ಸವತಿ ರಾಜಿಗೇ ಮೇಕಪ್​ ಮಾಡೋದಾ ಪುಟ್ಟಕ್ಕ? ವಿಡಿಯೋ ನೋಡಿ ಹುಷಾರ್​ ಕಣವ್ವೋ ಎಂದ ಅಭಿಮಾನಿಗಳು!

By Suvarna News  |  First Published Mar 25, 2024, 3:45 PM IST

ಪುಟ್ಟಕ್ಕನ ಮಕ್ಕಳು ಸೀರಿಯಲ್​ ಪುಟ್ಟಕ್ಕ ಸವತಿ ರಾಜಿಗೆ ಮೇಕಪ್​ ಮಾಡ್ತಿರೋ ವಿಡಿಯೋ ವೈರಲ್​ ಆಗಿದೆ. ನೆಟ್ಟಿಗರು ಏನೆಲ್ಲಾ ಹೇಳ್ತಿದ್ದಾರೆ ಕೇಳಿ...
 


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಹೈಲೈಟ್​ ಪಾತ್ರಗಳಲ್ಲಿ ಪುಟ್ಟಕ್ಕ ಒಂದೆಡೆಯಾದರೆ ನೆಗೆಟಿವ್​ ರೋಲ್​ನಲ್ಲಿ ಕಾಣಿಸಿಕೊಳ್ಳುವ ರಾಜೇಶ್ವರಿನೂ ಒಬ್ಬಳು.  ಪುಟ್ಟಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಉಮಾಶ್ರಿ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಆದರೆ ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಅವರಷ್ಟೇ ಸಕತ್​ ಫೇಮಸ್​ ಆಗಿರೋ ನಟಿಯೆಂದರೆ ಪುಟ್ಟಕ್ಕನ ಸವತಿ ಅರ್ಥಾತ್​ ಪತಿಯ ಎರಡನೆಯ ಪತ್ನಿಯ ಪಾತ್ರದಲ್ಲಿ ನಟಿಸ್ತಿರೋ ರಾಜೇಶ್ವರಿ.  ರಾಜೇಶ್ವರಿ ಎಂದಾಕ್ಷಣ ಧಾರಾವಾಹಿ ಪ್ರಿಯರ ಕಣ್ಣಮುಂದೆ ಈ ಪುಟ್ಟಕ್ಕನ ಮಕ್ಕಳ ಧಾರಾವಾಹಿಯ ವಿಲನ್​ ಪಾತ್ರವೇ ಹಾದುಹೋಗುವಷ್ಟರ ಮಟ್ಟಿಗೆ ರಾಜೇಶ್ವರಿ (Rajeshwari) ಪಾತ್ರ ಜೀವ ತುಂಬಿದೆ. ಗಂಡ ಇಲ್ಲದಿದ್ದರೂ ಕ್ಷಣ ಕ್ಷಣಕ್ಕೂ ನೋವನ್ನೇ ಪುಟ್ಟಕ್ಕ ಅನುಭವಿಸುತ್ತಿದ್ದರೂ ಅವರ ಮನೆಯ ಸಮೀಪವೇ ಇದ್ದು, ಕ್ಷಣ ಕ್ಷಣಕ್ಕೂ ಆಕೆಗೆ ತೊಂದರೆ ಕೊಡುವಲ್ಲಿ ಈ ಸವತಿ ರಾಜೇಶ್ವರಿಯದ್ದು ಎತ್ತಿದ ಕೈ. 

ಪುಟ್ಟಕ್ಕನ ಪತಿಯನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯಾದರೂ ಪುಟ್ಟಕ್ಕನಿಗೆ ತೊಂದರೆ ಕೊಡುವುದು ಎಂದರೆ ಈಕೆಗೆ ಅದೇನೋ ಖುಷಿ. ರಾಜೇಶ್ವರಿ ಬಂದರೆ ಅದೆಷ್ಟೋ ಮನೆಯಲ್ಲಿ ಆಕೆಗೆ ಹಿಡಿಶಾಪ ಹಾಕುವುದೂ ಇದೆ. ಥೇಟ್​ ವಿಲನ್​ನಂತೆ ಪಾತ್ರ ಮಾಡಿ ಆ ಪಾತ್ರಕ್ಕೆ ಜೀವ ತುಂಬುತ್ತಿರುವ ಈ ರಾಜೇಶ್ವರಿಯವರ ನಿಜವಾದ ಹೆಸರು ಹಂಸ ನಾರಾಯಣಸ್ವಾಮಿ @ ಹಂಸ ಪ್ರತಾಪ್​ (Hamsa Pratap).

Tap to resize

Latest Videos

ಕೋತಿಗಳ ಮದ್ವೆ ಫೋಟೋ ಶೇರ್​ ಮಾಡಿದ ರಾಖಿ ಸಾವಂತ್​: ನಟಿ ಪ್ರಕಾರ ಇವರು ಯಾರು ಗೊತ್ತಾ?

ಇದೀಗ ಉಮಾಶ್ರೀ ಅವರು ಹಂಸಾ ಅವರಿಗೆ ಸೀರಿಯಲ್​ಗಾಗಿ ಮೇಕಪ್​ ಮಾಡುತ್ತಿದ್ದಾರೆ. ಇದರ ವಿಡಿಯೋ ಅನ್ನು ಹಂಸಾ ಅವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಉಮಾಶ್ರೀ ಅಮ್ಮ ಅವರಂಥ ದಿಗ್ಗಜ ನಟಿಯಿಂದ ಮೇಕಪ್​ ಮಾಡಿಕೊಳ್ಳುತ್ತಿರುವ ನಾನೇ ಧನ್ಯ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಇದಕ್ಕೆ ಹಲವರಿಂದ ಕಮೆಂಟ್​ಗಳ ಸುರಿಮಳೆಯಾಗಿದೆ. ಹಲವರು ಹಾರ್ಟ್​ ಎಮೋಜಿ ಮೂಲಕ ನಟಿಗೆ ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಹಂಸಾ ಅವರ ಕಾಲು ಎಳೆದಿದ್ದಾರೆ. ಹೇಳಿ ಕೇಳಿ ರಾಜಿ, ಪುಟ್ಟಕ್ಕನ ಸವತಿ. ಜೋಕೆ, ಹುಷಾರು ಕಣವ್ವಾ ಎಂದು ತಮಾಷೆ ಮಾಡಿದ್ದಾರೆ. 

ಇನ್ನು ಪುಟ್ಟಕ್ಕನ ಸೀರಿಯಲ್​ ಕಥೆ ಹೇಳುವುದಾದರೆ, ಸದ್ಯ ಪುಟ್ಟಕ್ಕ ತೀರ್ಮಾನ ಕೊಡುವ ಸ್ಥಾನದಲ್ಲಿ ಕುಳಿತಿದ್ದಾಳೆ. ಬಂಗಾರಮ್ಮನ ಜಾಗದಲ್ಲಿ ಕುಳಿತು ತೀರ್ಪು ನೀಡುವ ಪರಿಸ್ಥಿತಿ ಬಂದಿದೆ. ಆದರೆ ಆಕೆ, ತೀರ್ಪು ನೀಡುವ ಖುರ್ಚಿಗೆ ಕೈಮುಗಿದು ನಿಂತಲ್ಲಿಂದಲೇ ತೀರ್ಪು ಕೊಡಲು ರೆಡಿಯಾಗಿದ್ದಾಳೆ. ಅಷ್ಟಕ್ಕೂ ಅಲ್ಲಿ ಈಗ ತೀರ್ಪು ನಡೆಯುತ್ತಿರುವುದು ಬಂಗಾರಮ್ಮನ ಮಗಳು ಅತ್ತೆಯ ಜೊತೆ ಹೋಗಬೇಕೋ,ಬೇಡವೋ ಎಂಬ ಬಗ್ಗೆ. ಇಲ್ಲಿಯೂ ರಾಜಿಯ ಕಿತಾಪತಿ ಕಾಣುತ್ತಿದೆ. ನಂಜಮ್ಮ ತನ್ನ ಮಗ ಮತ್ತು ಸೊಸೆಯನ್ನು ಮನೆಗೆ ಕರೆದುಕೊಂಡು ಬರುವಂತೆ ಮಾಡಲು ರಾಜಿ ಕಿತಾಪತಿ ಮಾಡಿದ್ದು, ನಡುವೆ ಪುಟ್ಟಕ್ಕನನ್ನು ಸಿಲುಕಿಸಿದ್ದಾರೆ. ಈಗ ಪುಟ್ಟಕ್ಕ ಹೇಗೆ ತೀರ್ಮಾನ ಕೊಡುತ್ತಾಳೆ, ತೀರ್ಪು ಯಾರ ಪರ ಬರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. \

ಕಾಪಿ ಮಾಡ್ತಿರೋ ಆರೋಪದ ಮೇಲೆ ಪರೀಕ್ಷೆಯಿಂದ ಭಾಗ್ಯ-ತನ್ವಿ ಔಟ್​! ಸಿಸಿಟಿವಿಯಲ್ಲಿ ಏನಿದೆ?

 

click me!