್ಪಿಯಲ್ಲಿಯೂ ಸಾಕಷ್ಟು ಮುಂದಿರುವ ಈ ಧಾರಾವಾಹಿ ಮಧ್ಯಮವರ್ಗದ ಕುಟುಂಬ ಅದರಲ್ಲಿಯೂ ಸಿಂಗಲ್ ಪೇರೆಂಟ್ ಮಹಿಳೆಯೊಬ್ಬಳ ಜೀವನ ಯುದ್ಧವನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ.
ಸಿಂಗಲ್ ಪೇರೆಂಟ್ ಆಗಿರುವ ಸೀತಾ, ತನ್ನ ಕಾಯಿಲೆ ಪೀಡಿತ ಮಗಳಿಗಾಗಿ ಸ್ವಂತ ಮನೆಯನ್ನೇ ಮಾರಾಟ ಮಾಡಿ ಬಾಡಿಗೆ ಮನೆಯ ಹುಡುಕಾಟ ಶುರು ಮಾಡಿದ್ದಾಳೆ. ತನ್ನದೇ ಕಂಪೆನಿಯಲ್ಲಿ ಕೆಲಸ ಮಾಡುವ ರಾಮನ ಜೊತೆ ಈಕೆಯ ಸ್ನೇಹವಿರುತ್ತದೆ. ಆದರೆ ರಾಮ ಬಿಲೇನಿಯರ್ ಎನ್ನುವ ಸತ್ಯ ಇವಳಿಗೆ ತಿಳಿದಿಲ್ಲ. ಅತ್ತ ಬಿಲೇನಿಯರ್ ಆಗಿರೋ ರಾಮನಿಗೋ ಈ ಬಾಡಿಗೆ ಮನೆ, ಅದರ ಬಾಡಿಗೆ ಇದ್ಯಾವುದರ ಪರಿವೇ ಇಲ್ಲ. ತನಗೊಂದು ಬಾಡಿಗೆ ಮನೆ ಬೇಕು ಎಂದು ರಾಮನಿಗೆ ಹುಡುಕಲು ಹೇಳಿರುತ್ತಾಳೆ ಸೀತಾ (Seetha). ನಂತರ ಫೋನ್ ಮಾಡುವ ಆಕೆ ನೀವಿರುವ ಮನೆಯ ಬಾಡಿಗೆ ಎಷ್ಟು ಎಂದು ಕೇಳುತ್ತಾಳೆ. ಸಿಂಗಲ್ಬೆಡ್ರೂಮ್ ಮನೆಗೆ ರೆಂಟ್ ಎಷ್ಟಾಗಬಹುದು ಎಂದು ಫೋನಿನಲ್ಲಿ ಸೀತಾ ವಿಚಾರಿಸಿದಾಗ, ರಾಮ ಕಕ್ಕಾಬಿಕ್ಕಿಯಾಗುತ್ತಾನೆ. ನಂತರ ತನ್ನ ಸ್ನೇಹಿತ ಅಶೋಕ್ಗೆ ಇನ್ನೊಂದು ಫೋನ್ನಲ್ಲಿ ವಿಚಾರಿಸುತ್ತಾನೆ. ಆತ 15 ಸಾವಿರ ಬಾಡಿಗೆ ಎನ್ನುತ್ತಾನೆ. ಅದನ್ನೇ ಸೀತಾಳಿಗೆ ರಾಮ ತಿಳಿಸುತ್ತಾನೆ.
Seetharama: ಲೈಫಲ್ಲಿ ಏನೂ ಇಲ್ಲದಿದ್ದಾಗ ಬದುಕೋದನ್ನ ಕಲೀಬೇಕು! : ಬದುಕಿದ ಪಾಠ ಕಲಿಸಿದ ಸೀತಾ
15 ಸಾವಿರ ಎನ್ನೋದನ್ನು ಕೇಳಿ ಸೀತಾ ಶಾಕ್ ಆಗಿ ಅಷ್ಟಾ ಅನ್ನುತ್ತಾಳೆ. ಆದರೆ ಶ್ರೀಮಂತ ರಾಮ್ಗೆ 15 ಸಾವಿರ ಎಂದರೆ ಜುಜುಬಿ ಲೆಕ್ಕ. ಅದಕ್ಕೆ ಕಡಿಮೆಯಾಯ್ತಾ ಎಂದು ಕೇಳುತ್ತಾನೆ. ಆತ ಸೀತಾ ತುಂಬಾ ಹೆಚ್ಚಾಯಿತು. 11 ಸಾವಿರದ ಒಳಗೆ ಇದ್ದರೆ ಹೇಳಿ ಎಂದಾಗಲೇ ರಾಮ್ಗೆ 15 ಸಾವಿರ ಎನ್ನೋದು ಮಧ್ಯಮವರ್ಗಕ್ಕೆ ಎಷ್ಟು ದುಬಾರಿ ಎನ್ನುವುದು ತಿಳಿಯುತ್ತದೆ. ಈ ಚಿತ್ರಣವನ್ನು ಬಲು ಸೊಗಸಾಗಿ ಧಾರಾವಾಹಿಯಲ್ಲಿ ಕಟ್ಟಿಕೊಡಲಾಗಿದೆ. ಇದೇ ವೇಳೆ ತನ್ನ ಮನೆಯನ್ನು ಮಾರಾಟ ಮಾಡುವ ಸೀತಾಳ ನಿರ್ಧಾರ ಸರಿಯಲ್ಲ, ಅದನ್ನೇ ಉಳಿಸಿಕೊಳ್ಳಲು ನೋಡೋಣ ಎಂದು ರಾಮ್ ಹೇಳುತ್ತಾನೆ. ಆದರೆ ಈಗಿನ ಸ್ಥಿತಿಯಲ್ಲ ಸೀತಾಳಿಗೆ ಅದು ಕಷ್ಟವೇ ಸರಿ. ಹೀಗೆ ಮಧ್ಯಮ ಮತ್ತು ಶ್ರೀಮಂತ ವರ್ಗದ ನಡುವಿನ ಹೋಲಿಕೆಯನ್ನು ತೋರಿಸಲಾಗಿದೆ. ಸೀತಾ ಮನೆಯನ್ನು ಉಳಿಸಿಕೊಳ್ಳುತ್ತಾಳಾ ಎನ್ನುವುದು ಈಗಿರುವ ಕುತೂಹಲ.
ಅಷ್ಟಕ್ಕೂ ಈ ಧಾರಾವಾಹಿಯ (Seetaram) ಕಥೆ ಏನೆಂದರೆ, ರಾಮ ದೊಡ್ಡ ಕಂಪನಿಯ ಮಾಲಿಕ. ಭಾರತಕ್ಕೆ ಬರುವ ಆತ ಕಂಪೆನಿ ಬಗ್ಗೆ ತಿಳಿದುಕೊಳ್ಳಲು ತಾನೂ ಅದೇ ಕಂಪೆನಿಯಲ್ಲಿ ನೌಕರನ ಹಾಗೆ ಸೇರಿಕೊಳ್ಳುತ್ತಾನೆ. ಸೀತಾ ಅಲ್ಲಿಯೇ ಕೆಲಸ ಮಾಡುವ ಉದ್ಯೋಗಿ. ಇಬ್ಬರ ನಡುವೆ ಸ್ನೇಹ ಬೆಳೆದು, ಸೀತಾ ರಾಮನ ನೆರವನ್ನು ಕೋರುತ್ತಿದ್ದಾಳೆ.
ಶೇಕ್ ಇಟ್ ಪುಷ್ಪವತಿಗೆ ಭರ್ಜರಿಯಾಗಿ ಸೊಂಟ ಬಳುಕಿಸಿದ ಹಿಟ್ಲರ್ ಕಲ್ಯಾಣದ 'ಎಡವಟ್ಟು ಲೀಲಾ'