ತ್ರಿವಿಕ್ರಮ್ ಗೆ ಪ್ರತಿಮಾ ಮ್ಯಾಚ್ ಆಗಲ್ಲ, ಮುದ್ದು ಸೊಸೆ ಸೀರಿಯಲ್ ಶುರುವಾಗೋ ಮುನ್ನವೇ ಫ್ಯಾನ್ಸ್ ಅಸಮಾಧಾನ

Published : Feb 21, 2025, 10:36 AM ISTUpdated : Feb 21, 2025, 11:48 AM IST
ತ್ರಿವಿಕ್ರಮ್ ಗೆ ಪ್ರತಿಮಾ ಮ್ಯಾಚ್ ಆಗಲ್ಲ, ಮುದ್ದು ಸೊಸೆ ಸೀರಿಯಲ್ ಶುರುವಾಗೋ ಮುನ್ನವೇ ಫ್ಯಾನ್ಸ್ ಅಸಮಾಧಾನ

ಸಾರಾಂಶ

ಮೇಘಾ ಶೆಟ್ಟಿ ನಿರ್ಮಾಣದ 'ಮುದ್ದು ಸೊಸೆ' ಧಾರಾವಾಹಿಯು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಬಿಗ್ ಬಾಸ್ ಖ್ಯಾತಿಯ ತ್ರಿವಿಕ್ರಮ್ ನಟಿಸುತ್ತಿದ್ದು, ಪ್ರತಿಮಾ ನಾಯಕಿಯಾಗಿದ್ದಾರೆ. ತ್ರಿವಿಕ್ರಮ್ ಮತ್ತು ಪ್ರತಿಮಾ ಜೋಡಿಯ ಬಗ್ಗೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತ್ರಿವಿಕ್ರಮ್ ಸಿನಿಮಾದಲ್ಲಿ ನಟಿಸಬೇಕೆಂದು ಫ್ಯಾನ್ಸ್ ಬಯಸುತ್ತಿದ್ದಾರೆ. ತ್ರಿವಿಕ್ರಮ್ ಈ ಹಿಂದೆ 'ಪದ್ಮಾವತಿ' ಧಾರಾವಾಹಿಯಲ್ಲಿ ನಟಿಸಿದ್ದರು. ಸದ್ಯಕ್ಕೆ ತ್ರಿವಿಕ್ರಮ್ ಸಿಸಿಎಲ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಸ್ಯಾಂಡಲ್ವುಡ್ ನಟಿ ಮೇಘಾ ಶೆಟ್ಟಿ (Sandalwood actress Megha Shetty) ನಿರ್ಮಾಣದಲ್ಲಿ ಮತ್ತೊಂದು ಸೀರಿಯಲ್ ಶೀಘ್ರವೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಮುದ್ದು ಸೊಸೆ (Muddu Sose) ಅಂತ ಸೀರಿಯಲ್ ಗೆ ನಾಮಕರಣ ಮಾಡಲಾಗಿದೆ. ಈ ಧಾರಾವಾಹಿಯಲ್ಲಿ ಬಿಗ್ ಬಾಸ್ ಕನ್ನಡ 11ರ ರನ್ನರ್ ಅಪ್ ತ್ರಿವಿಕ್ರಮ್ (Bigg Boss Kannada 11 runnerup Trivikram) ಕಾಣಿಸಿಕೊಳ್ತಿದ್ದಾರೆ ಎಂಬ ಸುದ್ದಿ ಇದೆ. ಆದ್ರೆ ಇನ್ನೂ ತ್ರಿವಿಕ್ರಮ್ ಪ್ರೋಮೋ ರಿಲೀಸ್ ಆಗಿಲ್ಲ. ಅದಕ್ಕೂ ಮುನ್ನವೇ ತ್ರಿವಿಕ್ರಮ್ ಫ್ಯಾನ್ಸ್ ಗಲಾಟೆ ಶುರು ಮಾಡಿದ್ದಾರೆ. ಸೀರಿಯಲ್ ನಲ್ಲಿ ಮುದ್ದು ಸೊಸೆಯಾಗಿ ನಟಿ ಪ್ರತಿಮಾ (actress Pratima) ಕಾಣಿಸಿಕೊಳ್ತಿದ್ದು, ತ್ರಿವಿಕ್ರಮ್ ಗೆ ಪ್ರತಿಮಾ ಒಳ್ಳೆ ಜೋಡಿ ಅಲ್ಲ ಅನ್ನೋದೇ ಫ್ಯಾನ್ಸ್ ವಾದ.

ತ್ರಿವಿಕ್ರಮ್ ಮೈಕಟ್ಟು, ಸ್ಟೈಲ್ ಗೆ ಪ್ರತಿಮಾ ತಕ್ಕ ಜೋಡಿಯಲ್ಲ ಅನ್ನೋದೇ ವೀಕ್ಷಕರ ವಾದ. ಇನ್ಸ್ಟಾಗ್ರಾಮ್ ಪೋಸ್ಟ್ ಗೆ ಬಳಕೆದಾರರು ಸಾಕಷ್ಟು ಕಮೆಂಟ್ ಮಾಡಿದ್ದಾರೆ. ತ್ರಿವಿಕ್ರಮ್ ಗೆ ಪ್ರತಿಮಾ ಸೂಟ್ ಆಗಲ್ಲ, ಅಣ್ಣ – ತಂಗಿಯಂತೆ ಕಾಣಿಸ್ತಾರೆ ಅಂತ ಫ್ಯಾನ್ಸ್ ಕಮೆಂಟ್ ಮಾಡ್ತಿದ್ದಾರೆ. ತ್ರಿವಿಕ್ರಮ್ ಗೆ ಮೋಕ್ಷಿತಾ ಬೆಸ್ಟ್ ಜೋಡಿ ಅನ್ನೋದು ಬಹುತೇಕರ ಅಭಿಪ್ರಾಯ. ಮೋಕ್ಷಿ ಹಾಗೂ ತ್ರಿವಿಕ್ರಮ್ ಜೋಡಿ ಮಾಡಿ, ಸೀರಿಯಲ್ ಸೂಪರ್ ಹಿಟ್ ಎಂದು ಫ್ಯಾನ್ಸ್ ಹೇಳ್ತಿದ್ದಾರೆ. 

Bhagyalakshmi Serial: ಶ್ರೇಷ್ಠ-ತಾಂಡವ್‌ ಮದುವೆ ಆಯ್ತು; ತಾಳಿಯನ್ನು ಕಿತ್ತೆಸೆದ ಭಾಗ್ಯ; ಹೈ ವೋಲ್ಟೇಜ್‌ ಎಪಿಸೋಡ್‌ ಇದು

ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸುದ್ದಿಯಲ್ಲಿದ್ದಿದ್ದು ಭವ್ಯ ಮತ್ತು ತ್ರಿವಿಕ್ರಮ್. ಹಾಗಾಗಿ ಭವ್ಯ ಗೌಡ ಜೊತೆ ತ್ರಿವಿಕ್ರಮ್ ನಟಿಸ್ಬೇಕು ಎನ್ನುವ ಮಾತುಗಳೂ ಕೇಳಿ ಬಂದಿವೆ. ಪ್ರತಿಮಾ, ತ್ರಿವಿಕ್ರಮ್ ಮುಂದೆ ಸಣ್ಣ ಹುಡುಗಿಯಂತೆ ಕಾಣ್ತಾರೆ ಅನ್ನೋದೇ ಅನೇಕರ ಅಭಿಪ್ರಾಯ. ಪ್ರತಿಮಾ ಸದ್ಯ ಎರಡು ಸೀರಿಯಲ್ ನಲ್ಲಿ ನಟಿಸಿದ್ದಾರೆ. ಅಂತರಪಟ ಮತ್ತು ದೊರೆಸಾನಿ ಧಾರಾವಾಹಿಯಲ್ಲಿ ಸಹ ಕಲಾವಿದೆಯಾಗಿ ನಟಿಸಿದ್ದರು. ಈಗ ಹೀರೋಯಿನ್ ಪಟ್ಟಕ್ಕೆ ಬಡ್ತಿ ಪಡೆದಿದ್ದಾರೆ. 

ರಾಮ್ ಚರಣ್ ಅವರನ್ನು ಯಾವ ಪಾತ್ರದಲ್ಲಿ ನೋಡಲು ಚಿರು ಬಯಸ್ತಾರೆ ಗೊತ್ತಾ?

ಈಗಾಗಲೇ ಸೀರಿಯಲ್ ನ ಒಂದು ಪ್ರೋಮೋ ರಿಲೀಸ್ ಆಗಿದೆ. ಇದ್ರಲ್ಲಿ ಪ್ರತಿಮಾ ಅಲಿಯಾಸ್ ಮುದ್ದು ಸೊಸೆ ಹತ್ತನೇ ತರಗತಿ ಪರೀಕ್ಷೆ ಬರೆಯುತ್ತಿರೋದನ್ನು ನೀವು ಕಾಣ್ಬಹುದು. ತ್ರಿವಿಕ್ರಮ್ ಪ್ರೋಮೋ ನಿರೀಕ್ಷೆಯಲ್ಲಿ ಫ್ಯಾನ್ಸ್ ಇದ್ದಾರೆ. ಬಿಗ್ ಬಾಸ್ ಶೋ ನಂತ್ರ ತ್ರಿವಿಕ್ರಮ್ ಫ್ಯಾನ್ಸ್ ಬಳಗ ದೊಡ್ಡದಾಗಿದೆ. ತ್ರಿವಿಕ್ರಮ್ ಅವರನ್ನು ದೊಡ್ಡ ತೆರೆ ಮೇಲೆ ನೋಡುವ ಆಸೆ ಅಭಿಮಾನಿಗಳಿಗಿದೆ. ಮೊದಲು ತಿರಸ್ಕರಿಸಿದ್ದ ಅನೇಕ ನಿರ್ಮಾಪಕರು ಈಗ ತಮ್ಮ ಬಳಿ ಬರ್ತಿದ್ದಾರೆ ಎಂದು ತ್ರಿವಿಕ್ರಮ್ ಸಂದರ್ಶನವೊಂದರಲ್ಲಿ ಹೇಳಿದ್ರು. ಹಾಗಾಗಿ ತ್ರಿವಿಕ್ರಮ್ ಸಿನಿಮಾದಲ್ಲಿ ಮಿಂಚಲಿದ್ದಾರೆ ಅಂತ ಫ್ಯಾನ್ಸ್ ಭಾವಿಸಿದ್ರು. ಸೂಪರ್ ಹಿಟ್ ಸಿನಿಮಾ ನೀಡಿ, ದೊಡ್ಡ ಹೀರೋ ಆಗ್ಬೇಕು ಅನ್ನೋದು ತ್ರಿವಿಕ್ರಮ್ ಕನಸು ಕೂಡ. ಆದ್ರೆ ತ್ರಿವಿಕ್ರಮ್ ಮತ್ತೆ ಸೀರಿಯಲ್ ಗೆ ಬರ್ತಿರೋದು ಅಭಿಮಾನಿಗಳಿಗೆ ಸ್ವಲ್ಪ ನಿರಾಸೆ ಮೂಡಿಸಿದ್ರೂ,  ಪ್ರೀತಿಯಿಂದೇ ಅವರನ್ನು ವೆಲ್ ಕಂ ಮಾಡಿದ್ದಾರೆ.  ತ್ರಿವಿಕ್ರಮ್ ಈವರೆಗೆ ಒಂದೇ ಒಂದು ಸೀರಿಯಲ್ ಮಾಡಿದ್ದಾರೆ. ಪದ್ಮಾವತಿ ಸೀರಿಯಲ್ ನಂತ್ರ ತ್ರಿವಿಕ್ರಮ್ ಶುಭಮಂಗಳ, ರಂಗನಾಯಕಿ, ಹಳ್ಳಿ ಹೈಕ್ಲು ಪ್ಯಾಟೆ ಲೈಫು, ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ನಟಿಸಿದ್ದಾರೆ.  ನಂತ್ರ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿ ಮನೆಗೆ ಬಂದ ತ್ರಿವಿಕ್ರಮ್ ಅಧ್ಬುತ ಆಟ ಪ್ರದರ್ಶಿಸಿದ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಕಪ್ ಕೈಗೆ ಸಿಗ್ಲಿಲ್ಲ ಅಂದ್ರೂ ಅಭಿಮಾನಿಗಳ ದೊಡ್ಡ ಬಳಗ ಸೃಷ್ಟಿಯಾಗಿದೆ. ಸದ್ಯ ಸಿಸಿಎಲ್ ನಲ್ಲಿ ತ್ರಿವಿಕ್ರಮ್ ಬ್ಯುಸಿಯಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!